'ಆಕೆ'ಯನ್ನ ಕಂಡ್ರೆ ಆಂಡ್ರ್ಯೂ ಮೈ ಜುಮ್ ಅನ್ನುತ್ತಂತೆ.! ಯಾರು 'ಆ' ಸ್ಪರ್ಧಿ ಗೊತ್ತೇ.?
Recommended Video

ಮೂರು ವಾರಗಳ ಕಾಲ 'ಬಿಗ್ ಬಾಸ್' ಮನೆಯಲ್ಲಿ ರಂಪ-ರಾಮಾಯಣ ಮಾಡಿಕೊಂಡು ಕಾಲ ಕಳೆದ ಮೇಲೆ ಇದೀಗ ಲವ್ ಸ್ಟೋರಿ.. ಅಲ್ಲ.. ಅಲ್ಲ.. ಒಂದು 'ಫೀಲಿಂಗ್ ಸ್ಟೋರಿ'ಗೆ ಆಂಡ್ರ್ಯೂಗೆ ನಾಂದಿ ಹಾಡಿದ್ದಾರೆ.
'ಬಿಗ್ ಬಾಸ್' ಮನೆಯಲ್ಲಿ ಒಂದು ಹುಡುಗಿಯನ್ನ ನೋಡಿದರೆ ಆಂಡ್ರ್ಯೂ ಮೈ ಜುಮ್ ಅನ್ನುತ್ತಂತೆ. ಆಕೆ ಮುಂದೆ ಪಾಸ್ ಆದರೆ ಆಂಡ್ರ್ಯೂಗೆ ಏನೋ ಒಂಥರಾ.. ಆಗುತ್ತಂತೆ. ಹಾಗಂತ ಸ್ವತಃ ಆಂಡ್ರ್ಯೂ ಎಲ್ಲರ ಮುಂದೆ ಹೇಳಿಕೊಂಡಿದ್ದಾರೆ.
ಅಷ್ಟಕ್ಕೂ, ಆಂಡ್ರ್ಯೂ ಈ ಕಥೆ ಹೇಳಲು ಕಾರಣ 'ಇದು ಯಾರು ಬರೆದ ಕಥೆಯೋ' ಚಟುವಟಿಕೆಯಲ್ಲಿ. ಈ ಟಾಸ್ಕ್ ಅನುಸಾರ, ಮನೆಯ ಪ್ರತಿ ಸದಸ್ಯರು ತಮ್ಮ ನಿಜ ಜೀವನದಲ್ಲಿ ನಡೆದಿರುವ ಘಟನೆ ಅಥವಾ ಒಂದು ಕಟ್ಟು ಕಥೆಯನ್ನ ಎಲ್ಲರ ಮುಂದೆ ಹೇಳಿಕೊಳ್ಳಬೇಕಿತ್ತು. ಅದು ಕಟ್ಟು ಕಥೆ ಅಂತ ಇತರೆ ಸದಸ್ಯರಿಗೆ ಅನಿಸಿದರೆ, ಶೇವಿಂಗ್ ಫೋಮ್ ಹಚ್ಚುವ ಅವಕಾಶ ನೀಡಲಾಗಿತ್ತು.
ಇದೇ ಚಟುವಟಿಕೆ ವೇಳೆ ಎರಡು ವಾರಗಳಿಂದ ತಮ್ಮ ಮನಸ್ಸಿನಲ್ಲಿ ಮೂಡಿದ್ದ ಫೀಲಿಂಗ್ಸ್ ನ ಆಂಡ್ರ್ಯೂ ಹಂಚಿಕೊಂಡರು. ಮುಂದೆ ಓದಿರಿ...

'ಬಿಗ್ ಬಾಸ್' ಮನೆಯಲ್ಲಿ ನಡೆದ ಘಟನೆ
''ಬೆಳಗ್ಗೆ ತಿಂಡಿಗೆ ಬಿರಿಯಾನಿ ತಿನ್ಕೊಂಡು, ಮಧ್ಯಾಹ್ನ ಕಬಾಬ್, ರಾತ್ರಿ ಚಿಕನ್ ತಿನ್ಕೊಂಡು ಸುತ್ತಾಡುತ್ತಿದ್ದೆ. 'ಬಿಗ್ ಬಾಸ್' ಮನೆಗೆ ಹೋಗುವ ಚಾನ್ಸ್ ಸಿಕ್ತು. 'ಬಿಗ್ ಬಾಸ್' ಮನೆಗೆ ಬಂದ್ಮೇಲೆ, ಒಂದು ವಾರ ಜೋಕು, ಕಿರಿಕಿರಿ ಮಾಡಿಕೊಂಡು ಇದ್ದೆ. ಒಮ್ಮೆ ಒಳ್ಳೆಯ ಫೀಲಿಂಗ್ ಬಂತು'' - ಆಂಡ್ರ್ಯೂ

ಮೈ ಜುಮ್ ಅನ್ನುತ್ತೆ
''ಒಳ್ಳೆಯ ಫೀಲಿಂಗ್ ಬರೋಕೆ ಅಲ್ಲಿ ಊಟ ಇರಲಿಲ್ಲ. ಆಗ ಗೊತ್ತಾಯ್ತು ಅಲ್ಲಿ ಒಂದು ಹುಡುಗಿ ನಿಂತಿದ್ದಳು. ಈ ಹುಡುಗಿಯಿಂದಲೇ ನನಗೆ ಏನೋ ಒಂಥರಾ ಆಗ್ತಿದ್ಯಾ ಅಂತ ಡೌಟ್ ಬಂತು. ಚೆಕ್ ಮಾಡ್ಬೇಕಲ್ಲ. ಅವತ್ತಿಂದ ಇವತ್ತಿನವರೆಗೂ ಎರಡು ವಾರ ಕಾಲ ಚೆಕ್ ಮಾಡಿದ್ದೇನೆ. ಆ ಹುಡುಗಿ ನನ್ನ ಮುಂದೆ ಪಾಸ್ ಆದರೆ ಒಂಥರಾ ಜುಮ್ ಅನ್ನುತ್ತೆ'' - ಆಂಡ್ರ್ಯೂ

ಹೆಸರು ಹೇಳಲ್ಲ.!
''ಊಟ ಮಾಡುತ್ತಿರುವಾಗ ಆ ಹುಡುಗಿ ಬಂದರೆ ಏನೋ ಒಂಥರಾ ಆಗುತ್ತೆ. ಯಾರು ಅಂತ ಹೆಸರು ಹೇಳಲ್ಲ. ಇದು ಫೀಲಿಂಗ್ ಅಷ್ಟೇ. ಫೀಲ್ ಮಾಡಿಕೊಳ್ಳುವುದರಲ್ಲಿ ತಪ್ಪಿಲ್ಲ. ಇದು ಹಂಡ್ರೆಡ್ ಪರ್ಸೆಂಟ್ ಸತ್ಯ'' ಅಂತ 'ಇದು ಯಾರು ಬರೆದ ಕಥೆಯೋ' ಟಾಸ್ಕ್ ನಲ್ಲಿ ಆಂಡ್ರ್ಯೂ ಹೇಳಿಕೊಂಡಿದ್ದಾರೆ.

ಸುಳ್ಳು ಸುಳ್ಳು ಎಂದ ಸದಸ್ಯರು.!
ಆಂಡ್ರ್ಯೂ ಹೇಳಿದ ಈ ಕಥೆಯನ್ನ 'ಬಿಗ್ ಬಾಸ್' ಮನೆಯ ಸದಸ್ಯರು ನಿಜ ಅಂತ ನಂಬಲಿಲ್ಲ. ಸುಳ್ಳು.. ಸುಳ್ಳು ಎನ್ನುತ್ತ ಆಂಡ್ರ್ಯೂ ಮುಖ ಹಾಗೂ ತಲೆಗೆ ಶೇವಿಂಗ್ ಫೋಮ್ ಹಚ್ಚಿದರು.

ಕವಿತಾ ಇರಬಹುದಾ.?
''ಆ ಹುಡುಗಿ ಈಗ ಇಲ್ಲ ಅನ್ನೋದು ಸುಳ್ಳು. ಆ ಹುಡುಗಿ ಇನ್ನೂ ಇದೇ ಮನೆಯಲ್ಲೇ ಇದ್ದಾರೆ'' ಅಂತ ಆಂಡ್ರ್ಯೂ ಹೇಳಿದ ಮೇಲೆ 'ಆ ಹುಡುಗಿ' ಕವಿತಾ ಇರಬೇಕು ಅಂತ ಕೆಲವರಿಗೆ ಡೌಟ್ ಶುರುವಾಗಿದೆ.

ಇದೆಲ್ಲ ಆಂಡ್ರ್ಯೂ ಗೇಮ್ ಪ್ಲಾನ್
''ಹುಡುಗಿ ಜೊತೆಗೆ ಕನೆಕ್ಷನ್ ಇಟ್ಟುಕೊಂಡಿದ್ದೇನೆ ಅಂದ್ರೆ ಬಿಗ್ ಬಾಸ್ ಉಳಿಸಿಕೊಳ್ಳಬಹುದು ಅಂತ ಬೇಕಾದರೆ ಪ್ಲಾನ್ ಮಾಡಿರುತ್ತಾನೆ'' ಅಂತ ಆಂಡ್ರ್ಯೂ ಗೇಮ್ ಪ್ಲಾನ್ ಬಗ್ಗೆ ಕೆಲವರು ಲೆಕ್ಕಾಚಾರ ಹಾಕುತ್ತಿದ್ದಾರೆ.


Click it and Unblock the Notifications











