'ಆಂಡ್ರ್ಯೂ ನನ್ನನ್ನು ಹಿಂಸಿಸುತ್ತಿದ್ದಾನೆ': 'ಬಿಗ್' ಆರೋಪ ಮಾಡಿದ 'ಚಿನ್ನು' ಕವಿತಾ

Recommended Video

Bigg Boss Kannada 6: ಆಂಡ್ರ್ಯೂ ಹಿಂಸೆ ಮಾಡುತ್ತಿದ್ದಾನೆ ಎಂದ ಕವಿತಾ

ಆಂಡ್ರ್ಯೂ ಕಿರಿಕಿರಿ ಕೊಡುವುದು ಜಾಸ್ತಿ ಅಂತ ಗೊತ್ತಿದ್ದರೂ, ನಾಮಿನೇಷನ್ ಟಾಸ್ಕ್ ನಲ್ಲಿ ನಟಿ ಕವಿತಾ ಗೌಡ ಒಂದು ಡೀಲ್ ಮಾಡಿಕೊಂಡರು. ಆಂಡ್ರ್ಯೂ ಕೀಟಲೆ ಮಾಡ್ತಾರೆ ಎಂಬ ಅರಿವು ಇದ್ದರೂ ಪ್ರತಿ ದಿನ ಅವರೊಂದಿಗೆ ಹತ್ತು ನಿಮಿಷ ಕಾಲ ಕಾಳೆಯಲು ಕವಿತಾ ಒಪ್ಪಿಕೊಂಡರು.

ಪ್ರತಿ ದಿನ ಹತ್ತು ನಿಮಿಷ ಕವಿತಾ ಜೊತೆ ಕಾಲ ಕಳೆಯಬಹುದು ಎಂಬ ನಂಬಿಕೆ ಮೇಲೆ ಆಂಡ್ರ್ಯೂ ನಾಮಿನೇಟ್ ಆಗಲು ಮನಸ್ಸು ಮಾಡಿದರು.

ಕೊಟ್ಟ ಮಾತಿನಂತೆ ಆಂಡ್ರ್ಯೂ ಜೊತೆಗೆ ಕವಿತಾ ಪ್ರತ್ಯೇಕವಾಗಿ ಸಮಯ ಕಳೆಯುತ್ತಿದ್ದರು. ಇದೇ ಗ್ಯಾಪ್ ನಲ್ಲಿ ಅದೇನಾಯ್ತೋ, ಏನೋ... ''ಆಂಡ್ರ್ಯೂ ವರ್ತನೆ ಇಷ್ಟ ಆಗುತ್ತಿಲ್ಲ'' ಅಂತ ಜಯಶ್ರೀ ಮತ್ತು ಶಶಿ ಕೂಡ ಕಾಮೆಂಟ್ ಮಾಡಿದ್ದರು.

ಅದಾದ್ಮೇಲೆ, ಆಂಡ್ರ್ಯೂ ಮೇಲೆ ಕವಿತಾ ಆರೋಪ ಮಾಡಿದರು. ''ಆಂಡ್ರ್ಯೂ ಕಡೆಯಿಂದ ನನಗೆ ತುಂಬಾ ಹಿಂಸೆ ಆಗುತ್ತಿದೆ'' ಎಂದು ಕಟಕಟೆಯಲ್ಲಿ ನಿಂತು ಕವಿತಾ ನುಡಿದರು. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆ

'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆ

ಇತರೆ ಸ್ಪರ್ಧಿಗಳ ಕುರಿತು ದೂರು ಹೇಳಲು 'ನ್ಯಾಯ ಇಲ್ಲಿದೆ' ಎಂಬ ಚಟುವಟಿಕೆ ಮೂಲಕ 'ಬಿಗ್ ಬಾಸ್' ಅವಕಾಶ ಕಲ್ಪಿಸಿದರು. ನ್ಯಾಯಾಧೀಶರ ಸ್ಥಾನದಲ್ಲಿ ಮುರಳಿ ಕುಳಿತರು. ಈ ಚಟುವಟಿಕೆ ಅನುಸಾರ ತಮ್ಮ ಮನಸ್ಸಿನ ಭಾವನೆಗಳನ್ನು ಕವಿತಾ ಗೌಡ ಹೊರ ಹಾಕಿದರು.

ಕವಿತಾ ಮಾಡಿದ ಆರೋಪ ಏನು.?

ಕವಿತಾ ಮಾಡಿದ ಆರೋಪ ಏನು.?

''ನಾನು ಅವರಿಗೆ (ಆಂಡ್ರ್ಯೂ) ಕೊಟ್ಟ ಒಂದು ಮಾತಿನಿಂದ ದಿನೇ ದಿನೇ ಹಿಂಸಿಸುತ್ತಿದ್ದಾರೆ. He is making me uncomfortable. ನಾನು ಎಲ್ಲಿ ಹೋದರೂ, ನನ್ನ ಹಿಂದೆ ಬರುತ್ತಿದ್ದಾರೆ'' ಎಂದು ಆಂಡ್ರ್ಯೂ ಮೇಲೆ ಕವಿತಾ ನೇರ ಆರೋಪ ಮಾಡಿದರು.

ವೈಯುಕ್ತಿಕವಾಗಿ ಹಿಂಸೆ ಆಗುತ್ತಿದೆ

ವೈಯುಕ್ತಿಕವಾಗಿ ಹಿಂಸೆ ಆಗುತ್ತಿದೆ

''ನಾಮಿನೇಷನ್ ಟಾಸ್ಕ್ ಮುಗಿದ ಮೇಲೆ ಆಂಡ್ರ್ಯೂ ವರ್ತನೆಯಲ್ಲಿ ಸಿಕ್ಕಾಪಟ್ಟೆ ಬದಲಾವಣೆ ಆಯ್ತು. ನನಗೆ ತುಂಬಾ ಕಿರಿಕಿರಿ ತಂತು. ನನಗೆ ವೈಯುಕ್ತಿಕವಾಗಿ ತುಂಬಾ ಹಿಂಸೆ ಆಗುತ್ತಿದೆ'' ಎಂದರು ನಟಿ ಕವಿತಾ

ಆಂಡ್ರ್ಯೂ ಜೊತೆಗೆ ಕಮ್ಫರ್ಟ್ ಇಲ್ಲ

ಆಂಡ್ರ್ಯೂ ಜೊತೆಗೆ ಕಮ್ಫರ್ಟ್ ಇಲ್ಲ

''ಆಂಡ್ರ್ಯೂ ಹೇಳೋದು ಒಂದು, ಮಾಡೋದು ಒಂದು. ನಾನು ಬೇರೆಯವರ ಬಳಿ ಮಾತನಾಡುವಾಗ, ಮಧ್ಯೆ ಬಂದು ಕಾಮೆಂಟ್ ಮಾಡುತ್ತಾರೆ. ಎಲ್ಲರ ಜೊತೆ ನಾನು ಫ್ರೆಂಡ್ ಆಗಿದ್ದೇನೆ. ಆದ್ರೆ, ಆಂಡ್ರ್ಯೂ ಜೊತೆಗೆ ನನಗೆ ಕಮ್ಫರ್ಟ್ ಆಗುತ್ತಿಲ್ಲ'' ಅಂತ ಕವಿತಾ ಹೇಳಿದರು.

ಆರೋಪ ಸರಿ ಅಲ್ಲ ಎಂದ ಆಂಡ್ರ್ಯೂ

ಆರೋಪ ಸರಿ ಅಲ್ಲ ಎಂದ ಆಂಡ್ರ್ಯೂ

''ಕನ್ಫೆಶನ್ ರೂಮ್ ನಲ್ಲಿ ಕರ್ನಾಟಕ ಜನರ ಮುಂದೆ ಕವಿತಾ ಒಪ್ಪಿಕೊಂಡು ಈಗ ಆರೋಪ ಮಾಡುವುದು ಸರಿ ಅಲ್ಲ'' ಅಂತ ಆಂಡ್ರ್ಯೂ ತಮ್ಮ ತಾವು ಸಮರ್ಥಿಸಿಕೊಂಡರು.

More from Filmibeat

English summary
Bigg Boss Kannada 6: Day 32: Andrew is making me uncomfortable complaints Kavitha Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X