ಕವಿತಾ ಗೌಡ ಮಾಡಿದ ಒಂದೊಳ್ಳೆ ಕೆಲಸ: ಭಾವುಕರಾದ ಆಡಮ್ ಪಾಶಾ
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ದೀಪಾವಳಿ ಹಬ್ಬದ ಶುಭ ಸಂದರ್ಭದಂದು ಎಲ್ಲಾ ಸ್ಪರ್ಧಿಗಳಿಗೂ ತಮ್ಮ ತಮ್ಮ ಕುಟುಂಬದಿಂದ ಉಡುಗೊರೆಗಳು ಲಭಿಸಿದವು.
ಕುಟುಂಬದಿಂದ ಬಂದ ಮೆಸೇಜ್ ಕುರಿತು ಕವಿತಾ ಗೌಡ ಮಾಡಿದ ತಪ್ಪು ಗೆಸ್ ನಿಂದಾಗಿ ರಾಕೇಶ್ ಗೆ ಉಡುಗೊರೆ ಕೈ ತಪ್ಪಿತು ಅನ್ನೋದು ಬಿಟ್ಟರೆ ಉಳಿದವರೆಲ್ಲ ಗಿಫ್ಟ್ ಪಡೆದುಕೊಂಡು ಖುಷಿ ಪಡುತ್ತಿದ್ದರು. ಈ ನಡುವೆ ಏಕಾಂಗಿಯಾಗಿ ಕುಳಿತಿದ್ದವರು ಆಡಮ್ ಪಾಶಾ.
ಆಡಮ್ ಪಾಶಾಗೆ ತಮ್ಮ ಕುಟುಂಬದ ಕಡೆಯಿಂದ ಸಂದೇಶವಾಗಲಿ, ಉಡುಗೊರೆ ಆಗಲಿ ಬಂದಿರಲಿಲ್ಲ. ಹೀಗಾಗಿ, ಆಡಮ್ ಬೇಸರ ಮಾಡಿಕೊಂಡಿದ್ದರು. ಇದನ್ನ ಅರ್ಥೈಸಿಕೊಂಡ ಕವಿತಾ ಗೌಡ ತಮಗೆ ಸಿಕ್ಕಿದ್ದ ಉಡುಗೊರೆಯನ್ನ ಆಡಮ್ ಗಾಗಿ ನೀಡಿದರು.

ತೃತೀಯ ಲಂಗಿ ಆಗಿರುವ ಆಡಮ್ ಪಾಶಾ ತಮ್ಮ ಕುಟುಂಬದಿಂದ ಕೊಂಚ ದೂರ ಉಳಿದಿದ್ದಾರೆ. 'ಬಿಗ್ ಬಾಸ್' ಮನೆಯ ಸ್ಪರ್ಧಿಗಳೇ ತಮ್ಮ ಫ್ಯಾಮಿಲಿ ಎಂದುಕೊಂಡಿದ್ದ ಆಡಮ್ ಪಾಶಾಗೆ ಕವಿತಾ ಗೌಡ ಅದನ್ನ ಸಾಬೀತು ಪಡಿಸಿ ತೋರಿಸಿದರು.
ಕವಿತಾ ಗೌಡ ಮಾಡಿದ ಒಂದೊಳ್ಳೆ ಕೆಲಸದಿಂದ ಆಡಮ್ ಪಾಶಾ ಭಾವುಕರಾದರು. ಕವಿತಾ ಗೌಡ ಮತ್ತು 'ಬಿಗ್ ಬಾಸ್'ಗೆ ಆಡಮ್ ಧನ್ಯವಾದ ಸಲ್ಲಿಸಿದರು.


Click it and Unblock the Notifications











