ಮಾಡಿದ ತಪ್ಪಿಗೆ ಸುದೀಪ್ ಮುಂದೆ ಕ್ಷಮೆ ಕೇಳಿದ ಆಂಡ್ರ್ಯೂ.!
ಪ್ರತಿ ವಾರ ಒಂದಲ್ಲಾ ಒಂದು ತಂಟೆ-ತರ್ಲೆ-ಕಿತ್ತಾಟಗಳಿಂದಲೇ ಸದ್ದು ಮಾಡುತ್ತಿರುವ 'ಬಿಗ್ ಬಾಸ್ ಕನ್ನಡ-6' ಸ್ಪರ್ಧಿ ಆಂಡ್ರ್ಯೂ. ಕಳೆದ ವಾರವಷ್ಟೇ ಕವಿತಾ-ಆಂಡ್ರ್ಯೂ ನಡುವೆ ದೊಡ್ಡ ವಿವಾದ ಆಗಿತ್ತು.
ಎಲ್ಲರ ಮುಂದೆ ಕ್ಷಮೆ ಕೇಳಿ ವಿವಾದಕ್ಕೆ ಕವಿತಾ ಶುಭಂ ಹಾಡುತ್ತಿದ್ದಂತೆಯೇ, ಸಿಹಿಯಾದ ಶಾವಿಗೆ ಪಾಯಸಕ್ಕೆ ಖಾರದ ಪುಡಿ ಬೆರೆಸಿ ಇಡೀ ಮನೆಯ ಕೆಂಗಣ್ಣಿಗೆ ಆಂಡ್ರ್ಯೂ ಗುರಿಯಾಗಿದ್ದರು.
''ಫನ್ ಗಾಗಿ ಹೀಗೆ ಮಾಡಿದ್ದು'' ಎಂದು ಅಂದು ಸಮಜಾಯಿಷಿ ಕೊಟ್ಟಿದ್ದ ಆಂಡ್ರ್ಯೂ ಇದೀಗ ಅದೇ ವಿಷಯಕ್ಕೆ ಕಿಚ್ಚ ಸುದೀಪ್ ಮುಂದೆ ಕ್ಷಮೆ ಕೇಳಿದ್ದಾರೆ. 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಸುದೀಪ್ ಬೆಂಡೆತ್ತಿದ್ಮೇಲೆ, ಆಂಡ್ರ್ಯೂಗೆ ತಮ್ಮ ತಪ್ಪಿನ ಅರಿವಾಯಿತು. ಮುಂದೆ ಓದಿರಿ...

ಆಂಡ್ರ್ಯೂ ಸಮರ್ಥಿಸಿಕೊಂಡಿದ್ದು ಹೇಗೆ.?
ಖಾರದ ಪುಡಿ ವಿಚಾರದ ಬಗ್ಗೆ ಸುದೀಪ್ ಪ್ರಶ್ನಿಸಿದಾಗ, ''ಟಾಸ್ಕ್ ಪ್ರಕಾರ, ತೀರ್ಪುಗಾರರಿಗೆ ಅಡುಗೆ ಬಗ್ಗೆ ಏನೂ ಗೊತ್ತಿಲ್ಲ. ಹೀಗಾಗಿ ಸ್ವಲ್ಪ ಇಂಟ್ರೆಸ್ಟಿಂಗ್ ಮಾಡಲು ಖಾರದ ಪುಡಿ ಹಾಕಿದೆ. ಅಡುಗೆ ಹಾಳು ಮಾಡಬೇಕು, ಯಾರು ತಿನ್ನಬಾರದು ಅನ್ನೋದು ನನ್ನ ಉದ್ದೇಶ ಆಗಿರಲಿಲ್ಲ'' ಎಂದು ಆಂಡ್ರ್ಯೂ ಸಮರ್ಥಿಸಿಕೊಂಡರು.

ಪಶ್ಚಾತ್ತಾಪ ಕಾಣಲಿಲ್ಲ
''ನೀವು ಭಾವನಾತ್ಮಕ ನಿರೂಪಕರು. ಯಾರಾದರೂ ತಿನ್ನಲಿ ಅನ್ನೋ ಕಾರಣಕ್ಕೆ ಕಷ್ಟ ಪಟ್ಟು ಅಡುಗೆ ಮಾಡಿರುತ್ತಾರೆ. ನಿಮ್ಮಲ್ಲಿ ಪಶ್ಚಾತ್ತಾಪ ಎಲ್ಲೂ ಕಾಣಲೇ ಇಲ್ಲ. ಡಬ್ಬಾ ನನ್ ಮಕ್ಳಾ ಈಗ ಬನ್ನಿ ಮಾತನಾಡಿ ಅಂತೀರಾ'' ಎಂದು ಸುದೀಪ್ ಕೇಳಿದಾಗ, ''ತಪ್ಪಾಯ್ತು ಸರ್, ಕ್ಷಮಿಸಿ..'' ಎಂದರು ಆಂಡ್ರ್ಯೂ.

ವಿಕೃತ ಮನಸ್ಸು
''ಎರಡನೇ ವಾರ 'ವಿಕೃತ ಮನಸ್ಸು' ಎಂಬ ಬೋರ್ಡ್ ನಿಮಗೆ ಬಂದಿತ್ತು. 'ಎಲ್ಲಾ ಒಪ್ಪಿಕೊಳ್ಳುವೆ, ಇದೊಂದನ್ನ ಬಿಟ್ಟು' ಅಂತ ನೀವೇ ಹೇಳಿದ್ರಿ. ಇದನ್ನ ನಾನು ನಿಮಗೆ ನೆನಪು ಮಾಡುತ್ತಿರುವೆ'' ಎಂದು ಸುದೀಪ್ ಹೇಳಿದಾಗ, ''ಇನ್ಮೇಲೆ ಹೀಗೆ ಮಾಡಲ್ಲ ಸರ್'' ಎಂದರು ಆಂಡ್ರ್ಯೂ.

ಇನ್ಮೇಲೆ ಬದಲಾಗುತ್ತಾರಾ ಆಂಡ್ರ್ಯೂ.?
ಇಲ್ಲಿಯವರೆಗೂ ಪ್ರತಿ ವಾರ ಒಂದಲ್ಲಾ ಒಂದು ಕಾರಣಕ್ಕೆ ಆಂಡ್ರ್ಯೂಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಲೇ ಬಂದಿದ್ದಾರೆ. ಸುದೀಪ್ ಹೇಳಿದ ಎಲ್ಲಾ ಮಾತುಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಆಂಡ್ರ್ಯೂ ಇನ್ಮೇಲೆ ಬದಲಾಗುತ್ತಾರಾ.? ನೋಡಬೇಕು.


Click it and Unblock the Notifications











