'ಬಿಗ್ ಬಾಸ್' ಮನೆಯ ವಿಷ ಸರ್ಪ, ಕುತಂತ್ರಿ, ಗೋಮುಖ ವ್ಯಾಘ್ರ ಯಾರು ಗೊತ್ತೇ.?

Recommended Video

Bigg Boss Kannada Season 6 : ವಿಶೇಷ ಚಟುವಟಿಕೆಯಲ್ಲಿ ಎಲ್ಲಾ ಸ್ಪರ್ಧಿಗಳಿಗೂ ಸಿಕ್ಕಿತು ವಿವಿಧ ಬಿರುದುಗಳು

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಮೊಟ್ಟ ಮೊದಲ ಬಾರಿಗೆ ವಾಕ್ಸಮರಕ್ಕೆ ನಾಂದಿ ಹಾಡಿದ ಕಾರಣಕ್ಕೋ ಏನೋ.. ರಶ್ಮಿ ಕಂಡ್ರೆ ಹಲವರಿಗೆ ಇರುಸುಮುರುಸು.

ಅನಿಸಿದ್ದನ್ನ ನೇರವಾಗಿ ಫಿಲ್ಟರ್ ಇಲ್ಲದೆ ಹೇಳುವುದರಲ್ಲಿ ರಶ್ಮಿ ಎತ್ತಿದ ಕೈ. ಹೀಗಾಗಿ, ಒಂದೇ ವಾರದಲ್ಲಿ ಹಲವರ ಬಳಿ ರಾಪಿಡ್ ರಶ್ಮಿ ವಿರೋಧ ಕಟ್ಟಿಕೊಂಡಿದ್ದಾರೆ. ಪರಿಣಾಮ ರಾಪಿಡ್ ರಶ್ಮಿಗೆ 'ವಿಷ ಸರ್ಪ', 'ಊಸರವಳ್ಳಿ', 'ಗುಳ್ಳೆ ನರಿ', 'ಗೋಮುಖ ವ್ಯಾಘ್ರ', 'ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿ', 'ಕುತಂತ್ರಿ' ಬಿರುದುಗಳು ಲಭಿಸಿವೆ.

ಇನ್ನೂ ಅನೇಕರಿಗೆ 'ಕಿರಿಕಿರಿ' ತಂದಿರುವ ಆಂಡ್ರ್ಯೂಗೂ 'ಮಿತ್ರ ದ್ರೋಹಿ', 'ವಿಕೃತ ಮನಸ್ಸು' ಸೇರಿದಂತೆ ಹಲವು ಬಿರುದುಗಳು ಸಿಕ್ಕಿವೆ. ಇಂಟ್ರೆಸ್ಟಿಂಗ್ ಅಂದ್ರೆ, 'ಬಿಗ್ ಬಾಸ್' ಮನೆಯಲ್ಲಿ 'ಒಗ್ಗರಣೆ ಡಬ್ಬಿ' ಮುರಳಿ 'ದಂಡಪಿಂಡ' ಅಂತೆ.!

ಅಸಲಿಗೆ, ಈ ಎಲ್ಲ ಬಿರುದುಗಳು ಸ್ಪರ್ಧಿಗಳಿಗೆ ಸಿಕ್ಕಿದ್ದು 'ಬಿರುದು ಬಾವಲಿ' ಎಂಬ ವಿಶೇಷ ಚಟುವಟಿಕೆಯಲ್ಲಿ. ಇದರ ಅನುಸಾರ 'ಬಿಗ್ ಬಾಸ್' ಮನೆಯ ಸದಸ್ಯರಿಗೆ ಸರಿ ಹೊಂದುವ ಬಿರುದುಗಳನ್ನು ಎಲ್ಲ ಸದಸ್ಯರು ಆಯ್ಕೆ ಮಾಡಬೇಕಿತ್ತು. ಹೆಚ್ಚು ಮತಗಳ ಅನುಸಾರವಾಗಿ ಯಾವ್ಯಾವ ಬಿರುದು ಯಾರ್ಯಾರ ಪಾಲಾಯಿತು ಅನ್ನೋದನ್ನ ನೀವೇ ನೋಡಿ ಫೋಟೋ ಸ್ಲೈಡ್ ಗಳಲ್ಲಿ....

ರಾಪಿಡ್ ರಶ್ಮಿಗೆ ಅತಿ ಹೆಚ್ಚು ಬಿರುದುಗಳು

ರಾಪಿಡ್ ರಶ್ಮಿಗೆ ಅತಿ ಹೆಚ್ಚು ಬಿರುದುಗಳು

'ವಿಷ ಸರ್ಪ', 'ಊಸರವಳ್ಳಿ', 'ಕುತಂತ್ರಿ', 'ಗೋಮುಖ ವ್ಯಾಘ್ರ', 'ಹೊಟ್ಟೆ ಕಿಚ್ಚಿನ ಮೊಟ್ಟೆ ಕೋಳಿ', 'ಗುಳ್ಳೆ ನರಿ' ಎಂಬ ಬಿರುದುಗಳು ರಶ್ಮಿ ಪಾಲಾಯಿತು. ಅಲ್ಲಿಗೆ, 'ಬಿಗ್ ಬಾಸ್' ಮನೆಯಲ್ಲಿ ರಾಪಿಡ್ ರಶ್ಮಿ ಒಂಥರಾ 'ವಿಲನ್' ಇದ್ದ ಹಾಗೆ ಲೆಕ್ಕ.

ಟಾರ್ಗೆಟ್ ಆದ ಆಂಡ್ರ್ಯೂ

ಟಾರ್ಗೆಟ್ ಆದ ಆಂಡ್ರ್ಯೂ

ಇನ್ನೂ 'ಸಮಯ ಸಾಧಕ', 'ಮಿತ್ರ ದ್ರೋಹಿ', 'ಕಿರಿಕಿರಿ', 'ಗುಳ್ಳೆ ನರಿ', 'ವಿಕೃತ ಮನಸ್ಸು' ಹಣೆಪಟ್ಟಿ ಆಂಡ್ರ್ಯೂಗೆ ಸಿಕ್ತು. ಯಾವುದಕ್ಕೂ ಬೇಸರ ಮಾಡಿಕೊಳ್ಳದೇ ಎಲ್ಲ ಬಿರುದುಗಳನ್ನು ಖುಷಿಯಿಂದಲೇ ಆಂಡ್ರ್ಯೂ ಸ್ವೀಕರಿಸಿದರು.

ಡ್ರಾಮಾ ಕ್ವೀನ್ ಸ್ನೇಹಾ

ಡ್ರಾಮಾ ಕ್ವೀನ್ ಸ್ನೇಹಾ

'ಬಿಗ್ ಬಾಸ್' ಮನೆಯಲ್ಲಿ ಸ್ನೇಹಾ 'ಡ್ರಾಮಾ ಕ್ವೀನ್' ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಅಲ್ಲದೇ, ಸ್ನೇಹಾ 'ನಕಲಿ' ಅಂತಲೂ ಕೆಲವರು ಹೇಳಿದ್ದಾರೆ.

'ದಂಡಪಿಂಡ' ಮುರಳಿ

'ದಂಡಪಿಂಡ' ಮುರಳಿ

ಟಾಸ್ಕ್ ಗಳಲ್ಲಿ ತಕ್ಕಮಟ್ಟಿಗೆ ಪಾಲ್ಗೊಳ್ಳುವ 'ಒಗ್ಗರಣೆ ಡಬ್ಬಿ' ಖ್ಯಾತಿಯ ಮುರಳಿ 'ದಂಡಪಿಂಡ' ಹಾಗೂ 'ನಿರುತ್ಸಾಹಿ' ಅಂತೆ. ಇನ್ಮುಂದೆ ''ನನ್ನಲ್ಲಿ ಉತ್ಸಾಹ ಇರಲಿದೆ'' ಎಂದಿರುವ ಮುರಳಿಯ ಆಟದ ಶೈಲಿ ಹೇಗಿರುತ್ತೋ, ನೋಡೋಣ.

ಒಂದೊಂದು ಬಿರುದು ಪಡೆದುಕೊಂಡವರು.!

ಒಂದೊಂದು ಬಿರುದು ಪಡೆದುಕೊಂಡವರು.!

ಆಗಾಗ ಕನ್ಫ್ಯೂಸ್ ಆದವರಂತೆ ಕಾಣುವ ಆನಂದ್ ಗೆ 'ಮೂರ್ಖ', ಇದ್ದಕ್ಕಿದ್ದಂತೆ ಟೆಂಪರ್ ರೈಸ್ ಮಾಡಿಕೊಳ್ಳುವ ರವಿಗೆ 'ಮುಂಗೋಪಿ', ಚೆನ್ನಾಗಿ ಪ್ಲಾನಿಂಗ್ ಮಾಡುವ ಶಶಿಗೆ 'ಕುತಂತ್ರಿ', ಗಾಯಕ ನವೀನ್ ಗೆ 'ಸ್ವಾರ್ಥಿ', ಜಯಶ್ರೀಗೆ 'ಡಿಪ್ಲೋಮ್ಯಾಟಿಕ್', ಆಗಾಗ ಅಳುವ ರೀಮಾಗೆ 'ಅಳುಮುಂಜಿ' ಬಿರುದುಗಳು ಲಭಿಸಿವೆ.

More from Filmibeat

English summary
Bigg Boss Kannada 6: Day 10: Contestants gets different titles.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X