twitter
    For Quick Alerts
    ALLOW NOTIFICATIONS  
    For Daily Alerts

    ನವೀನ್ ಗೆ ಸೋನು ಕಂಡ್ರೆ ಇಷ್ಟ.! ಯಾಕೆ ಅಂತ ಗೊತ್ತೇನು.?

    |

    ಕನ್ನಡ ಚಿತ್ರರಂಗದ ಉದಯೋನ್ಮುಖ ಗಾಯಕ, ಸಂಗೀತ ನಿರ್ದೇಶಕ ನವೀನ್ ಸಜ್ಜುಗೆ ನಟಿ ಸೋನು ಪಾಟೀಲ್ ಕಂಡ್ರೆ ಇಷ್ಟ ಅಂತೆ.! ಹಾಗಂತ ಸ್ವತಃ ಅವರೇ 'ಬಿಗ್ ಬಾಸ್' ಮನೆಯಲ್ಲಿ ಹೇಳಿಕೊಂಡಿದ್ದಾರೆ.

    'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿ ಅಕ್ಷತಾ ಆಯ್ಕೆ ಆದ್ಮೇಲೆ, 'ಕಾಫಿ ವಿತ್ ಕ್ಯಾಪ್ಟನ್' ಎಂಬ ವಿಶೇಷ ಚಟುವಟಿಕೆಯನ್ನ 'ಬಿಗ್ ಬಾಸ್' ನೀಡಿದರು. ಇದರ ಅನುಸಾರ ಕ್ಯಾಪ್ಟನ್ ಅಕ್ಷತಾ, ಪ್ರತಿಸ್ಪರ್ಧಿಗಳಾಗಿದ್ದ ನಯನ, ಆಂಡ್ರ್ಯೂ ಮತ್ತು ನವೀನ್ ಜೊತೆ ಕಾಫಿ ಸವಿಯುತ್ತಾ ಒಂದು ಚಾಟ್ ಶೋ ನಡೆಸಬೇಕಾಗಿತ್ತು. ಚಾಟ್ ಶೋನಲ್ಲಿ ಮೂವರನ್ನೂ ಒಬ್ಬೊಬ್ಬರಾಗಿ ಆಹ್ವಾನಿಸಿ, ನೀಡಲಾಗುವ ಐದು ಪ್ರಶ್ನೆಗಳನ್ನು ಕೇಳಿ, ಅದಕ್ಕೆ ಉತ್ತರ ಪಡೆಯಬೇಕಾಗಿತ್ತು. ನೇರ ಮತ್ತು ಪ್ರಾಮಾಣಿಕ ಉತ್ತರ ನೀಡಿದವರನ್ನು ಕ್ಯಾಪ್ಟನ್ ಆಯ್ಕೆ ಮಾಡಬೇಕಿತ್ತು.

    ನವೀನ್ ಗೆ ಕಿಸ್ ಕೊಟ್ಟ ಸೋನು: 'ದೊಡ್ಮನೆ'ಯಲ್ಲಿ ಶುರುವಾಯ್ತು 'ಮುತ್ತಿನ' ಕಥೆ ನವೀನ್ ಗೆ ಕಿಸ್ ಕೊಟ್ಟ ಸೋನು: 'ದೊಡ್ಮನೆ'ಯಲ್ಲಿ ಶುರುವಾಯ್ತು 'ಮುತ್ತಿನ' ಕಥೆ

    ನವೀನ್ ಸಜ್ಜು ಜೊತೆಗೆ ಅಕ್ಷತಾ ಚಾಟ್ ಶೋ ಆರಂಭ ಮಾಡಿದ್ಮೇಲೆ, ''ನವೀನ್ ಗೆ ಸೋನು ಕಂಡ್ರೆ ಇಷ್ಟ ಇದ್ಯಾ, ಇಲ್ವಾ.? ಮತ್ತು ಯಾಕೆ.?'' ಎಂದು ಪ್ರಶ್ನಿಸಿದರು.

    Bigg Boss Kannada 6: Day 33: Naveen Sajju likes Sonu Patil

    ಇದಕ್ಕೆ ನವೀನ್ ಕೊಟ್ಟ ಉತ್ತರ - ''ಸೋನು ನನಗೆ ಇಷ್ಟ. ಯಾಕಂದ್ರೆ, ಆಕೆಯೂ ನನ್ನ ಹಾಗೆ ಹಳ್ಳಿಯಿಂದ ಬಂದಿರುವಾಕೆ''.

    ಯಾರೀ ಜವಾರಿ ಹುಡುಗಿ ಸೋನು ಪಾಟೀಲ್.? ಆಕೆಯ ನಿಜ ನಾಮ ನಿಮ್ಗೆ ಗೊತ್ತೇನು.? ಯಾರೀ ಜವಾರಿ ಹುಡುಗಿ ಸೋನು ಪಾಟೀಲ್.? ಆಕೆಯ ನಿಜ ನಾಮ ನಿಮ್ಗೆ ಗೊತ್ತೇನು.?

    ಅಷ್ಟಕ್ಕೂ, ನವೀನ್ ಜೊತೆಗೆ ಲವ್ ಟ್ರ್ಯಾಕ್ ಓಪನ್ ಮಾಡಿದವರು ಸೋನು ಪಾಟೀಲ್. ಚಳಿ ಆಗುತ್ತಿದ್ದಾಗ, ಸೋನು ಪಾಟೀಲ್ ಗೆ ನವೀನ್ ಒಂದು ಜ್ಯಾಕೆಟ್ ಕೊಟ್ಟಿದ್ದರಂತೆ. ಇದರಿಂದ ಖುಷಿಪಟ್ಟ ಸೋನು, ಟಾಸ್ಕ್ ಒಂದರಲ್ಲಿ ''ಸ್ನೇಹಿತನಾಗಿ, ಐ ಲವ್ ಯು'' ಎಂದು ನವೀನ್ ಗೆ ಹೇಳಿದ್ದರು.

    'ಉತ್ತರ ಕರ್ನಾಟಕ' ಅಂತ ಕರೆಯುವುದು ಯಾಕೆ ಅಂತ್ಲೇ ಸೋನು ಪಾಟೀಲ್ ಗೆ ಗೊತ್ತಿಲ್ಲ.! 'ಉತ್ತರ ಕರ್ನಾಟಕ' ಅಂತ ಕರೆಯುವುದು ಯಾಕೆ ಅಂತ್ಲೇ ಸೋನು ಪಾಟೀಲ್ ಗೆ ಗೊತ್ತಿಲ್ಲ.!

    ಅದಾದ್ಮೇಲೆ, ಪ್ರೀತಿ ಎನ್ನುವಂಥದ್ದು ಇಲ್ಲ ಅಂತ ಇಬ್ಬರೂ ಸ್ಪಷ್ಟ ಪಡಿಸಿದ್ದರು. ಹಲವು ಬಾರಿ ನವೀನ್ ಜೊತೆಗೆ ಸೋನು ಕಿತ್ತಾಟ ಕೂಡ ಮಾಡಿಕೊಂಡಿದ್ದಾರೆ.

    English summary
    Bigg Boss Kannada 6: Day 33: Naveen Sajju likes Sonu Patil.
    Saturday, November 24, 2018, 17:34
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X