'ಕವಿತಾ ಕಡೆಯಿಂದ ನನಗೆ ಮೋಸ ಆಗಿದೆ' ಎಂದ ಆಂಡ್ರ್ಯೂ.!
ಐದನೇ ವಾರದ ನಾಮಿನೇಷನ್ ಟಾಸ್ಕ್ ನಡೆಯುವಾಗ, ಎಲ್ಲವೂ ಸರಾಗವಾಗಿ ನಡೆಯಿತು. ಡೀಲ್ ಮಾಡಿಕೊಳ್ಳುವಾಗ ಆಂಡ್ರ್ಯೂ ಬಗ್ಗೆ ಕವಿತಾಗೆ ಯಾವುದೇ ತಪ್ಪು ಕಾಣಲಿಲ್ಲ.
ಆದ್ರೆ, ನಾಮಿನೇಷನ್ ಟಾಸ್ಕ್ ಮುಗಿದು ಮೂರು ದಿನಗಳು ಕಳೆದ ಮೇಲೆ ಆಂಡ್ರ್ಯೂ ಮೇಲೆ ಕವಿತಾ ಮುನಿಸಿಕೊಂಡಿದ್ದಾರೆ. ಆಂಡ್ರ್ಯೂ ವರ್ತನೆ ಬಗ್ಗೆ ಕವಿತಾ ಕಿರಿಕಿರಿಗೊಂಡಿದ್ದಾರೆ. ಕನ್ಫೆಶನ್ ರೂಮ್ ನಲ್ಲಿ ನಡೆದ ಒಪ್ಪಂದವನ್ನು ಕವಿತಾ 'ಆರೋಪ'ವಾಗಿ ಎಲ್ಲರ ಮುಂದೆ ತಂದಿದ್ದಾರೆ.
ಕವಿತಾ ಮಾಡಿದ ಆರೋಪವನ್ನು ಕೇಳಿ ಆಂಡ್ರ್ಯೂ ಬೇಸರಗೊಂಡರು. ''ಇದು ನನಗೆ ಆಗಿರುವ ಮೋಸ, ವಂಚನೆ'' ಅಂತ ಎಲ್ಲರ ಮುಂದೆ ತಮ್ಮನ್ನ ತಾವು ಸಮರ್ಥಿಸಿಕೊಂಡರು. ಮುಂದೆ ಓದಿರಿ...

ಕವಿತಾ ಮಾಡಿದ ಆರೋಪ ಏನು.?
'ನ್ಯಾಯ ಇಲ್ಲಿದೆ' ಟಾಸ್ಕ್ ಅನುಸಾರ, ''ನಾನು ಅವರಿಗೆ (ಆಂಡ್ರ್ಯೂ) ಕೊಟ್ಟ ಒಂದು ಮಾತಿನಿಂದ ದಿನೇ ದಿನೇ ಹಿಂಸಿಸುತ್ತಿದ್ದಾರೆ. He is making me uncomfortable. ನಾನು ಎಲ್ಲಿ ಹೋದರೂ, ನನ್ನ ಹಿಂದೆ ಬರುತ್ತಿದ್ದಾರೆ. ನಾಮಿನೇಷನ್ ಟಾಸ್ಕ್ ಮುಗಿದ ಮೇಲೆ ಆಂಡ್ರ್ಯೂ ವರ್ತನೆಯಲ್ಲಿ ಸಿಕ್ಕಾಪಟ್ಟೆ ಬದಲಾವಣೆ ಆಯ್ತು. ನನಗೆ ತುಂಬಾ ಕಿರಿಕಿರಿ ತಂತು. ನನಗೆ ವೈಯುಕ್ತಿಕವಾಗಿ ತುಂಬಾ ಹಿಂಸೆ ಆಗುತ್ತಿದೆ'' ಎಂದು ಕವಿತಾ ಆರೋಪಿಸಿದರು.

ಇಡೀ ಕರ್ನಾಟಕ ಸಾಕ್ಷಿ ಇದೆ
''ಕನ್ಫೆಶನ್ ರೂಮ್ ನಲ್ಲಿ ಏನಾಯ್ತು ಎಂಬುದಕ್ಕೆ ಇಡೀ ಕರ್ನಾಟಕ ಸಾಕ್ಷಿ ಇದೆ. ಇಬ್ಬರಲ್ಲಿ ಒಬ್ಬರು ನಾಮಿನೇಟ್ ಆಗಬೇಕು ಅಂತ ಹೇಳಿದಾಗ, ನಾನು ಬಿಟ್ಟುಕೊಡಲಿಲ್ಲ. ಯಾಕಂದ್ರೆ, ಅವರು ಇಲ್ಲಿ ಗ್ರೂಪ್ ಮಾಡಿಕೊಂಡು ಆಡುತ್ತಿದ್ದಾರೆ. ನಾನು ಒಂಟಿಯಾಗಿ ಆಡುತ್ತಿದ್ದೇನೆ'' ಅಂತ ತಮ್ಮ ವಾದವನ್ನು ಆಂಡ್ರ್ಯೂ ಮುಂದಿಟ್ಟರು.

ಒಪ್ಪಂದ ಆಗಿದ್ದು ಹೇಗೆ.?
''ಸುರಕ್ಷಾ ಕವಚ ಇದೆ ಅಂತ ಕವಿತಾ ಹೇಳಿದರು. ಅದಕ್ಕೆ ನಾನು ಒಪ್ಪಿಕೊಳ್ಳಲಿಲ್ಲ. ಯಾಕಂದ್ರೆ, ಕವಿತಾ ಸೆಲೆಬ್ರಿಟಿ. ಅವರಿಗೆ ವೋಟ್ ಮಾಡುವ ಫ್ಯಾನ್ಸ್ ಇದ್ದಾರೆ. ಹೀಗೆ ಮಾತಿಗೆ ಮಾತು ನಡೆಯಿತು. ನಾಮಿನೇಷನ್ ನಿಂದ ಸೇಫ್ ಆಗಲು ನಾನು ಅವರ ಮೇಲೆ ಇಟ್ಟಿರುವ ಫೀಲಿಂಗ್ ಪಾಯಿಂಟ್ ನ ಬಳಸಿಕೊಂಡರು. ಆಗ ನಾನು, ಪ್ರತಿ ದಿನ ನನ್ನ ಜೊತೆ ಮಾತನಾಡುತ್ತೀರಾ ಅಂತ ಕೇಳಿದೆ. ಅವರು 'ಬಿಗ್ ಬಾಸ್' ಮುಂದೆ ಒಪ್ಪಿಕೊಂಡರು. ನಾನು ನಾಮಿನೇಟ್ ಆದೆ'' ಎಂದು ನಡೆದ ಒಪ್ಪಂದದ ಬಗ್ಗೆ ಆಂಡ್ರ್ಯೂ ವಿವರಿಸಿದರು.

ಅವತ್ತೇ ಯಾಕೆ ಹೇಳಲಿಲ್ಲ.?
''ಈಗ ಇಷ್ಟೆಲ್ಲ ಆರೋಪ ಮಾಡುವವರು ಅವತ್ತು 'ಬಿಗ್ ಬಾಸ್' ಮುಂದೆ ಈ ಒಪ್ಪಂದ ಸರಿ ಇಲ್ಲ. ನನಗೆ ಬೇಡ ಅಂತ ಹೇಳಬಹುದಿತ್ತು. ಅವತ್ತು ಅವರು ನಾಮಿನೇಷನ್ ನಿಂದ ಸೇಫ್ ಆಗಬೇಕಿತ್ತು ಅಷ್ಟೇ'' ಎಂದು ಆಂಡ್ರ್ಯೂ ವಾದ

ಆಂಡ್ರ್ಯೂ ಕೇಳಿದ ಪ್ರಶ್ನೆ ಏನು.?
''ನನ್ನ ಜೊತೆಗೆ ಹತ್ತು ನಿಮಿಷ ಕಾಲ ಕಳೆಯುತ್ತೀರಾ ಅಂತ ಮನವಿ ಮಾಡಿ ಕೇಳಿ ತೆಗೆದುಕೊಂಡೆ. ಅಂದು ಒಪ್ಪಿಕೊಂಡು ಸೇಫ್ ಆದರು. ನಾಮಿನೇಷನ್ ನಲ್ಲಿ ನನ್ನ ಬಳಸಿಕೊಂಡು ಈಗ ಆರೋಪ ಮಾಡಿದರೆ ಹೇಗೆ.?'' ಎಂದು ಪ್ರಶ್ನಿಸುತ್ತಾರೆ ಆಂಡ್ರ್ಯೂ

ಆಂಡ್ರ್ಯೂ ಹೀಗೆ ಯಾಕೆ ಮಾಡಿದ್ರು.?
''ಸೋನು, ಒಂದು ಟಾಸ್ಕ್ ನಲ್ಲಿ ಆಂಡಿ ಬಟ್ಟೆ ತೊಟ್ಟಿದ್ದಾಗ, ''ಕವಿತಾಗೆ ಹೋಗಿ ಕಿಸ್ ಕೊಟ್ಟು ಬಾ'' ಅಂತ ಆಂಡ್ರ್ಯೂ ಹೇಳಿದ್ದರು. ಅದು ನನಗೆ Uncomfortable. ಅದು ಸರಿ ಅಲ್ಲ'' ಅಂತಾರೆ ಕವಿತಾ ಗೌಡ

ಇದು ಮೋಸ
''ಇದಾಗಿದ್ದು ನಾಮಿನೇಷನ್ ಗೂ ಮುನ್ನ. ಇದು ಗೊತ್ತಿದ್ದರೂ, ನಾಮಿನೇಷನ್ ನಲ್ಲಿ ಯಾಕೆ ಒಪ್ಪಂದ ಮಾಡಿಕೊಂಡರು.? ಇದು ನನಗೆ ಆಗಿರುವ ಮೋಸ, ವಂಚನೆ. ಹುಡುಗಿಯರಿಗೆ ಮಾತ್ರ ಮೋಸ ಆಗಲ್ಲ. ಹುಡುಗರಿಗೂ ಆಗುತ್ತೆ'' ಎಂದು ಹೇಳುತ್ತಾ ಆಂಡ್ರ್ಯೂ ಬೇಸರಗೊಂಡರು.


Click it and Unblock the Notifications











