ಕಣ್ಣೀರಿಟ್ಟು ಕೂಗಾಡಿದ ಕವಿತಾ, ಅತ್ತ ಆಂಡ್ರ್ಯೂ, ರೊಚ್ಚಿಗೆದ್ದ ಶಶಿ ಕೈಗೆ ಪೆಟ್ಟು.!
Recommended Video

'ಬಿಗ್ ಬಾಸ್' ಮನೆಯಲ್ಲಿ ನಿನ್ನೆ ದೊಡ್ಡ ಹೈಡ್ರಾಮಾನೇ ನಡೆಯಿತು. ಒಂದ್ಕಡೆ ಕವಿತಾ ಗೊಳೋ ಅಂತ ಕಣ್ಣೀರಿಡುತ್ತಿದ್ದರೆ, ಇನ್ನೊಂದು ಕಡೆ ಜಯಶ್ರೀ-ಶಶಿ ಮತ್ತು ಆಂಡ್ರ್ಯೂ ನಡುವೆ ವಾಕ್ಸಮರ ನಡೆಯಿತು. ರೊಚ್ಚಿಗೆದ್ದ ಶಶಿ ಗೋಡೆಗೆ ಕೈ ಗುದ್ದುಕೊಂಡು ಪೆಟ್ಟು ಮಾಡಿಕೊಂಡರು. ಆಂಡ್ರ್ಯೂ ಟಾರ್ಗೆಟ್ ಆಗಿದ್ದರಿಂದ ಆತ ಕೂಡ ಬೇಸರ ಮಾಡಿಕೊಂಡು ಅತ್ತರು.
ಯಾರಿಗೆ ನಿಜಕ್ಕೂ ಬೇಸರ ಆಗಿದ್ಯೋ.. ಯಾರ ಹೆಸರಿನಲ್ಲಿ ಇನ್ಯಾರು ಬೇಳೆ ಬೇಯಿಸಿಕೊಳ್ಳುತ್ತಿದ್ದಾರೋ ಗೊತ್ತಿಲ್ಲ. ಒಟ್ನಲ್ಲಿ... ತಾವು ಬಚಾವ್ ಆಗಲು ಒಬ್ಬರ ಮೇಲೆ ಇನ್ನೊಬ್ಬರು ಗೂಬೆ ಕೂರಿಸುತ್ತಿರುವುದು ಮಾತ್ರ ಖಚಿತ.
ನಾಮಿನೇಷನ್ ನಲ್ಲಿ ಸೇಫ್ ಆಗಲು ಆಂಡ್ರ್ಯೂ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದ ಕವಿತಾ ಬಳಿಕ ಅದೇ ವಿಷಯಕ್ಕೆ ಆಂಡ್ರ್ಯೂ ವಿರುದ್ಧ ಆರೋಪ ಮಾಡಿದರು. ಇನ್ನೂ ಅಕ್ಷತಾ ನಡೆಸಿಕೊಟ್ಟ ಚಾಟ್ ಶೋನಲ್ಲಿ ಕವಿತಾ ಬಗ್ಗೆ ಕೆಲ ಕಾಮೆಂಟ್ ಗಳು ಬಂದ್ವು. ಇದನ್ನೆಲ್ಲ ಗಮನಿಸಿದ ಮೇಲೆ ಕವಿತಾ ಅಪ್ಸೆಟ್ ಆದರು. ಜಯಶ್ರೀ ಮತ್ತು ಶಶಿ ಕೂಡ ಸಿಟ್ಟಲ್ಲಿದ್ದರು. ಮುಂದೆ ಓದಿರಿ...

ಕವಿತಾಗೆ ಇರುವ ಬೇಸರ ಏನು.?
ಚಾಟ್ ಶೋನಲ್ಲಿ ಆಂಡ್ರ್ಯೂ ಮಾತನಾಡುತ್ತಿರುವಾಗ, ಎಲ್ಲರೂ ಸುಮ್ಮನೆ ಕೂತಿದ್ದರು. ಕವಿತಾ ಬಗ್ಗೆ ಆತ ಮಾತನಾಡಿದಾಗ, ಯಾರೂ ಚಕಾರ ಎತ್ತಲಿಲ್ಲ. ಪ್ರತಿಕ್ರಿಯೆ ಕೊಡಲು ಕವಿತಾ ಮುಂದಾದಾಗ, ಅಕ್ಷತಾ ಅದಕ್ಕೆ ಅವಕಾಶ ಕೊಡಲಿಲ್ಲ. ಇನ್ನೂ ಕವಿತಾಗೆ ನವೀನ್ ''ಹುಡುಗೀರಂದ್ರೆ ಡೇಂಜರಪ್ಪೋ..'' ಹಾಡನ್ನ ಡೆಡಿಕೇಟ್ ಮಾಡಿದ್ರು. ಹೀಗಾಗಿ, ಕವಿತಾ ಬೇಸರ ಮಾಡಿಕೊಂಡು ಕಣ್ಣೀರಿಟ್ಟರು.

ಜಯಶ್ರೀ ಹೇಳುವುದೇನು.?
''ಎಲ್ಲರೂ ಒಂದು ಹೆಣ್ಣನ್ನೇ ದೂಷಿಸುತ್ತಿದ್ದಾರೆ. ಅವನು (ಆಂಡ್ರ್ಯೂ) ಕೋತಿ ತರಹ ಆಡುತ್ತಿದ್ದಾನೆ. ಅದನ್ನ ದೂಷಿಸಲು ಯಾರೂ ಇಲ್ವಾ.? ವೇದಿಕೆ ಮೇಲೆ ಹೃದಯದ ಬಗ್ಗೆ ಮಾತನಾಡುತ್ತಾನೆ. ಒಂದು ಹುಡುಗಿಯ ಭಾವನೆ ಗೊತ್ತಾ ಅವನಿಗೆ.? ತಂಗಿ ತರಹ ಅಂತಿದ್ದೋನು... ಈಗ ಗರ್ಲ್ ಫ್ರೆಂಡ್ ಆಗೋದ್ಲಾ.?'' ಎಂಬುದು ಜಯಶ್ರೀ ಪ್ರಶ್ನೆಯಾಗಿದೆ.

ಶಶಿ ಹೇಳಿದ್ದೇನು.?
''ಪ್ರತಿ ಬಾರಿ ಒಬ್ಬರಲ್ಲ ಒಬ್ಬರನ್ನು ಟಾರ್ಗೆಟ್ ಮಾಡುವುದಷ್ಟೇ ಆಂಡಿ ಉದ್ದೇಶ. ಬೇರೆ ಏನೂ ಇಲ್ಲ. ಇದು ಒಂದು ಹುಡುಗಿ ಜೀವನ. ಇದನ್ನ ದಾಳವಾಗಿ ಉಪಯೋಗಿಸಬಾರದು. ಆಂಡಿ ಮಾಡುತ್ತಿರುವುದು ತಪ್ಪು'' ಅನ್ನೋದು ಶಶಿ ಅಭಿಪ್ರಾಯ.

ದೊಡ್ಡದು ಮಾಡ್ತಿರೋದು ಯಾರು.?
''ಏಟು ಬಿದ್ದಿರೋದು ನನಗೆ.. ನೋವಾಗಿರೋದು ನನಗೆ.. ಈ ಅವಕಾಶವನ್ನು ಬಳಸಿಕೊಂಡು ಜಯಶ್ರೀ ಮತ್ತು ಶಶಿ ವಿಷಯವನ್ನು ದೊಡ್ಡದು ಮಾಡುತ್ತಿದ್ದಾರೆ. ಅವರಿಗೆ ಕವಿತಾ ಮೇಲೆ ಅಷ್ಟೊಂದು ಕೇರ್ ಇದ್ದರೆ, ಇದನ್ನ ಯಾಕೆ ದೊಡ್ಡದು ಮಾಡಬೇಕು.?'' ಅನ್ನೋದು ಆಂಡ್ರ್ಯೂ ಪಾಯಿಂಟ್.

ವಾಗ್ವಾದ-ವಾಕ್ಸಮರ
''ನೀವೇ ಇದ್ದನ್ನ ಈಗ ದೊಡ್ಡದು ಮಾಡಿ.. ಡ್ರಾಮಾ ಮಾಡ್ತಿದ್ದೀರಾ'' ಅಂತ ಜಯಶ್ರೀ ಮತ್ತು ಶಶಿಗೆ ಆಂಡ್ರ್ಯೂ ಹೇಳಿದಾಗ ಶಶಿ ರೊಚ್ಚಿಗೆದ್ದರು. ಸಿಟ್ಟಿನಲ್ಲಿ ಗೋಡೆಗೆ ಕೈ ಗುದ್ದುಕೊಂಡು ಬೆರಳಿಗೆ ಪೆಟ್ಟು ಮಾಡಿಕೊಂಡರು.

ಹೌಹಾರಿದ ಕವಿತಾ
''ನನ್ನ ಕ್ಯಾರೆಕ್ಟರ್ ಬಗ್ಗೆ ಮಾತನಾಡುವಾಗ ನನಗೆ ಪ್ರತಿಕ್ರಿಯಿಸುವ ಅವಕಾಶ ಕೊಡಬೇಕಿತ್ತು. ಪ್ರತಿಯೊಬ್ಬರು ಚಪ್ಪಾಳೆ ತಟ್ಟಿ ಅವನಿಗೆ (ಆಂಡ್ರ್ಯೂ) ಸಪೋರ್ಟ್ ಮಾಡಿದ್ರಿ'' ಅಂತ ಅಕ್ಷತಾ ಮೇಲೆ ಕವಿತಾ ಗೌಡ ಹೌಹಾರಿದರು.


Click it and Unblock the Notifications











