ಅಂಬಿ ನಿಧನದ ಸುದ್ದಿ ಕೇಳಿ ಕಣ್ಣೀರಿಟ್ಟ 'ಬಿಗ್ ಬಾಸ್' ಸ್ಪರ್ಧಿಗಳು

Recommended Video

Bigg boss kannada season 6 ; ಅಂಬಿ ನಿಧನದ ಸುದ್ದಿ ಕೇಳಿ ಕಣ್ಣೀರಿಟ್ಟ 'ಬಿಗ್ ಬಾಸ್' ಸ್ಪರ್ಧಿಗಳು

ರೆಬಲ್ ಸ್ಟಾರ್ ಅಂಬರೀಶ್ ಅವರ ನಿಧನದ ಸುದ್ದಿ ಇಡೀ ಕರ್ನಾಟಕಕ್ಕೆ ಬಂದಿದ್ದ ಸಿಡಿಲಿನ ಸುದ್ದಿ. ಆ ಸುದ್ದಿ ಕೇಳಿದಾಗ ಯಾರೂ ಅದು ನಿಜ ಎಂದು ನಂಬುವ ಸ್ಥಿತಿಯಲ್ಲಿ ಇರಲಿಲ್ಲ. ಅಂಬರೀಶಣ್ಣ ನಮ್ಮ ಜೊತೆ ಇಲ್ಲ ಎನ್ನುವುದನ್ನು ಯಾರ ಮನಸ್ಸು ಅಷ್ಟು ಸುಲಭವಾಗಿ ತೆಗೆದುಕೊಳ್ಳಲಿಲ್ಲ.

ಅದೇ ರೀತಿ ಈಗ 'ಬಿಗ್ ಬಾಸ್' ಮನೆಯಲ್ಲಿ ಇರುವ ಸದಸ್ಯರಿಗೆ ಸಹ ಈ ಸುದ್ದಿ ತಿಳಿಸಲಾಗಿದೆ. ಅಂಬರೀಶ್ ಅವರು ಕಳೆದ ಶನಿವಾರದಂದು ಇಹಲೋಕ ತ್ಯೆಜಿಸಿದ್ದು, ಒಂದು ವಾರದ ಬಳಿಕ 'ಬಿಗ್ ಬಾಸ್' ಸ್ಪರ್ಧಿಗಳಿಗೆ ಈ ವಿಷಯ ತಲುಪಿದೆ. ಅಂಬರೀಶ್ ವಿಧಿವಶರಾದ ಸುದ್ದಿ ಕೇಳಿದ ತಕ್ಷಣ ಎಲ್ಲ ಸ್ಪರ್ಧಿಗಳ ಕಣ್ಣೀರು ಹಾಕಿದ್ದಾರೆ. ಅಗಲಿದೆ ನಾಯಕನಿಗೆ ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಮುಂದೆ ಓದಿ..

ಸುದ್ದಿ ತಿಳಿಸಿದ ಬಿಗ್ ಬಾಸ್

ಸುದ್ದಿ ತಿಳಿಸಿದ ಬಿಗ್ ಬಾಸ್

'ಬಿಗ್ ಬಾಸ್' ಸ್ಪರ್ಧಿಗಳಿಗೆ ಹೊರ ಜಗತ್ತಿನ ಸಂಪರ್ಕ ಇರುವುದಿಲ್ಲ. ಪೋನ್, ಟಿವಿ, ಸೋಷಿಯಲ್ ಮೀಡಿಯಾ ಎಲ್ಲದರಿಂದ ದೂರ ಇರುವ ಅವರಿಗೆ ಯಾವ ವಿಷಯಗಳು ತಿಳಿಯುವುದಿಲ್ಲ. ಅದೇ ರೀತಿಯಲ್ಲಿ ಅಂಬರೀಶ್ ಅವರ ನಿಧನದ ವಿಷಯ ಕೂಡ ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಗೊತ್ತಿರಲಿಲ್ಲ. ನಿನ್ನೆಯ ಸಂಚಿಕೆಯಲ್ಲಿ 'ಬಿಗ್ ಬಾಸ್' ತಮ್ಮ ಸ್ಪರ್ಧಿಗಳಿಗೆ ಈ ವಿಷಯ ಹೇಳಿದೆ.

ಸುದೀಪ್ ಮೌನ

ಸುದೀಪ್ ಮೌನ

ಸುದೀಪ್ ತಮ್ಮ ಪ್ರೀತಿಯ ಮಾಮ ಅಂಬರೀಶ್ ರನ್ನು ಕಳೆದುಕೊಂಡಿದ್ದಾರೆ. ಅವರ ಅಗಲಿಕೆ ನಂತರ ಈ ವಾರ 'ಬಿಗ್ ಬಾಸ್' ವೇದಿಕೆ ಏರಿದ ಅವರು ಸ್ಪರ್ಧಿಗಳಿಗೆ ಈ ವಿಷಯವನ್ನು ಹೇಳುವ ಜವಾಬ್ದಾರಿ ಹೊಂದಿದ್ದರು. ಆದರೆ, ಇಂತಹ ದುಃಖದ ವಿಷಯವನ್ನು ತಿಳಿಸಲು ಆಗದೆ ಅವರು ಮೌನ ವಹಿಸಿದರು. ನಂತರ ವಿಡಿಯೋ ಮೂಲಕ ಸ್ಪರ್ಧಿಗಳಿಗೆ ಈ ಸುದ್ದಿಯನ್ನು ತಿಳಿಸಲಾಯಿತು.

ಕಣ್ಣೀರು ಹಾಕಿದ ಸ್ಪರ್ಧಿಗಳು

ಕಣ್ಣೀರು ಹಾಕಿದ ಸ್ಪರ್ಧಿಗಳು

ಅಂಬರೀಶ್ ಅವರ ಸಾವಿನ ಸುದ್ದಿಯ ವಿಡಿಯೋ ಬರುತ್ತಿದ್ದ ಹಾಗೆ ಎಲ್ಲ ಸ್ಪರ್ಧಿಗಳ ಕಣ್ಣಲ್ಲಿ ನೀರು ಮೂಡಿತು. ಅಂಬರೀಶ್ ಅವರನ್ನು ಇಷ್ಟು ವರ್ಷದಿಂದ ನೋಡಿದ್ದ ಸ್ಪರ್ಧಿಗಳಿಗೆ ಅವರ ಅಂತಿಮ ದರ್ಶನ ಪಡೆಯಲು ಸಾಧ್ಯವೆ ಆಗಲಿಲ್ಲ. ಅವರಲ್ಲಿಯೂ ಮಂಡ್ಯದವರೇ ಆದ ನವೀನ್ ಸಜ್ಜು ಬಿಕ್ಕಿ ಬಿಕ್ಕಿ ಅತ್ತರು.

ಇಂದು ಶ್ರದ್ಧಾಂಜಲಿ

'ಬಿಗ್ ಬಾಸ್'' ಮನೆಯಲ್ಲಿ ಇಂದು ಸ್ಪರ್ಧಿಗಳು ಅಂಬರೀಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಅಂಬರೀಶ್ ಅವರ ಫೋಟೋಗೆ ಪೂಜೆ ಸಲ್ಲಿಸಿ, ಅವರಿಗೆ ಹಾಡುಗಳ ಮೂಲಕ ನಮನ ಸಲ್ಲಿಸಲಿದ್ದಾರೆ. ಅಂಬರೀಶ್ ಅವರ ಬಗ್ಗೆ ಮಾತನಾಡಲಿದ್ದಾರೆ.

More from Filmibeat

English summary
Bigg Boss Kannada 6 contestants condolences for actor Ambareesh death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X