ಇಷ್ಟು ದಿನ ಕಳೆದ ಮೇಲೆ ಈಗ ಅಕ್ಷತಾ ಮನದಲ್ಲಿ ಮೂಡಿದೆ 'ಭಯ'.! ಯಾಕೆ.?
'ಬಿಗ್ ಬಾಸ್' ಮನೆಯೊಳಗೆ ರಾಕೇಶ್-ಅಕ್ಷತಾ ನಡುವಿನ ಗಾಸಿಪ್ ಇಂದು ನಿನ್ನೆಯದ್ದಲ್ಲ. ಮೊದಲ ವಾರವೇ 'ಬಿಗ್ ಬಾಸ್' ಮನೆಯಲ್ಲೇ ರಾಕೇಶ್-ಅಕ್ಷತಾ ಬಗ್ಗೆ ಗುಸುಗುಸು ಕೇಳಿಬಂದಿತ್ತು.
ಕಿಚ್ಚ ಸುದೀಪ್ ಕೂಡ ರಾಕೇಶ್ ಕಾಲೆಳೆದಿದ್ದರು. ಆಗ ''ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ'' ಅಂತ ಎಲ್ಲರ ಮುಂದೆ ಹೇಳಿದ್ದ ಅಕ್ಷತಾ ಇದೀಗ ''ಭಯ ಆಗುತ್ತಿದೆ'' ಎಂದಿದ್ದಾರೆ.
ಎಲ್ಲರಿಗಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿ ರಾಕೇಶ್-ಅಕ್ಷತಾ ಗಂಡ-ಹೆಂಡತಿ ಅಂತ ಆಂಡ್ರ್ಯೂ ಕಾಮೆಂಟ್ ಮಾಡಿದ್ದರು. ಇನ್ನೂ 'ಕಾಲ್ ಸೆಂಟರ್' ಟಾಸ್ಕ್ ನಲ್ಲಿ ಬೇಡದ ಪ್ರಶ್ನೆಗಳನ್ನು ಕೇಳಿದ ಪರಿಣಾಮ, ಖುದ್ದು ರಾಕೇಶ್ ಟಾರ್ಗೆಟ್ ಆದರು.

ಜಯಶ್ರೀ, ಧನರಾಜ್ ಮತ್ತು ಸೋನು ಪಾಟೀಲ್... ರಾಕೇಶ್-ಅಕ್ಷತಾ ನಡುವಿನ ಸಂಬಂಧದ ಬಗ್ಗೆ ಪ್ರಶ್ನಿಸಿದರು. ಆಗ ''ಕೆಟ್ಟ ಹೆಸರು ಬರುತ್ತಿದೆ. ಇಲ್ಲಿಗೆ ಬಂದು ನನ್ನ ಜೀವನ ಹಾಳು ಮಾಡಿಕೊಂಡೆ'' ಎನ್ನುತ್ತಾ ಅಕ್ಷತಾ ಕಣ್ಣೀರು ಹಾಕಿದ್ದರು.
ಇನ್ನೂ 'ಬಿಗ್ ಬಾಸ್' ನೀಡಿದ್ದ 'ಪರಕಾಯ ಪ್ರವೇಶ' ಚಟುವಟಿಕೆಯಲ್ಲಿ ನಯನ-ಧನರಾಜ್ ಮತ್ತು ಮುರಳಿ-ನವೀನ್... ರಾಕೇಶ್ ಮತ್ತು ಅಕ್ಷತಾ ಪಾತ್ರ ನಿರ್ವಹಿಸಿದ್ದರು. ಆ ಎರಡು ಆಕ್ಟ್ ಗಳನ್ನು ನೋಡಿ ಅಕ್ಷತಾ ಅತೀವ ಬೇಸರ ಮಾಡಿಕೊಂಡಿದ್ದಾರೆ.
''ಇಲ್ಲಿ ಏನೂ ಮಾತನಾಡುವುದು ಬೇಡ. ಹಗ್ ಮಾಡುವುದು ಬೇಡ. ಯಾರು ಯಾರಿಗೂ ಸಮಾಧಾನ ಮಾಡುವುದು ಬೇಡ. ಇಲ್ಲಿ ಫ್ರೆಂಡ್ ಶಿಪ್ ಗೆ ಬೆಲೆ ಇಲ್ಲ. ಹೊರಗಡೆ ನನಗೆ ಸಖತ್ ಕಷ್ಟ ಆಗ್ಬಿಡುತ್ತೆ. ನನಗೆ ಭಯ ಆಗಿದೆ'' ಎಂದು ತಮ್ಮ ಆತಂಕವನ್ನು ರಾಕೇಶ್ ಮುಂದೆ ಅಕ್ಷತಾ ಹೊರ ಹಾಕಿದ್ದಾರೆ.
ಅಕ್ಷತಾ ಮತ್ತು ರಾಕೇಶ್ ವಿಚಾರವನ್ನು ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಹೇಗೆ ಹ್ಯಾಂಡಲ್ ಮಾಡ್ತಾರೆ ಅಂತ ನೋಡಬೇಕು.


Click it and Unblock the Notifications











