'ಐ ಲವ್ ಯು ರಾಕಿ' ಎನ್ನುವ ಅಕ್ಷತಾ-ರಾಕೇಶ್ ನಡುವಿನ ಸಂಬಂಧ ಎಂಥದ್ದು.?
Recommended Video

ಅದ್ಯಾಕೋ, ಏನೋ... ಸೋನು ಪಾಟೀಲ್ ಕಂಡ್ರೆ ಅಕ್ಷತಾಗೆ ಆಗ್ಬರಲ್ಲ. ಇದೇ ಕಾರಣಕ್ಕೆ ಹಲವು ಬಾರಿ ಸೋನು ಮತ್ತು ಅಕ್ಷತಾ ನಡುವೆ ಗಲಾಟೆ ಆಗಿದೆ. ಅಕ್ಷತಾ ಮೇಲೆ ಸೋನುಗೆ ಮುನಿಸು ಇದ್ದೇ ಇದೆ. ಈ ಸಿಟ್ಟನ್ನ 'ಕಾಲ್ ಸೆಂಟರ್' ಟಾಸ್ಕ್ ನಲ್ಲಿ ಸೋನು ತೀರಿಸಿಕೊಂಡರು.
ಒಂದ್ಕಡೆ 'ಕಾಲ್ ಸೆಂಟರ್' ಟಾಸ್ಕ್ ನಲ್ಲಿ ರಾಕೇಶ್ ಬೇಡದ ಪ್ರಶ್ನೆಗಳನ್ನು ಕೇಳಿ ಎಲ್ಲರ ಟೆಂಪರ್ ರೈಸ್ ಮಾಡಿದ್ದರು. ಹೀಗಾಗಿ, ಗ್ರಾಹಕ ಸೇವಾ ಪ್ರತಿನಿಧಿಯಾಗಿ ರಾಕೇಶ್ ಸೀಟ್ ಮೇಲೆ ಕೂತಾಗ ಜಯಶ್ರೀ, ಸೋನು ಪಾಟೀಲ್ ಮತ್ತು ಧನರಾಜ್ ತಿರುಗೇಟು ಕೊಟ್ಟರು.
ಇನ್ನೂ ಗ್ರಾಹಕ ಸೇವಾ ಪ್ರತಿನಿಧಿಯಾಗಿ ಅಕ್ಷತಾ ಇದ್ದಾಗ, ಸೋನು ಪಾಟೀಲ್ ತರಾಟೆಗೆ ತೆಗೆದುಕೊಂಡರು. ''ರಾಕೇಶ್ ಮತ್ತು ನಿಮ್ಮ ನಡುವೆ ಇರುವ ಸಂಬಂಧ ಏನು.?'' ಅಂತ ಸೋನು ಪಾಟೀಲ್ ಪ್ರಶ್ನಿಸಿದರು. ಮುಂದೆ ಓದಿರಿ...

'ಬಿಗ್ ಬಾಸ್' ನೀಡಿದ್ದ ಲಕ್ಷುರಿ ಬಜೆಟ್ ಟಾಸ್ಕ್
'ಬಿಗ್ ಬಾಸ್ ಕಾಲ್ ಸೆಂಟರ್' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ಈ ವಾರ ನೀಡಲಾಗಿತ್ತು. ಇದರಲ್ಲಿ ಮನೆಯ ಸದಸ್ಯರನ್ನು ಎರಡು ತಂಡಗಳಾಗಿ ವಿಭಜಿಸಲಾಗಿತ್ತು. ಮೊದಲ ಸುತ್ತಿನಲ್ಲಿ ಕವಿತಾ, ಜಯಶ್ರೀ, ಶಶಿ, ಧನರಾಜ್, ನಯನ ಮತ್ತು ಸೋನು ಗ್ರಾಹಕ ಸೇವಾ ಪ್ರತಿನಿಧಿಗಳ ಕಾರ್ಯ ನಿರ್ವಹಿಸಬೇಕಿತ್ತು. ಇನ್ನೂ ರಶ್ಮಿ, ರಾಕೇಶ್, ಅಕ್ಷತಾ, ಆನಂದ್, ನವೀನ್, ಆಂಡ್ರ್ಯೂ ಗ್ರಾಹಕರಾಗಿ ಕರೆ ಮಾಡಬೇಕಿತ್ತು. ಟಾಸ್ಕ್ ನ ಸಂಚಾಲಕರಾಗಿ ಮುರಳಿ ಇದ್ದರು. ಗ್ರಾಹಕರು ಕರೆ ಮಾಡಿ ತಮ್ಮ ದೂರುಗಳು ಅಥವಾ ಯಾವುದೇ ಪ್ರಶ್ನೆಗಳನ್ನು ಕೇಳಬಹುದಿತ್ತು. 'ಬಿಗ್ ಬಾಸ್' ಮನೆಯೊಳಗೆ ನಡೆದಿರುವ ಅಥವಾ ಗ್ರಾಹಕ ಸೇವಾ ಪ್ರತಿನಿಧಿಯ ವೈಯುಕ್ತಿಕ ಪ್ರಶ್ನೆಗಳನ್ನು ಕೇಳಲು 'ಬಿಗ್ ಬಾಸ್' ಅವಕಾಶ ಕಲ್ಪಿಸಿದ್ದರು. ಗ್ರಾಹಕರು ಕೇಳುವ ಎಲ್ಲಾ ಪ್ರಶ್ನೆಗಳಿಗೆ ಗ್ರಾಹಕ ಸೇವಾ ಸಿಬ್ಬಂದಿ ಸಮಾಧಾನದಿಂದ ಉತ್ತರಿಸಬೇಕಿತ್ತು.

ಗ್ರಾಹಕ ಸೇವಾ ಪ್ರತಿನಿಧಿಯಾಗಿ ಅಕ್ಷತಾ
ಮೊದಲ ದಿನ ಗ್ರಾಹಕರಾಗಿದ್ದಾಗ ಅಕ್ಷತಾ... ಗ್ರಾಹಕ ಸೇವಾ ಪ್ರತಿನಿಧಿ ಸೋನು ಪಾಟೀಲ್ ಮೇಲೆ ಪ್ರಶ್ನೆಗಳ ಬಾಣ ಸುರಿಸಿದ್ದರು. ಹೀಗಾಗಿ, ಮಾರನೇ ದಿನ ಅಕ್ಷತಾ ವಿರುದ್ಧ ಸೋನು ಪಾಟೀಲ್ ತೊಡೆ ತಟ್ಟಿ ನಿಂತರು.

ಸೋನು ಮಾಡಿದ ದೂರೇನು.?
''ರಾಕೇಶ್ ಮತ್ತು ಅಕ್ಷತಾ ನಡುವೆ ಇರುವ ಸಂಬಂಧ ಏನು.?'' ಎಂದು ಅಕ್ಷತಾಗೆ ಸೋನು ಪಾಟೀಲ್ ನೇರವಾಗಿ ಕೇಳಿದರು. ಅದಕ್ಕೆ ''ಸ್ನೇಹಿತರು'' ಎಂದು ಅಕ್ಷತಾ ಉತ್ತರಿಸಿದರು. ಆಗ, ''ಬೇರೇನೂ ಇಲ್ವಾ.?'' ಎಂದಾಗ, ''ನನಗೆ ಅವರು ಅಂದ್ರೆ ಇಷ್ಟ'' ಅಂತ ಅಕ್ಷತಾ ಹೇಳಿದರು.

ಸುಳ್ಳುಬುರುಕಿ ಯಾರು.?
''ನನಗೆ ಸುಳ್ಳುಬುರುಕಿ ಅಂತ ಹೇಳಿದ್ರಿ. ನೀವು ನಾಮಿನೇಷನ್ ನಿಂದ ಸೇಫ್ ಆದಾಗ, ''ಐ ಲವ್ ಯು ರಾಕಿ'' ಅಂತ ಎಲ್ಲರ ಮುಂದೆ ಹೇಳಿದ್ರಿ. ಆ ಕಡೆ ಲವ್ ಅಂತೀರಾ.. ಈ ಕಡೆ ಸ್ನೇಹಿತ ಅಂತೀರಿ.. ಈಗ ಸುಳ್ಳುಬುರುಕಿ ನೀವೇ ಅಲ್ವಾ.?'' ಅಂತ ಸೋನು ಪಾಟೀಲ್ ಕೇಳಿದರು. ಅದಕ್ಕೆ ಅಕ್ಷತಾ ಕೊಟ್ಟ ಉತ್ತರ - ''ಸ್ನೇಹಿತನಾಗಿ ರಾಕೇಶ್ ನ ನಾನು ಲವ್ ಮಾಡುವೆ'' ಎಂದರು.


Click it and Unblock the Notifications











