ಅಯ್ಯೋ... ನವೀನ್ ಗೆ ಮಾತ್ರ ಅಲ್ಲ, ಮನೆಯವರಿಗೆಲ್ಲಾ ಮುತ್ತು ಕೊಟ್ಟ ಸೋನು.!
ಗಾಯಕ ನವೀನ್ ಸಜ್ಜು ಮೇಲೆ ನಟಿ ಸೋನು ಪಾಟೀಲ್ ಕಣ್ಣು ಹಾಕಿರುವುದು ನಿಮಗೆಲ್ಲ ಗೊತ್ತೇ ಇದೆ. ಚಳಿಯಲ್ಲಿ ಸೋನು ಪಾಟೀಲ್ ನಡುಗುತ್ತಿರುವಾಗ, ಆಕೆಗೆ ನವೀನ್ ತಮ್ಮ ಜಾಕೆಟ್ ಕೊಟ್ಟಿದ್ದರಂತೆ. ನವೀನ್ ರವರ ಈ ಗುಣ ಸೋನು ಪಾಟೀಲ್ ಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಹೀಗಾಗಿ, ಸ್ನೇಹಿತನಾಗಿ 'ಐ ಲವ್ ಯು' ಅಂತ ನವೀನ್ ಗೆ ಸೋನು ಪಾಟೀಲ್ ಹೇಳಿದ್ದರು.
ಬಳಿಕ ಪ್ರೀತಿ-ಗೀತಿ ಎಲ್ಲ ಇಷ್ಟ ಇಲ್ಲ ಅಂತ ಪರಸ್ಪರ ಮಾತನಾಡಿಕೊಂಡಿದ್ದರೂ, ನವೀನ್ ಹಿಂದೆ ಮಾತ್ರ ಸೋನು ಪಾಟೀಲ್ ಬಿದ್ದಿಲ್ಲ ಎನ್ನುವ ಹಾಗಿಲ್ಲ. ನವೀನ್ ಎಷ್ಟೇ ದೂರ ಸರಿದರೂ, ಸೋನು ಮಾತ್ರ ನವೀನ್ ಹಿಂದೆ-ಮುಂದೆಯೇ ಇರ್ತಾರೆ. ಅದಕ್ಕೆ ತಕ್ಕ ಹಾಗೆ ನಿನ್ನೆ 'ಬಿಗ್ ಬಾಸ್' ಮನೆಯಲ್ಲಿ ಒಂದು ಟಾಸ್ಕ್ ನಡೆಯಿತು.
ಮನೆಯ ಎಲ್ಲಾ ಸದಸ್ಯರಿಗೆ 'ಬಿಗ್ ಬಾಸ್' ಮ್ಯೂಸಿಕಲ್ ಚೇರ್ ಟಾಸ್ಕ್ ಕೊಟ್ಟಿದ್ದರು. ಇದರ ಅನುಸಾರ, ಪ್ರತಿ ಬಾರಿ ಮ್ಯೂಸಿಕ್ ನಿಂತಾಗ ಚಟುವಟಿಕೆಯಿಂದ ಔಟ್ ಆದವರು ಚೀಟಿಯಲ್ಲಿ ಬರೆದಿರುವಂತೆ ನಡೆದುಕೊಳ್ಳಬೇಕು. ಅದರಂತೆ ಸೋನು ಪಾಟೀಲ್ ಔಟ್ ಆದಾಗ ಆಕೆಗೆ ಮುತ್ತು ನೀಡುವ ಅವಕಾಶ ಸಿಕ್ತು. ಮುಂದೆ ಓದಿರಿ...

ಸೋನು ಪಾಟೀಲ್ ಔಟ್ ಆದಾಗ...
ಮ್ಯೂಸಿಕಲ್ ಚೇರ್ ಚಟುವಟಿಕೆಯಿಂದ ಸೋನು ಪಾಟೀಲ್ ಔಟ್ ಆದಾಗ ಚೀಟಿಯಲ್ಲಿ, ''ತುಟಿಯ ತುಂಬಾ ಲಿಪ್ ಸ್ಟಿಕ್ ಹಾಕಿಕೊಂಡು ಮನೆಯ ಎಲ್ಲಾ ಸದಸ್ಯರಿಗೂ ಮುತ್ತು ಕೊಡಿ'' ಎಂದು ಬರೆದಿತ್ತು. ಚಟುವಟಿಕೆ ಮುಂದುವರೆಸಲು ಸೋನು ಪಾಟೀಲ್ ಈ ಕಾರ್ಯವನ್ನ ಮಾಡಲೇಬೇಕಿತ್ತು.

ಅದಾಗಲೇ ಔಟ್ ಆಗಿದ್ದ ನವೀನ್
ಮ್ಯೂಸಿಕಲ್ ಚೇರ್ ಟಾಸ್ಕ್ ನಲ್ಲಿ ಅದಾಗಲೇ ನವೀನ್ ಔಟ್ ಆಗಿದ್ದರಿಂದ, ''ಈ ಆಟದಲ್ಲಿ ನಾವಿಲ್ಲ. ನಮಗೆ ಮುತ್ತು ಬೇಡ'' ಅಂತ ವಾದಕ್ಕೆ ಇಳಿದರು. ಆದರೆ, ಕೊನೆಗೆ ಸೋನು ಪಾಟೀಲ್ ಎಲ್ಲರಿಗೂ ಮುತ್ತು ಕೊಟ್ಟರು.

ಎಲ್ಲರಿಗೂ ಮುತ್ತು ಕೊಟ್ಟ ಸೋನು ಪಾಟೀಲ್.!
ನವೀನ್ ಸಜ್ಜು ಸೇರಿದಂತೆ ಮನೆಯ ಎಲ್ಲಾ ಸದಸ್ಯರಿಗೂ ಸೋನು ಪಾಟೀಲ್ ಮುತ್ತು ಕೊಟ್ಟರು. ನವೀನ್ ಸಜ್ಜು ಕೆನ್ನೆ ಮೇಲೆ ಸೋನು ತುಟಿ ಒತ್ತುತ್ತಿದ್ದಂತೆಯೇ, ಎಲ್ಲರೂ ನವೀನ್ ನ ರೇಗಿಸಲು ಶುರು ಮಾಡಿದರು.

ಸ್ವಿಮ್ಮಿಂಗ್ ಪೂಲ್ ಗೆ ಧುಮುಕಿದ ನವೀನ್
ಮ್ಯೂಸಿಕಲ್ ಚೇರ್ ಆಟದಿಂದ ಔಟ್ ಆದಾಗ ಸ್ವಿಮ್ಮಿಂಗ್ ಪೂಲ್ ಗೆ ಐದು ಬಾರಿ ಧುಮುಕುವ ಟಾಸ್ಕ್ ನವೀನ್ ಗೆ ಸಿಕ್ಕಿತ್ತು.


Click it and Unblock the Notifications











