ಇಂದು 'ಬಿಗ್ ಬಾಸ್' ಮನೆಯಿಂದ ರಾಕೇಶ್ ಔಟ್ ಆದರೆ.?
'ಬಿಗ್ ಬಾಸ್' ಮನೆಯಲ್ಲಿ ಈ ಇಡೀ ವಾರ ಸದ್ದು ಮಾಡಿದ್ದು ರಾಕೇಶ್ ಮತ್ತು ಅಕ್ಷತಾ. ಇವರಿಬ್ಬರನ್ನು 'ಗಂಡ-ಹೆಂಡತಿ' ಅಂತ ಆಂಡ್ರ್ಯೂ ಕರೆದರು. ಅದಾದ್ಮೇಲೆ ಬಂದ 'ಕಾಲ್ ಸೆಂಟರ್' ಚಟುವಟಿಕೆಯಲ್ಲಿ ಜಯಶ್ರೀ, ಧನರಾಜ್ ಮತ್ತು ಸೋನು ಪಾಟೀಲ್ ನೇರವಾಗಿ ರಾಕೇಶ್-ಅಕ್ಷತಾ ನಡುವಿನ ಸಂಬಂಧದ ಬಗ್ಗೆ ಬೆಟ್ಟು ಮಾಡಿ ತೋರಿಸಿದರು.
ಇದಾದ್ಮೇಲೆ, ಅಕ್ಷತಾ ಕಣ್ಣೀರು ಹಾಕಿದ್ದು... ರಾಕೇಶ್ ಸಮಾಧಾನ ಮಾಡಿದ್ದು ಇದ್ದೇ ಇದೆ.
ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಲು ರಾಕೇಶ್ ನಾಮಿನೇಟ್ ಆಗಿದ್ದಾರೆ. ''ಒಂದ್ವೇಳೆ ಈ ವಾರ ರಾಕೇಶ್ ಔಟ್ ಆದರೆ ಹೇಗೆ ಫೀಲ್ ಮಾಡುತ್ತೀಯಾ.?'' ಎಂದು ಅಕ್ಷತಾ ಬಳಿ ರಾಪಿಡ್ ರಶ್ಮಿ ಪ್ರಶ್ನೆ ಮಾಡಿದರು.
ಆಗ, ''ಏನೂ ಆಗಲ್ಲ. ಮೂರು ದಿನ ಸ್ವಲ್ಪ ಕಷ್ಟ ಆಗಬಹುದು. ಆಗಾಗ ಮಿಸ್ ಮಾಡಿಕೊಳ್ಳುವೆ ಅಷ್ಟೇ. ಏನೂ ಆಗಲ್ಲ.. ನಾವು ಹೇಗಿರ್ತೀವಿ. ಹಾಗೇ ಆಟ ಆಡುತ್ತೀವಿ'' ಎಂದು ಉತ್ತರ ಕೊಟ್ಟಿದ್ದಾರೆ ಅಕ್ಷತಾ ಪಾಂಡವಪುರ.

''ಒಂದ್ವೇಳೆ ಮತ್ತೊಮ್ಮೆ ನಾಮಿನೇಷನ್ ನಲ್ಲಿ ನಿಮ್ಮಿಬ್ಬರನ್ನು ಕರೆದು ಇಬ್ಬರಲ್ಲಿ ಒಬ್ಬರು ಸೇಫ್ ಆಗಬೇಕು ಎಂದಾಗ ಯಾರು ಸೇಫ್ ಆಗ್ತೀರಾ.?'' ಎಂದು ರಶ್ಮಿ ಪ್ರಶ್ನಿಸಿದರು.
ಅದಕ್ಕೆ, ''ರಾಕೇಶ್ ನಾಮಿನೇಟ್ ಆಗ್ತೀನಿ ಅಂತ ಈಗಾಗಲೇ ಹೇಳಿದ್ದಾನೆ. ಅವನು ಫೈನಲ್ ವರೆಗೂ ಇದ್ದು, ಗೆಲ್ಲಲಿ ಅನ್ನೋದೇ ನನ್ನ ಆಶಯ'' ಎಂದ ಅಕ್ಷತಾ, ''ನಾನು ಗೆಲ್ಲಬೇಕು ಅನ್ನೋದು ನನ್ನ ತಲೆಯಲ್ಲಿ ಬರಲ್ಲ'' ಅಂತ ಹೇಳಿದರು.
ಒಂದೊಂದು ಬಾರಿ ಒಂದೊಂದು ಹೇಳಿಕೆ ನೀಡುವುದರಿಂದ ಅಕ್ಷತಾ ಹಾಗೂ ರಾಕೇಶ್ ಬಗ್ಗೆ 'ಬಿಗ್ ಬಾಸ್' ಮನೆ ಮಂದಿ ಗೊಂದಲಕ್ಕೀಡಾಗಿದ್ದಾರೆ.


Click it and Unblock the Notifications











