ಸಿಹಿ ಪಾಯಸದಲ್ಲಿ ಖಾರದಪುಡಿ ಸೇರಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾದ ಆಂಡ್ರ್ಯೂ
ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲುವಲ್ಲಿ.. ಕೆಣಕುವುದರಲ್ಲಿ.. ಕಿರಿಕಿರಿ ತರುವುದರಲ್ಲಿ ಆಂಡ್ರ್ಯೂ ನಂಬರ್ ಒನ್.
ಇಲ್ಲಿಯವರೆಗೂ 'ಬಿಗ್ ಬಾಸ್' ಮನೆಯಲ್ಲಿ ಆಂಡ್ರ್ಯೂ ಮಾಡಿರುವ ಜಗಳಗಳಿಗೆ ಲೆಕ್ಕವೇ ಇಲ್ಲ. ಪ್ರತಿ ವಾರ, ಪ್ರತಿ ದಿನ... ಏನಾದರೊಂದು ಕಿತಾಪತಿ ಮಾಡದೇ ಇದ್ದರೆ ಆಂಡ್ರ್ಯೂಗೆ ಸಮಾಧಾನವೇ ಆಗಲ್ಲವೇನೋ.!
ಕಳೆದ ಇಡೀ ವಾರ ಕವಿತಾ ಮತ್ತು ಆಂಡ್ರ್ಯೂ ವಿವಾದ ಕೇಂದ್ರಬಿಂದು ಆಗಿತ್ತು. ಕವಿತಾ ಪರವಾಗಿ ನಿಂತ ಜಯಶ್ರೀ ಮತ್ತು ಶಶಿಗೆ ಕೆಟ್ಟ ಹೆಸರು ಬಂತು. ಇನ್ಮೇಲಾದರೂ ಬುದ್ಧಿ ಕಲಿತು ಜನರ ಮನಸ್ಸು ಗೆಲ್ಲಬೇಕು ಅಂತ ಆಂಡ್ರ್ಯೂಗೆ ಅನಿಸುತ್ತೋ, ಇಲ್ವೋ..
ಆಂಡ್ರ್ಯೂ ಬಗ್ಗೆ ಕೆಲವರು ಹೊಗಳಲು ಆರಂಭಿಸಿದಂತೆ ಚಟುವಟಿಕೆಯೊಂದರಲ್ಲಿ ಅಧಿಕ ಪ್ರಸಂಗ ಮಾಡಲು ಹೋಗಿ ಎಲ್ಲರ ಕೆಂಗಣ್ಣಿಗೆ ಆಂಡ್ರ್ಯೂ ಗುರಿಯಾದರು. ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆ
'ಸವಿ ಸವಿ ರುಚಿ' ಎಂಬ ವಿಶೇಷ ಚಟುವಟಿಕೆಯನ್ನ 'ಬಿಗ್ ಬಾಸ್' ನೀಡಿದರು. ಇದರ ಅನುಸಾರ, ಅಕ್ಷತಾ ಸಿಡುಕು ಸ್ವಭಾವದ ಅಡುಗೆ ತಯಾರಿಸುವವರಾದರೆ, ಅಕ್ಷತಾಗೆ ಸೋನು ಪಾಟೀಲ್ ವಿಧೇಯಕ ಸಹಾಯಕಿ. ಇನ್ನೂ ಕಟ್ಟುನಿಟ್ಟಿನ ತೀರ್ಪುಗಾರರಾಗಿ ಶಶಿ, ಕವಿತಾ, ಜಯಶ್ರೀ ಪಾತ್ರ ನಿರ್ವಹಿಸಬೇಕಿತ್ತು. ಆಂಡ್ರ್ಯೂ ರದ್ದು ಭಾವನಾತ್ಮಕ ಸ್ವಭಾವದ ನಿರೂಪಕನ ಪಾತ್ರ. ಉಳಿದ ಸ್ಪರ್ಧಿಗಳು ಪ್ರೇಕ್ಷಕರಾಗಿದ್ದರು.

ಶಾವಿಗೆ ಪಾಯಸ ತಯಾರಿಸಿದ ಅಕ್ಷತಾ
ಸಿಹಿಯಾದ ರುಚಿಯಾದ ಶಾವಿಗೆ ಪಾಯಸವನ್ನು ತಯಾರಿಸಲು ಅಕ್ಷತಾ ಮುಂದಾದರು. ಶಾವಿಗೆ ಪಾಯಸ ಇನ್ನೇನು ರೆಡಿ ಆಯ್ತು ಅನ್ನೋಷ್ಟರಲ್ಲಿ ಒಂದು ಎಡವಟ್ಟು ನಡೆಯಿತು.

ಖಾರದ ಪುಡಿ ಹಾಕಿದ ಆಂಡ್ರ್ಯೂ
ತೀರ್ಪುಗಾರರು ಶಾವಿಗೆ ಪಾಯಸದ ರುಚಿ ನೋಡುವಷ್ಟರಲ್ಲಿ, ಪಾಯಸಕ್ಕೆ ಆಂಡ್ರ್ಯೂ ಖಾರದ ಪುಡಿ ಹಾಕಿದರು. ಸಿಹಿ ತಿಂಡಿಗೆ ಖಾರದ ಪುಡಿ ಹಾಕಿ ಹಾಳು ಮಾಡಿದ ಆಂಡ್ರ್ಯೂ ವಿರುದ್ಧ ಅಕ್ಷತಾ ಸೇರಿದಂತೆ ಎಲ್ಲಾ ಸ್ಪರ್ಧಿಗಳು ಸಿಡಿಮಿಡಿಗೊಂಡರು.

ಖಾರದ ಪುಡಿ ಉಲ್ಲೇಖ ಮಾಡಿದವರು ಯಾರು.?
ಹಾಗ್ನೋಡಿದ್ರೆ, ಶಾವಿಗೆ ಪಾಯಸ ತಯಾರಾಗುತ್ತಿದ್ದಾಗ, ''ಮೇಲೆ ಖಾರದ ಪುಡಿ ಲೈಟಾಗಿ ಹಾಕಿ'' ಅಂತ ಹೇಳಿದ್ದು ತೀರ್ಪುಗಾರರ ಸ್ಥಾನದಲ್ಲಿ ಕುಳಿತಿದ್ದ ಶಶಿ. ಆಗ, ''ಈಗ ಖಾರದ ಪುಡಿ ಹಾಕೋದಲ್ಲ.. ಕೊನೆಯಲ್ಲಿ ಹಾಕೋದು'' ಅಂತ ಜಯಶ್ರೀ ಕಾಮೆಂಟ್ ಮಾಡಿದರು. ಕಾಕತಾಳೀಯ ಅಂದ್ರೆ, ಕೊನೆಯಲ್ಲಿ ಆಂಡ್ರ್ಯೂ ಖಾರದ ಪುಡಿ ಹಾಕೇ ಬಿಟ್ಟರು.

'ಬಿಗ್ ಬಾಸ್' ಮನೆಯಲ್ಲಿ ರಾದ್ಧಾಂತ
ಪಾಯಸಕ್ಕೆ ಖಾರದ ಪುಡಿ ಬೆರೆಸಿದ ಆಂಡ್ರ್ಯೂ ವಿರುದ್ಧ ಎಲ್ಲರೂ ಕಿರಿಕಿರಿಗೊಂಡರು. ಆಂಡ್ರ್ಯೂ-ರಾಕೇಶ್ ನಡುವೆ ಮಾತಿನ ಚಕಮಕಿ ನಡೆಯಿತು. ನವೀನ್ ಕೂಡ ಆಂಡ್ರ್ಯೂಗೆ ಸರಿಯಾಗಿ ಟಾಂಗ್ ಕೊಟ್ಟರು.

ಖಾರದ ಪುಡಿ ಹಾಕಿದ್ಯಾಕೆ.?
''ಕೊನೆಯಲ್ಲಿ ಸ್ವಲ್ಪ ಫನ್ ಇರಲಿ ಅಂತ ಖಾರದ ಪುಡಿ ಹಾಕಿದೆ. ಎಲ್ಲರೂ ತಿನ್ನುವ ಹಾಗಿದ್ದರೆ, ಖಾರದ ಪುಡಿ ಹಾಕುತ್ತಿರಲಿಲ್ಲ'' ಅಂತ ಆಂಡ್ರ್ಯೂ ಸಮರ್ಥಿಸಿಕೊಂಡರು.


Click it and Unblock the Notifications











