ಇಷ್ಟಾದರೂ ಕವಿತಾ ಮೇಲೆ ಆಂಡ್ರ್ಯೂಗೆ ಕೋಪ ಬರ್ತಿಲ್ಲ.!

''ಕವಿತಾ ಮೇಲೆ ನನಗೆ ಒಂಥರಾ ಒಳ್ಳೆಯ ಭಾವನೆ ಇದೆ. ಆ ಭಾವನೆಗೆ ಹೆಸರು ಕೊಡಲ್ಲ. ಆಕೆಯ ಜೊತೆಗೆ ಮಾತನಾಡಿದರೆ ನನಗೆ ಖುಷಿ ಅಷ್ಟೇ'' ಅಂತ ಇಲ್ಲಿಯವರೆಗೂ ಹೇಳುತ್ತಿದ್ದ ಆಂಡ್ರ್ಯೂ ನಿನ್ನೆ ರಾತ್ರಿ ರಶ್ಮಿ ಮುಂದೆ ''ಕವಿತಾ ಮೇಲೆ ನನಗೆ ಇರುವುದು ಪ್ರೀತಿ'' ಅಂತ ಬಾಯಿಬಿಟ್ಟರು.

ಪ್ರತಿ ದಿನ ಹತ್ತು ನಿಮಿಷ ಒಟ್ಟಿಗೆ ಕಾಲ ಕಳೆಯಬೇಕು ಎಂಬ ಡೀಲ್ ಮೇಲೆ ನಾಮಿನೇಷನ್ ನಲ್ಲಿ ಕವಿತಾ ಸೇಫ್ ಆದರೆ ಆಂಡ್ರ್ಯೂ ಡೇಂಜರ್ ಝೋನ್ ಗೆ ಬಂದರು.

ನಾಮಿನೇಟ್ ಆಗಿರುವ ಬಗ್ಗೆ ಆಂಡ್ರ್ಯೂಗೆ ಬೇಸರ ಇಲ್ಲ. ಆದ್ರೆ, ಮೊದಲು ಡೀಲ್ ಮಾಡಿಕೊಂಡು ನಂತರ ಆಂಡ್ರ್ಯೂ ಕಡೆಯಿಂದ ಹಿಂಸೆ ಆಗುತ್ತಿದೆ ಅಂತ ಎಲ್ಲರ ಮುಂದೆ ಕವಿತಾ ಆರೋಪ ಮಾಡಿದ್ದು ಆತನಿಗೆ ಬೇಸರ ತರಿಸಿದೆ. ಇದರಿಂದ ಆಂಡ್ರ್ಯೂ ಕಣ್ಣೀರು ಹಾಕಿದ್ದಾರೆ. ಇಷ್ಟಾದರೂ, ಕವಿತಾ ಮೇಲೆ ಆಂಡ್ರ್ಯೂಗೆ ಕೋಪ ಇಲ್ವಂತೆ.!

ಆಂಡ್ರ್ಯೂ-ಕವಿತಾ ರಂಪಾಟ ನೋಡಿದ್ಮೇಲೆ 'ಬಿಗ್ ಬಾಸ್' ಸ್ಪರ್ಧಿಗಳ ತಲೆಯಲ್ಲಿ ಏನೇನೆಲ್ಲಾ ಲೆಕ್ಕಾಚಾರ ಓಡುತ್ತಿದೆ ಗೊತ್ತಾ.? ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಕಣ್ಣೀರಿಟ್ಟ ಕವಿತಾ

ಕಣ್ಣೀರಿಟ್ಟ ಕವಿತಾ

ಇತರೆ ಸ್ಪರ್ಧಿಗಳಿಗೆ ಗೊತ್ತಿಲ್ಲದ ವಿಷಯವನ್ನ ಬಹಿರಂಗಪಡಿಸಿ, ಆಂಡ್ರ್ಯೂ ವಿರುದ್ಧ ಆರೋಪ ಮಾಡಿದ್ಮೇಲೆ ಕವಿತಾ ಗೌಡ ಕೊಂಚ ಮಂಕಾದರು. ವಾದ-ಪ್ರತಿ ವಾದ ಎಲ್ಲಾ ಮುಗಿದ್ಮೇಲೆ ಕವಿತಾ ಗೌಡ ಕಣ್ಣೀರಿಟ್ಟರು.

ಆಂಡ್ರ್ಯೂ-ಕವಿತಾಗೆ ನಾಚಿಕೆ ಆಗಬೇಕು ಎಂದ 'ಒಗ್ಗರಣೆ ಡಬ್ಬಿ' ಮುರಳಿ.!

ಕವಿತಾ ಮಾಡಿದ್ದು ಸರಿ ಅಲ್ಲ.!

ಕವಿತಾ ಮಾಡಿದ್ದು ಸರಿ ಅಲ್ಲ.!

''ನಾಮಿನೇಷನ್ ಗೆ ವೈಯುಕ್ತಿಕ ಕಾರಣ ಬಳಸಿಕೊಂಡಿದ್ದಾರೆ. ಹೀಗಿದ್ದರೂ, ಅದನ್ನ ಪೇಪರ್ ಮೇಲೆ ತಂದು ಆರೋಪ ಮಾಡುವುದು ಸರಿ ಅಲ್ಲ'' ಅಂತ ರಾಕೇಶ್ ತಮ್ಮ ಅಭಿಪ್ರಾಯವನ್ನು ಹೊರಗೆ ಹಾಕಿದರು.

ಯಾವ ಫೀಲಿಂಗ್ಸ್ ಇಲ್ಲ.!

ಯಾವ ಫೀಲಿಂಗ್ಸ್ ಇಲ್ಲ.!

''ಆಂಡ್ರ್ಯೂಗೆ ಕವಿತಾ ಮೇಲೆ ಯಾವ ಫೀಲಿಂಗ್ಸ್ ಇಲ್ಲ. ಸುಮ್ಮನೆ ಸೃಷ್ಟಿಸುತ್ತಿದ್ದಾನೆ ಅಷ್ಟೇ'' ಅಂತ ನಯನ ಅಭಿಪ್ರಾಯ ಕೊಟ್ಟರೆ, ''ಲವ್ ಅನ್ನೋದೆಲ್ಲಾ ಬರೀ ಡವ್. ಲಿಂಕಪ್ ಮಾಡಿಕೊಂಡು ಇದ್ದರೆ ಜಾಸ್ತಿ ದಿನ ಇರಬಹುದು ಎಂಬ ಸ್ಟ್ರಾಟೆಜಿ ಆಂಡಿಯದ್ದು. ಹೀಗಾಗಿ, ಕವಿತಾ ಹೆಸರನ್ನು ಬಳಸಿಕೊಳ್ಳುತ್ತಿದ್ದಾನೆ'' ಎನ್ನುತ್ತಾರೆ ಧನರಾಜ್.

ಕವಿತಾ ಸೂಪರ್ ಸ್ಟಾರ್ಟ್

ಕವಿತಾ ಸೂಪರ್ ಸ್ಟಾರ್ಟ್

''ಕವಿತಾ ಸೂಪರ್ ಸ್ಮಾರ್ಟ್. ಆಕೆ ಅವಕಾಶವಾದಿ. ನಾಮಿನೇಷನ್ ನಲ್ಲಿ ವೈಯುಕ್ತಿಕ ಕಾರಣ ಬಳಸಿಕೊಳ್ಳಬಾರದಿತ್ತು. ಬಳಸಿಕೊಂಡರೂ ಈಗ ಅದನ್ನ ಬರೆಯಬಾರದಿತ್ತು'' ಎಂಬುದು ರಶ್ಮಿ ಅಭಿಪ್ರಾಯ.

ಕಣ್ಣೀರಿಟ್ಟ ಆಂಡ್ರ್ಯೂ

ಕಣ್ಣೀರಿಟ್ಟ ಆಂಡ್ರ್ಯೂ

ಇಷ್ಟೆಲ್ಲಾ ಆದರೂ ನನಗೆ ಕವಿತಾ ಮೇಲೆ ಕೋಪ ಬರುತ್ತಿಲ್ಲ. ಯಾಕೆ ಅಂತ ಗೊತ್ತಿಲ್ಲ ಎಂದು ಬೇಸರಗೊಂಡ ಆಂಡ್ರ್ಯೂ ಒಬ್ಬರೇ ಕುಳಿತು ಕಣ್ಣೀರಿಟ್ಟರು.

More from Filmibeat

English summary
Bigg Boss Kannada 6: Have a look at the Housemates opinion on Kavitha Gowda and Andrew deal controversy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X