ಪ್ರೀತಿಯ 'ನಾಟಕ' ಆಡಿ ಚೀಪ್ ಆಗುತ್ತಿರುವವರಿಗೆ ಕಿವಿ ಹಿಂಡಿದ ಸುದೀಪ್.!
Recommended Video

'ಬಿಗ್ ಬಾಸ್' ಮನೆಯಲ್ಲಿ ಸೈಲೆಂಟ್ ಆಗಿ ಸೈಡ್ ನಲ್ಲಿದ್ದರೆ ಬೆಲೆ ಇಲ್ಲ. ಪ್ರತಿ ದಿನ ಸಂಚಿಕೆಯಲ್ಲಿ ಕಾಣಿಸಿಕೊಳ್ಳಬೇಕು ಅಂದ್ರೆ, ಕೊಡುವ ಚಟುವಟಿಕೆಯಲ್ಲಿ ಚೆನ್ನಾಗಿ ಪರ್ಫಾರ್ಮ್ ಮಾಡಬೇಕು. ಅದಾಗಿಲ್ಲ ಅಂದ್ರೆ, ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲಬೇಕು ಅನ್ನೋದು ಕೆಲವರ ಗೇಮ್ ಪ್ಲಾನ್.
ಇನ್ನೂ ಕೆಲವರು ಇನ್ನೊಂದು ಹೆಜ್ಜೆ ಮುಂದಕ್ಕೆ ಹೋಗಿ, ಲಿಂಕಪ್ ಮಾಡಿಕೊಂಡು ಲವ್ವಿ-ಡವ್ವಿ ಶುರು ಹಚ್ಚಿಕೊಂಡರೆ ಕಮ್ಮಿ ಅಂದರೂ 90 ದಿನ 'ಬಿಗ್ ಬಾಸ್' ಮನೆಯಲ್ಲಿ ಇರಬಹುದು ಎಂಬ ಸ್ಟ್ರಾಟೆಜಿ ಹೊಂದಿರುತ್ತಾರೆ.
ಮನದಲ್ಲಿ ಪ್ರೀತಿ ಮೂಡಿರುತ್ತೋ, ಇಲ್ವೋ.. ಆದ್ರೆ, 'ಬಿಗ್ ಬಾಸ್' ಮನೆಯ ಮೂಲೆ ಮೂಲೆಯಲ್ಲೂ ಇರುವ ಕ್ಯಾಮರಾಗಳಿಗಾಗಿ ಕೆಲವರು ಪ್ರೀತಿಯ ನಾಟಕ ಆಡಿದ್ದೂ ಇದೆ.!
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮವನ್ನೇ ತೆಗೆದುಕೊಳ್ಳಿ... ಸುಮ್ ಸುಮ್ಮನೆ ಕ್ಯಾತೆ ತೆಗೆಯೋರು ಯಾರು ಅನ್ನೋದು ನಿಮಗೆ ಚೆನ್ನಾಗಿ ಗೊತ್ತಿದೆ. ಇದೇ ಸೀಸನ್ ನಲ್ಲಿ ಮೂರ್ನಾಲ್ಕು ಲಿಂಕಪ್ ಗಳು ಕೂಡ ನಿಮ್ಮ ಕಣ್ಣೆದುರಿಗೆ ಕಾಣುತ್ತಿದೆ.
ಗೇಮ್ ಗಾಗಿ ಪ್ರೀತಿ 'ನಾಟಕ' ಮಾಡುತ್ತಿರುವವರಿಗೆ ಸುದೀಪ್ ಕಿವಿ ಹಿಂಡಿದ ಪರಿ ಇದು...

ಚೀಪ್.!
''ಕಾಣಿಸಿಕೊಳ್ಳಬೇಕು ಅಂತ ಜಗಳ ಮಾಡುತ್ತೀರಾ. ಕಾಣಿಸಿಕೊಳ್ಳಬೇಕು ಅಂತ ಪ್ರೀತಿ ಮಾಡುತ್ತೀರಾ. ಜಗಳ ಓಕೆ, ಪ್ರೀತಿ ಓಕೆ. ಆದ್ರೆ, ಈ ಮನೆಯಲ್ಲಿ ಅವೆರಡನ್ನೂ ಚೀಪ್ ಆಗಿ ಮಾಡುತ್ತಿದ್ದೀರಾ'' - ಕಿಚ್ಚ ಸುದೀಪ್

ಡಿಗ್ನಿಟಿ ಬೇಡ್ವಾ.?
''ಜಗಳಕ್ಕೂ ಒಂದು ಡಿಗ್ನಿಟಿ ಇಲ್ಲ ಅಂದ್ರೆ, ಕಾಣಿಸಿಕೊಂಡು ಏನು ಪ್ರಯೋಜನ.? ಕಾಣಿಸಿಕೊಳ್ತಿರೋದು ಜನ ಇಷ್ಟ ಪಡಲಿ ಅಂತ ತಾನೇ.? ಇದು ಪ್ರೀತಿ-ಪ್ರೇಮಕ್ಕೂ ಅನ್ವಯ. ಈ ಮನೆಯಲ್ಲಿ ಮಿನಿಮಂ ನಾಲ್ಕು ಲವ್ ಸ್ಟೋರಿಗಳಿವೆ'' ಎಂದರು ಸುದೀಪ್

ಇದೇ ಸತ್ಯ.!
''ಒಂದನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.. ಯಾವ ಸೀಸನ್ ನಲ್ಲಿ ಕೂಡ ಪ್ರೀತಿಯ ನಾಟಕ ಆಡಿ... ಬಿಗ್ ಬಾಸ್ ನ ಯಾರೂ ಗೆದ್ದಿಲ್ಲ. ಮನೆಯಲ್ಲಿ ಅಟ್ರ್ಯಾಕ್ಷನ್ ಅಥವಾ ಸುಳ್ಳು ಅಟ್ರ್ಯಾಕ್ಷನ್ ಗಳು ನಿಮ್ಮ ಪ್ರಗತಿಗೆ ವಿರುದ್ಧವಾಗಿ ಹೋಗಬಹುದು'' - ಕಿಚ್ಚ ಸುದೀಪ್

ಘನತೆ ಇರಲಿ
''ಜಗಳಕ್ಕೂ ಘನತೆ ಇರಲಿ. ಪ್ರೀತಿಗೂ ಘನತೆ ಇರಲಿ. ಎಲ್ಲದಕ್ಕಿಂತ ಹೆಚ್ಚಾಗಿ ಒಂದು ಬೌಂಡರಿ ಇರಲಿ. ಯಾಕಂದ್ರೆ, ಹೋದ ಮಾನ ಮತ್ತೆ ಸಿಗಲ್ಲ'' ಅಂತ ಸುದೀಪ್ ಹೇಳಿದರು.


Click it and Unblock the Notifications