'ಗಂಡ-ಹೆಂಡತಿ' ಎಂದಿದ್ದಕ್ಕೆ ರಾಕೇಶ್-ಅಕ್ಷತಾ ಬಳಿ ಕ್ಷಮೆ ಕೋರಿದ ಆಂಡ್ರ್ಯೂ

ಸಿಹಿಯಾದ ಶಾವಿಗೆ ಪಾಯಸಕ್ಕೆ ಖಾರದ ಪುಡಿ ಬೆರೆಸಿದ ಆಂಡ್ರ್ಯೂ ವಿರುದ್ಧ ಅಕ್ಷತಾ ಸಿಡಿಮಿಡಿಗೊಂಡಿದ್ದರು. ಅಕ್ಷತಾ ಪರ ವಹಿಸಿದ ರಾಕೇಶ್ ಮೇಲೆ ಮುನಿಸಿಕೊಂಡ ಆಂಡ್ರ್ಯೂ ಸಿಟ್ಟಲ್ಲಿ ''ಗಂಡ-ಹೆಂಡತಿ'' ಅಂತ ಹೇಳಿಬಿಟ್ಟರು.

ಬಳಿಕ ''ನಾನು ಗಂಡ-ಹೆಂಡತಿ ತರಹ ಅಂತ ಹೇಳಿದ್ದು'' ಎಂದು ಆಂಡ್ರ್ಯೂ ವಾದ ಮಾಡಿದರು. ಇನ್ನೂ ಕಾಲ್ ಸೆಂಟರ್ ಟಾಸ್ಕ್ ನಲ್ಲಿ ಎಲ್ಲರೂ ರಾಕೇಶ್-ಅಕ್ಷತಾ ನಡುವಿನ ಸಂಬಂಧದ ಬಗ್ಗೆ ಮಾತನಾಡಲು ಆಂಡ್ರ್ಯೂ ಕಾರಣ ಅಂತ ರಾಕೇಶ್ ಆರೋಪಿಸಿದ್ದರು.

ಇದನ್ನೆಲ್ಲ ಗಮನಿಸಿದ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಕ್ಲಾಸ್ ತೆಗೆದುಕೊಂಡರು. ಪಾಯಸದಲ್ಲಿ ಖಾರದ ಪುಡಿ ಬೆರೆಸಿ, ರಾಕೇಶ್-ಅಕ್ಷತಾಗೆ ಗಂಡ-ಹೆಂಡತಿ ಎಂದ ಆಂಡ್ರ್ಯೂಗೆ ಸುದೀಪ್ ಬೆಂಡೆತ್ತಿದರು. ಮುಂದೆ ಓದಿರಿ...

ಆಂಡ್ರ್ಯೂಗೆ ಸುದೀಪ್ ಪ್ರಶ್ನೆ

ಆಂಡ್ರ್ಯೂಗೆ ಸುದೀಪ್ ಪ್ರಶ್ನೆ

''ಪಾಯಸಕ್ಕೆ ಖಾರದ ಪುಡಿ ಹಾಕಿದ್ದು ವರ್ಕ್ ಆಗಿಲ್ಲ ಎಂಬ ಟೆನ್ಷನ್ ನಲ್ಲಿ ರಾಕೇಶ್ ಬಗ್ಗೆ ಒಂದು ಸೂಕ್ಷ್ಮ ಕಾಮೆಂಟ್ ಮಾಡುತ್ತೀರಾ. ಏನಂದ್ರಿ ನೀವು.?'' ಅಂತ ಆಂಡ್ರ್ಯೂಗೆ ಸುದೀಪ್ ಪ್ರಶ್ನಿಸಿದರು. ಆಗ ''ಗಂಡ-ಹೆಂಡತಿ ತರಹ ಬಂದು ಜಗಳ ಮಾಡಬೇಡಿ'' ಎಂದೆ ಎಂದು ಆಂಡ್ರ್ಯೂ ಉತ್ತರಿಸಿದರು.

ಅಕ್ಷತಾ ಪರವಾಗಿ ನಿಲ್ಲುವ ರಾಕೇಶ್

ಅಕ್ಷತಾ ಪರವಾಗಿ ನಿಲ್ಲುವ ರಾಕೇಶ್

''ಅದ್ಹೇಗೆ ಗಂಡ-ಹೆಂಡತಿ ಆದರು.?'' ಅಂತ ಸುದೀಪ್ ಕೇಳಿದಾಗ, ''ಅಕ್ಷತಾ ಹೋಗಿ ರಾಕೇಶ್ ಬಳಿ ಅಳುವುದು. ರಾಕೇಶ್ ಬಂದು ನನ್ನ ಬಳಿ ಜಗಳ ಮಾಡುವುದು. ಮೊಟ್ಟೆ ಹೊಡೆದಾಗ, ರಾಕೇಶ್ ನನಗೆ ಭೇಷ್ ಎಂದಿದ್ದ. ಈಗ ಅಕ್ಷತಾ ವಿಷಯ ಬಂದಿದ್ದಕ್ಕೆ ನನ್ನ ಮೇಲೆ ಪಲ್ಟಿ ಹೊಡೆದ. ಅದಕ್ಕೆ ನನಗೆ ಬೇಜಾರಾಗಿ ಹೇಳಿದೆ'' ಎಂದರು ಆಂಡ್ರ್ಯೂ.

ರಾಕೇಶ್ ಹೇಳಿದ್ದೇನು.?

ರಾಕೇಶ್ ಹೇಳಿದ್ದೇನು.?

''ಅಕ್ಷತಾ ಅವತ್ತು ತುಂಬಾ ಬೇಸರಗೊಂಡಿದ್ದರು. ಅವರನ್ನ ನೋಡಿ ನನಗೆ ಬೇಜಾರಾಯ್ತು. ಪಾಯಸ ತಿನ್ನಲು ನಾನು ಕೂಡ ಕಾಯುತ್ತಿದ್ದೆ. ಹೀಗಾಗಿ, ಆಂಡಿ ಮಾಡಿದ್ದು ಸರಿ ಅಲ್ಲ ಅಂತ ಹೇಳಿದ್ದೆ. ಆಗ ಆಂಡಿ ''ಗಂಡ-ಹೆಂಡತಿ ತರಹ ಜಗಳಕ್ಕೆ ಬರಬೇಡಿ'' ಎಂದು ಹೇಳಿದ. ನನ್ನ ಮತ್ತು ಅಕ್ಷತಾ ನಡುವೆ ಇರುವುದು Intense-friendship. ಈ ಬಗ್ಗೆ ಆಂಡಿ insult ಮಾಡಿದರು'' ಎಂದರು ರಾಕೇಶ್.

ಕ್ಷಮೆ ಕೇಳಿದ ಆಂಡ್ರ್ಯೂ

ಕ್ಷಮೆ ಕೇಳಿದ ಆಂಡ್ರ್ಯೂ

''ಗಂಡ-ಹೆಂಡತಿಗೂ, ಗಂಡ-ಹೆಂಡತಿ ತರಹಕ್ಕೂ ಏನು ವ್ಯತ್ಯಾಸ.? ತಾವು ಹೇಳಿದ್ದು 'ಗಂಡ-ಹೆಂಡತಿ' ಅಂತ. 'ತರಹ' ಅಂತ ಅಲ್ಲ. ಅವತ್ತು ವಾದ ಕೂಡ ಮಾಡಿದ್ರಿ. ಆದ್ರೆ, ನೀವು ಹೇಳಿದ್ದು 'ಗಂಡ-ಹೆಂಡತಿ' ಅಂತಲೇ.!'' ಎಂದು ಸುದೀಪ್ ಆಂಡ್ರ್ಯೂಗೆ ಬಿಸಿ ಮುಟ್ಟಿಸಿದರು. ಆಗ, ಅಕ್ಷತಾ ಮತ್ತು ರಾಕೇಶ್ ಬಳಿ ಆಂಡ್ರ್ಯೂ ಕ್ಷಮೆ ಕೇಳಿದರು.

More from Filmibeat

English summary
Bigg Boss Kannada 6: Day 41: Andrew apologizes Rakesh and Akshata for calling them Husband and Wife.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X