ಆಂಡ್ರ್ಯೂ ಕೃಪೆಯಿಂದ ಕ್ಯಾಪ್ಟನ್ ಆದ ಅಕ್ಷತಾ.!

ಒಂದ್ಕಡೆ ಅಕ್ಷತಾ-ರಾಕೇಶ್ ನಡುವಿನ ಗೆಳೆತನ ವೀಕ್ಷಕರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಇವರಿಬ್ಬರನ್ನು ಹೊರಗೆ ಹಾಕಿ ಅಂತ ವೀಕ್ಷಕರೇ ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಹೀಗಿರುವಾಗಲೇ, 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿ ಅಕ್ಷತಾ ಪಾಂಡವಪುರ ಆಯ್ಕೆ ಆಗಿದ್ದಾರೆ.

ಅಸಲಿಗೆ, ಈ ವಾರ ಅಕ್ಷತಾ ನಾಮಿನೇಟ್ ಆಗಿದ್ದಾರೆ. ಗೆಳೆಯ ರಾಕೇಶ್ ನ ಬಚಾವ್ ಮಾಡಲು ಹೋಗಿ ಅಕ್ಷತಾ ಡೇಂಜರ್ ಝೋನ್ ಗೆ ಬಂದರು. ಇವತ್ತು ಎಲಿಮಿನೇಷನ್ ನಿಂದ ಸೇಫ್ ಆದರೆ ಕನಿಷ್ಟ ಇನ್ನೆರಡು ವಾರ ಅಕ್ಷತಾ ಕೆಮ್ಮಂಗಿಲ್ಲ.

ಅರೇ... ಕ್ಯಾಪ್ಟನ್ ರೇಸ್ ನಲ್ಲಿ ಅಕ್ಷತಾ ಇರಲೇ ಇಲ್ಲ. ಅವರು ಹೇಗೆ ಕ್ಯಾಪ್ಟನ್ ಆದರು ಅಂತ ಆಶ್ಚರ್ಯ ಪಡ್ತಿದ್ದೀರಾ.? ಅಲ್ಲೇ ಇರೋದು ನೋಡಿ ಟ್ವಿಸ್ಟ್. 'ಬಿಗ್ ಬಾಸ್' ಕೊಟ್ಟ ಒಂದು ಚಾನ್ಸ್ ನಿಂದಾಗಿ, ಆಂಡ್ರ್ಯೂ ತೋರಿದ ಕೃಪೆಯಿಂದಾಗಿ ಅಕ್ಷತಾ ಕ್ಯಾಪ್ಟನ್ ಆಗ್ಬಿಟ್ಟರು.! ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

ನವೀನ್ ಮತ್ತು ನಯನ

ನವೀನ್ ಮತ್ತು ನಯನ

'ಹೆಣ್ಣಾಗು, ಗಂಡಾಗು' ಟಾಸ್ಕ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಯನ ಮತ್ತು ನವೀನ್ ಸಜ್ಜು ಕ್ಯಾಪ್ಟನ್ ಪ್ರತಿಸ್ಪರ್ಧಿಗಳಾಗಿ ಆಯ್ಕೆ ಆಗಿದ್ದರು. ಇವರಿಬ್ಬರ ಜೊತೆಗೆ ಇನ್ನೂ ಇಬ್ಬರು ಕ್ಯಾಪ್ಟನ್ ಪ್ರತಿಸ್ಪರ್ಧಿಗಳನ್ನು ಆಯ್ಕೆ ಮಾಡಲು ಮನೆ ಸದಸ್ಯರಿಗೆ 'ಬಿಗ್ ಬಾಸ್' ಸೂಚಿಸಿದರು. ಅದರಂತೆ ಎಲ್ಲರ ಸಮ್ಮತಿ ಮೇರೆಗೆ ಆಂಡ್ರ್ಯೂ ಮತ್ತು ಅಕ್ಷತಾ ಕೂಡ ಕ್ಯಾಪ್ಟನ್ ರೇಸ್ ಗೆ ಇಳಿದರು.

'ಬಿಗ್ ಬಾಸ್' ಕೊಟ್ಟ ಚಟುವಟಿಕೆ ಏನು.?

'ಬಿಗ್ ಬಾಸ್' ಕೊಟ್ಟ ಚಟುವಟಿಕೆ ಏನು.?

ಮಣ್ಣಿನ ಹೊಂಡದಲ್ಲಿ ಇರುವ ಚೆಂಡುಗಳನ್ನು ನೀಡಲಾಗಿರುವ ಬುಟ್ಟಿಯಲ್ಲಿ ಕ್ಯಾಪ್ಟನ್ ಪ್ರತಿಸ್ಪರ್ಧಿಗಳು ಹಾಕಬೇಕು. ಯಾರು ಅತಿ ಹೆಚ್ಚು ಚೆಂಡುಗಳನ್ನು ಬುಟ್ಟಿಗೆ ಹಾಕುತ್ತಾರೋ, ಅವರು ಗೆದ್ದ ಹಾಗೆ.. ಕ್ಯಾಪ್ಟನ್ ಆದ ಹಾಗೆ.

ಚೆನ್ನಾಗಿ ಪರ್ಫಾಮ್ ಮಾಡಿದ ಅಕ್ಷತಾ

ಚೆನ್ನಾಗಿ ಪರ್ಫಾಮ್ ಮಾಡಿದ ಅಕ್ಷತಾ

ಮೊದಲ ಕೆಲವು ಸೆಕೆಂಡ್ ಗಳಲ್ಲೇ ತಮ್ಮ ಬುಟ್ಟಿಗೆ ಹೆಚ್ಚು ಚೆಂಡುಗಳನ್ನು ಅಕ್ಷತಾ ಹಾಕಿಬಿಟ್ಟರು. ಆಟದ ಕೊನೆಯಲ್ಲಿ ಅಕ್ಷತಾ ಬುಟ್ಟಿಯಲ್ಲಿ ಅತಿ ಹೆಚ್ಚು ಚೆಂಡುಗಳಿತ್ತು. ಹೀಗಾಗಿ, ಅಕ್ಷತಾ ಕ್ಯಾಪ್ಟನ್ ಆದರು.

ಆಂಡ್ರ್ಯೂ ಸಪೋರ್ಟ್

ಆಂಡ್ರ್ಯೂ ಸಪೋರ್ಟ್

ಬುಟ್ಟಿಗೆ ಅತಿ ಹೆಚ್ಚು ಚೆಂಡು ಹಾಕುವಲ್ಲಿ ಅಕ್ಷತಾಗೆ ಸಪೋರ್ಟ್ ಮಾಡಿದವರು ಆಂಡ್ರ್ಯೂ. ಅಲ್ಲದೇ, ನವೀನ್ ಮತ್ತು ನಯನ ಟಾರ್ಗೆಟ್ ಮಿಸ್ ಆಗುವಲ್ಲಿಯೂ ಆಂಡ್ರ್ಯೂ ಪಾತ್ರ ಇತ್ತು. ಹೀಗಾಗಿ, ಆಂಡ್ರ್ಯೂ ಕೃಪೆಯಿಂದ ಅಕ್ಷತಾ ಸುಲಭವಾಗಿ ಕ್ಯಾಪ್ಟನ್ ಆದರು.

ಮೊದಲೇ ಮಾತುಕತೆ ಆಗಿತ್ತಾ.?

ಮೊದಲೇ ಮಾತುಕತೆ ಆಗಿತ್ತಾ.?

''ಮೊದಲೇ ಮಾತುಕತೆ ಆಗಿತ್ತು. ಅದಕ್ಕೆ ಅಕ್ಷತಾಗೆ ಆಂಡಿ ಸಪೋರ್ಟ್ ಮಾಡಿದ'' ಎಂಬುದು ಜಯಶ್ರೀ ಮತ್ತು ಕವಿತಾ ಲೆಕ್ಕಾಚಾರವಾದ್ರೆ, ''ಎಲ್ಲರೂ ಮೊದಲು ಅವರವರ ಆಟ ಆಡಿದರು. ಆಮೇಲೆ ಆಂಡಿ ಸಪೋರ್ಟ್ ಮಾಡಿದ. ಮಾತುಕತೆ ಆಗಿಲ್ಲ'' ಅಂತ ಶಶಿ ಹೇಳಿದರು.

More from Filmibeat

English summary
Bigg Boss Kannada 6: Day 33: Akshata Pandavapura becomes captain.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X