twitter
    For Quick Alerts
    ALLOW NOTIFICATIONS  
    For Daily Alerts

    ಅಂದು ಹಂಗ್ ಮಾಡಿದ್ದ ಆಂಡ್ರ್ಯೂಗೆ ಇಂದು ಹಿಂಗ್ ಆಯ್ತು.!

    |

    'ಬಿಗ್ ಬಾಸ್ ಸಿಟಿ' ಟಾಸ್ಕ್ ನಿಮಗೆ ನೆನಪಿದ್ಯಾ.? ಆ ಟಾಸ್ಕ್ ನಲ್ಲಿ ಅಧಿಕಾರಿಯ ಪಾತ್ರ ನಿರ್ವಹಿಸಿದ್ದವರು ಆಂಡ್ರ್ಯೂ. ''ನನಗೆ ಬೇಕಾದ ನಿಯಮಗಳನ್ನು ಜಾರಿಗೆ ತರಬಹುದು'' ಎನ್ನುತ್ತಾ ''ಕವಿತಾ ನನ್ನ ತಂಗಿ'' ಅಂತ ಶಶಿ ಬಾಯಲ್ಲಿ ಆಂಡಿ ಹೇಳಿಸಿದ್ದರು. ಸಾಲದಕ್ಕೆ, ''ಕವಿತಾ-ಶಶಿ ಅಣ್ಣ-ತಂಗಿ'' ಅಂತ ಎಲ್ಲರ ಬಾಯಲ್ಲೂ ಹೇಳಿಸಿದ್ದರು.

    'ಮಾಡಿದ್ದುಣ್ಣೋ ಮಹಾರಾಯ' ಎಂಬ ಮಾತಿನಂತೆ ಇದೇ ಟಾಸ್ಕ್ ಇದೀಗ ಆಂಡಿ ಪಾಲಾಗಿದೆ. ಕವಿತಾ ಜೊತೆಗೆ ಯಾವಾಗ ಮಾತನಾಡಬೇಕಾದರೂ, ''ತಂಗಿ ಕವಿತಾ'' ಎನ್ನುತ್ತಲೇ ಆಂಡಿ ಮಾತನಾಡಬೇಕು. ಇನ್ನೂ ಕವಿತಾ ಕೂಡ ಅಷ್ಟೇ. ''ಅಣ್ಣ ಆಂಡಿ'' ಅಂತಲೇ ಕರೆಯಬೇಕು. ಇದು ಲಾರ್ಡ್ ಪ್ರಥಮ್ ಆರ್ಡರ್.!

    ಆಂಡಿಯನ್ನ ಅಪ್ಪ ಹೊರಗೆ ಕರ್ಕೊಂಡು ಹೋಗಲಿಲ್ಲ: ಎಲ್ಲಾ ನಾಟಕ ಅಷ್ಟೇ.!ಆಂಡಿಯನ್ನ ಅಪ್ಪ ಹೊರಗೆ ಕರ್ಕೊಂಡು ಹೋಗಲಿಲ್ಲ: ಎಲ್ಲಾ ನಾಟಕ ಅಷ್ಟೇ.!

    Bigg Boss Kannada 6: Andrew gets a special task from Pratham

    'ಬಿಗ್ ಬಾಸ್' ಕಾರ್ಯಕ್ರಮಕ್ಕೆ ವಿಶೇಷ ಅತಿಥಿಗಳು ಎಂಟ್ರಿಕೊಟ್ಟಿರುವುದು ನಿಮಗೆಲ್ಲ ಗೊತ್ತೇ ಇದೆ. ಈ ವಾರ ಲಕ್ಷುರಿ ಬಜೆಟ್ ಸ್ಪರ್ಧಿಗಳ ಕೈ ಸೇರಬೇಕು ಅಂದ್ರೆ, ವಿಶೇಷ ಅತಿಥಿಗಳು ಹೇಳಿದಕ್ಕೆಲ್ಲಾ 'ಹೌದು ಸ್ವಾಮಿ'.. 'ಯೆಸ್ ಬಾಸ್' ಎನ್ನುತ್ತಾ ಚಟುವಟಿಕೆಯನ್ನ ಪೂರ್ಣಗೊಳಿಸಲೇಬೇಕು.

    ವಿಶೇಷ ಅತಿಥಿಗಳು ಮತ್ತು ಅತಿಥಿಗಳ ನಡುವೆ ಫೋನ್ ನಲ್ಲಿ ಸಂಭಾಷಣೆ ನಡೆಯುತ್ತಿದೆ. ಎರಡ್ಮೂರು ಬಾರಿ ಆಂಡಿ ಫೋನ್ ಕಟ್ ಮಾಡಿದ್ದು ಪ್ರಥಮ್ ಗೆ ಇಷ್ಟ ಆಗಿಲ್ಲ. ಹೀಗಾಗಿ, ಆಂಡಿಗೆ ಆಂಡಿ ಸ್ಟೈಲ್ ನಲ್ಲೇ ಉರಿಸಿದ್ದಾರೆ ಪ್ರಥಮ್.

    ಎರಡುವರೆ ವರ್ಷ ಡಿಪ್ರೆಶನ್ ನಲ್ಲಿದ್ದ ಆಂಡಿ: ಯಾಕೆ.? ಎರಡುವರೆ ವರ್ಷ ಡಿಪ್ರೆಶನ್ ನಲ್ಲಿದ್ದ ಆಂಡಿ: ಯಾಕೆ.?

    ''ಕವಿತಾ ಕಂಡ್ರೆ ಮೈ ಜುಮ್ ಎನ್ನುತ್ತೆ' ಅಂತಿದ್ದ ಆಂಡಿ, ಇದೀಗ ಬೇರೆ ವಿಧಿ ಇಲ್ಲದೆ 'ತಂಗಿ ಕವಿತಾ' ಅಂತ ಕರೆಯಬೇಕು. ಇಲ್ಲಾಂದ್ರೆ, ಲಕ್ಷುರಿ ಬಜೆಟ್ ನಲ್ಲಿ ಕತ್ರಿ ಗ್ಯಾರೆಂಟಿ.

    English summary
    Bigg Boss Kannada 6: Andrew gets a special task from Pratham.
    Wednesday, January 16, 2019, 18:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X