ಉಲ್ಟಾ ಪಲ್ಟಾ ಮಾತನಾಡಿದ ಆಂಡ್ರ್ಯೂ: ಪಿತ್ತ ನೆತ್ತಿಗೇರಿಸಿಕೊಂಡ ಧನರಾಜ್.!
Recommended Video

''ಮನೆಯವರ ಬಗ್ಗೆ ಮಾತನಾಡಿ ಜಗಳ ಆಡಿದರೆ, ಹೊರಗೆ ಹೋಗುವ ಹೊತ್ತಿಗೆ ಮನೆಯವರೇ ನಿಮ್ಮನ್ನ ಇಷ್ಟ ಪಡುವುದಿಲ್ಲ'' ಅಂತ ವಾರದ ಹಿಂದೆಯಷ್ಟೇ ಆಂಡ್ರ್ಯೂ ಹಾಗೂ ರಾಪಿಡ್ ರಶ್ಮಿಗೆ ಕಿಚ್ಚ ಸುದೀಪ್ ಎಚ್ಚರಿಕೆ ಕೊಟ್ಟಿದ್ದರು. ಇಷ್ಟಾದರೂ, ಆಂಡ್ರ್ಯೂಗೆ ಬುದ್ಧಿ ಬಂದ ಹಾಗೆ ಕಾಣುತ್ತಿಲ್ಲ.
ಎಲ್ಲರಿಗೂ ಕಿರಿಕಿರಿ ತರೋದ್ರಲ್ಲಿ, ಉಲ್ಟಾ ಪಲ್ಟಾ ಮಾತನಾಡುವುದರಲ್ಲಿ ಆಂಡ್ರ್ಯೂ ಎತ್ತಿದ ಕೈ. ಮಾತ್ತೆತ್ತಿದ್ದರೆ 'ನಿಮ್ಮಪ್ಪ' ಅಂತ ಹೇಳುವ ಆಂಡ್ರ್ಯೂ ಈ ಬಾರಿ ಜಗಳ ಮಾಡಿಕೊಂಡಿದ್ದು ಧನರಾಜ್ ಜೊತೆಗೆ.
ಮಾತಿಗೆ ಮಾತು ಬೆಳೆದು ''ನಿಮ್ಮಪ್ಪ ನನ್ನ ಇಲ್ಲಿ ಒಳಗೆ ಬಿಟ್ಟಿಲ್ಲ'' ಅಂತ ಆಂಡ್ರ್ಯೂ ಹೇಳಿದ್ರು. ಈ ಮಾತನ್ನ ಕೇಳಿ ಧನರಾಜ್ ಪಿತ್ತ ನೆತ್ತಿಗೇರ್ತು. ''ನನ್ನಪ್ಪನ ವಿಷ್ಯಕ್ಕೆ ಬಂದ್ರೆ ಚಪ್ಪಲಿಯಲ್ಲಿ ಹೊಡೆಯುವೆ'' ಅಂತ ಕೆಂಗಣ್ಣು ಬಿಟ್ಟರು ಧನರಾಜ್.
ಅಷ್ಟಕ್ಕೂ, ಆಂಡ್ರ್ಯೂ ಮತ್ತು ಧನರಾಜ್ ಮಧ್ಯೆ ಜಗಳ ಶುರುವಾಗಿದ್ದು ಹೇಗೆ ಅಂತೀರಾ.? ಫುಲ್ ಡೀಟೇಲ್ಸ್ ಇಲ್ಲಿದೆ, ನೋಡಿರಿ...

ಎಲ್ಲವೂ ಶುರುವಾಗಿದ್ದು ಚಪಾತಿ ವಿಷ್ಯಕ್ಕೆ.!
ಅಡುಗೆ ಮನೆಯಲ್ಲಿ ಆಂಡ್ರ್ಯೂ ಚಪಾತಿ ಮಾಡುತ್ತಿದ್ದರು. ಆಂಡ್ರ್ಯೂ ಮಾಡುತ್ತಿದ್ದ ಚಪಾತಿ ಬೆಂದಿರಲಿಲ್ಲ. ಈ ಬಗ್ಗೆ ಧನರಾಜ್ ವಿಚಾರಿಸಿದರು. ತಪ್ಪನ್ನ ಒಪ್ಪಿಕೊಂಡು ಸರಿ ಮಾಡಿಕೊಳ್ಳುವ ಬದಲು ಆಂಡ್ರ್ಯೂ ಮಾತಿಗೆ ಮಾತು ಬೆಳೆಸಿದರು. ಈ ಗ್ಯಾಪ್ ನಲ್ಲಿ ಆಂಡ್ರ್ಯೂ ಗ್ಯಾಸ್ ಆಫ್ ಕೂಡ ಮಾಡಿರಲಿಲ್ಲ. ಧನರಾಜ್ ಗೆ ಇದು ಕಿರಿಕಿರಿ ತಂತು.

ಹೇಳಿದ್ದನ್ನ ಕೇಳಲು ಆಗಲ್ಲ.!
''ಹೇಳುವುದನ್ನು ಕೇಳಬೇಕು, ನಿನ್ನ ಪಾಡಿಗೆ ನೀನು ಮಾಡುತ್ತಿದ್ದರೆ ಆಗಲ್ಲ'' ಅಂತ ಧನರಾಜ್ ಹೇಳಿದರೆ, ''ಹಂಗೆಲ್ಲ ಆಗಲ್ಲ'' ಅಂತ ಆಂಡ್ರ್ಯೂ ತಿರುಗೇಟು ನೀಡಲು ಆರಂಭಿಸಿದರು. ''ಹಾಗಾದ್ರೆ, ಅಡುಗೆ ಮನೆ ಡಿಪಾರ್ಟ್ಮೆಂಟ್ ನಿಂದ ನಿನ್ನ ತೆಗೆದುಬಿಡುವೆ'' ಅಂತ ಧನರಾಜ್ ಹೇಳಿದರೆ ''ನಾನು ಹೋಗಲ್ಲ, ನನ್ನಿಷ್ಟ'' ಅಂತ ಆಂಡ್ರ್ಯೂ ವಾದಕ್ಕೆ ಇಳಿದರು.

ಡಬ್ಬಾ ಕ್ಯಾಪ್ಟನ್ ನನ್ಮಗ
ಮಾತಿಗೆ ಮಾತು ಬೆಳೆದು, ''ನನಗೆ ಏನಾದರೂ ಅಧಿಕಾರ ಕೊಡಬೇಕು, ಆಗ ಇರೋದು ನಿನಗೆ'' ಅಂತ ಧನರಾಜ್ ಹೇಳಿದರು. ಅದನ್ನೇ ಹಿಡಿದುಕೊಂಡ ಆಂಡ್ರ್ಯೂ, ''ನೀನು ಮನೆಗೆ ಕ್ಯಾಪ್ಟನ್, ನನಗೆ ಅಲ್ಲ. ನೀನು ಎಂಥಾ ಡಬ್ಬಾ ಕ್ಯಾಪ್ಟನ್ ನನ್ಮಗ ಅಂತ ನಾನು ಹೇಳುವೆ'' ಎಂದುಬಿಟ್ಟರು. ಆಗ, ''ನನ್ಮಗ ಅಂತ ಹೇಳಬೇಡ. ಮರ್ಯಾದೆ ಬೇಡ್ವಾ ನಿನಗೆ'' ಅಂತ ಧನರಾಜ್ ಗರಂ ಆದರು.

ಚಪ್ಪಲಿ ತಗೊಂಡು ಹೊಡೆಯುವೆ
''ಯಾಕೆ ಇಂಥವರನ್ನೆಲ್ಲ ಸೇರಿಸ್ತಾರೋ ಒಳಗೆ ಅಂತ ಗೊತ್ತಿಲ್ಲ'' ಅಂತ ಧನರಾಜ್ ಹೇಳಿದಾಗ ಸಿಟ್ಟಿಗೆದ್ದ ಆಂಡ್ರ್ಯೂ, ''ನಿಮ್ಮಪ್ಪ ನನ್ನ ಇಲ್ಲಿ ಒಳಗೆ ಬಿಟ್ಟಿಲ್ಲ'' ಎಂದರು. ''ನಮ್ಮಪ್ಪನ ಸುದ್ದಿಗೆ ಬಂದ್ರೆ ಚಪ್ಪಲಿ ತಗೊಂಡು ಹೊಡೆಯುವೆ. ತಾಳ್ಮೆ ಪರೀಕ್ಷೆ ಮಾಡಬೇಡ. ಥೂ'' ಎಂದು ರೊಚ್ಚಿಗೆದ್ದರು ಧನರಾಜ್.

ಸಿಟ್ಟು ಕಮ್ಮಿ ಆಗಿಲ್ಲ
ಆಂಡ್ರ್ಯೂ ಮಾಡಿದ್ದು ಸರಿಯಲ್ಲ ಅಂತ ನಯನ, ಕವಿತಾ ಹೇಳಲು ಹೋದಾಗಲೂ, ತಮ್ಮ ತಪ್ಪನ್ನ ಒಪ್ಪಿಕೊಳ್ಳಲು ಆಂಡ್ರ್ಯೂ ರೆಡಿಯಿರಲಿಲ್ಲ. ಕೊನೆಗೆ 'ಅಪ್ಪ'ನ ವಿಷಯ ಮಾತನಾಡಿದ್ದಕ್ಕೆ ಧನರಾಜ್ ಬಳಿ ಆಂಡ್ರ್ಯೂ ಕ್ಷಮೆ ಕೇಳಿದರು. ಆದರೂ ಆಂಡ್ರ್ಯೂ ಮೇಲೆ ಧನರಾಜ್ ಗೆ ಇರುವ ಸಿಟ್ಟು ಕಮ್ಮಿ ಆಗಿಲ್ಲ.


Click it and Unblock the Notifications











