ಕ್ಷುಲ್ಲಕ ಕಾರಣಕ್ಕೆ ಸುದೀಪ್ ಮೇಲೆ 'ಪಕ್ಷಪಾತ'ದ ಆರೋಪ ಮಾಡಿದ ಅಕ್ಷತಾ.!

Recommended Video

Bigg Boss Kannada Season 6: ಕ್ಷುಲ್ಲಕ ಕಾರಣಕ್ಕೆ ಸುದೀಪ್ ಮೇಲೆ 'ಪಕ್ಷಪಾತ'ದ ಆರೋಪ ಮಾಡಿದ ಅಕ್ಷತಾ.!

ಸದ್ಯ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಚಾಲ್ತಿಯಲ್ಲಿದೆ. ಕಳೆದ ಐದು ಸೀಸನ್ ಗಳಲ್ಲಿ ಹೋಸ್ಟ್ ಸುದೀಪ್ ವಿರುದ್ಧ ಯಾವುದೇ ಆರೋಪಗಳು ಕೇಳಿ ಬಂದಿರಲಿಲ್ಲ. ಆದ್ರೀಗ ಅಕ್ಷತಾ, ಸುದೀಪ್ ಮೇಲೆ ಪಕ್ಷಪಾತದ ಆರೋಪ ಮಾಡಿದ್ದಾರೆ.

ಪ್ರತಿ ಶನಿವಾರ ಪಂಚಾಯತಿ ನಡೆಸಿ, ಸ್ಪರ್ಧಿಗಳ ನಡುವಿನ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸುತ್ತಿದ್ದವರು ಕಿಚ್ಚ ಸುದೀಪ್. ಸೂಕ್ಷ್ಮ ವಿಷಯಗಳನ್ನು ಅಷ್ಟೇ ಸೂಕ್ಷ್ಮವಾಗಿ ಹ್ಯಾಂಡಲ್ ಮಾಡಿ ಅದಕ್ಕೆ ಪರಿಹಾರ ನೀಡುತ್ತಿದ್ದವರು ಸುದೀಪ್.

ಸತ್ಯದ ಪರವಾಗಿ ನಿಲ್ಲುತ್ತಿದ್ದ ಸುದೀಪ್, ಬೇಕು ಅಂತ ಯಾರಿಗೂ ಸಪೋರ್ಟ್ ಮಾಡಿದವರಲ್ಲ. ತಪ್ಪು ನಡೆದಾಗ, ತಿದ್ದಿ ನಡೆಯಲು ಎಲ್ಲರಿಗೂ ಸುದೀಪ್ ತಿಳಿ ಹೇಳಿದ್ದಾರೆ. ಹೀಗಿದ್ದರೂ, ''ಸುದೀಪ್ ಪಕ್ಷಪಾತಿ'' ಎಂದಿದ್ದಾರೆ ಅಕ್ಷತಾ.

ತಾವು ಆಡಿರುವ ಮಾತುಗಳ ಬಗ್ಗೆ ತಮಗೇ ಅರಿವಿಲ್ಲದ ಅಕ್ಷತಾ, ಸುದೀಪ್ ಮೇಲೆ ಸುಖಾಸುಮ್ಮನೆ ಬೆಟ್ಟು ಮಾಡಿ ತೋರಿಸಿದರು. ಆಗಲೂ ಸಿಟ್ಟು ಮಾಡಿಕೊಳ್ಳದ ಸುದೀಪ್ ವಾಸ್ತವವನ್ನ ಅಕ್ಷತಾಗೆ ತಿಳಿಸಿಕೊಟ್ಟರು. ಮುಂದೆ ಓದಿರಿ....

ಧನರಾಜ್ ಗೆ 'ಬಿಗ್ ಬಾಸ್' ಸಪೋರ್ಟ್ ಇದ್ಯಂತೆ.!

ಧನರಾಜ್ ಗೆ 'ಬಿಗ್ ಬಾಸ್' ಸಪೋರ್ಟ್ ಇದ್ಯಂತೆ.!

ಗೊಂಬೆ ತಯಾರು ಮಾಡುವ ಚಟುವಟಿಕೆಯಲ್ಲಿ ಕಾರ್ಮಿಕರನ್ನು ಹರಾಜಿನಲ್ಲಿ ಖರೀದಿ ಮಾಡುವಾಗ, ಧನರಾಜ್ ಗೆ ನೂರು ರೂಪಾಯಿಯಿಂದ ಅಕ್ಷತಾ ಶುರು ಮಾಡಿದ್ದರು. ''ನೂರು ರೂಪಾಯಿ'' ಬಗ್ಗೆ ಸುದೀಪ್ ಪ್ರಶ್ನೆ ಮಾಡಿದ್ದರು. ಆಗ, ''ಇಲ್ಲ, ನಾನು ಸಾವಿರದ ನೂರು ರೂಪಾಯಿಯಿಂದ ಶುರು ಮಾಡಿದ್ದೆ'' ಎಂದು ಅಕ್ಷತಾ ವಾದ ಮಾಡಿದ್ದರು. ಅಂದು ''ಅಕ್ಷತಾ ಹೇಳಿದ್ದು ನೂರು ರೂಪಾಯಿ'' ಅಂತ ಸುದೀಪ್ ಕ್ಲಾರಿಟಿ ಕೊಟ್ಟಿದ್ದರು. ಇದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಧನರಾಜ್ ಗೆ ಬಿಗ್ ಬಾಸ್ (ಸುದೀಪ್) ಸಪೋರ್ಟ್ ಇದೆ ಅಂತ ಆಗಾಗ ಅಕ್ಷತಾ ಹೇಳುತ್ತಿದ್ದರು.

ಪ್ರಶ್ನೆ ಮಾಡಿದ ಸುದೀಪ್

ಪ್ರಶ್ನೆ ಮಾಡಿದ ಸುದೀಪ್

''ಬಿಗ್ ಬಾಸ್' ಸಪೋರ್ಟ್ ಇದೆ ಇಲ್ಲಿ ಕೆಲವರಿಗೆ'' ಅಂತ ಹಲವು ಬಾರಿ ಒತ್ತಿ ಒತ್ತಿ ಹೇಳಿದ್ರಿ. 'ಬಿಗ್ ಬಾಸ್' ಯಾರಿಗೆ ಸಪೋರ್ಟ್ ಮಾಡುತ್ತಿದ್ದಾರೆ.?'' ಅಂತ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸುದೀಪ್ ಪ್ರಶ್ನಿಸಿದರು.

ಅಕ್ಷತಾ ಹೇಳಿದ್ದೇನು.?

ಅಕ್ಷತಾ ಹೇಳಿದ್ದೇನು.?

''ಕೆಲವೊಂದು ಹಂತದಲ್ಲಿ ನನಗೆ ಅನಿಸಿದ್ದು ಏನು ಅಂದ್ರೆ... ನೂರು ರೂಪಾಯಿ ವಿಷಯ ಬಂದಾಗ, ನಾನು ಸಾವಿರದ ನೂರು ರೂಪಾಯಿಂದಲೇ ಶುರು ಮಾಡಿದ್ದೆ. ನೂರು ರೂಪಾಯಿ ವಿಷಯ ನನಗೆ ಗೊತ್ತಿರಲಿಲ್ಲ. ಆದರೂ ಧನರಾಜ್ ಗೆ ನೀವು ಸಪೋರ್ಟ್ ಮಾಡಿದ್ರಿ'' ಎಂದು ಸುದೀಪ್ ಗೆ ಅಕ್ಷತಾ ಹೇಳಿದರು.

ಸುದೀಪ್ ಮೇಲೆ ಆರೋಪ

ಸುದೀಪ್ ಮೇಲೆ ಆರೋಪ

''ನೀವು 'ಬಿಗ್ ಬಾಸ್' ಬಗ್ಗೆ ಅಲ್ಲ.. ನನ್ನ ಬಗ್ಗೆ ಮಾತನಾಡುತ್ತಿದ್ದೀರಾ.?'' ಅಂತ ಸುದೀಪ್ ಕೇಳಿದಾಗ, ''ನಮಗೆ 'ಬಿಗ್ ಬಾಸ್' ಅಂದ್ರೇನೇ ನೀವು'' ಎಂದರು ಅಕ್ಷತಾ.

ಕ್ಲಾರಿಟಿ ಕೊಡುವುದು ತಪ್ಪಾ.?

ಕ್ಲಾರಿಟಿ ಕೊಡುವುದು ತಪ್ಪಾ.?

''ನಿಮ್ಮ ಪ್ರಕಾರ, ನಾನು ಧನರಾಜ್ ಗೆ ಪಕ್ಷಪಾತಿ ಆಗಿದ್ದೀನಿ. ನೂರು ರೂಪಾಯಿ ಅಂತ ನೀವು ಹೇಳಿದ್ದೀರಾ. ಜನ ಅದನ್ನ ನೋಡಿದ್ದಾರೆ. ಕ್ಲಾರಿಟಿ ಕೊಡುವುದು ತಪ್ಪಾ.?'' ಎಂದರು ಸುದೀಪ್

ಬೇಸರಗೊಂಡ ಸುದೀಪ್

ಬೇಸರಗೊಂಡ ಸುದೀಪ್

''ಗಂಡ-ಹೆಂಡತಿ ತರಹ ಅಂತ ಹೇಳಿಲ್ಲ. ಗಂಡ-ಹೆಂಡತಿ ಅಂತಾನೇ ಹೇಳಿದ್ದು ಎಂದು ಆಂಡ್ರ್ಯೂಗೆ ಕ್ಲಾರಿಟಿ ಕೊಟ್ಟೆ ನಾನು. ಹಾಗಾದ್ರೆ, 'ಬಿಗ್ ಬಾಸ್' ಈಗ ರಾಕೇಶ್-ಅಕ್ಷತಾಗೆ ಸಪೋರ್ಟ್ ಮಾಡುತ್ತಿದ್ದಾರಾ.? ಕ್ಲಾರಿಟಿ ಕೊಡಿ ನನಗೆ.. ನಾನೀಗ ಸ್ವಲ್ಪ ಚಿಕ್ಕವನಾಗಿ ಕಾಣಿಸುತ್ತಿದ್ದೇನೆ'' ಎಂದರು ಸುದೀಪ್. ಅದಕ್ಕೆ, ''

ಹೌದು ಸರ್.. ಈ ಟೈಮ್ ನಲ್ಲಿ ನಮಗೆ ಸ್ವಲ್ಪ ಸಪೋರ್ಟ್ ಮಾಡಿದ್ರಿ ಅಂತ ಅನಿಸ್ತು'' ಅಂತ ಅಕ್ಷತಾ ಹೇಳಿದರು.

ತಿಪ್ಪೆ ಸಾರಿಸಿದ ಅಕ್ಷತಾ

ತಿಪ್ಪೆ ಸಾರಿಸಿದ ಅಕ್ಷತಾ

''ಹಾಗಾದ್ರೆ, ಆಂಡಿ ಈಗ ಹೊರಗಡೆ ಹೋಗಿ ಹೇಳಬಹುದು.. 'ಬಿಗ್ ಬಾಸ್' ಅಕ್ಷತಾ-ರಾಕೇಶ್ ಗೆ ಸಪೋರ್ಟ್ ಮಾಡುತ್ತಿದ್ದಾರೆ ಅಂತ'' ಎಂದು ಸುದೀಪ್ ಕೇಳಿದಾಗ, ''ಬಹುಶಃ ನಾವು ಏನೇನು ಮಾಡಿರುತ್ತೇವೆ ಅಂತ ನಮಗಿಂತ ಜಾಸ್ತಿ ನೀವು ನೋಡಿರುತ್ತೀರಾ. ಅದರ ಮೇಲೆ ಮಾತನಾಡಿರುತ್ತೀರಾ. ನಾನು ಯೋಚನೆ ಮಾಡಿದ್ದೇ ತಪ್ಪಾಯ್ತು'' ಎಂದರು ಅಕ್ಷತಾ.

ನಾನ್ಯಾಕೆ ಸಪೋರ್ಟ್ ಮಾಡ್ಲಿ

ನಾನ್ಯಾಕೆ ಸಪೋರ್ಟ್ ಮಾಡ್ಲಿ

''ಪರಿಚಯದವರು ಇದ್ದಾರೆ.. ಅವರಿಗೆ ಸಪೋರ್ಟ್ ಮಾಡಬೇಕು ಅಂತ ನಾನು ಶನಿವಾರ ಬರಲ್ಲ. ಎಲ್ಲರಿಗೂ ಮಾತನಾಡಲು ಮೂರನೇ ವ್ಯಕ್ತಿ ಬೇಕಾಗಿರುತ್ತಾರೆ. ಆ ಮೂರನೇ ವ್ಯಕ್ತಿಯಾಗಿ ನಾನು ಬರುತ್ತೇನೆ ಹೊರತು ಸಪೋರ್ಟ್ ಮಾಡಲು ಅಲ್ಲ. ನಾನ್ಯಾಕೆ ಸಪೋರ್ಟ್ ಮಾಡ್ಲಿ.?'' ಎಂದರು ಸುದೀಪ್.

More from Filmibeat

English summary
Bigg Boss Kannada 6: Day 41: Sudeep is partial says Akshata.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X