ಅಚ್ಚರಿ ಬೆಳವಣಿಗೆ: 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದ ಸೋನು ಪಾಟೀಲ್
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಮೂರನೇ ಕ್ಯಾಪ್ಟನ್ ಆಗಿ ಶಶಿ ಕುಮಾರ್ ಅಥವಾ ಕವಿತಾ ಗೌಡ ಆಯ್ಕೆ ಆಗಬಹುದು ಎಂದು ವೀಕ್ಷಕರು ಊಹಿಸಿದ್ದರು. ಆದ್ರೆ, 'ಬಿಗ್ ಬಾಸ್' ಕೊಟ್ಟ ಒಂದು ಟ್ವಿಸ್ಟ್ ನಿಂದಾಗಿ ಉತ್ತರ ಕರ್ನಾಟಕದ ಹುಡುಗಿ ಸೋನು ಪಾಟೀಲ್ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ.
ಅಸಲಿಗೆ ಕ್ಯಾಪ್ಟನ್ ರೇಸ್ ನಲ್ಲಿ ಸೋನು ಪಾಟೀಲ್ ಇರಲೇ ಇಲ್ಲ. ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ವಿಷ ಸರ್ಪಗಳಿಂದ ಬಹುಬೇಗ ಸೋನು ಪಾಟೀಲ್ ಸಾವನ್ನಪ್ಪಿದ್ದರು. ಆದರೂ ಇತರೆ ಸ್ಪರ್ಧಿಗಳ ಕೃಪೆಯಿಂದ ಸೋನು ಪಾಟೀಲ್ ಸದ್ಯ ಕ್ಯಾಪ್ಟನ್ ಆಗಿದ್ದಾರೆ.
ವಿಷ ಸರ್ಪಗಳಾಗಿ ಲಕ್ಷುರಿ ಬಜೆಟ್ ಟಾಸ್ಕ್ ನ ಯಶಸ್ವಿಯಾಗಿ ಪೂರೈಸಿದ ಕವಿತಾ ಗೌಡ ಮತ್ತು ಶಶಿ ಜೊತೆಗೆ 'ಬಿಗ್ ಬಾಸ್' ಮನೆಯ ಇತರೆ ಸದಸ್ಯರ ಪೈಕಿ ಇಬ್ಬರು ಕ್ಯಾಪ್ಟನ್ ರೇಸ್ ಗೆ ಅರ್ಹತೆ ಪಡೆದರು. ಎಲ್ಲ ಸ್ಪರ್ಧಿಗಳ ಒಮ್ಮತದ ಆಯ್ಕೆಯಿಂದ ಆನಂದ ಮಾಲಗತ್ತಿ ಹಾಗೂ ಸೋನು ಪಾಟೀಲ್ ಕ್ಯಾಪ್ಟನ್ ಪ್ರತಿಸ್ಪರ್ಧಿಗಳಾದರು. ಮುಂದೆ ಓದಿರಿ...

'ಬಿಗ್ ಬಾಸ್' ಕೊಟ್ಟ ಟಾಸ್ಕ್ ಏನು.?
ಮೂರನೇ ವಾರದ ಕ್ಯಾಪ್ಟನ್ ಆಯ್ಕೆಗಾಗಿ 'ಮರಳುಗಾಡಿನ ಸರದಾರ' ಎಂಬ ಟಾಸ್ಕ್ ನ 'ಬಿಗ್ ಬಾಸ್' ನೀಡಿದರು. ಇದರ ಅನುಸಾರ. ಕ್ಯಾಪ್ಟನ್ ಪ್ರತಿಸ್ಪರ್ಧಿಗಳು ಕೊಡಲಾದ ಖಾಲಿ ಗಾಜಿನ ತೊಟ್ಟಿ ಒಳಗೆ ಇರಬೇಕು. ಯಾವ ಕ್ಯಾಪ್ಟನ್ ಪ್ರತಿಸ್ಪರ್ಧಿ ಅನರ್ಹ ಎಂದು 'ಬಿಗ್ ಬಾಸ್' ಸದಸ್ಯರಿಗೆ ಅನಿಸುತ್ತದೆಯೋ, ಅವರು ಗಾಜಿನ ತೊಟ್ಟಿ ಒಳಗೆ ಮರಳು ತುಂಬಿಸಬೇಕು. ಕ್ಯಾಪ್ಟನ್ ಪ್ರತಿಸ್ಪರ್ಧಿ ಆ ಮರಳನ್ನು ಮಗ್ ಮೂಲಕ ಹೊರಗೆ ಎಸೆಯಬೇಕು. ಪ್ರತಿ ಬಾರಿ ಬಝರ್ ಆದಾಗ ಯಾರ ಗಾಜಿನ ತೊಟ್ಟಿಯಲ್ಲಿ ಅತಿ ಹೆಚ್ಚು ಮರಳು ಇರುತ್ತದೆಯೋ, ಅವರು ಔಟ್ ಆದ ಹಾಗೆ.

ಮೊದಲು ಔಟ್ ಆದ ಆನಂದ ಮಾಲಗತ್ತಿ
ಮೊದಲನೇ ರೌಂಡ್ ಅಂತ್ಯಕ್ಕೆ ಬಝರ್ ಆದಾಗ ಆನಂದ ಅವರ ಗಾಜಿನ ತೊಟ್ಟಿಯಲ್ಲಿ ಅತಿ ಹೆಚ್ಚು ಮರಳಿತ್ತು. ಹೀಗಾಗಿ, ಕ್ಯಾಪ್ಟನ್ ರೇಸ್ ನಿಂದ ಆನಂದ ಹೊರಬಿದ್ದರು.

ಕವಿತಾ-ಶಶಿ ಟಾರ್ಗೆಟ್
'ಬಿಗ್ ಬಾಸ್' ಮನೆಯ ಇತರೆ ಸದಸ್ಯರು ಕವಿತಾ ಗೌಡ ಹಾಗೂ ಶಶಿಯನ್ನೇ ಟಾರ್ಗೆಟ್ ಮಾಡಿದರು. ಹೀಗಾಗಿ ಅವರಿಬ್ಬರ ಗಾಜಿನ ತೊಟ್ಟಿಯಲ್ಲಿ ಹೆಚ್ಚು ಮರಳು ತುಂಬಿತ್ತು. ಆದ್ದರಿಂದ ಕವಿತಾ ಮತ್ತು ಶಶಿ ಕ್ಯಾಪ್ಟನ್ ಆಗಲಿಲ್ಲ.

ಸೋನು ಬಳಿ ಯಾರೂ ಬರಲೇ ಇಲ್ಲ.!
ಸೋನು ಪಾಟೀಲ್ ಕುಳಿತಿದ್ದ ಗಾಜಿನ ತೊಟ್ಟಿ ಬಳಿ ಅಷ್ಟಾಗಿ ಯಾರೂ ಬರಲೇ ಇಲ್ಲ. ಯಾರೂ ಸೋನು ಪಾಟೀಲ್ ರನ್ನ ಜಾಸ್ತಿ ಟಾರ್ಗೆಟ್ ಮಾಡಲಿಲ್ಲ. ಪರಿಣಾಮ ಸೋನು ಅವರ ಗಾಜಿನ ತೊಟ್ಟಿಯಲ್ಲಿ ಕಮ್ಮಿ ಮರಳಿತ್ತು. ಹೀಗಾಗಿ, ಅವರು ಸುಲಭವಾಗಿ ಕ್ಯಾಪ್ಟನ್ ಆದರು.

ಮುಂದಿನ ವಾರ ಸೋನು ಸೇಫ್.!
ಸದ್ಯಕ್ಕೆ ಸೋನು ಪಾಟೀಲ್ ಡೇಂಜರ್ ಝೋನ್ ನಲ್ಲಿದ್ದಾರೆ. ಈ ವಾರ ನಾಮಿನೇಷನ್ ನಲ್ಲಿ ಸೋನು ಪಾಟೀಲ್ ಬಚಾವ್ ಆದರೆ, ಮುಂದಿನ ವಾರ ಆಕೆ ಸೇಫ್.


Click it and Unblock the Notifications











