'ದಡ್ಡರ ತರಹ ಆಡುತ್ತಿದ್ದೀರಾ': ರಾಕೇಶ್-ಅಕ್ಷತಾ ವಿರುದ್ಧ ಗುಡುಗಿದ ಸುದೀಪ್

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಶುರುವಾದ ಮೊದಲ ವಾರವೇ, 'ಬಿಗ್ ಬಾಸ್' ಮನೆಯಲ್ಲೇ ರಾಕೇಶ್ ಮತ್ತು ಅಕ್ಷತಾ ನಡುವೆ ಗುಸುಗುಸು ಪಿಸುಪಿಸು ಶುರುವಾಯ್ತು.

''ನಾವಿಬ್ಬರು ಒಟ್ಟಿಗೆ ಇರುವುದರಿಂದ ಗಾಸಿಪ್ ಸೃಷ್ಟಿಯಾಗುತ್ತಿದೆ'' ಎಂಬ ಅರಿವು ಅಕ್ಷತಾ ಮತ್ತು ರಾಕೇಶ್... ಇಬ್ಬರಿಗೂ ಇದೇ. ಆದರೂ, ನಡವಳಿಕೆ ಮತ್ತು ವರ್ತನೆಯಲ್ಲಿ ಇಬ್ಬರೂ ಬದಲಾವಣೆ ಮಾಡಿಕೊಳ್ಳಲಿಲ್ಲ.

'ನಾವಿಬ್ಬರು ಜಸ್ಟ್ ಫ್ರೆಂಡ್ಸ್' ಅಂತ ರಾಕೇಶ್ ಎಲ್ಲರ ಮುಂದೆ ಹೇಳಿದ್ದರು. ಆದ್ರೆ, ಅದಾಗಲೇ ಮದುವೆ ಆಗಿರುವ ಅಕ್ಷತಾ ಮಾತ್ರ 'ಐ ಲವ್ ಯು ರಾಕಿ' ಎಂದು ಸುದೀಪ್ ಮುಂದೆಯೇ ಹೇಳಿಬಿಟ್ಟರು.

ರಾಕೇಶ್-ಅಕ್ಷತಾ ವರ್ತನೆ ಕಂಡು ಆಂಡ್ರ್ಯೂ 'ಗಂಡ-ಹೆಂಡತಿ' ಅಂತ ಕಾಮೆಂಟ್ ಮಾಡಿದ್ದರು. ಇನ್ನೂ 'ಕಾಲ್ ಸೆಂಟರ್' ಟಾಸ್ಕ್ ನಲ್ಲಿ ರಾಕೇಶ್-ಅಕ್ಷತಾ ನಡುವಿನ ಸಂಬಂಧವೇ ಚರ್ಚೆಗೆ ಗ್ರಾಸವಾಯಿತು. ಮಾತು ಮಾತಿಗೂ ತಬ್ಬಿಕೊಳ್ಳುವ ರಾಕೇಶ್-ಅಕ್ಷತಾ ರನ್ನ ಅನುಕರಣೆ ಕೂಡ ಮಾಡಲಾಯಿತು.

ಇಷ್ಟೆಲ್ಲಾ ಆದ್ಮೇಲೆ, ''ಹೊರಗಡೆ ಹೋದ ಮೇಲೆ ನಾನು ರಾಕೇಶ್ ನ ಭೇಟಿ ಮಾಡಲ್ಲ'' ಅಂತ ಅಕ್ಷತಾ ಹೇಳಿಕೆ ಕೊಟ್ಟರು. ''ಯಾಕಂದ್ರೆ, ಇದು ಆಟ. ಅದು ಜೀವನ'' ಎಂಬ ಕಾರಣವನ್ನೂ ನೀಡಿದರು.

ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿದ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಅಷ್ಟೇ ಸೂಕ್ಷ್ಮವಾಗಿ ಈ ವಿಚಾರದ ಬಗ್ಗೆ ಮಾತುಕತೆ ನಡೆಸಿದರು. ಸೂಕ್ಷ್ಮ ವಿಚಾರದ ಗಾಂಭೀರ್ಯತೆ ಅರಿಯದ ರಾಕೇಶ್ ಮತ್ತು ಅಕ್ಷತಾ ವಿರುದ್ಧ ಸುದೀಪ್ ಗುಡುಗಿದರು. ಮುಂದೆ ಓದಿರಿ...

'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಮಾತು

'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಮಾತು

'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ 'ಯೆಸ್/ನೋ' ಸೆಗ್ಮೆಂಟ್ ಗೆ ಸುದೀಪ್ ಚಾಲನೆ ಕೊಟ್ಟರು. ಈ ವೇಳೆ ''ರಾಕೇಶ್ ಗೆಳೆತನ ಬಿಟ್ಟರೆ, ಅಕ್ಷತಾ ಡೈರೆಕ್ಟ್ ಆಗಿ ಮನೆಗೆ ಹೋಗುತ್ತಾರೆ'' ಎಂಬ ಹೇಳಿಕೆ ಕುರಿತು ಪ್ರಸ್ತಾಪಿಸಿದರು. ಈ ಹೇಳಿಕೆಗೆ ರಾಪಿಡ್ ರಶ್ಮಿ 'ಯೆಸ್' ಎಂದರೆ, ರಾಕೇಶ್ 'ನೋ' ಎಂದರು. ಅಕ್ಷತಾ ಕೂಡ 'ನೋ' ಬೋರ್ಡ್ ಹಿಡಿದು ಕೂತಿದ್ದರು.

ರಶ್ಮಿ 'ಯೆಸ್' ಎಂದಿದ್ದು ಯಾಕೆ.?

ರಶ್ಮಿ 'ಯೆಸ್' ಎಂದಿದ್ದು ಯಾಕೆ.?

''ಅಕ್ಷತಾ ನಲ್ಲಿ ಇರುವ ಕೆಲವು ವೀಕ್ನೆಸ್ ನ ಹೋಗಲಾಡಿಸಿ, ಅಕ್ಷತಾನ ರೆಡಿ ಮಾಡುವುದೇ ರಾಕೇಶ್ ಕೆಲಸ. ರಾಕೇಶ್ ಇಲ್ಲ ಅಂದ್ರೆ ಅಕ್ಷತಾಗೆ ಕಷ್ಟ ಆಗಬಹುದು'' ಎಂಬುದು ರಶ್ಮಿ ಅಭಿಪ್ರಾಯ.

ರಾಕೇಶ್ 'ನೋ' ಎಂದಿದ್ದು ಯಾಕೆ.?

ರಾಕೇಶ್ 'ನೋ' ಎಂದಿದ್ದು ಯಾಕೆ.?

''ಕಾನ್ಫಿಡೆಂಟ್ ಆಗಿ ಹೇಳುವೆ ನಾನು ಅಕ್ಷತಾನ ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿರುವೆ. ಅಕ್ಷತಾಗೆ ಒಂದು ವ್ಯಕ್ತಿತ್ವ ಇದೆ. ಅದರ ಮೇಲೆ ಅವರು ಇಲ್ಲಿಗೆ ಬಂದಿದ್ದಾರೆ. ನನ್ನ ಜೊತೆಗೆ ಇಲ್ಲದೇ ಇದ್ದರೂ, ಅವರು ಈ ಜರ್ನಿಯನ್ನ ಕಂಪ್ಲೀಟ್ ಮಾಡುತ್ತಾರೆ'' ಎಂದು ರಾಕೇಶ್ ಹೇಳಿದರು.

ಜರ್ನಿಯೋ, ಆಟವೋ.?

ಜರ್ನಿಯೋ, ಆಟವೋ.?

ರಾಕೇಶ್ ಹೇಳಿದ ಮಾತುಗಳನ್ನು ಕೇಳಿಸಿಕೊಂಡ ಸುದೀಪ್, ''ನೀವು ಜರ್ನಿ ಅಂತ ಹೇಳುತ್ತೀರಾ. ಆದ್ರೆ, ಅಕ್ಷತಾ ಒಂದು ಕಡೆ ''ಹೊರಗೆ ಹೋದ್ಮೇಲೆ ನಾನು ರಾಕೇಶ್ ನ ಭೇಟಿ ಆಗಲ್ಲ'' ಅಂತ ಹೇಳುತ್ತಾರೆ. ಯಾಕೆ ಅಂತ ಕೇಳಿದಾಗ, ''ಇದು ಆಟ, ಅದು ಜೀವನ'' ಎನ್ನುತ್ತಾರೆ. ಅವರಿಗೆ ಇದು ಆಟ. ನಿಮ್ಮ ಪ್ರಕಾರ ಇದು ಜರ್ನಿ.. ಅಂದ್ರೆ ಜೀವನ ಆಯ್ತಲ್ಲಾ.?'' ಎಂದು ಪ್ರಶ್ನಿಸಿದರು.

ರಾಕೇಶ್ ಕೊಟ್ಟ ಉತ್ತರ ಏನು.?

ರಾಕೇಶ್ ಕೊಟ್ಟ ಉತ್ತರ ಏನು.?

''ಆಕೆಯ ಎಮೋಷನಲ್ ಕೋಶಂಟ್ ತುಂಬಾ ಹೈ. ಆ ಸನ್ನಿವೇಶದಲ್ಲಿ ಹಾಗೆ ಹೇಳಿರುತ್ತಾರೆ. ಆಮೇಲೆ ಅದನ್ನ ತಿದ್ದಿಕೊಳ್ಳುತ್ತಾರೆ'' ಎಂದು ಅಕ್ಷತಾ ಆಡಿದ್ದ ಮಾತನ್ನ ರಾಕೇಶ್ ಸಮರ್ಥಿಸಿಕೊಂಡರು. ಆಗ, ''ಹಾಗಾದ್ರೆ, ಆ ಲೈನ್ ನ ಕರೆಕ್ಟ್ ಮಾಡಿಕೊಳ್ತೀರಾ ಅಕ್ಷತಾ.?'' ಎಂದು ಅಕ್ಷತಾಗೆ ಸುದೀಪ್ ಕೇಳಿದರು.

ಹೇಳಿದ್ದನ್ನೇ ಮತ್ತೆ ಹೇಳಿದ ಅಕ್ಷತಾ

ಹೇಳಿದ್ದನ್ನೇ ಮತ್ತೆ ಹೇಳಿದ ಅಕ್ಷತಾ

''ಹೊರಗೆ ಹೋದ್ಮೇಲೆ ರಾಕೇಶ್ ನ ಭೇಟಿ ಮಾಡಲ್ಲ. ಇಲ್ಲಿ ಆಗಿರೋದನ್ನ ಇಲ್ಲಿಗೆ ನಿಲ್ಲಿಸೋಣ. ಹೊರಗೆ ಬೇರೆ ಜೀವನ ಇದೆ ಅಷ್ಟೇ'' ಎಂದರು ಅಕ್ಷತಾ. ಅದಕ್ಕೆ ''ಹೇಳಿಕೆಯನ್ನ ಚೇಂಜ್ ಮಾಡ್ತೀರಾ, ಅಥವಾ ಹಳೇ ಹೇಳಿಕೆಗೆ ಬದ್ಧವಾಗಿ ಇರುತ್ತೀರಾ.?'' ಎಂದು ಸುದೀಪ್ ಪ್ರಶ್ನಿಸಿದರು.

ಉಲ್ಟಾ ಹೊಡೆದ ಅಕ್ಷತಾ

ಉಲ್ಟಾ ಹೊಡೆದ ಅಕ್ಷತಾ

ಈ ಬಾರಿ, ''ಹೊರಗಡೆ ರಾಕೇಶ್ ಜೊತೆ ಪರ್ಫಾರ್ಮ್ ಮಾಡಲು ಇಷ್ಟ ಪಡುವೆ'' ಎಂದು ಅಕ್ಷತಾ ಉಲ್ಟಾ ಹೊಡೆದಾಗ, ''ವೃತ್ತಿ ಬಗ್ಗೆ ಇಲ್ಲಿ ಮಾತನಾಡುತ್ತಿಲ್ಲ. ಇರೋದನ್ನ ಇದ್ದ ಹಾಗೆ ಹೇಳಿ... ಇಬ್ಬರೂ ದಡ್ಡರ ಹಾಗೆ ಆಡುತ್ತಿದ್ದರೆ, ನಾವೇನೂ ಮಾಡಲು ಆಗಲ್ಲ. ಈ ವಿಚಾರ ನಿಮ್ಮಿಬ್ಬರಿಗೂ ಮುಖ್ಯ'' ಎನ್ನುತ್ತಾ ಸುದೀಪ್ ಗರಂ ಆದರು.

ಸುಮ್ಮನೆ ಕೂರದ ರಾಕೇಶ್

ಸುಮ್ಮನೆ ಕೂರದ ರಾಕೇಶ್

''ನಾವು ದಡ್ಡರ ತರಹ ಆಡುತ್ತಿಲ್ಲ'' ಎನ್ನುತ್ತಾ ಸಮರ್ಥಿಸಿಕೊಳ್ಳಲು ರಾಕೇಶ್ ಮುಂದಾದಾಗ, ''ನಾವು ದಡ್ಡರ ತರಹ ಆಡುತ್ತಿದ್ದೇವೆ. ಗಂಭೀರವಾಗಿ ವಿಷಯವನ್ನು ತೆಗೆದುಕೊಳ್ಳಿ..'' ಎಂದು ಸುದೀಪ್ ಗುಡುಗಿದರು. ಆಗಲೂ ಸುಮ್ಮನಿರದ ರಾಕೇಶ್, ''ಗಂಭೀರವಾಗಿ ವಿಷಯವನ್ನು ತೆಗೆದುಕೊಂಡಿದ್ದೇವೆ. ನಾವಿಬ್ಬರೂ ಈ ಮನೆಯನ್ನ ಜರ್ನಿಯಾಗಿ ತೆಗೆದುಕೊಂಡಿದ್ದೇವೆ'' ಎಂದು ರಾಕೇಶ್ ಹೇಳಿದಾಗ, ''ನಿಮ್ಮದನ್ನು ಮಾತ್ರ ನೀವು ಮಾತನಾಡಿ. ಅಕ್ಷತಾಗೆ ನೀವು ಮೌತ್ ಪೀಸ್ ಆಗಬೇಡಿ'' ಎಂದು ರಾಕೇಶ್ ಗೆ ಸುದೀಪ್ ಬಿಸಿ ಮುಟ್ಟಿಸಿದರು.

ಬ್ರೇನ್ ವಾಶ್ ಮಾಡಿದ ರಾಕೇಶ್

ಬ್ರೇನ್ ವಾಶ್ ಮಾಡಿದ ರಾಕೇಶ್

''ನಿಮ್ಮ ಉತ್ತರವನ್ನು ಹೇಳಿ.. ಚೇಂಜ್ ಮಾಡುವ ಬಗ್ಗೆ ಹೇಳಿ.. ನಾನೇನು ಅಂದುಕೊಳ್ಳುವೆ ಅಂತ ಯೋಚಿಸಬೇಡಿ'' ಎಂದು ಅಕ್ಷತಾಗೆ ರಾಕೇಶ್ ಹೇಳುತ್ತಿದ್ದಾಗ, ''ಈಗ ಬ್ರೇನ್ ವಾಶ್ ಮಾಡಬೇಡಿ'' ಎಂದು ರಾಕೇಶ್ ಗೆ ಸುದೀಪ್ ಎಚ್ಚರಿಸಿದರು.

ನಗಾಡಿಕೊಂಡು ಉತ್ತರ ಕೊಟ್ಟ ಅಕ್ಷತಾ

ನಗಾಡಿಕೊಂಡು ಉತ್ತರ ಕೊಟ್ಟ ಅಕ್ಷತಾ

ಇಷ್ಟೆಲ್ಲಾ ಆದ್ಮೇಲೆ, ನಗಾಡಿಕೊಂಡು ''ಹೊರಗಡೆ ಹೋದ್ಮೇಲೆ ರಾಕೇಶ್ ನ ಭೇಟಿ ಮಾಡುವೆ'' ಎಂದರು ಅಕ್ಷತಾ. ಇದು ನಗುವ ವಿಚಾರ ಅಲ್ಲ ಎಂದು ಸುದೀಪ್ ಹೇಳಿದಾಗ, ''ನಗು ಹಾಸ್ಯಕ್ಕೆ ಅಲ್ಲ ಸರ್... ಸಂಘರ್ಷ'' ಎಂದರು ಅಕ್ಷತಾ.

More from Filmibeat

English summary
Bigg Boss Kannada 6: Day 41: Sudeep annoyed with Rakesh and Akshata.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X