ಸೋನು whatsapp ಡಿಪಿಯಲ್ಲಿ ನವೀನ್ ಫೋಟೋ, ಏನಿದು ಹೊಸ ವಿಷ್ಯ?
"ಕುತ್ತೇ..ಚಿನ್ನ ನಹೀಂ ಸೋನು ಪಾಟೀಲ್ ಬೋಲೋ'' ಅರೆರೆ ರೆಬಲ್ ಸ್ಟಾರ್ ಅಂಬರೀಷ್ ಅವರ ಸಿನಿಮಾ ಸಂಭಾಷಣೆ ಸೋನು ಪಾಟೀಲ್ ಹೆಸರಲ್ಲೇಕೆ ಬಂತು ಎಂದು ಯೋಚಿಸಬೇಡಿ. ಇದು ಆ ಕುರಿತಾದ ವಿವರ ಹೇಳುವ ಕತೆಯೇ. ಅವರು ಇತ್ತೀಚೆಗೆ ತಾನೇ 'ಗೋಸಿ ಗ್ಯಾಂಗ್' ಚಿತ್ರದ ಮಾಧ್ಯಮಗೋಷ್ಠಿಯಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಕ್ಷೇತ್ರದ ಆತ್ಮೀಯರೊಂದಿಗೆ ಮಾತನಾಡುತ್ತಾ ಈ ವಿಚಾರ ಪ್ರಸ್ತಾಪಿಸಿದ್ದಾರೆ.
ನಾನು ಜೀವನದಲ್ಲಿ ಕಷ್ಟಪಟ್ಟು ಮೇಲೆ ಬಂದವಳು. ಅದಕ್ಕೆ ತಕ್ಕ ಫಲ ಇತ್ತೀಚೆಗೆ ತಾನೇ ಸಿಗುತ್ತಿದೆ. ನಿಧಾನಕ್ಕಾದರೂ ಪರವಾಗಿಲ್ಲ. ಯಶಸ್ಸಿನ ಒಂದೊಂದೇ ಮೆಟ್ಟಿಲೇರಿ ಹೋದರೂ ಸಾಕು. ಅಡ್ಡದಾರಿ ಹಿಡಿಯಬೇಕಾದ ಆವಶ್ಯಕತೆ ತನಗಿಲ್ಲ ಎನ್ನುತ್ತಾರೆ ಸೋನು ಪಾಟೀಲ್. ಅದಕ್ಕೆ ಅವರು ಒಂದು ಉದಾಹರಣೆಯನ್ನು ಕೂಡ ನೀಡುತ್ತಾರೆ. ಮುಂದೆ ಓದಿ...

ನವೀನ್ ಫೋಟೋ ಯಾಕೆ
ಬಿಗ್ ಬಾಸ್ ರಿಯಾಲಿಟಿ ಶೋನ್ ಆರನೇ ಸೀಸನ್ ಸ್ಪರ್ಧಿಯಾಗಿ ಇತ್ತೀಚೆಗಷ್ಟೇ ಹೊರಗೆ ಬಂದವರು ಸೋನು. ಅಲ್ಲಿ ಸಹ ಸ್ಪರ್ಧಿ ಗಾಯಕ ನವೀನ್ ಸಜ್ಜು ಅವರಿಗೆ 'ಐ ಲವ್ ಯೂ' ಎಂದಿದ್ದ ಸೋನು, ಇದೀಗ ಅಲ್ಲಿಂದ ವಾಪಾಸಾದ ಮೇಲೆಯೂ ತಮ್ಮ ವಾಟ್ಸ್ಯಾಪ್ ಡಿ.ಪಿಯಲ್ಲಿ ನವೀನ್ ಸಜ್ಜು ಫೊಟೋ ಹಾಕಿಕೊಂಡಿದ್ದಾರೆ. ಅದು ಅವರು ಗೆಲ್ಲಲಿ ಎನ್ನುವ ಹಾರೈಕೆಯೇ ಹೊರತು ಬೇರೇನೂ ಇಲ್ಲ. ತಮ್ಮದು ಏನಿದ್ದರೂ ಸ್ನೇಹದ ಐ ಲ ಯೂ ಮಾತ್ರ. ಅದನ್ನು ಬಿಗ್ ಬಾಸ್ ಮನೆಯೊಳಗೆಯೇ ಸ್ಪಷ್ಟ ಪಡಿಸಿದ್ದೇನೆ ಎಂದು ಅವರು ಹೇಳುತ್ತಾರೆ.

ನನ್ನ ಚಿನ್ನ ಗಿನ್ನ ಅಂತ ಕರೆಯೋ ಹಂಗಿಲ್ರಿ!
ಬೆಂಗಳೂರಲ್ಲಿ ಅದರಲ್ಲಿಯೂ ಗಾಂಧಿನಗರದಲ್ಲಿ ಆತ್ಮೀಯಗೆ ಹಲವು ಹೆಸರುಗಳು ಹುಟ್ಟಿಕೊಳ್ಳುತ್ತವೆ. ಅವುಗಳಲ್ಲಿ ಮಚ್ಚಾ, ಮಚ್ಚಿ ಜೊತೆಗೆ 'ಚಿನ್ನ' ಎನ್ನುವ ಪದ ಕೂಡ ಸೇರುತ್ತವೆ. ಚಿತ್ರೀಕರಣ ಶುರುವಾದ ವಾರದಲ್ಲಿ ಚಿತ್ರತಂಡದೊಡನೆ ಆತ್ಮೀಯವಾಗುವ ನಿರ್ದೇಶಕರೇ ಈ ಪದ ಪ್ರಯೋಗ ಮಾಡುವುದು ಕೂಡ ಅಚ್ಚರಿಯ ವಿಷಯವಲ್ಲ. ಅದರಲ್ಲಿಯೂ ಹೆಣ್ಣು, ಗಂಡು ಬೇಧವಿಲ್ಲದೆ ಈ ಪದ ಪ್ರಯೋಗ ನಡೆಸುವವರಿದ್ದಾರೆ. ಮಾತ್ರವಲ್ಲ ನಟಿಯರೇ ಕೆಲವೊಮ್ಮೆ ತಮ್ಮ ಮೇಕಪ್ ಹುಡುಗರನ್ನು, ಅಸಿಸ್ಟೆಂಟ್ ಗಳನ್ನು, ಪ್ರೊಡಕ್ಷನ್ ಹುಡುಗರನ್ನು ಚಿನ್ನ ಎಂದು ಕರೆಯುವುದನ್ನು ಕಾಣಬಹುದು. ಆದರೆ, ಇದು ಸೋನುಗೆ ಇಷ್ಟವಿಲ್ಲವಂತೆ

ನೆಟ್ಟಗೆ ನನ್ನ ಹೆಸರನ್ನು ಕರೆದರೆ ಸಾಕು
ಎಲ್ಲರಿಗೂ ಚಿನ್ನ ರೀತಿಯ ಕರೆಗಳು ಪಥ್ಯವಾಗಬೇಕು ಅಂತ ಏನಿಲ್ಲವಲ್ಲ? ಹೆಸರಲ್ಲೇ ಚಿನ್ನ ಎನ್ನುವ ಅರ್ಥ ಇಟ್ಟುಕೊಂಡಿರುವ ಸೋನು ಈ ಪಟ್ಟಿಗೆ ಸೇರುತ್ತಾರೆ. ತನ್ನನ್ನು ಸೆಟ್ಟಲ್ಲಿ ಯಾರಾದರೂ ಸಿನಿಮಾ ಚಿನ್ನಾ ಎಂದು ಕೂಗಿದಲ್ಲಿ "ನಾ ಹೆಂಗಲೇ ನಿನಗೆ ಚಿನ್ನಾ ಆದೀನಿ.. ಹ.. ಸೂ.. ಮಗನಾ" ಎಂದು ಕೇಳುವುದಾಗಿ ಸೋನು ಹೇಳಿದ್ದಾರೆ! ನನಗೆ ಸೋನು ಪಾಟೀಲ್ ಎನ್ನುವ ಹೆಸರಿದೆ. ನೆಟ್ಟಗೆ ಆ ಹೆಸರನ್ನು ಕರೆದರೆ ಸಾಕು ಎನ್ನುವುದು ಆಕೆಯ ಅಭಿಪ್ರಾಯ.

ಬಿಗ್ ಬಾಸ್ ನನ್ನಲ್ಲಿ ತುಂಬಾ ಬದಲಾವಣೆ ನೀಡಿದೆ
ಬಿಗ್ ಬಾಸ್ ರಿಯಾಲಿಟಿ ಶೋಗೆ ಹೋಗಿ ಬಂದವರೆಲ್ಲ ತಮ್ಮ ಬದುಕಲ್ಲಿ ಬದಲಾವಣೆಗಳಾದ ಬಗ್ಗೆ ಹೇಳಿಕೊಳ್ಳುತ್ತಾರೆ. ಅದರಲ್ಲಿ ಪ್ರಮುಖವಾಗಿದ್ದು ನನ್ನೊಳಗಿನ ನಾನು ಏನು ಎನ್ನುವುದು ನನಗೆ ಅರ್ಥವಾಗಿದೆ ಎಂಬ ಮಾತು. ಆದರೆ ಸೋನುವಿಗೆ ಬಾಹ್ಯ ಪ್ರಪಂಚದಲ್ಲಿ ಬದಲಾವಣೆ ಕಂಡಿದೆ. ನಾನು ನಟಿಯಾಗಿ ಗುರುತಿಸಿಕೊಂಡಿದ್ದರೂನು ನನ್ನನ್ನು ವ್ಯಾಪಕವಾಗಿ ಜನತೆ ಗುರುತಿಸಲು ಆರಂಭಿಸಿದ್ದು ಬಿಗ್ ಬಾಸ್ ಬಳಿಕ ಎನ್ನುತ್ತಾರೆ ಸೋನು.

ಅನೇಕ ಕಾರ್ಯಕ್ರಮಗಳಿಗೆ ಅತಿಥಿ
ಬಿಗ್ ಬಾಸ್ ನಿಂದ ಬಂದೊಡನೆ ಇದ್ದ ಬದ್ದ ಕಾರ್ಯಕ್ರಮಗಳಿಗೆಲ್ಲ ಆಹ್ವಾನಿಸುತ್ತಿದ್ದಾರೆ. ಚಿನ್ನದ ಮಳಿಗೆಯ ಉದ್ಘಾಟನೆಗೂ ಕರೆದಿದ್ದರು. ನಾನು ಲೈಫಲ್ಲಿ ಅಷ್ಟೊಂದು ಚಿನ್ನ ಕೊಳ್ತೀನೋ ಇಲ್ವೋ ಆದರೆ, ಹಾಕಿ ಪ್ರದರ್ಶಿಸೋ ಯೋಗ ಬಂತು. ಹೊಸದಾಗಿ ಚಿನ್ನ ಖರೀದಿಸುವವರೂ ನನಗೆ ತೊಡಿಸಿ ನೋಡಿ, ಫೊಟೋ ತೆಗೆದು ಅದನ್ನು ಮನೆಗೆ ಒಯ್ಯುತ್ತಿದ್ದರು. ಜೊತೆಗೆ ಮಳಿಗೆ ಕಡೆಯಿಂದ ನನಗೆ ಸಂಭಾವನೆ ಕೂಡ ದೊರಕಿತು.

ಲೈಫ್ ಸ್ಟೈಲ್ ಫುಲ್ ಚೇಂಜಾಗಿದೆ
ಮೊದಲೆಲ್ಲ ಒಬ್ಬೊಬ್ಬಳೇ ತಿರುಗಾಡುವಾಗ ಜನ ಗುರುತು ಹಿಡೀತಿರಲಿಲ್ಲ. ಈಗ ಸೆಲ್ಫಿಗಾಗಿ ಮುತ್ಕೊಂಡು ಬಿಡ್ತಾರೆ. ಹೀಗಾಗಿ ನನ್ನ ಲೈಫ್ ಸ್ಟೈಲ್ ಫುಲ್ ಚೇಂಜಾಗಿದೆ. ಆದರೆ ಉತ್ತರ ಕನ್ನಡದ ಭಾಷೆ ಮಾತ್ರ ಬದಲಾಗಿಲ್ಲ. ಮುಂದೆ ಬದಲಾಗೋದೂ ಇಲ್ಲ ಎನ್ನುತ್ತಾರೆ ಸೋನು ಪಾಟೀಲ್.


Click it and Unblock the Notifications











