ಅಂದು ಹಂಗ್ ಮಾಡಿದ್ದ ಆಂಡ್ರ್ಯೂಗೆ ಇಂದು ಹಿಂಗ್ ಆಯ್ತು.!
'ಬಿಗ್ ಬಾಸ್ ಸಿಟಿ' ಟಾಸ್ಕ್ ನಿಮಗೆ ನೆನಪಿದ್ಯಾ.? ಆ ಟಾಸ್ಕ್ ನಲ್ಲಿ ಅಧಿಕಾರಿಯ ಪಾತ್ರ ನಿರ್ವಹಿಸಿದ್ದವರು ಆಂಡ್ರ್ಯೂ. ''ನನಗೆ ಬೇಕಾದ ನಿಯಮಗಳನ್ನು ಜಾರಿಗೆ ತರಬಹುದು'' ಎನ್ನುತ್ತಾ ''ಕವಿತಾ ನನ್ನ ತಂಗಿ'' ಅಂತ ಶಶಿ ಬಾಯಲ್ಲಿ ಆಂಡಿ ಹೇಳಿಸಿದ್ದರು. ಸಾಲದಕ್ಕೆ, ''ಕವಿತಾ-ಶಶಿ ಅಣ್ಣ-ತಂಗಿ'' ಅಂತ ಎಲ್ಲರ ಬಾಯಲ್ಲೂ ಹೇಳಿಸಿದ್ದರು.
'ಮಾಡಿದ್ದುಣ್ಣೋ ಮಹಾರಾಯ' ಎಂಬ ಮಾತಿನಂತೆ ಇದೇ ಟಾಸ್ಕ್ ಇದೀಗ ಆಂಡಿ ಪಾಲಾಗಿದೆ. ಕವಿತಾ ಜೊತೆಗೆ ಯಾವಾಗ ಮಾತನಾಡಬೇಕಾದರೂ, ''ತಂಗಿ ಕವಿತಾ'' ಎನ್ನುತ್ತಲೇ ಆಂಡಿ ಮಾತನಾಡಬೇಕು. ಇನ್ನೂ ಕವಿತಾ ಕೂಡ ಅಷ್ಟೇ. ''ಅಣ್ಣ ಆಂಡಿ'' ಅಂತಲೇ ಕರೆಯಬೇಕು. ಇದು ಲಾರ್ಡ್ ಪ್ರಥಮ್ ಆರ್ಡರ್.!

'ಬಿಗ್ ಬಾಸ್' ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳು ಎಂಟ್ರಿಕೊಟ್ಟಿರುವುದು ನಿಮಗೆಲ್ಲ ಗೊತ್ತೇ ಇದೆ. ಈ ವಾರ ಲಕ್ಷುರಿ ಬಜೆಟ್ ಸ್ಪರ್ಧಿಗಳ ಕೈ ಸೇರಬೇಕು ಅಂದ್ರೆ, ವಿಶೇಷ ಅತಿಥಿಗಳು ಹೇಳಿದಕ್ಕೆಲ್ಲಾ 'ಹೌದು ಸ್ವಾಮಿ'.. 'ಯೆಸ್ ಬಾಸ್' ಎನ್ನುತ್ತಾ ಚಟುವಟಿಕೆಯನ್ನ ಪೂರ್ಣಗೊಳಿಸಲೇಬೇಕು.
ವಿಶೇಷ ಅತಿಥಿಗಳು ಮತ್ತು ಅತಿಥಿಗಳ ನಡುವೆ ಫೋನ್ ನಲ್ಲಿ ಸಂಭಾಷಣೆ ನಡೆಯುತ್ತಿದೆ. ಎರಡ್ಮೂರು ಬಾರಿ ಆಂಡಿ ಫೋನ್ ಕಟ್ ಮಾಡಿದ್ದು ಪ್ರಥಮ್ ಗೆ ಇಷ್ಟ ಆಗಿಲ್ಲ. ಹೀಗಾಗಿ, ಆಂಡಿಗೆ ಆಂಡಿ ಸ್ಟೈಲ್ ನಲ್ಲೇ ಉರಿಸಿದ್ದಾರೆ ಪ್ರಥಮ್.
''ಕವಿತಾ ಕಂಡ್ರೆ ಮೈ ಜುಮ್ ಎನ್ನುತ್ತೆ' ಅಂತಿದ್ದ ಆಂಡಿ, ಇದೀಗ ಬೇರೆ ವಿಧಿ ಇಲ್ಲದೆ 'ತಂಗಿ ಕವಿತಾ' ಅಂತ ಕರೆಯಬೇಕು. ಇಲ್ಲಾಂದ್ರೆ, ಲಕ್ಷುರಿ ಬಜೆಟ್ ನಲ್ಲಿ ಕತ್ರಿ ಗ್ಯಾರೆಂಟಿ.


Click it and Unblock the Notifications











