ತಾನೇ ಸರಿ ಎನ್ನುವ 'ಸ್ವಾರ್ಥಿ' ರಾಕೇಶ್ ಬಾಯಿಗೆ ಬೀಗ ಜಡಿದ ಸುದೀಪ್.!

Recommended Video

Bigg Boss Kannada Season 6: ತಾನೇ ಸರಿ ಎನ್ನುವ 'ಸ್ವಾರ್ಥಿ' ರಾಕೇಶ್ ಬಾಯಿಗೆ ಬೀಗ ಜಡಿದ ಸುದೀಪ್.!

''ನಾನು ಹೇಳುವುದೇ ಸರಿ'', ''ನಾನು ಮಾಡುವುದೇ ಸರಿ'' ಎನ್ನುತ್ತಾ ವಾದ ಮಾಡುವ, ಎಷ್ಟೋ ಬಾರಿ ಅಕ್ಷತಾಗೂ ''ಬ್ರೇನ್ ವಾಶ್'' ಮಾಡಿರುವ ಎಂ.ಜೆ ರಾಕೇಶ್ ಗೆ ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಸರಿಯಾಗಿ ಬಿಸಿ ಮುಟ್ಟಿಸಿದರು.

ರಾಕೇಶ್-ಅಕ್ಷತಾಗೆ ಆಂಡ್ರ್ಯೂ 'ಗಂಡ-ಹೆಂಡತಿ' ಅಂತ ವ್ಯಂಗ್ಯವಾಗಿ ಹೇಳಿದರೂ, 'ಕಾಲ್ ಸೆಂಟರ್' ಟಾಸ್ಕ್ ನಲ್ಲಿ ಅವರಿಬ್ಬರ ನಡುವಿನ ಸಂಬಂಧವೇ ಹೈಲೈಟ್ ಆದರೂ, ಅದು ಅವರಿಬ್ಬರ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.

ಜೈಲಿನಲ್ಲಿ ರಾಕೇಶ್ ಪಕ್ಕದಲ್ಲೇ ನಿದ್ರಿಸಲು ಅಕ್ಷತಾ ಮುಂದಾದರು. ರಾಕೇಶ್-ಅಕ್ಷತಾ ರವರ ಈ ನಡವಳಿಕೆ ಜೈಲಿನಲ್ಲಿದ್ದ ಆಂಡ್ರ್ಯೂಗೆ ಕಿರಿಕಿರಿ ತಂತು. ಇದನ್ನೇ ಆಂಡ್ರ್ಯೂ, ಕಿಚ್ಚ ಸುದೀಪ್ ಮುಂದೆ ಹೇಳಿದರು.

ಸುದೀಪ್ ಮುಂದೆ ಸುಮ್ಮನೆ ವಾದಕ್ಕೆ ನಿಂತ ರಾಕೇಶ್ ಬಾಯಿಗೆ ಕಡೆಗೆ ಬೀಗ ಬಿತ್ತು. ಮುಂದೆ ಓದಿರಿ...

ಆಂಡ್ರ್ಯೂಗೆ ಟಾರ್ಚರ್.!

ಆಂಡ್ರ್ಯೂಗೆ ಟಾರ್ಚರ್.!

''ರಾಕೇಶ್-ಅಕ್ಷತಾ ಪಕ್ಕ-ಪಕ್ಕದಲ್ಲಿ ಮಲಗಲು ಜಾಗ ಬೇಕಂತೆ. ನನಗೆ ಚಳಿ ಆಗುತ್ತಿದ್ದರೂ ರಾಕೇಶ್ ಗೆ ಕೇರ್ ಇಲ್ಲ. ಅವನಿಗೆ ಅಕ್ಷತಾ ಸೇಫ್ ಆಗಿರಬೇಕು. ರಾಕೇಶ್ ಗೆ ದಿಂಬು ಇದ್ದರೂ, ಮತ್ತೊಂದು ಬೇಕು ಅಂತ ಪದೇ ಪದೇ ನನಗೆ ಕೇಳುತ್ತಾರೆ. ಅಕ್ಷತಾ-ರಾಕೇಶ್ ಉಪಯೋಗಕ್ಕಾಗಿ ನನಗೆ ಡ್ಯಾಮೇಜ್ ಆಗುತ್ತಿತ್ತು'' ಎಂದು ಸುದೀಪ್ ಮುಂದೆ ಆಂಡ್ರ್ಯೂ ಹೇಳಿದರು.

ವಾದ ಮಾಡಿದ ರಾಕೇಶ್

ವಾದ ಮಾಡಿದ ರಾಕೇಶ್

''ಜೈಲಿನಲ್ಲಿ ನಾವೇನೇ ಕೇಳಿದ್ದರೂ, ಅದು ಮನವಿ ಮಾತ್ರ. ಯಾವತ್ತೂ ಜಗಳ ಆಡಿಲ್ಲ. ಅಕ್ಷತಾ ಕೂಡ ಕ್ಯಾಪ್ಟನ್ ಆಗಿ ಮನವಿ ಮಾಡಿದರು. ಅದನ್ನ ಟಾರ್ಚರ್ ಅಂತ ಹೇಳಿದ್ರೆ... ಆಂಡ್ರ್ಯೂ ಕಡೆಯಿಂದ ನನಗೆ ಜೈಲಿನಲ್ಲಿ ಸಿಕ್ಕಾಪಟ್ಟೆ ಟಾರ್ಚರ್ ಆಯ್ತು'' ಅಂತ ರಾಕೇಶ್ ವಾದಕ್ಕೆ ಇಳಿದರು.

ರಾಕೇಶ್ ಗೆ ಆದ ಟಾರ್ಚರ್ ಏನು.?

ರಾಕೇಶ್ ಗೆ ಆದ ಟಾರ್ಚರ್ ಏನು.?

''ನಿಮಗೆ ಏನು ಟಾರ್ಚರ್ ಆಯ್ತು'' ಅಂತ ಸುದೀಪ್ ಪ್ರಶ್ನಿಸಿದಾಗ, ''ಕವಿತಾ ಒಂದು ಗೊಂಬೆ ಬರೆದಿದ್ದರು. ಅದರ ಮುಂದೆ ಇರಬೇಕೆಂದು ಜಾಗ ಬಿಡಲ್ಲ ಅಂತ ಆಂಡ್ರ್ಯೂ ಹೇಳಿದರು. ಆಮೇಲೆ ಆ ಗೊಂಬೆಗೆ ಆಂಡಿ ಅಲಂಕಾರ ಮಾಡುತ್ತಿದ್ದರು'' ಎಂದರು ರಾಕೇಶ್.

ಮೊಂಡು ವಾದ ಮಾಡಿದ ರಾಕೇಶ್

ಮೊಂಡು ವಾದ ಮಾಡಿದ ರಾಕೇಶ್

''ಗೊಂಬೆದು ಅವರಿಗೆ ಬಿಟ್ಟಿದ್ದು. ಹಾಗ್ನೋಡಿದ್ರೆ, ನೀವು-ಅಕ್ಷತಾ ಮಾಡುತ್ತಿದ್ದದ್ದು ಆಂಡ್ರ್ಯೂಗೆ ಟಾರ್ಚರ್ ತರಹವೇ ಆಯ್ತಲ್ಲ.?'' ಎಂದು ಸುದೀಪ್ ಹೇಳಿದಾಗ, ''ಅಕ್ಷತಾ ನನ್ನ ಹೆಗಲ ಮೇಲೆ ಬಂದು ಅತ್ತರೆ, ಅದರಿಂದ ಯಾರಿಗೂ ತೊಂದರೆ ಆಗಲ್ಲ'' ಎಂದರು ರಾಕೇಶ್. ಆಗ, ''ತೊಂದರೆ ಆಗುತ್ತಿಲ್ಲ ಅಂತ ನೀವು ಹೇಗೆ ಹೇಳ್ತೀರಾ.?'' ಅಂತ ಸುದೀಪ್ ಪ್ರಶ್ನಿಸಿದಾಗ, ''ನಾವು ಯಾರನ್ನೂ ಡಿಸ್ಟರ್ಬ್ ಮಾಡುತ್ತಿಲ್ಲ'' ಅಂತ ರಾಕೇಶ್ ಮೊಂಡು ವಾದ ಮಾಡಿದರು.

ಸ್ವಾರ್ಥಿ ರಾಕೇಶ್

ಸ್ವಾರ್ಥಿ ರಾಕೇಶ್

''ನೀವು ಇಲ್ಲಿ ತುಂಬಾ ಸ್ವಾರ್ಥಿ ಆಗುತ್ತಿದ್ದೀರಾ. ನಿಮ್ಮದು ಅಂತ ಬಂದರೆ ಸಮರ್ಥಿಸಿಕೊಳ್ಳುತ್ತೀರಾ. ಬೇರೆಯವರ ಭಾವನೆಗಳನ್ನ ಟಾರ್ಚರ್ ಅಂತೀರಾ. ಇಲ್ಲಿ ನಿಮಗೆ ಟಾರ್ಚರ್ ಆಗಿದ್ದೇನು.?'' ಎಂದು ಸುದೀಪ್ ಮತ್ತೆ ಪ್ರಶ್ನಿಸಿದಾಗ, ''ಕವಿತಾ-ಆಂಡಿ ವಿಚಾರಕ್ಕೆ ಮನೆಯಲ್ಲಿ ಮತ್ತೆ ಜಗಳ ಆಗಬಹುದು ಅಂತ ಅನಿಸ್ತು'' ಎಂದರು ರಾಕೇಶ್.

ರಾಕೇಶ್ ಬಾಯಿಗೆ ಬೀಗ

ರಾಕೇಶ್ ಬಾಯಿಗೆ ಬೀಗ

ಏನೋ ಕೇಳಿದರೆ, ಮತ್ತಿನ್ನೇನೋ ಹೇಳಲು ಶುರು ಮಾಡಿದ ರಾಕೇಶ್ ಗೆ ''ಮನೆಯಲ್ಲಿ ಜಗಳ ಆಯ್ತಾ.?'' ಎಂದು ಸುದೀಪ್ ಕೇಳಿದಾಗ, ''ಇಲ್ಲ'' ಎಂದರು. ಆಗ ''ಉತ್ತರ ಸಿಕ್ತಾ'' ಅಂತ ಸುದೀಪ್ ಹೇಳಿದಾಗ ರಾಕೇಶ್ ಬಾಯಿಗೆ ಬೀಗ ಬಿತ್ತು.

More from Filmibeat

English summary
Bigg Boss Kannada 6: Day 41: Sudeep schools Rakesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X