ಕ್ಯಾಪ್ಟನ್ ಸೋನು ಪಾಟೀಲ್ ಆಗಿರಬಹುದು, ಆದ್ರೆ ಮಾಸ್ಟರ್ ಮೈಂಡ್ ಮಾತ್ರ ರಾಕೇಶ್.!

ಉತ್ತರ ಕರ್ನಾಟಕದ ಜವಾರಿ ಹುಡುಗಿ ಅಂತ ಹೇಳಿಕೊಂಡು 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟ ನಟಿ ಸೋನು ಪಾಟೀಲ್ ಮೂರನೇ ವಾರದ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.

ಹೆಸರಿಗೆ ಸೋನು ಪಾಟೀಲ್ ಕ್ಯಾಪ್ಟನ್ ಆಗಿದ್ದರೂ, ಆಕೆಯ ಹಿಂದೆ ಮಾಸ್ಟರ್ ಮೈಂಡ್ ಆಗಿ ನಿಂತಿರುವವರು ರಾಕೇಶ್. 'ಬಿಗ್ ಬಾಸ್' ಮನೆಯಲ್ಲಿ ತಮ್ಮದೇ ಆದ ಗುಂಪು ಕಟ್ಟಿಕೊಂಡು ಆಟ ಆಡುತ್ತಿರುವವರು ರಾಕೇಶ್.

'ಬಿಗ್ ಬಾಸ್' ಮನೆಯ ಕಿಚನ್ ನಲ್ಲಿ ಪವರ್ ಇದೆ ಅಂತ ತಿಳಿದುಕೊಂಡ ಮೇಲೆ, ಅಡುಗೆ ಮನೆಯ ನೇತೃತ್ವದ ಮೇಲೆ ರಾಕೇಶ್ ಕಣ್ಣು ಹಾಕಿದರು. ಸೋನು ಪಾಟೀಲ್ ಹಾಗೂ ಜಯಶ್ರೀ ನಡುವೆ ತಿಕ್ಕಾಟ ಇದೆ ಅಂತ ಚೆನ್ನಾಗಿ ಅರಿತಿದ್ದ ರಾಕೇಶ್, ಅದನ್ನ ಅಸ್ತ್ರವಾಗಿ ಬಳಸಿಕೊಂಡು ಅಡುಗೆ ಮನೆಯಿಂದ 'ರಿಮೋಟ್ ಕಂಟ್ರೋಲ್' ಜಯಶ್ರೀ ಅಂಡ್ ಟೀಮ್ ಗೆ ಗೇಟ್ ಪಾಸ್ ಕೊಡಿಸಿದ್ದಾರೆ.

ಪರಿಣಾಮ, ರಾಕೇಶ್ ಆತ್ಮೀಯ ಸ್ನೇಹಿತೆ ಅಕ್ಷತಾ ಕೈಗೆ ಅಡುಗೆ ಮನೆಯ ಜವಾಬ್ದಾರಿ ಸಿಕ್ಕಿದೆ. ಮುಂದೆ ಓದಿರಿ...

ಅಡುಗೆ ಮನೆಯಿಂದ ಬಾತ್ ರೂಮ್ ಗೆ ಜಯಶ್ರೀ ಅಂಡ್ ಟೀಮ್.!

ಅಡುಗೆ ಮನೆಯಿಂದ ಬಾತ್ ರೂಮ್ ಗೆ ಜಯಶ್ರೀ ಅಂಡ್ ಟೀಮ್.!

ಎರಡು ವಾರಗಳಿಂದ 'ಬಿಗ್ ಬಾಸ್' ಮನೆಯಲ್ಲಿ ಅಡುಗೆ ಮನೆಯ ಸಾರಥ್ಯ ವಹಿಸಿಕೊಂಡಿದ್ದ ಜಯಶ್ರೀ, ಕವಿತಾ ಗೌಡ ಮತ್ತು ತಂಡಕ್ಕೆ ಇದೀಗ ಬಾತ್ ರೂಮ್ ಕ್ಲೀನ್ ಮಾಡುವ ಜವಾಬ್ದಾರಿ ನೀಡಿದ್ದಾರೆ ಸೋನು ಪಾಟೀಲ್.

ಅಕ್ಷತಾ ಸುಪರ್ದಿಗೆ ಅಡುಗೆ ಮನೆ

ಅಕ್ಷತಾ ಸುಪರ್ದಿಗೆ ಅಡುಗೆ ಮನೆ

ಸದ್ಯ ಅಡುಗೆ ಮನೆಯ ಲೀಡರ್ ಆಗಿರುವವರು ಅಕ್ಷತಾ ಪಾಂಡವಪುರ. ಅಡುಗೆ ಮನೆಯ ಡಿಪಾರ್ಟ್ಮೆಂಟ್ ನಲ್ಲಿ ರಾಪಿಡ್ ರಶ್ಮಿ, ರಾಕೇಶ್, ನವೀನ್, ಸ್ನೇಹಾ, ಆನಂದ ಮತ್ತು ನಯನ ಕೂಡ ಇದ್ದಾರೆ.

ಸ್ಮಶಾನದಲ್ಲಿ ಇದ್ದಾಗ ಯಾರೂ ಕೇರ್ ಮಾಡಲಿಲ್ವಂತೆ.!

ಸ್ಮಶಾನದಲ್ಲಿ ಇದ್ದಾಗ ಯಾರೂ ಕೇರ್ ಮಾಡಲಿಲ್ವಂತೆ.!

'ವಿಷ ಸರ್ಪ' ಲಕ್ಷುರಿ ಬಜೆಟ್ ಟಾಸ್ಕ್ ಚಾಲ್ತಿಯಲ್ಲಿದ್ದಾಗ, ಸ್ಮಶಾನ ಸೇರಿದ್ದ ಸೋನು ಪಾಟೀಲ್, ರಾಕೇಶ್ ಹಾಗೂ ಮುರಳಿ ಕಡೆ ಯಾರೂ ಗಮನ ಹರಿಸಲಿಲ್ಲ. ಈ ಮೂವರ ಊಟ-ತಿಂಡಿ ಬಗ್ಗೆ ಯಾರೂ ಕೇರ್ ಮಾಡಲಿಲ್ಲ. ಆಗ, ಇವರ ಸಹಾಯಕ್ಕೆ ಧಾವಿಸಿದವರು ಅಕ್ಷತಾ. ಹೀಗಾಗಿ, ಅಕ್ಷತಾಗೆ ಅಡುಗೆ ಮನೆಯ ಜವಾಬ್ದಾರಿ ಕೊಟ್ಟಿದ್ದಾರೆ ಸೋನು ಪಾಟೀಲ್.

ಸೋನು ನಿರ್ಧಾರದ ಹಿಂದೆ ರಾಕೇಶ್.!

ಸೋನು ನಿರ್ಧಾರದ ಹಿಂದೆ ರಾಕೇಶ್.!

ಅಡುಗೆ ಮನೆಯ ಜವಾಬ್ದಾರಿಯನ್ನ ಅಕ್ಷತಾಗೆ ನೀಡುವ ಸೋನು ನಿರ್ಧಾರದ ಹಿಂದೆ ರಾಕೇಶ್ ಇದ್ದಾರೆ. ''ಸ್ಮಶಾನದಲ್ಲಿ ಇರುವಾಗ ಅಕ್ಷತಾ ಬಂದು ನಮಗೆ ತಿಂಡಿ-ಊಟ ಕೊಟ್ಟಳು. ಇನ್ಯಾರು ಬಂದು ಕೊಟ್ಟಿಲ್ಲ. ಅದಕ್ಕೆ ಸೋನುಗೆ ಹೇಳಿದ್ದೇನೆ, ಕಿಚನ್ ನಲ್ಲಿ ಇರುವವರನ್ನೆಲ್ಲ ಬೇರೆ ಡಿಪಾರ್ಟ್ಮೆಂಟ್ ಗೆ ಹಾಕು, ಏನಾಗುತ್ತೆ ನೋಡೋಣ ಅಂತ'' ಎಂದು ನವೀನ್ ಬಳಿ ರಾಕೇಶ್ ಹೇಳಿಕೊಂಡಿದ್ದಾರೆ.

ಅಸ್ತ್ರ ಬಳಸಿಕೊಂಡ ರಾಕೇಶ್

ಅಸ್ತ್ರ ಬಳಸಿಕೊಂಡ ರಾಕೇಶ್

''ಎರಡನೇ ವಾರದ ನಾಮಿನೇಷನ್ ನಲ್ಲಿ ಸೋನು ಹಾಗೂ ಜಯಶ್ರೀ ನಡುವೆ ಕ್ಲ್ಯಾಶ್ ಆಗಿತ್ತು. ಹೀಗಾಗಿ, ಕಿಚನ್ ನ ಜಯಶ್ರೀಗೆ ಸೋನು ಬಿಟ್ಟುಕೊಡುವುದಿಲ್ಲ'' ಎಂಬ ಸತ್ಯ ರಾಕೇಶ್ ಗೆ ಚೆನ್ನಾಗಿ ಗೊತ್ತಿತ್ತು.

ಗೇಮ್ ಪ್ಲಾನ್

ಗೇಮ್ ಪ್ಲಾನ್

''ಕಿಚನ್ ನಲ್ಲಿ ಇರುವ ಪವರ್ ಗೊತ್ತಾಗುತ್ತಿದೆ. ಮುಂದಿನ ವಾರ ಇಡೀ ಗೇಮ್ ಚೇಂಜ್ ಆಗುತ್ತದೆ'' ಅಂತ ರಾಕೇಶ್ ಈಗಲೇ ಲೆಕ್ಕಾಚಾರ ಹಾಕುತ್ತಿದ್ದಾರೆ.

More from Filmibeat

English summary
Bigg Boss Kannada 6: Day 19: Rakesh turns master mind.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X