ಸೂಕ್ಷ್ಮತೆ ಅರ್ಥೈಸಿಕೊಳ್ಳದ, ಹೇಳಿದ್ದನ್ನ ಒಪ್ಪಿಕೊಳ್ಳದ ರಾಕೇಶ್-ಅಕ್ಷತಾಗೆ ಏನನ್ನಬೇಕು.?

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಇಲ್ಲಿಯವರೆಗಿನ ಯಾವುದೇ ಸಂಚಿಕೆಯನ್ನ ನೀವು ನೋಡಿದರೂ, ಒಂದೇ ಫ್ರೇಮ್ ನಲ್ಲಿ ರಾಕೇಶ್ ಮತ್ತು ಅಕ್ಷತಾ ನಿಮ್ಮ ಕಣ್ಣಿಗೆ ಬಿದ್ದೇ ಬೀಳುತ್ತಾರೆ. ಅಷ್ಟು ಆತ್ಮೀಯತೆ ಅವರಿಬ್ಬರ ನಡುವೆ ಇದೆ.

ಬರೀ ಆತ್ಮೀಯತೆ ಮಾತ್ರ ಇದ್ದಿದ್ದರೆ, ಇಷ್ಟೆಲ್ಲಾ ರಂಪ ಆಗುತ್ತಿರಲಿಲ್ಲ. 'ಬಿಗ್ ಬಾಸ್' ಮನೆಗೆ ಕಾಲಿಡುವ ಮುನ್ನವೇ 200 ಹುಡುಗಿಯರ ಜೊತೆಗೆ ಡೇಟಿಂಗ್ ಮಾಡಿರುವ ಭೂಪ ರಾಕೇಶ್. ಇನ್ನೂ ಅಕ್ಷತಾ ಮದುವೆ ಆಗಿರುವ ಹೆಣ್ಣು. ಇವರಿಬ್ಬರ ನಡುವೆ ಇರುವ 'Intense ಫ್ರೆಂಡ್ ಶಿಪ್' ಕಳೆದ ವಾರ 'ಬಿಗ್ ಬಾಸ್' ಮನೆಯಲ್ಲೇ ಭಾರಿ ಚರ್ಚೆಗೆ ಗುರಿಯಾಗಿತ್ತು. ''ಕೆಟ್ಟ ಹೆಸರು ಬರುತ್ತಿದೆ'' ಅಂತ ಅಕ್ಷತಾ ಕಣ್ಣೀರು ಸಹ ಹಾಕಿದ್ದರು.

ಇನ್ನೂ ಸೋಷಿಯಲ್ ಮೀಡಿಯಾದಲ್ಲಂತೂ ರಾಕೇಶ್ ಮತ್ತು ಅಕ್ಷತಾ ಬಗ್ಗೆ ವೀಕ್ಷಕರು ಛೀಮಾರಿ ಹಾಕುತ್ತಿದ್ದಾರೆ. ಇದನ್ನೆಲ್ಲಾ ಗಮನಿಸಿರುವ ಕಿಚ್ಚ ಸುದೀಪ್, ಈ ವಿವಾದಕ್ಕೆ ಫುಲ್ ಸ್ಟಾಪ್ ಇಡಲು 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಪ್ರಯತ್ನ ಪಟ್ಟರು.

ಸುದೀಪ್ ಎಷ್ಟೇ ಪ್ರಯತ್ನಿಸಿದರೂ, ವಿವಾದದ ಸೂಕ್ಷ್ಮತೆ ಮತ್ತು ಗಾಂಭೀರ್ಯತೆ ರಾಕೇಶ್ ಮತ್ತು ಅಕ್ಷತಾಗೆ ಅರ್ಥ ಆಗಲೇ ಇಲ್ಲ ಎನ್ನುವುದು ಮಾತ್ರ ದುರಂತ. ತಾವಾಡಿದ ಮಾತುಗಳಿಗೆ ಬದ್ಧರಾಗಿ ನಿಲ್ಲಲು ಅಕ್ಷತಾ ಹಿಂದೇಟು ಹಾಕಿದರು. ಇನ್ನೂ ಸುದೀಪ್ ಮಾತುಗಳನ್ನ ರಾಕೇಶ್ ಪರಿಗಣಿಸಲೇ ಇಲ್ಲ. ಇಂಥವರಿಗೆ ಏನು ಹೇಳಬೇಕು.?

'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಮಾತು

'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಮಾತು

'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ 'ಯೆಸ್/ನೋ' ಸೆಗ್ಮೆಂಟ್ ಗೆ ಸುದೀಪ್ ಚಾಲನೆ ಕೊಟ್ಟರು. ಈ ವೇಳೆ ''ಅಕ್ಷತಾ ಗೆಳೆತನ ಬಿಟ್ಟರೆ ರಾಕೇಶ್ ಖಂಡಿತ ಫೈನಲ್ ಗೆ ಹೋಗುತ್ತಾರೆ'' ಎಂಬ ಹೇಳಿಕೆ ಕುರಿತು ಸುದೀಪ್ ಪ್ರಸ್ತಾಪಿಸಿದರು. ಈ ಹೇಳಿಕೆಗೆ ಅಕ್ಷತಾ 'ಯೆಸ್' ಎಂದರೆ, ರಾಕೇಶ್ 'ನೋ' ಎಂದರು.

'ಯೆಸ್' ಎಂದು ಅಕ್ಷತಾ ಹೇಳಿದ್ಯಾಕೆ.?

'ಯೆಸ್' ಎಂದು ಅಕ್ಷತಾ ಹೇಳಿದ್ಯಾಕೆ.?

''ರಾಕೇಶ್ ನನ್ನ ಜೊತೆಗೆ ಭಾವನಾತ್ಮಕವಾಗಿ ಅಟ್ಯಾಚ್ ಆಗಿದ್ದಾರೆ. ಅದು ಅವರಿಗೆ ಈ ಜರ್ನಿಯಲ್ಲಿ ಏಟಾಗಬಹುದು ಅಂತ ನಾನೇ ಒಮ್ಮೊಮ್ಮೆ ಯೋಚನೆ ಮಾಡುವೆ. ಹೀಗಾಗಿ ಯೆಸ್ ಎಂದೆ'' ಎಂದು ಉತ್ತರಿಸಿದರು ಅಕ್ಷತಾ.

ಸುದೀಪ್ ಸೀರಿಯಸ್ಸಾಗಿ ಹೇಳಿದ ಮಾತು

ಸುದೀಪ್ ಸೀರಿಯಸ್ಸಾಗಿ ಹೇಳಿದ ಮಾತು

ಅಕ್ಷತಾ ಕೊಟ್ಟ ವಿವರಣೆಯನ್ನು ಕೇಳಿಸಿಕೊಂಡ ಮೇಲೆ, ''ಹಾಗಾದ್ರೆ, ಒಂದು ಕೆಲಸ ಮಾಡಿ... ಒಂದು ವಾರ ಇಬ್ಬರೂ ಮಾತನಾಡದೇ ಇದ್ದು ಬಿಡಿ. ಸೀರಿಯಸ್ ಆಗಿ ಹೇಳುತ್ತಿದ್ದೇನೆ'' ಎಂದರು ಸುದೀಪ್.

ಅಕ್ಷತಾ ಪ್ರತಿಕ್ರಿಯೆ ಹೇಗಿತ್ತು.?

ಅಕ್ಷತಾ ಪ್ರತಿಕ್ರಿಯೆ ಹೇಗಿತ್ತು.?

''ಆ ತರಹವೂ ಯೋಚನೆ ಮಾಡಿದ್ದೇನೆ. ಆದರೆ ಮಾತನಾಡದೇ ಇರಲು ಸಾಧ್ಯ ಆಗಲಿಲ್ಲ'' ಎಂದು ಅಕ್ಷತಾ ಹೇಳಿದಾಗ, ''ಹಿಂದೆ ಏನು ಯೋಚನೆ ಮಾಡಿದ್ರಿ.. ಅದು ಬೇಡ. ಈಗ ನೀವೇ ಹೇಳ್ತಿರೋದ್ರಿಂದ, ಒಂದು ವಾರ ಮಾತನಾಡಬೇಡಿ'' ಎಂದರು ಸುದೀಪ್. ಅದಕ್ಕೆ, ''ಆಯ್ತು ಸರ್.. ನಾನು ಮಾತನಾಡಲ್ಲ. ಆದ್ರೆ ರಾಕೇಶ್ ಮಾತನಾಡಿದರೆ..?'' ಎಂದು ಅಕ್ಷತಾ ಪ್ರಶ್ನಿಸಿದರು. ಅದಕ್ಕೆ ಸುದೀಪ್ ಉತ್ತರ ಹೀಗಿತ್ತು - ''ಅದು ರಾಕೇಶ್ ವೀಕ್ನೆಸ್ ಅಂತ ಇಡೀ ಕರ್ನಾಟಕಕ್ಕೆ ತೋರಿಸಿಕೊಳ್ತಾರೆ''

ಮಾತನಾಡದೇ ಇರಲು ಕಷ್ಟವಂತೆ.!

ಮಾತನಾಡದೇ ಇರಲು ಕಷ್ಟವಂತೆ.!

''ಮಾತನಾಡದೇ ಇರಲು ಕಷ್ಟ ಸರ್'' ಎಂದರು ಅಕ್ಷತಾ. ಆಗ, ''ಅವರ ಕಡೆಯಿಂದಲೋ, ಅಥವಾ ನಿಮ್ಮ ಕಡೆಯಿಂದ ಕಷ್ಟವೋ.. ಸ್ವಾರ್ಥ ಅಂತ ನಿಮಗೆ ಅನಿಸ್ತಿಲ್ವಾ.?'' ಎಂದು ಸುದೀಪ್ ಕೇಳಿದರು. ಅದಕ್ಕೆ, ''ನನ್ನ ಕೈಯಲ್ಲೂ ಕಷ್ಟ ಆಗುತ್ತೆ. ನನಗೆ ಅನಿಸಿರುವುದೇ ಸತ್ಯ ಆಗಬೇಕು ಅಂತೇನಿಲ್ಲವಲ್ಲ'' ಅಂತ ಉಲ್ಟಾ ಹೊಡೆದರು ಅಕ್ಷತಾ. ಇದನ್ನ ಕೇಳಿ, ''ನೀವು ಏನು ಹೇಳುತ್ತಿದ್ದೀರಿ ಅಂತ ನಿಮಗೆ ಗೊತ್ತಿಲ್ವಾ.?'' ಅಂತ ಸುದೀಪ್ ಗುಡುಗಿದರು.

ಗೆಲ್ಲಬೇಕು ಅಂತ ರಾಕೇಶ್ ಬಂದಿಲ್ವಂತೆ.!

ಗೆಲ್ಲಬೇಕು ಅಂತ ರಾಕೇಶ್ ಬಂದಿಲ್ವಂತೆ.!

''ರಾಕೇಶ್ ಗೆಲ್ಲಬೇಕು, ಫೈನಲ್ ಗೆ ಹೋಗಬೇಕು ಅಂತ ಬಂದಿಲ್ಲ'' ಅಂತ ಅಕ್ಷತಾ ಹೇಳಲು ಶುರು ಮಾಡಿದಾಗ, ''ಪ್ರಶ್ನೆಗೆ ಉತ್ತರ ಬೇಕು'' ಎಂದಷ್ಟೇ ಸುದೀಪ್ ಹೇಳಿದರು. ಜೊತೆಗೆ ''ಈ ಹೇಳಿಕೆ ನನ್ನದ್ದಲ್ಲ.. ಜನರ ಅಭಿಪ್ರಾಯ ಆಗಿರಬಹುದು, ಮನೆಯಲ್ಲಿ ಇರುವವರ ಅಭಿಪ್ರಾಯ ಆಗಿರಬಹುದು'' ಎಂದು ಸುದೀಪ್ ಸ್ಪಷ್ಟ ಪಡಿಸಿದರು.

ಇದಕ್ಕೆಲ್ಲ ಪರಿಹಾರ ಬೇಕು ತಾನೇ.?

ಇದಕ್ಕೆಲ್ಲ ಪರಿಹಾರ ಬೇಕು ತಾನೇ.?

''ಪಾಯಸದ ವಿಚಾರದಲ್ಲಿ ಆಂಡ್ರ್ಯೂ ಜೊತೆಗೆ ಕಿತ್ತಾಟ ಆದ್ಮೇಲೆ, ರಾಕೇಶ್ ನ ನೀವು ಪ್ರೊವೋಕ್ ಮಾಡ್ತೀರಾ. ಆಂಡ್ರ್ಯೂ ವಿರುದ್ಧ ರಾಕೇಶ್ ನ ನೀವು ಎತ್ತಿ ಕಟ್ಟಿದ್ರಿ. ಕೊನೆಗೆ 'ಗಂಡ-ಹೆಂಡತಿ' ಅಂತ ಹೇಳಿಕೆ ಬಂತು. ಈ ಬಗ್ಗೆ ಕ್ಲಾರಿಟಿ ಕೊಡ್ತೀರಾ.? ಅಥವಾ ಸಂಘರ್ಷ ಅಂತ ಸುಮ್ಮನೆ ಇರ್ತೀರಾ.? ರಾಕೇಶ್ ಜರ್ನಿಗೆ ಏಟಾಗಬಹುದು ಅಂತೀರಿ.? ಹಾಗಾದ್ರೆ, ಒಂದು ವಾರ ಮಾತು ಬಿಡ್ತೀರಾ.?'' ಎಂದು ಸುದೀಪ್ ಮತ್ತೆ ಕೇಳಿದರು.

ಚಾಲೆಂಜ್ ಎಂದ ಅಕ್ಷತಾ

ಚಾಲೆಂಜ್ ಎಂದ ಅಕ್ಷತಾ

''ಆಯ್ತು.. ನೋಡೇ ಬಿಡೋಣ... ರಾಕೇಶ್ ಜೊತೆ ಮಾತನಾಡಲ್ಲ'' ಎಂದರು ಅಕ್ಷತಾ. ''ಚಾಲೆಂಜ್ ಆಗಿ ತೆಗೆದುಕೊಳ್ಳಬೇಡಿ'' ಎಂದು ಸುದೀಪ್ ಹೇಳಿದಾಗ, ''ಇದೊಂದು ರೀತಿ ಚಾಲೆಂಜ್ ಆಯ್ತು. ಯಾಕಂದ್ರೆ ನನ್ನ ಮನಸ್ಸು ಒಪ್ಪುತ್ತಿಲ್ಲ'' ಎಂದರು ಅಕ್ಷತಾ.

ಈ ತರಹ ಮಾತುಗಳು ಯಾಕೆ.?

ಈ ತರಹ ಮಾತುಗಳು ಯಾಕೆ.?

''ನಿಮ್ಮ ಮನಸ್ಸು ಒಪ್ಪುತ್ತಿಲ್ಲ ಅಂದ್ರೆ ಮಾತನಾಡಿ.. ರಾಕೇಶ್ ಜರ್ನಿಗೆ ತೊಂದರೆ ಆಗುತ್ತೆ ಅಂತ ನೀವೇ ಹೇಳಿದ್ರಿ, ಮಾತನಾಡದೇ ಇರಲು ಕಷ್ಟ ಆಗುತ್ತೆ ಅಂತ ನೀವೇ ಹೇಳ್ತೀರಾ. ನಿಮ್ಮ ಹೇಳಿಕೆಗಳು ನಿಮ್ಮ ಗಮನದಲ್ಲಿ ಇರಲಿ'' ಎಂದು ಸುದೀಪ್ ಅಕ್ಷತಾಗೆ ಹೇಳಿದರು.

ರಾಕೇಶ್ ಗೆ ಒಪ್ಪಿಗೆ ಇಲ್ಲ

ರಾಕೇಶ್ ಗೆ ಒಪ್ಪಿಗೆ ಇಲ್ಲ

''ಇದು ತುಂಬಾ impractical. ಇದು ಎಲ್ಲೂ ಮ್ಯಾಟರ್ ಆಗಲ್ಲ. ನಮ್ಮ ಸಂಬಂಧ ನಮ್ಮ ಜರ್ನಿಯನ್ನು ಸಪೋರ್ಟ್ ಮಾಡುತ್ತಿದೆ. ಮಾತನಾಡಲ್ಲ ಅಂತ ಹೇಳಿದ್ರೆ, ಒಂಟಿಯಾಗಿದ್ದರೆ ಮಾತ್ರ ಆಟ ಆಡಲು ಆಗುವುದು ಅಂತ ಪ್ರೂವ್ ಮಾಡಿದ ಹಾಗೆ ಆಗುತ್ತಿದೆ. ಹೀಗಾಗಿ, ನಾನು ಇದಕ್ಕೆ ಒಪ್ಪಲ್ಲ'' ಎಂದುಬಿಟ್ಟರು ರಾಕೇಶ್.

ಸೂಕ್ಷ್ಮತೆ ಅರ್ಥೈಸಿಕೊಳ್ಳದ ಅಕ್ಷತಾ-ರಾಕೇಶ್

ಸೂಕ್ಷ್ಮತೆ ಅರ್ಥೈಸಿಕೊಳ್ಳದ ಅಕ್ಷತಾ-ರಾಕೇಶ್

ಸುದೀಪ್ ಇಷ್ಟೆಲ್ಲ ಹೇಳಿದರೂ, ವಿಷಯದ ಸೂಕ್ಷ್ಮತೆ ರಾಕೇಶ್ ಮತ್ತು ಅಕ್ಷತಾಗೆ ಅರ್ಥ ಆಗಲಿಲ್ಲ. ಒಂದು ವಾರ ಮಾತನಾಡಬೇಡಿ ಅಂತ ಸುದೀಪ್ ಹೇಳಿದ್ದಕ್ಕೆ ರಾಕೇಶ್ ಒಪ್ಪಿಕೊಳ್ಳಲಿಲ್ಲ. ಇನ್ನೂ ಕೆಟ್ಟ ಹೆಸರು ಬರುತ್ತಿದೆ ಅಂತ ಗೊತ್ತಿದ್ದರೂ, ಮನಸ್ಸು ಒಪ್ಪುತ್ತಿಲ್ಲ ಎಂದು ಅಕ್ಷತಾ ಹೇಳಿದರು. ಇದಕ್ಕೆ ನೀವೇನಂತೀರಿ.? ನಿಮ್ಮ ಅಭಿಪ್ರಾಯವನ್ನು ನಮಗೆ ತಿಳಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ಮೂಲಕ.

More from Filmibeat

English summary
Bigg Boss Kannada 6: Day 41: Rakesh and Akshata not ready to take Sudeep's advice.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X