ಜಯಶ್ರೀ ಮೇಲೆ ಅಕ್ಷತಾ ಆರೋಪಗಳ ಸುರಿಮಳೆ: 'ಅವಲಕ್ಕಿ ಕಳ್ಳಿ' ಯಾರು.?

Recommended Video

Bigg Boss Kannada Season 6 : ಜಯಶ್ರೀ ಮೇಲೆ ಆರೋಪ ಹೊರಿಸಿದ ಅಕ್ಷತಾ ಪಾಂಡವಪುರ | FILMIBEAT KANNADA

''ನಟಿ ಜಯಶ್ರೀ ಭೇದಭಾವ ಮಾಡುತ್ತಾರೆ.. ಕವಿತಾ ಮತ್ತು ಶಶಿಗೆ ಮಾತ್ರ ಜಯಶ್ರೀ ಚೆನ್ನಾಗಿ ಊಟ ಕೊಡುತ್ತಾರೆ.. ಬೇರೆಯವರ ಬಗ್ಗೆ ಆಕೆ ಕ್ಯಾರೆ ಕೂಡ ಅನ್ನಲ್ಲ'' ಎಂಬ ಗುಸುಗುಸು 'ಬಿಗ್ ಬಾಸ್' ಮನೆಯಲ್ಲಿ ಮೊದಲ ವಾರದಿಂದಲೂ ಕೇಳಿಬರುತ್ತಿತ್ತು.

''ರಾತ್ರಿ ವೇಳೆ ಕವಿತಾ ಗೌಡ ಮೊಟ್ಟೆ ತಿನ್ನುತ್ತಾರೆ.. ಅವಲಕ್ಕಿಗೆ ಹಾಲು-ಸಕ್ಕರೆ ಹಾಕಿಕೊಂಡು ತಿನ್ನುತ್ತಾರೆ'' ಅಂತೆಲ್ಲಾ 'ಬಿಗ್ ಬಾಸ್' ಮನೆ ಮಂದಿಯೇ ಪಿಸುಪಿಸು ಅಂತ ಮಾತನಾಡುತ್ತಿದ್ದರು. ಆದ್ರೆ, ಎದುರೆದುರಿಗೆ ಯಾವುದೂ ಚರ್ಚೆ ಆಗಿರಲಿಲ್ಲ.

ಯಾರಿಗೂ ಗೊತ್ತಾಗದಂತೆ ರಾತ್ರಿ ಹೊತ್ತು ಕವಿತಾ ಅವಲಕ್ಕಿ ತಿಂದಾಗ ಜಯಶ್ರೀ ಪ್ರಶ್ನೆ ಮಾಡಲಿಲ್ಲ. ಆದ್ರೆ, ಆಂಡ್ರ್ಯೂ ಮತ್ತು ಸ್ನೇಹಾಗೆ ರಶ್ಮಿ ಮೊಟ್ಟೆ ಕೊಟ್ಟಾಗ 'ಬಿಗ್ ಬಾಸ್' ಮನೆಯಲ್ಲಿ ದೊಡ್ಡ ರಂಪಾಟವೇ ನಡೆಯಿತು.

ಜಯಶ್ರೀ ಅವರ ಈ ವರ್ತನೆ ಬಗ್ಗೆ ರಶ್ಮಿ, ಆಂಡ್ರ್ಯೂ, ಅಕ್ಷತಾ, ರಾಕೇಶ್ ಗೆ ಬೇಸರ ಇದೆ. ಹೀಗಾಗಿ, 'ನ್ಯಾಯ ಇಲ್ಲಿದೆ' ಚಟುವಟಿಕೆ ವೇಳೆ ಜಯಶ್ರೀ ವಿರುದ್ಧ ಅಕ್ಷತಾ ಆರೋಪ ಮಾಡಿದರು. ಮುಂದೆ ಓದಿರಿ...

'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆ

'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆ

ಇತರೆ ಸ್ಪರ್ಧಿಗಳ ಕುರಿತು ದೂರು ಹೇಳಲು 'ನ್ಯಾಯ ಇಲ್ಲಿದೆ' ಎಂಬ ಚಟುವಟಿಕೆ ಮೂಲಕ 'ಬಿಗ್ ಬಾಸ್' ಅವಕಾಶ ಕಲ್ಪಿಸಿದರು. ನ್ಯಾಯಾಧೀಶರ ಸ್ಥಾನದಲ್ಲಿ ಮುರಳಿ ಕುಳಿತರು. ಈ ಚಟುವಟಿಕೆ ಅನುಸಾರ, ಜಯಶ್ರೀ ವಿರುದ್ಧ ಅಕ್ಷತಾ ಆರೋಪ ಮಾಡಿದರು.

ಅಕ್ಷತಾ ಮಾಡಿದ ಆರೋಪ ಏನು.?

ಅಕ್ಷತಾ ಮಾಡಿದ ಆರೋಪ ಏನು.?

''ಜಯಶ್ರೀ ಮೇಲೆ ಆರೋಪಗಳು ಇರುವುದು ಅಡುಗೆ ಮನೆ ಬಗ್ಗೆ. ಗೋಧಿ ದೋಸೆ ಮಾಡಿದ್ರು. ಯಾರೂ ಇನ್ನೂ ತಿಂಡಿ ತಿಂದಿರಲಿಲ್ಲ. ಶಶಿ ಸ್ವಿಮ್ ಮಾಡುತ್ತಿದ್ದರೂ, ಪ್ರತ್ಯೇಕವಾಗಿ ಅವರಿಗೆ ತಿಂಡಿ ತೆಗೆದುಕೊಂಡು ಹೋಗಿ ಕೊಡುತ್ತಾರೆ. ಅದೇ ಬೇರೆಯವರು ತಿಂಡಿ ತಿನ್ನದೇ ಇದ್ದರೂ, ಜಯಶ್ರೀ ಕೇಳಲ್ಲ'' ಎಂಬುದು ಅಕ್ಷತಾ ಆರೋಪ.

ಜಯಶ್ರೀ ಕೊಟ್ಟ ಸಮರ್ಥನೆ ಏನು.?

ಜಯಶ್ರೀ ಕೊಟ್ಟ ಸಮರ್ಥನೆ ಏನು.?

''ನನಗೆ ಯಾರೂ ಹೆಚ್ಚಿಲ್ಲ. ಯಾರೂ ಕಡಿಮೆ ಇಲ್ಲ. ನನಗೆ ಎಲ್ಲರೂ ಒಂದೇ. ಅವತ್ತು ಎಲ್ಲರದ್ದೂ ತಿಂಡಿ ಆಗಿತ್ತು. ಎಲ್ಲರಿಗೂ ನಾನು ಕೊಟ್ಟಿದ್ದೇನೆ. ನಿನ್ನ ಮೇಲೆ ನಾನೂ ಹೇಳಬಲ್ಲೆ...'' ಅಂತ ಜಯಶ್ರೀ ತಿರುಗೇಟು ಕೊಡಲು ನಿಂತಾಗ ಅಕ್ಷತಾ ಒಂದು ಬಾಂಬ್ ಸಿಡಿಸಿದರು.

ಅಕ್ಷತಾ ಸಿಡಿಸಿದ ಬಾಂಬ್ ಏನು.?

ಅಕ್ಷತಾ ಸಿಡಿಸಿದ ಬಾಂಬ್ ಏನು.?

''ಊಟ ಬಚ್ಚಿಡುವುದು, ಎಕ್ಸ್ಟ್ರಾ ಕೊಡುವುದನ್ನು ನಾನು ಮಾಡಿಲ್ಲ'' ಅಂತ ಅಕ್ಷತಾ ಹೇಳಿದಾಗ, ''ನಾನು ಯಾವಾಗ ಊಟ ಬಚ್ಚಿಟ್ಟಿರುವೆ.?'' ಎಂದು ಜಯಶ್ರೀ ಪ್ರಶ್ನಿಸಿದರು. ಆಗ, ''ಮೊದಲನೇ ವಾರ ಅವಲಕ್ಕಿ ಬಚ್ಚಿಟ್ಟಿದ್ರಿ. ಹಾಟ್ ಬಾಕ್ಸ್ ನಲ್ಲಿ ಹಾಕಿ ಫ್ರಿಡ್ಜ್ ನಲ್ಲಿ ಇಟ್ಟಿದ್ರಿ. ನಾವು ಕಿಚನ್ ಗೆ ಬಂದ್ಮೇಲೆ ಅದನ್ನ ನೋಡಿ ಬಿಸಾಕಿದ್ದೇವೆ. ಯಾಕಂದ್ರೆ, ಅಷ್ಟರಲ್ಲಿ ಅದು ಕೆಟ್ಟಿತ್ತು'' ಎಂದು ಅಕ್ಷತಾ ಬಾಂಬ್ ಸಿಡಿಸಿದರು.

ಜಯಶ್ರೀ ಕೊಟ್ಟ ಸಬೂಬು ಏನು.?

ಜಯಶ್ರೀ ಕೊಟ್ಟ ಸಬೂಬು ಏನು.?

''ಅವಲಕ್ಕಿ ಮಾಡಿದ್ರಲ್ಲಿ ಎಕ್ಸ್ಟ್ರಾ ಉಳಿದಿತ್ತು'' ಎಂದು ಮೊದಲು ಜಯಶ್ರೀ ಸಬೂಬು ನೀಡಿದರು. ಅದಕ್ಕೆ, ''ಇಲ್ಲ... ಅವಲಕ್ಕಿಗೆ ಹಾಲು, ಸಕ್ಕರೆ ಹಾಕಿಕೊಂಡು ರಾತ್ರಿ ಎದ್ದು ತಿನ್ನುತ್ತಾರೆ. ಅದೇ ಬೇರೆಯವರು ಹಾಲು ಕೇಳಿದರೆ, ಸ್ಪೂನ್ ಲೆಕ್ಕ ಹಾಕಿ ಕೊಡುತ್ತೀರಾ'' ಅಂತ ಅಕ್ಷತಾ ನೇರ ಆರೋಪ ಮಾಡಿದರು. ಆಮೇಲೆ, ''ಅವಲಕ್ಕಿ ವಿಚಾರ ನನಗೆ ಗೊತ್ತಿಲ್ಲ'' ಅಂತ ಏರು ಧ್ವನಿಯಲ್ಲಿ ಜಯಶ್ರೀ ವಾದ ಮಾಡಿದರು.

More from Filmibeat

English summary
Bigg Boss Kannada 6: Day 33: Akshata Pandavapura complaints about Jayashree.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X