ಇಂದು ಸೇಫ್ ಆದರೆ, ಇನ್ನೆರಡು ವಾರ ಕವಿತಾ ಗೌಡ ಕೆಮ್ಮಂಗಿಲ್ಲ.!
'ಚಿನ್ನು' ಖ್ಯಾತಿಯ ಕವಿತಾ ಗೌಡ ಪಾಲಿಗೆ ಕಳೆದ ವಾರ ಅಷ್ಟೇನೂ ಚೆನ್ನಾಗಿರಲಿಲ್ಲ. ಹಾಗ್ನೋಡಿದ್ರೆ, ಕಳೆದ ಇಡೀ ವಾರ 'ಬಿಗ್ ಬಾಸ್' ಮನೆಯಲ್ಲಿ ಟಾರ್ಗೆಟ್ ಆಗಿದ್ದು ಕವಿತಾ ಗೌಡ.
ನಾಮಿನೇಷನ್ ನಲ್ಲಿ ಆಂಡ್ರ್ಯೂ ಜೊತೆಗೆ ಒಪ್ಪಂದ ಮಾಡಿಕೊಂಡ ಕವಿತಾ ಬಳಿಕ 'ಬಿಗ್ ಬಾಸ್' ಮನೆಯಲ್ಲಿ ರಂಪ-ರಾಮಾಯಣ ಮಾಡಿಕೊಂಡರು. ಕವಿತಾ-ಆಂಡ್ರ್ಯೂ ಮನಸ್ತಾಪದಿಂದಾಗಿ ಶಶಿ ಕೈಮೂಳೆ ಕೂಡ ಮುರಿಯಿತು.
ಇನ್ನೂ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಕೂಡ ಕವಿತಾ ಗೌಡ ಕಡೆಗೆ ಬೆಟ್ಟು ಮಾಡಿ ತೋರಿಸಿದ್ದರು. ಹೆಚ್ಚು ತಪ್ಪು ಕವಿತಾ ಕಡೆ ಇದ್ದ ಕಾರಣ, ಈ ವಾರ ಕವಿತಾರನ್ನ ಮನೆ ಸದಸ್ಯರು ಡೇಂಜರ್ ಝೋನ್ ಗೆ ತಳ್ಳಿದ್ದಾರೆ.
ಆದ ಘಟನೆಗಳಿಗೆ ಕುಗ್ಗದೆ, ಚಟುವಟಿಕೆಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕವಿತಾ ಈ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಮುಂದೆ ಓದಿರಿ...

ಕ್ಯಾಪ್ಟನ್ ಆಗಲು ಅರ್ಹತೆ ಪಡೆದಿದ್ದವರು ಯಾರು.?
'ಕಾಲ್ ಸೆಂಟರ್' ಲಕ್ಷುರಿ ಬಜೆಟ್ ಟಾಸ್ಕ್ ನಲ್ಲಿ ಗೆದ್ದು ಕ್ಯಾಪ್ಟನ್ ಆಗಲು ಧನರಾಜ್, ಸೋನು ಪಾಟೀಲ್, ಕವಿತಾ, ಜಯಶ್ರೀ, ಶಶಿ ಮತ್ತು ನಯನ ಅರ್ಹತೆ ಪಡೆದಿದ್ದರು.

ವಿಶೇಷ ಚಟುವಟಿಕೆ
ಕ್ಯಾಪ್ಟನ್ ಆಯ್ಕೆಗಾಗಿ ಪಿರಮಿಡ್ ಕಟ್ಟುವ ವಿಶೇಷ ಚಟುವಟಿಕೆಯನ್ನು 'ಬಿಗ್ ಬಾಸ್' ನೀಡಿದ್ದರು. ಕೊಡಲಾಗುವ ಪ್ಲಾಸ್ಟಿಕ್ ಗ್ಲಾಸ್ ಗಳನ್ನು ಬಳಸಿ ಕ್ಯಾಪ್ಟನ್ ಪ್ರತಿಸ್ಪರ್ಧಿಗಳು ಪಿರಮಿಡ್ ಕಟ್ಟಬೇಕಿತ್ತು. ಕ್ಯಾಪ್ಟನ್ ಆಗುವ ಅರ್ಹತೆ ಯಾರಿಗಿಲ್ಲ ಅಂತ ಇತರೆ ಸದಸ್ಯರಿಗೆ ಅನಿಸುತ್ತದೆಯೋ, ಅವರು ಚೆಂಡುಗಳನ್ನು ಎಸೆದು ಪಿರಮಿಡ್ ಗಳನ್ನು ಉರುಳಿಸಬಹುದಿತ್ತು.

ಗೆದ್ದ ಕವಿತಾ
ಪಿರಮಿಡ್ ಕಟ್ಟುವ ಚಟುವಟಿಕೆಯಲ್ಲಿ ಗೆದ್ದು ಕವಿತಾ ಮನೆಯ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದಾರೆ. ಸದ್ಯ ಇಡೀ ಮನೆಯ ಜವಾಬ್ದಾರಿ ಅವರ ಹೆಗಲ ಮೇಲಿದೆ.

ಇನ್ನೆರಡು ವಾರ ಕೆಮ್ಮಂಗಿಲ್ಲ.!
ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರಗೆ ಹೋಗಲು ಕವಿತಾ ನಾಮಿನೇಟ್ ಆಗಿದ್ದಾರೆ. ಇಂದು ಎಲಿಮಿನೇಷನ್ ನಿಂದ ಕವಿತಾ ಬಚಾವ್ ಆದರೆ, ಇನ್ನೆರಡು ವಾರ ಆರಾಮಾಗಿ ಆಕೆ 'ಬಿಗ್ ಬಾಸ್' ಮನೆಯಲ್ಲಿ ಇರಬಹುದು.


Click it and Unblock the Notifications











