ಕಿತ್ತಾಟ-ನೂಕಾಟದ ನಡುವೆ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದ ಧನರಾಜ್

Recommended Video

Bigg Boss Kannada Season 6 : ಬಿಗ್ ಮನೆಯ ಕ್ಯಾಪ್ಟನ್ ಆದ ಧನರಾಜ್

ಅದೃಷ್ಟ ಪರೀಕ್ಷೆಗಾಗಿ 'ಬಿಗ್ ಬಾಸ್' ಮನೆಗೆ ಬಂದಿರುವ ಧನರಾಜ್ ಎರಡನೇ ವಾರವೇ ಕ್ಯಾಪ್ಟನ್ ಹುದ್ದೆ ಅಲಂಕರಿಸಿದ್ದಾರೆ. ಅಲ್ಲಿಗೆ, ಮೂರನೇ ವಾರದ ನಾಮಿನೇಷನ್ಸ್ ನಿಂದ ಧನರಾಜ್ ಸಂಪೂರ್ಣವಾಗಿ ಸೇಫ್ ಆಗಿದ್ದಾರೆ.

ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಬ್ಲೂ ಟೀಮ್ ಗೆದ್ದ ಕಾರಣ ಧನರಾಜ್, ನವೀನ್ ಸಜ್ಜು, ಅಕ್ಷತಾ ಪಾಂಡವಪುರ ಹಾಗೂ ರಾಕೇಶ್ ಕ್ಯಾಪ್ಟನ್ ಆಗಲು ಅರ್ಹತೆ ಪಡೆದರು.

ನಾಲ್ವರ ಪೈಕಿ ಕ್ಯಾಪ್ಟನ್ ಆಯ್ಕೆಗಾಗಿ 'ಬಿಗ್ ಬಾಸ್' ಬೈ ಸೈಕಲ್ ಸವಾರಿ ಟಾಸ್ಕ್ ಕೊಟ್ಟರು. ಈ ಟಾಸ್ಕ್ ನಲ್ಲಿ 'ಯುಕ್ತಿ'ಗಿಂತ 'ಶಕ್ತಿ'ಗೆ ಹೆಚ್ಚು ಆದ್ಯತೆ ಕೊಟ್ಟ ಪರಿಣಾಮ ಕಿತ್ತಾಟ, ನೂಕಾಟ ಆರಂಭವಾಯ್ತು. ಸೈಕಲ್ ನಿಂದ ಕೆಲವರು ಕೆಳಗೆ ಬಿದ್ದಿದ್ದೂ ಉಂಟು. ಇಷ್ಟೆಲ್ಲಾ ಮಾಡಿದರೂ, ನವೀನ್, ಅಕ್ಷತಾ ಮತ್ತು ರಾಕೇಶ್ ಕ್ಯಾಪ್ಟನ್ ಆಗಲಿಲ್ಲ.! ಮುಂದೆ ಓದಿರಿ...

ಧನರಾಜ್ ಗೆ ಹೆಚ್ಚು ಸಪೋರ್ಟ್

ಧನರಾಜ್ ಗೆ ಹೆಚ್ಚು ಸಪೋರ್ಟ್

ಕ್ಯಾಪ್ಟನ್ ಪ್ರತಿಸ್ಪರ್ಧಿಗಳು ತಮ್ಮ ಪರವಾಗಿ ಬೈ ಸೈಕಲ್ ತುಳಿಯಲು ಮನೆಯ ಸದಸ್ಯರನ್ನು ಮನವೊಲಿಸಬೇಕಿತ್ತು. ಯಾವ ಕ್ಯಾಪ್ಟನ್ ಸ್ಪರ್ಧಿಯ ಸೈಕಲ್ ಅತಿ ಹೆಚ್ಚು ತುಳಿಯಲ್ಪಡುತ್ತದೋ, ಅವರು ಕ್ಯಾಪ್ಟನ್ ಆಗಿ ಆಯ್ಕೆ ಆಗುವುದು ಟಾಸ್ಕ್ ನಿಯಮ. ಈ ಚಟುವಟಿಕೆಯಲ್ಲಿ ಹೆಚ್ಚು ಮಂದಿ ಧನರಾಜ್ ಗೆ ಬೆಂಬಲ ಕೊಟ್ಟರು.

ತಂತ್ರಗಳನ್ನು ಉಪಯೋಗಿಸಿ ಎಂದ ಬಿಗ್ ಬಾಸ್

ತಂತ್ರಗಳನ್ನು ಉಪಯೋಗಿಸಿ ಎಂದ ಬಿಗ್ ಬಾಸ್

ಪ್ರತಿಸ್ಪರ್ಧಿಯ ಸೈಕಲ್ ನಿಂದ ಸದಸ್ಯರನ್ನು ಕೆಳಗಿಳಿಸಲು ನಿಮ್ಮ ನಿಮ್ಮ ತಂತ್ರಗಳನ್ನು ಉಪಯೋಗಿಸಬಹುದು ಎಂಬ ಅನುಮತಿಯನ್ನ 'ಬಿಗ್ ಬಾಸ್' ಕೊಟ್ಟರು. ಇದರಿಂದ ತಲೆಗೆ ಹೆಚ್ಚು ಕೆಲಸ ಕೊಡದ ಸ್ಪರ್ಧಿಗಳು ಬಲಪ್ರಯೋಗ ಮಾಡಲು ನಿಂತರು.

ಗದ್ದಲ-ಗಲಾಟೆ

ಗದ್ದಲ-ಗಲಾಟೆ

ಸೈಕಲ್ ತುಳಿಯುತ್ತಿರುವವರನ್ನು ಕೆಳಗಿಳಿಸಲು ರಾಕೇಶ್, ನವೀನ್ ಮತ್ತು ಅಕ್ಷತಾ ಶಕ್ತಿ ಉಪಯೋಗಿಸಿದರು. ಇದರಿಂದ ಕೆಲ ಕಾಲ 'ಬಿಗ್ ಬಾಸ್' ಮನೆಯಲ್ಲಿ ಗದ್ದಲದ ವಾತಾವರಣ ಉಂಟಾಯಿತು.

ರೊಚ್ಚಿಗೆದ್ದ ಮುರಳಿ

ರೊಚ್ಚಿಗೆದ್ದ ಮುರಳಿ

''ಹಾಳು ಮಾಡಬೇಕು, ಮುರಿದು ಹಾಕಬೇಕು, ಕಿತ್ತು ಹಾಕಬೇಕು... ಇದನ್ನೇ ಹೇಳಿಕೊಡ್ತಿದ್ದಾರಾ 'ಬಿಗ್ ಬಾಸ್' ನಿಮಗೆ.? ಅಂದ್ರೆ ನಿಮ್ಮ ವಿವೇಚನಾಶಕ್ತಿ ಎಷ್ಟಿದೆ ನೋಡಿಕೊಳ್ಳಿ.. ಒಳ್ಳೆಯದ್ದಕ್ಕೆ ಯೋಚನೆ ಮಾಡಬಹುದಲ್ವಾ.? ಮನವೊಲಿಸಬಹುದು ಅಲ್ವಾ.? ಎಲ್ಲರೂ ಕಷ್ಟ ಪಟ್ಟು ಸೈಕಲ್ ತುಳಿಯುತ್ತಿದ್ದರೆ, ನೀವು ಗುದ್ದಿ ಕೆಳಗೆ ಬೀಳಿಸಿ...'' ಎನ್ನುತ್ತ ಮುರಳಿ ರೊಚ್ಚಿಗೆದ್ದರು.

ಕ್ಯಾಪ್ಟನ್ ಆದ ಧನರಾಜ್

ಕ್ಯಾಪ್ಟನ್ ಆದ ಧನರಾಜ್

ಧನರಾಜ್ ಗೆ ಸದಸ್ಯರ ಬಲ ಹೆಚ್ಚಿದ್ದ ಕಾರಣ ಅವರ ಸೈಕಲ್ ಜಾಸ್ತಿ ಸಮಯ ತುಳಿಯಲ್ಪಟ್ಟಿತು. ಹೀಗಾಗಿ, ಧನರಾಜ್ ಕ್ಯಾಪ್ಟನ್ ಆಗಿ ಆಯ್ಕೆಗೊಂಡರು. ಅಷ್ಟೆಲ್ಲಾ ಬಲಪ್ರಯೋಗಿಸಿದರೂ, ನವೀನ್, ರಾಕೇಶ್ ಹಾಗೂ ಅಕ್ಷತಾ ಗೆಲ್ಲಲಿಲ್ಲ.

More from Filmibeat

English summary
Bigg Boss Kannada 6: Day 12: Dhanraj becomes captain.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X