ಒಲ್ಲದ ಮನಸ್ಸಿನಿಂದ ಡೀಲ್ ಮಾಡಿಕೊಂಡು ಹಳ್ಳಕ್ಕೆ ಬಿದ್ದ ಆಂಡಿ.!
Recommended Video

''ಈ ಮನೆಯಲ್ಲಿ ಒಂದು ಹುಡುಗಿ ಇದ್ದಾಳೆ. ಆಕೆ ನನ್ನ ಎದುರಿಗೆ ಪಾಸ್ ಆದರೆ, ಮೈ ಜುಮ್ ಎನ್ನುತ್ತೆ'' ಅಂತ ಒಂದು ವಾರದ ಹಿಂದೆಯಷ್ಟೇ 'ಬಿಗ್ ಬಾಸ್' ಮನೆಯಲ್ಲಿ ಎಲ್ಲರ ಮುಂದೆ ಆಂಡ್ರ್ಯೂ ಹೇಳಿಕೊಂಡಿದ್ದರು.
ಅಷ್ಟಕ್ಕೂ, ಯಾರನ್ನ ಕಂಡ್ರೆ ಆಂಡ್ರ್ಯೂ ಮೈ ಜುಮ್ ಎನ್ನುತ್ತೆ ಗೊತ್ತಾ.? ಬೇರೆ ಯಾರೂ ಅಲ್ಲ.. 'ಚಿನ್ನು' ಕವಿತಾ ಗೌಡ.
ಹೌದು, ಕವಿತಾ ಗೌಡ ಕಂಡ್ರೆ ಆಂಡ್ರ್ಯೂಗೆ ಒಂಥರಾ ಫೀಲಿಂಗ್. ಈ ವಿಚಾರ 'ಬಿಗ್ ಬಾಸ್'ಗೂ ಗೊತ್ತು. ಅದಕ್ಕೆ ನಾಮಿನೇಷನ್ ಟಾಸ್ಕ್ ನಲ್ಲಿ ಇಬ್ಬರನ್ನೂ ಒಟ್ಟಿಗೆ ಕರೆದು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.
ಅತ್ತ ನಾಮಿನೇಷನ್ ನಿಂದ ಸೇಫ್ ಆಗುವ ಆಸೆ ಆಂಡ್ರ್ಯೂಗಿದೆ. ಆದ್ರೆ, ಎದುರಿಗೆ ಕವಿತಾ ಇರುವ ಕಾರಣ ಆಂಡ್ರ್ಯೂಗೆ ಸಂಕಷ್ಟ.! ಕಡೆಗೆ ಕವಿತಾ ಜೊತೆಗೆ ಪ್ರತಿ ದಿನ ಹತ್ತು ನಿಮಿಷ ಕಾಲ ಕಳೆಯಲು ಡೀಲ್ ಮಾಡಿಕೊಂಡು ಒಲ್ಲದ ಮನಸ್ಸಿನಿಂದಲೇ ಆಂಡ್ರ್ಯೂ ನಾಮಿನೇಟ್ ಆಗಿದ್ದಾರೆ. ಒಂದು ವೇಳೆ ವೀಕ್ಷಕರು ಕೈ ಹಿಡಿಯದೇ ಇದ್ದರೆ, ಆಂಡ್ರ್ಯೂ ಹಳ್ಳಕ್ಕೆ ಬಿದ್ದ ಹಾಗೆ. ಮುಂದೆ ಓದಿರಿ...

ನಾಮಿನೇಷನ್ ವೇಳೆ....
'ಬಿಗ್ ಬಾಸ್' ಮನೆಯಲ್ಲಿ ಇರಲು ಅರ್ಹರಲ್ಲದ ಇಬ್ಬರು ವ್ಯಕ್ತಿಗಳ ಹೆಸರುಗಳನ್ನು ಪ್ರತಿ ಸ್ಪರ್ಧಿಯೂ ಪ್ರತಿ ವಾರ ತೆಗೆದುಕೊಳ್ಳಬೇಕು. ಇದೇ ನಾಮಿನೇಷನ್ ಪ್ರಕ್ರಿಯೆ. ಆದ್ರೆ, ಈ ಬಾರಿ ನಾಮಿನೇಷನ್ ಪ್ರಕ್ರಿಯೆ ಅಷ್ಟು ಸುಲಭವಾಗಿ ನಡೆಯಲಿಲ್ಲ. ಜೋಡಿಗಳ ಅನುಗುಣವಾಗಿ ನಾಮಿನೇಷನ್ ಪ್ರಕ್ರಿಯೆ ನಡೆಯಿತು.

ಇಬ್ಬರಲ್ಲಿ ಒಬ್ಬರು ಸೇಫ್
ಈ ಬಾರಿ ನಾಮಿನೇಷನ್ ಗಾಗಿ 'ಬಿಗ್ ಬಾಸ್' ಇಬ್ಬಿಬ್ಬರನ್ನು ಕನ್ಫೆಶನ್ ರೂಮ್ ಒಳಗೆ ಕರೆದರು. ಇಬ್ಬರಲ್ಲಿ ಒಬ್ಬರಿಗೆ ಮಾತ್ರ ಸೇಫ್ ಆಗುವ ಅವಕಾಶವನ್ನು 'ಬಿಗ್ ಬಾಸ್' ನೀಡಿದರು.

ಕವಿತಾ-ಆಂಡ್ರ್ಯೂ ಜೋಡಿ
ನಾಮಿನೇಷನ್ ಗಾಗಿ ಕನ್ಫೆಶನ್ ರೂಮ್ ಒಳಗೆ ಕವಿತಾ ಮತ್ತು ಆಂಡ್ರ್ಯೂನ 'ಬಿಗ್ ಬಾಸ್' ಕರೆದರು. ಅಲ್ಲಿಂದ ಕವಿತಾ ಮತ್ತು ಆಂಡ್ರ್ಯೂ ನಡುವೆ ವಾದ-ವಾಗ್ವಾದ ಆರಂಭ ಆಯ್ತು.

ಇದು ಎಂಥಾ ಪರೀಕ್ಷೆ.?
''ಇದು ಎಂಥಾ ಪರೀಕ್ಷೆ. ನಾನು ಕಾಮನ್ ಮ್ಯಾನ್. ನೀವು ಸೆಲೆಬ್ರಿಟಿ. ನಿಮಗೆ ಫ್ಯಾನ್ಸ್ ಇದ್ದಾರೆ'' ಅಂತೆಲ್ಲಾ ಹೇಳಿ ತಪ್ಪಿಸಿಕೊಳ್ಳಲು ಆಂಡ್ರ್ಯೂ ಪ್ರಯತ್ನ ಪಟ್ಟರು. ಆದ್ರೆ, ಇದಕ್ಕೆ ಕವಿತಾ ಒಪ್ಪಿಕೊಳ್ಳಲಿಲ್ಲ. ''ನೀನು ಕೂಡ ಆಕ್ಟರ್. ನೀನು ಕೂಡ ಸೆಲೆಬ್ರಿಟಿ. ಎಲ್ಲರೂ 'ಬಿಗ್ ಬಾಸ್' ಮನೆಯಲ್ಲಿ ಇದ್ದೀವಿ ಅಂದ್ರೆ ಎಲ್ಲರೂ ಸೆಲೆಬ್ರಿಟಿಗಳೇ'' ಅಂತ ಕವಿತಾ ತಮ್ಮ ವಾದವನ್ನು ಮಂಡಿಸಿದರು.

ಎಷ್ಟು ಹೇಳಿದರೂ ಕೇಳದ ಆಂಡಿ
''ನಿನ್ನ ಬಳಿ ಸುರಕ್ಷಾ ಕವಚ ಇದೆ. ಬಳಸಿ ಸೇಫ್ ಆಗು'' ಅಂತ ಕವಿತಾ ಎಷ್ಟೇ ಹೇಳಿದರೂ ಆಂಡ್ರ್ಯೂ ಒಪ್ಪಿಕೊಳ್ಳಲಿಲ್ಲ. ಹೀಗಾಗಿ ''ನಾನೇ ನಾಮಿನೇಟ್ ಆಗುವೆ. ನನಗೆ ನನ್ನ ಫ್ಯಾನ್ಸ್ ಮೇಲೆ ನಂಬಿಕೆ ಇದೆ'' ಎಂದರು ಕವಿತಾ.

ಎಡವಟ್ಟು ಕಾರಣ
''ನನಗೆ ಬಿಟ್ಟುಕೊಡುವ ಆಸೆ ಇದೆ. ಆದರೆ ಒಂದೆರಡು ವಾರ ಎಡವಟ್ಟಾಗಿದೆ. ಅದನ್ನ ಸರಿ ಮಾಡಿಕೊಳ್ಳಬೇಕು'' ಅಂತ ಆಂಡ್ರ್ಯೂ ಕಾರಣ ಕೊಟ್ಟಿದ್ದರಿಂದ, ''ಈತನಿಗೆ ಫ್ಯಾನ್ಸ್, ಫಾಲೋವರ್ಸ್ ಮೇಲೆ ನಂಬಿಕೆ ಇಲ್ಲ'' ಎನ್ನುತ್ತಾ ಮತ್ತೆ ನಾಮಿನೇಟ್ ಆಗಲು ಕವಿತಾ ಮುಂದಾದರು.

ಡವ್ ಮಾಡಿದ ಆಂಡ್ರ್ಯೂ
''ಇನ್ನೇನು ಬಿಟ್ಟುಕೊಟ್ಟು ಬಿಡೋಣ ಅಂತ ಇದ್ದೆ. ಅಷ್ಟರಲ್ಲಿ ಮನಸ್ಸಿಗೆ ನೋವು ಮಾಡಿದ್ರಿ'' ಅಂತ ಆಂಡ್ರ್ಯೂ ಡವ್ ಮಾಡಿದರು. ಅದನ್ನೇ ಹಿಡಿದುಕೊಂಡ ಕವಿತಾ ''ನಾನು ನಾಮಿನೇಟ್ ಆಗಲ್ಲ'' ಅಂತ ಕೂತರು.

ಡೀಲ್ ಮಾಡಿದ ಆಂಡಿ
''ಪ್ರತಿ ದಿನ ನನ್ನ ಬಳಿ ಹತ್ತು ನಿಮಿಷ ಮಾತನಾಡಬೇಕು. ಇದಕ್ಕೆ ಒಪ್ಪಿಕೊಂಡರೆ ನಾನು ಬಿಟ್ಟುಕೊಡುವೆ'' ಅಂತ ಆಂಡಿ ಡೀಲ್ ಮಾಡಿದರು. ಇದಕ್ಕೆ ಕವಿತಾ ಸಮ್ಮತಿ ಸೂಚಿಸಿದರು. ಪರಿಣಾಮ ಆಂಡಿ ನಾಮಿನೇಟ್ ಆದರು. ''ಇಷ್ಟ ಪಟ್ಟವರಿಗೆ ಏನೇನೋ ಬಿಟ್ಟುಕೊಡುತ್ತೇವೆ. ಅದೊಂದು ಕಾರಣದಿಂದ ಕವಿತಾನ ಸೇಫ್ ಮಾಡುವೆ. ಜನ ನನ್ನ ಸೇಫ್ ಮಾಡ್ತಾರೆ ಅಂತ ನಂಬಿಕೆ ಇದೆ'' ಎನ್ನುತ್ತಾ ಆಂಡಿ ಡೇಂಜರ್ ಝೋನ್ ಗೆ ಬಂದರು.

ತಪ್ಪು ಮಾಡಿದೆ.!
''ಬಿಟ್ಟು ಕೊಡಬಾರದು ಅಂತ ಇದ್ದರೂ ಇಷ್ಟ ಪಡುವವರು ಅಂತ ಬಂದ್ರೆ ಜೀವನ ಹೀಗಾಗುತ್ತೆ. ಅವಕಾಶವನ್ನು ಬಿಟ್ಟುಕೊಟ್ಟಿದ್ದು ತಪ್ಪೇ. ಎಂಥ ಪಗಡೆ ಆಟ ಗುರು ಇದು. ಅವಳು ಮಾತನಾಡುತ್ತಾಳೋ, ಇಲ್ವೋ... ನನ್ನ ಜೊತೆ ಸಮಯ ಕಳೆಯುತ್ತಾಳೋ, ಇಲ್ವೋ.. ತುಂಬಾ ಹುಡುಗರು ಹೀಗೆ... ಪ್ರೀತಿ ಅನ್ನೋದು ಕರ್ಮ ಗುರು ಏನೇನೋ ಮಾಡಿಸಿಬಿಡುತ್ತೆ'' ಅಂತ ಕೊನೆಗೆ ಆಂಡಿ ಕೊರಗುತ್ತಿದ್ದರು.


Click it and Unblock the Notifications











