ಅರೇ.. ರಾಕೇಶ್ ಬಗ್ಗೆ ಅಕ್ಷತಾ ಹೀಗೆ ಹೇಳಿದ್ದು ಯಾಕೆ.?

'ಬಿಗ್ ಬಾಸ್' ಮನೆಯ ಸ್ಪರ್ಧಿಗಳಾದ ರಾಕೇಶ್ ಮತ್ತು ಅಕ್ಷತಾಗೆ 'ಗಂಡ-ಹೆಂಡತಿ' ಅಂತ ಆಂಡ್ರ್ಯೂ ಹೇಳಿದ್ದಕ್ಕೋ ಏನೋ... 'ಕಾಲ್ ಸೆಂಟರ್' ಚಟುವಟಿಕೆಯಲ್ಲಿ ಜಯಶ್ರೀ, ಧನರಾಜ್ ಮತ್ತು ಸೋನು ಪಾಟೀಲ್ 'ರಾಕೇಶ್-ಅಕ್ಷತಾ' ನಡುವಿನ ಸಂಬಂಧದ ಬಗ್ಗೆ ಬೆಟ್ಟು ಮಾಡಿ ತೋರಿಸಿದ್ದಕ್ಕೋ ಏನೋ...

ಒಟ್ನಲ್ಲಿ 'ಕೆಟ್ಟ ಹೆಸರು ಬರುತ್ತಿದೆ' ಎಂಬ ಅರಿವಾದ್ಮೇಲೆ ಎಲ್ಲರ ಮುಂದೆ ಬೇಕು ಬೇಕು ಅಂತಲೇ ''ಬಿಗ್ ಬಾಸ್' ಮನೆಯಿಂದ ಆಚೆ ಹೋದ್ಮೇಲೆ ನಾನು ರಾಕೇಶ್ ನ ಭೇಟಿ ಮಾಡಲ್ಲ'' ಅಂತ ಅಕ್ಷತಾ ಹೇಳಿದರು.

ಸಾಲದಕ್ಕೆ, ''ಇದು ಆಟ.. ಅದು ಜೀವನ'' ಎಂಬ ಕಾರಣವನ್ನೂ ಕೊಟ್ಟರು. ಅಕ್ಷತಾ ಆಡಿದ ಈ ಮಾತನ್ನು ಕೇಳಿ ರಾಕೇಶ್ ತಬ್ಬಿಬ್ಬಾದರು. ಬಾಕಿ ಸ್ಪರ್ಧಿಗಳು ತಲೆಗೆ ಹುಳ ಬಿಟ್ಟುಕೊಂಡರು.

''ಐ ಲವ್ ಯು ರಾಕಿ'' ಅಂತ ಎಲ್ಲರ ಮುಂದೆ ಹೇಳಿದ್ದು ಅಕ್ಷತಾ. ಇದೀಗ ಅದೇ ಅಕ್ಷತಾ ''ಹೊರಗೆ ರಾಕೇಶ್ ನ ಭೇಟಿ ಮಾಡಲ್ಲ. ಯಾಕಂದ್ರೆ, ಅದು ಜೀವನ. ಇದು ಆಟ'' ಅಂತ ಹೇಳಿದ್ದಾರೆ. ಒಂದೊಂದು ಬಾರಿ ಒಂದೊಂದು ರೀತಿ ಮಾತನಾಡುವ ಅಕ್ಷತಾ ರನ್ನ ನಂಬಲೇಬಾರದು ಅನ್ನೋದು ಮುರಳಿ ಅಭಿಪ್ರಾಯ. ಇದಕ್ಕೆ ನೀವೇನಂತೀರಿ.?

'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆ

'ಬಿಗ್ ಬಾಸ್' ನೀಡಿದ್ದ ವಿಶೇಷ ಚಟುವಟಿಕೆ

ಸ್ಪರ್ಧಿಗಳಿಗೆಲ್ಲಾ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಅದೇ 'ವಿಶೇಷ ಮತ್ತು ಸನ್ನಿವೇಶ'. ಇದರ ಅನುಸಾರ, ನೀಡಲಾಗುವ ಪ್ರಶ್ನೆಗಳಿಗೆ ಸ್ಪರ್ಧಿಗಳು ಉತ್ತರ ಮತ್ತು ಸೂಕ್ತ ಕಾರಣ ನೀಡಬೇಕಿತ್ತು. ಚಟುವಟಿಕೆ ಮುಗಿದ್ಮೇಲೆ, ಒಂದು ಪ್ರಶ್ನೆಯನ್ನ ಇಟ್ಟುಕೊಂಡು ಅಕ್ಷತಾ ಮಾತಿಗಿಳಿದರು.

ಅಕ್ಷತಾ ಹೇಳಿದ್ದೇನು.?

ಅಕ್ಷತಾ ಹೇಳಿದ್ದೇನು.?

''ಬಿಗ್ ಬಾಸ್ ಮನೆಯಿಂದ ಆಚೆ ಹೋದ್ಮೇಲೆ ಯಾರನ್ನ ನೀವು ನೋಡಲು, ಭೇಟಿ ಮಾಡಲು ಇಷ್ಟ ಪಡಲ್ಲ'' ಎಂಬ ಪ್ರಶ್ನೆ ನನಗೆ ಬಂದಿದ್ದರೆ, ನಾನು ರಾಕೇಶ್ ಹೆಸರು ಹೇಳುತ್ತಿದ್ದೆ'' ಎಂದು ಎಲ್ಲರ ಮುಂದೆ ಅಕ್ಷತಾ ಹೇಳಿದರು.

ಕಾರಣ ಏನು.?

ಕಾರಣ ಏನು.?

''ಯಾಕೆ ರಾಕೇಶ್ ನ ಭೇಟಿ ಮಾಡಲ್ಲ'' ಅಂತ ಎಲ್ಲರೂ ಪ್ರಶ್ನಿಸಿದಾಗ, ಅಕ್ಷತಾ ಕೊಟ್ಟ ಉತ್ತರ - ''ಅದು ಜೀವನ... ಇದು ಆಟ''.

ಶಾಕ್ ಆದ ಶಶಿ

ಶಾಕ್ ಆದ ಶಶಿ

ಅಕ್ಷತಾ ಕೊಟ್ಟ ಉತ್ತರ ನೋಡಿ ಶಾಕ್ ಆದ ಶಶಿ, ''ಈಕೆ ರಾಕೇಶ್ ನ ಬಳಸಿಕೊಳ್ಳುತ್ತಿದ್ದಾರಾ.? ಐ ಲವ್ ಹಿಮ್ ಅಂತ ಹೇಳಿದವರು ಈಗ ಹೀಗೆ ಹೇಳಿದ್ರೆ.? ಇದು ಡ್ಯಾಮೇಜಿಂಗ್ ಹೇಳಿಕೆ'' ಎಂದರು.

ಗೇಮ್ ಪ್ಲಾನ್

ಗೇಮ್ ಪ್ಲಾನ್

''ಈ ತರಹ ಲವ್ ಮಾಡಿಕೊಂಡು ಇದ್ದರೆ, ಬಿಗ್ ಬಾಸ್ ಮನೆಯಲ್ಲಿ ಜಾಸ್ತಿ ದಿನ ಇರಬಹುದು ಎಂಬ ಪ್ಲಾನಿಂಗ್ ಇರಬಹುದು ಅವರಿಗೆ'' ಅನ್ನೋದು ಧನರಾಜ್ ಲೆಕ್ಕಾಚಾರ.

ಮಾನಸಿಕ ಅಸ್ತಿರತೆ

ಮಾನಸಿಕ ಅಸ್ತಿರತೆ

''ರಾಕೇಶ್ ಗುಳ್ಟು ಅಲ್ಲ. 'ನಾನಿನ್ನೂ ಓಪನಪ್ ಆಗಿಲ್ಲ' ಅಂತ ಅಕ್ಷತಾ ಹೇಳಿದ್ದರು. ಕೆಲವು ಮಾನಸಿಕ ಅಸ್ತಿರತೆ ಇರುವ ವ್ಯಕ್ತಿಗಳ ಮಾತನ್ನು ಗಣನೆಗೆ ತೆಗೆದುಕೊಳ್ಳಲು ಆಗುವುದಿಲ್ಲ'' ಎಂದುಬಿಟ್ಟರು ಮುರಳಿ.

More from Filmibeat

English summary
Bigg Boss Kannada 6: Day 39: I would not like to meet Rakesh after getting out of Bigg Boss house says Akshata.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X