'ನನ್ನ ಜೀವನವನ್ನು ಹಾಳು ಮಾಡಿಕೊಂಡೆ' ಎಂದು ಕಣ್ಣೀರು ಸುರಿಸಿದ ಅಕ್ಷತಾ.!

Recommended Video

Bigg Boss Kannada Season 6: ನನ್ನ ಜೀವನವನ್ನು ಹಾಳು ಮಾಡಿಕೊಂಡೆ' ಎಂದು ಕಣ್ಣೀರು ಸುರಿಸಿದ ಅಕ್ಷತಾ.!

'ಬಿಗ್ ಬಾಸ್' ಕೊಟ್ಟಿದ್ದ 'ಕಾಲ್ ಸೆಂಟರ್' ಟಾಸ್ಕ್ ನಲ್ಲಿ ರಾಕೇಶ್ ಮತ್ತು ಅಕ್ಷತಾ ನಡುವಿನ ಸಂಬಂಧದ ಬಗ್ಗೆ ಧನರಾಜ್, ಜಯಶ್ರೀ ಮತ್ತು ಸೋನು ಪಾಟೀಲ್ ನೇರವಾಗಿ ಆರೋಪ ಮಾಡಿದರು.

''ನಮ್ಮಿಬ್ಬರ ನಡುವೆ ಸ್ನೇಹ ಇದೆ'', ''ಸ್ನೇಹಿತನಾಗಿ ನಾನು ರಾಕೇಶ್ ನ ಲವ್ ಮಾಡುವೆ'' ಎಂದು ರಾಕೇಶ್ ಮತ್ತು ಅಕ್ಷತಾ ಚಟುವಟಿಕೆಯಲ್ಲಿ ಸಮಾಧಾನದಿಂದ ಉತ್ತರ ಕೊಟ್ಟಿದ್ದರು.

ಚಟುವಟಿಕೆ ಮುಗಿದ ಮೇಲೆ ಕೊಂಚ ಅಪ್ ಸೆಟ್ ಆದಂತೆ ಕಂಡುಬಂದ ಅಕ್ಷತಾ, ಧನರಾಜ್ ಮತ್ತು ರಾಕೇಶ್ ಜೊತೆಗೆ ಕಿತ್ತಾಡಿಕೊಂಡ ಬಳಿಕ ಕಣ್ಣೀರು ಸುರಿಸಲು ಆರಂಭಿಸಿದರು.

''ನಾನು 'ಬಿಗ್ ಬಾಸ್' ಮನೆಗೆ ಯಾಕಾದರೂ ಬಂದ್ನೋ.? ಮರ್ಯಾದೆ ಕಳೆದುಕೊಳ್ಳಲು ಇಲ್ಲಿಗೇ ಬರಬೇಕಿತ್ತಾ.? ಇಲ್ಲಿ ಬಂದು ನನ್ನ ಜೀವನವನ್ನು ಹಾಳು ಮಾಡಿಕೊಂಡೆ'' ಎಂದು ಕಣ್ಣೀರು ಹಾಕಿದರು ರಂಗಭೂಮಿ ಕಲಾವಿದೆ ಅಕ್ಷತಾ ಪಾಂಡವಪುರ. ಮುಂದೆ ಓದಿರಿ...

ಬೇರೆ ಯಾರೂ ಅರ್ಥ ಮಾಡಿಕೊಂಡಿಲ್ವಂತೆ.!

ಬೇರೆ ಯಾರೂ ಅರ್ಥ ಮಾಡಿಕೊಂಡಿಲ್ವಂತೆ.!

ಧನರಾಜ್ ಜೊತೆಗೆ ವಾಗ್ವಾದ ನಡೆದಾಗ, ''ಈ ಮನೆಯಲ್ಲಿ ನನ್ನನ್ನ ಯಾರೂ ಅರ್ಥ ಮಾಡಿಕೊಂಡಿಲ್ಲ. ರಾಕೇಶ್ ಒಬ್ಬನ್ನ ಬಿಟ್ಟು. ಅದಕ್ಕೆ ಅವನ ಜೊತೆ ನಾನು ಜಾಸ್ತಿ ಸಮಯ ಕಳೆಯುತ್ತೇನೆ'' ಎಂದರು ಅಕ್ಷತಾ.

ಜೀವನ ಹಾಳು ಮಾಡಿಕೊಂಡೆ.!

ಜೀವನ ಹಾಳು ಮಾಡಿಕೊಂಡೆ.!

ಧನರಾಜ್ ಜೊತೆಗೆ ಮಾತಿನ ಸಮರ ನಡೆದ್ಮೇಲೆ, ''ನನಗೆ ಯಾವ ಬಿಗ್ ಬಾಸ್ ಕೂಡ ಬೇಡ. ನಾನು ಯಾಕೆ ಬರಬೇಕಿತ್ತು ಇಲ್ಲಿಗೆ.? ನನಗೆ ಹೆಸರು ಬೇಡ, ಜನಪ್ರಿಯತೆ ಬೇಡ. ನಾನು ಇಲ್ಲಿಗೆ ಬಂದು ನನ್ನ ಮರ್ಯಾದೆಯನ್ನ ನಾನೇ ಕಳೆದುಕೊಳ್ಳುತ್ತಿದ್ದೇನೆ. ಇಲ್ಲಿ ನಾನೇ ಸಂತ್ರಸ್ಥೆ ಆಗಿರುವುದು. ವೀಕೆಂಡ್ ನಲ್ಲಿ ನನ್ನದೇ ತಪ್ಪು ಅನ್ನೋ ತರಹ ಮಾತನಾಡುತ್ತಾರೆ. ಇಲ್ಲಿ ಬಂದು ನನ್ನ ಜೀವನವನ್ನು ಹಾಳು ಮಾಡಿಕೊಂಡೆ'' ಎಂದು ಕಣ್ಣೀರಿಟ್ಟರು ಅಕ್ಷತಾ.

ರಾಕೇಶ್ ಮತ್ತು ಅಕ್ಷತಾ ನಡುವೆ ಕಿತ್ತಾಟ

ರಾಕೇಶ್ ಮತ್ತು ಅಕ್ಷತಾ ನಡುವೆ ಕಿತ್ತಾಟ

ಲಕ್ಷುರಿ ಬಜೆಟ್ ನಲ್ಲಿ ಸಸ್ಯಹಾರಿಗಳನ್ನು ಪರಿಗಣಿಸಿಲ್ಲ ಅಂತ ರಾಕೇಶ್ ಮತ್ತು ಅಕ್ಷತಾ ನಡುವೆ ಕಿತ್ತಾಟ ನಡೆಯಿತು. ಇದರಿಂದ ಅಕ್ಷತಾ ಮತ್ತಷ್ಟು ಬೇಸರಗೊಂಡರು.

ಮಾರ್ಯದೆ ಕಳೆದುಕೊಳ್ಳಲು ಇಲ್ಲಿಗೆ ಬರಬೇಕಿತ್ತಾ.?

ಮಾರ್ಯದೆ ಕಳೆದುಕೊಳ್ಳಲು ಇಲ್ಲಿಗೆ ಬರಬೇಕಿತ್ತಾ.?

''ಯಾಕಾದ್ರೂ ಬಂದೆ ನಾನು ಇಲ್ಲಿಗೆ.? ಮರ್ಯಾದೆ ಕಳೆದುಕೊಳ್ಳಲು ಇಲ್ಲಿಗೆ ಬರಬೇಕಾ.?'' ಎನ್ನುತ್ತಾ ಅಕ್ಷತಾ ಬೇಸರ ಮಾಡಿಕೊಳ್ಳುತ್ತಿದ್ದರು. ಆಗ ಅಕ್ಷತಾ ರನ್ನ ರಾಕೇಶ್ ಸಮಾಧಾನ ಪಡಿಸಿದರು.

More from Filmibeat

English summary
Bigg Boss Kannada 6: Day 39: Akshata becomes emotional.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X