ರಾಕೇಶ್-ಅಕ್ಷತಾಗೆ ಗಂಡ-ಹೆಂಡತಿ ಎಂದುಬಿಟ್ಟ ಆಂಡ್ರ್ಯೂ.!

Recommended Video

ರಾಕೇಶ್-ಅಕ್ಷತಾಗೆ ಗಂಡ-ಹೆಂಡತಿ ಎಂದುಬಿಟ್ಟ ಆಂಡ್ರ್ಯೂ.! | FILMIBEAT KANNADA

''ನಾನು ಮತ್ತು ಅಕ್ಷತಾ ಸ್ನೇಹಿತರು. ನಮ್ಮ ನಡುವೆ ಒಳ್ಳೆಯ ಫ್ರೆಂಡ್ ಶಿಪ್ ಇದೆ'' ಅಂತ ಎಷ್ಟೇ ಬಾರಿ ರಾಕೇಶ್ ಹೇಳಿದರೂ, 'ಬಿಗ್ ಬಾಸ್' ಮನೆಯ ಸ್ಪರ್ಧಿಗಳಿಗೆ ರಾಕೇಶ್-ಅಕ್ಷತಾ ನಡುವಿನ ಗೆಳೆತನ ಇಷ್ಟ ಆಗುತ್ತಿಲ್ಲ.

ಆಗಾಗ ''ಐ ಲವ್ ಯು ರಾಕಿ'' ಅಂತ ಅಕ್ಷತಾ ಬಹಿರಂಗವಾಗಿ ಹೇಳಿರುವುದರಿಂದ, ಎಲ್ಲಾ ಸ್ಪರ್ಧಿಗಳ ತಲೆಯಲ್ಲಿ ಹೆಬ್ಬಾವು ಹರಿದಾಡುತ್ತಿದೆ. ರಾಕೇಶ್-ಅಕ್ಷತಾ 'ಬಿಗ್ ಬಾಸ್' ಮನೆಯಲ್ಲಿ ನಡೆದುಕೊಳ್ಳುತ್ತಿರುವ ರೀತಿಗೆ ವೀಕ್ಷಕರು ಕೂಡ ಕಿರಿಕಿರಿಗೊಂಡಿದ್ದಾರೆ.

ಹೀಗಿರುವಾಗಲೇ, ರಾಕೇಶ್ ಮತ್ತು ಅಕ್ಷತಾ ಮುಖಕ್ಕೆ ಹೊಡೆದ ಹಾಗೆ ''ಗಂಡ-ಹೆಂಡತಿ'' ಅಂತ ಆಂಡ್ರ್ಯೂ ಹೇಳಿದ್ದಾರೆ. ಇದನ್ನ ಕೇಳಿಸಿಕೊಂಡು ಅಕ್ಷತಾ ಮಂಕಾಗಿದ್ದರೆ, ರಾಕೇಶ್ ಸಿಡಿದೆದ್ದರು. ಮುಂದೆ ಓದಿರಿ...

ಖಾರದ ಪುಡಿಯಿಂದ ಖಾರದ ಜಗಳ

ಖಾರದ ಪುಡಿಯಿಂದ ಖಾರದ ಜಗಳ

'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆಯ ಅನುಸಾರ, ಅಕ್ಷತಾ ಶಾವಿಗೆ ಪಾಯಸ ತಯಾರಿಸಿದ್ದರು. ಅದನ್ನ ತೀರ್ಪುಗಾರರಾಗಿದ್ದ ಜಯಶ್ರೀ, ಶಶಿ ಮತ್ತು ಕವಿತಾ ರುಚಿ ನೋಡುವ ಮುನ್ನ ನಿರೂಪಕನ ಪಾತ್ರ ನಿರ್ವಹಿಸಿದ್ದ ಆಂಡ್ರ್ಯೂ ಶಾವಿಗೆ ಪಾಯಸಕ್ಕೆ ಖಾರದ ಪುಡಿ ಬೆರೆಸಿದರು. ಸಿಹಿ ತಿಂಡಿಗೆ ಖಾರ ಹಾಕಿ ಹಾಳು ಮಾಡಿದ ಆಂಡ್ರ್ಯೂ ವಿರುದ್ಧ ಅಕ್ಷತಾ ರೊಚ್ಚಿಗೆದ್ದರು.

ಉಗ್ರ ರೂಪ ತಾಳಿದ ಅಕ್ಷತಾ

ಉಗ್ರ ರೂಪ ತಾಳಿದ ಅಕ್ಷತಾ

''ಆಂಕರ್ ಆಂಕರಿಂಗ್ ಅಷ್ಟೇ ಮಾಡಬೇಕು.. ಊಟಕ್ಕೆ ಖಾರ ಮಿಕ್ಸ್ ಮಾಡೋದಲ್ಲ... ಪ್ರತಿ ವಾರ ಆಂಡ್ರ್ಯೂ ಏನಾದರೂ ಒಂದು ಮಾಡುತ್ತಿರಲಿ.. ಯಾರೂ ಏನೂ ಮಾಡಬೇಡಿ.. ಮಾತನಾಡಬೇಡಿ'' ಅಂತ ಗರಂ ಆಗಿ ಅಕ್ಷತಾ ಹೇಳುತ್ತಿದ್ದರು.

ಗಂಡ-ಹೆಂಡತಿ ಎಂದ ಆಂಡ್ರ್ಯೂ

ಗಂಡ-ಹೆಂಡತಿ ಎಂದ ಆಂಡ್ರ್ಯೂ

''ನೀನು ಮಾಡಿದ್ದು ತಪ್ಪು'' ಅಂತ ಆಂಡ್ರ್ಯೂಗೆ ರಾಕೇಶ್ ಹೇಳಿದಾಗ, ಅಕ್ಷತಾ ಪರ ವಹಿಸಿದ ರಾಕೇಶ್ ಗೆ ''ಮಾತಾಡ್ರೋ ಗಂಡ-ಹೆಂಡತಿ ಮಾತನಾಡಿಕೊಳ್ಳಿ...'' ಅಂತ ಮುಖಕ್ಕೆ ಹೊಡೆದ ಹಾಗೆ ಆಂಡ್ರ್ಯೂ ಹೇಳಿಬಿಟ್ಟರು.

ರಾಕೇಶ್ ಉಗ್ರ ಪ್ರತಾಪ

ರಾಕೇಶ್ ಉಗ್ರ ಪ್ರತಾಪ

ಅಕ್ಷತಾ ಹಾಗೂ ತಮಗೆ 'ಗಂಡ-ಹೆಂಡತಿ' ಅಂತ ಹೇಳಿದ್ರಿಂದ, ರಾಕೇಶ್ ಉಗ್ರ ಪ್ರತಾಪ ತೋರಿದರು. ಏರುಧ್ವನಿಯಲ್ಲಿ ಆಂಡ್ರ್ಯೂ ಜೊತೆಗೆ ಜಗಳಕ್ಕೆ ಇಳಿದರು. ''ಅವಳು ನಿನಗೆ ಸಪೋರ್ಟ್ ಮಾಡುತ್ತಾಳೆ, ನೀನು ಅವಳಿಗೆ ಸಪೋರ್ಟ್ ಮಾಡುತ್ತೀಯಾ. ಅದಕ್ಕೆ ಹಾಗಂದೆ'' ಎಂದು ಸಬೂಬು ಕೊಡುತ್ತಿದ್ದರು ಆಂಡ್ರ್ಯೂ.

ಮಾತು ಬದಲಿಸಿದ ಆಂಡ್ರ್ಯೂ

ಮಾತು ಬದಲಿಸಿದ ಆಂಡ್ರ್ಯೂ

''ಮಾತಾಡ್ರೋ ಗಂಡ-ಹೆಂಡತಿ ಮಾತನಾಡಿಕೊಳ್ಳಿ...'' ಅಂತ ಆಂಡ್ರ್ಯೂ ಮೊದಲು ಹೇಳಿದ್ದು. ಆಮೇಲೆ, ''ಗಂಡ-ಹೆಂಡತಿ ತರಹ ಎಂದೆ..'' ಎಂದು ಮಾತು ಬದಲಾಯಿಸಿಬಿಟ್ಟರು. ಅಲ್ಲದೇ, ''ಇದೇ ಜಾಗದಲ್ಲಿ ಅಕ್ಷತಾ ಬಿಟ್ಟು ಬೇರೆ ಯಾರಾದರೂ ಇದ್ದಿದ್ದರೆ, ನೀನು ವಹಿಸಿಕೊಂಡು ಬರ್ತಿದ್ಯಾ.?'' ಅಂತ ರಾಕೇಶ್ ಗೆ ಆಂಡ್ರ್ಯೂ ಪ್ರಶ್ನೆ ಹಾಕಿದರು.

ಆಂಡ್ರ್ಯೂ ವಿರುದ್ಧ ಮಾತನಾಡಲು ತಯಾರಿಲ್ಲ.!

ಆಂಡ್ರ್ಯೂ ವಿರುದ್ಧ ಮಾತನಾಡಲು ತಯಾರಿಲ್ಲ.!

''ಅಕ್ಷತಾ ಪರವಾಗಿ ನಾವೆಲ್ಲರೂ ಇದ್ದೇವೆ. ಆದ್ರೆ, ಆಂಡ್ರ್ಯೂ ಜೊತೆಗೆ ಬಾಯಿ ಕೊಡಲು ಆಗಲ್ಲ'' ಅಂತ ಧನರಾಜ್ ಹೇಳಿಬಿಟ್ಟರು. ಖಾರದ ಪುಡಿ ವಿಚಾರವಾಗಿ ನವೀನ್ ಮತ್ತು ಆಂಡ್ರ್ಯೂ ನಡುವೆ ವಾಕ್ಸಮರ ನಡೆಯಿತು.

ಯಾರೂ ಮಾತನಾಡಬೇಡಿ ಎಂದ ಅಕ್ಷತಾ

ಯಾರೂ ಮಾತನಾಡಬೇಡಿ ಎಂದ ಅಕ್ಷತಾ

ಆಂಡ್ರ್ಯೂ ಮಾತಿನಿಂದ ಬೇಸರಗೊಂಡ ಅಕ್ಷತಾ, ''ಮಾತನಾಡಬೇಡಿ'' ಅಂತ ಎಲ್ಲರ ಬಳಿ ಕೇಳಿಕೊಳ್ಳುತ್ತಿದ್ದರು. ಈ ನಡುವೆ ''ಭಯ ಆಗುತ್ತಿದೆ'' ಅಂತ ರಾಕೇಶ್ ಕಣ್ಣೀರು ಹಾಕುತ್ತಿದ್ದರು.

More from Filmibeat

English summary
Bigg Boss Kannada 6: Day 36: Andrew calls Rakesh and Akshata as Husband and Wife.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X