'ಬಿಗ್ ಬಾಸ್' ಮನೆಯಲ್ಲಿ 'ರೈತ' ಶಶಿ ಇಷ್ಟ ಪಡುತ್ತಿರುವ 'ಚೆಲುವೆ' ಯಾರು.?
Recommended Video

ನಿಜವೋ.. ಅಥವಾ ಕೇವಲ ಶೋಗಾಗಿಯೋ ಗೊತ್ತಿಲ್ಲ. ಒಟ್ನಲ್ಲಿ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಒಂದೊಂದೇ ಲವ್ ಟ್ರ್ಯಾಕ್ ಓಪನ್ ಆಗುತ್ತಿದೆ.
''ಸ್ನೇಹಿತನಾಗಿ ನವೀನ್ ಕಂಡ್ರೆ ನನಗೆ ಇಷ್ಟ'' ಅಂತ ಸೋನು ಪಾಟೀಲ್ ಎಲ್ಲರ ಮುಂದೆ ನವೀನ್ ಗೆ ''ಐ ಲವ್ ಯು'' ಎಂದಿದ್ದರು. ಇನ್ನೂ ರಾಕೇಶ್-ಅಕ್ಷತಾ ನಡುವಿನ ಗೆಳೆತನ ಒಂದು ಕಡೆ ಆಗಿದ್ದರೆ, ಕವಿತಾ ಕಂಡ್ರೆ 'ಮೈ ಜುಮ್' ಎನ್ನುವ ಆಂಡಿ ಇನ್ನೊಂದು ಕಡೆ.
ಹೀಗಿರುವಾಗಲೇ, ಮಾರ್ಡನ್ ರೈತ ಅಲಿಯಾಸ್ ಶಶಿ ಕುಮಾರ್ ಗೂ 'ಬಿಗ್ ಬಾಸ್' ಮನೆಯಲ್ಲಿ ಲವ್ ಆಗಿರುವ ಹಾಗಿದೆ. 'ಲಕ್ಷ್ಮಿ ಬಾರಮ್ಮ' ಖ್ಯಾತಿಯ 'ಚಿನ್ನು' ಜೊತೆಗೆ ಕುಳಿತುಕೊಂಡು ಪ್ರೇಮ ನಿವೇದಿಸಿಕೊಳ್ಳುವ ಬಗ್ಗೆ ಶಶಿ ಮಾತನಾಡುತ್ತಿದ್ದರು.
ಹಾಗಾದ್ರೆ, 'ಬಿಗ್ ಬಾಸ್' ಮನೆಯಲ್ಲಿ ಶಶಿ ಇಷ್ಟ ಪಡುತ್ತಿರುವ ಚೆಲುವೆ ಯಾರು.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಕವಿತಾ ಜೊತೆ ಹೆಚ್ಚು ಆತ್ಮೀಯತೆ
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಶುರುವಾಗಿ ನಾಲ್ಕು ವಾರಗಳು ಉರುಳಿವೆ. ಈ ನಾಲ್ಕು ವಾರಗಳಲ್ಲಿ ಶಶಿ ಕುಮಾರ್ ಅತ್ಯಂತ ಆತ್ಮೀಯತೆಯಿಂದ ಇರುವುದು ಜಯಶ್ರೀ ಮತ್ತು ಕವಿತಾ ಜೊತೆಗೆ ಮಾತ್ರ. ಈ ಮೂವರದ್ದು ಒಂದು ಗುಂಪು ಎಂದು ಈಗಾಗಲೇ 'ಬಿಗ್ ಬಾಸ್' ಮನೆಯಲ್ಲಿ ಬ್ರ್ಯಾಂಡ್ ಆಗಿದೆ.

ಕವಿತಾ ಮತ್ತು ಶಶಿ
ಕವಿತಾ ಗೌಡ ಮತ್ತು ಶಶಿ ಕುಮಾರ್ ನಡುವೆ ಸಂಥಿಂಗ್ ಸಂಥಿಂಗ್ ನಡೆಯುತ್ತಿದೆ ಎಂಬ ಗಾಸಿಪ್ 'ಬಿಗ್ ಬಾಸ್' ಮನೆಯಲ್ಲೇ ಶುರುವಾಯಿತು. ಹಾಗಾದ್ರೆ, ಕವಿತಾ ಮೇಲೆ ಶಶಿಗೆ ಲವ್ ಆಗಿದ್ಯಾ.?

ಕವಿತಾ ಜೊತೆ ಶಶಿ ಮಾತುಕತೆ
''ಇಲ್ಲಿ ಹೇಳಲು ಆಗಲ್ಲ. ಯಾಕಂದ್ರೆ ಇಲ್ಲಿ ಮಾತನಾಡಲು ಕೆಲವು ನಿಬಂಧನೆಗಳಿವೆ. ಅದಕ್ಕೆ ಕಿವಿ ಕೊಡು ಹೇಳುವೆ ಎಂದಿದ್ದು'' ಎಂದು ಕವಿತಾ ಬಳಿ ಶಶಿ ಮಾತನಾಡುತ್ತಿದ್ದರು.

ಕವಿತಾ ಹೇಳಿದ್ದೇನು.?
''ನಾನು ಇಲ್ಲಿದ್ದೀನಿ, ನೀನು ಇಲ್ಲಿದ್ದೀಯಾ ಅಂದ್ರೆ ನಾವು ಹಂಡ್ರೆಡ್ ಪರ್ಸೆಂಟ್ ಇದೇ ರೀತಿ ಇಲ್ಲ'' ಅಂತ ಮೊದಲು ಹೇಳಿದ ಕವಿತಾ ನಂತರ ''ನನಗೆ ಗೊತ್ತು ನೀನು ಅವಳನ್ನು ಇಷ್ಟ ಪಡುತ್ತಿದ್ದೀಯಾ ಅಂತ. ನೀನು ಯಾರನ್ನೇ ಇಷ್ಟ ಪಟ್ಟರೂ, ಅವರಿಗೆ ತಿಳಿಸುವ ಮುನ್ನ ಅವರ ಬಗ್ಗೆ ಕಂಪ್ಲೀಟ್ ಆಗಿ ತಿಳಿದುಕೋ..'' ಎಂದರು.

ಯಾರು 'ಆ' ಹುಡುಗಿ
''ಇಲ್ಲಿ ನನಗೆ ಆ ಹುಡುಗಿ ಇಷ್ಟ ಆಗಿದೆ'' ಅಂತ ಶಶಿ ಹೇಳಿದಾಗ ''ಹೊರಗೆ ಹೋಗುವವರೆಗೂ ಕಾಯಿರಿ'' ಅಂತ ಕವಿತಾ ಹೇಳಿದರು. ಹಾಗಾದ್ರೆ, ಶಶಿ ಇಷ್ಟ ಪಡುತ್ತಿರುವ ಹುಡುಗಿ ಯಾರು.?

ಬೇಕು ಅಂತ ಹೀಗೆ ಮಾಡಿದ್ರಾ.?
ತಮ್ಮ ಲವ್ ಸ್ಟೋರಿ ಯಾರಿಗೂ ಗೊತ್ತಾಗಬಾರದು ಅಂತ 'ಅವಳು' ಎಂದು ಉಲ್ಲೇಖಿಸಿ ಕವಿತಾ-ಶಶಿ ಸೇಫ್ ಆದ್ರಾ ಎನ್ನುವುದು ವೀಕ್ಷಕರ ಪ್ರಶ್ನೆ. ಇದಕ್ಕೆ ಮುಂದಿನ ದಿನಗಳಲ್ಲಿ ಉತ್ತರ ಸಿಕ್ಕರೂ ಸಿಗಬಹುದು.


Click it and Unblock the Notifications











