'ಬಿಗ್ ಬಾಸ್' ತೋರಿಸಿದ ಸಿನಿಮಾ ನೋಡಿ ಶಾಕ್ ಆದ ಆಂಡ್ರ್ಯೂ.!
ಯಾರ ಮುಖ, ಮೂತಿ ನೋಡದೆ.. ನಾಲಿಗೆಗೆ ಫಿಲ್ಟರ್ ಇಲ್ಲದೆ.. ಅನಿಸಿದ್ದನ್ನ ನೇರವಾಗಿ ಹೇಳುವ 'ಬಿಗ್ ಬಾಸ್ ಕನ್ನಡ-6' ಸ್ಪರ್ಧಿ ಆಂಡ್ರ್ಯೂ. ಇಲ್ಲಿಯವರೆಗೂ 'ಬಿಗ್ ಬಾಸ್' ಮನೆಯಲ್ಲಿ ಆಂಡ್ರ್ಯೂ ಬೇಜಾನ್ ಗಲಾಟೆಗಳನ್ನು ಮಾಡಿಕೊಂಡಿದ್ದಾರೆ. ಆದ್ರೆ, ತಮ್ಮ ಬೆನ್ನ ಹಿಂದೆ ಏನು ನಡೆಯುತ್ತಿದೆ ಎಂಬ ವಿಷಯ ಆಂಡ್ರ್ಯೂಗೆ ಗೊತ್ತೇ ಇರಲಿಲ್ಲ.
ಇಷ್ಟು ದಿನ ತಮ್ಮದೇ ಲೋಕದಲ್ಲಿ ಇದ್ದ ಆಂಡ್ರ್ಯೂಗೆ 'ಬಿಗ್ ಬಾಸ್' ವಿಶೇಷ ಸಿನಿಮಾ ತೋರಿಸಿ ತಲೆಗೆ ಹುಳ ಬಿಟ್ಟಿದ್ದಾರೆ.
'ಬಿಗ್ ಬಾಸ್ ನಗರ' ಚಟುವಟಿಕೆಯ ಅನುಸಾರ, ಮನೆಯ ಸದಸ್ಯರಿಗೆ 'ಸಿನಿಮಾ' ನೋಡುವ ಅವಕಾಶವನ್ನು 'ಬಿಗ್ ಬಾಸ್' ಕಲ್ಪಿಸಿದ್ದರು. ಅದರಂತೆ ಇನ್ನೂರು ರೂಪಾಯಿ ಕಟ್ಟಿ 'ಚಿತ್ರಮಂದಿರ'ಕ್ಕೆ ಹೋದ ಆಂಡಿಗೆ ದೊಡ್ಡ ಆಘಾತವೇ ಕಾದಿತ್ತು. ಮುಂದೆ ಓದಿರಿ...

ಚಿತ್ರಮಂದಿರದಲ್ಲಿ ಆಂಡ್ರ್ಯೂ ನೋಡಿದ್ದೇನು.?
ಶಶಿ ಮತ್ತು ಕವಿತಾ ನಡುವಿನ ಆತ್ಮೀಯ ಮಾತುಕತೆಯನ್ನ ಆಂಡ್ರ್ಯೂ 'ಬಿಗ್ ಬಾಸ್ ಚಿತ್ರಮಂದಿರ'ದಲ್ಲಿ ವೀಕ್ಷಿಸಿದರು. ಇಬ್ಬರ ನಡುವೆ ಬೇರೇನೋ ನಡೆಯುತ್ತಿದೆ ಎಂಬ ಕ್ಲೂ ಆಂಡ್ರ್ಯೂಗೆ ಸಿಕ್ತು.

ಆಂಡಿ ಸ್ಟ್ರಾಟೆಜಿ ಬಗ್ಗೆ ಚರ್ಚೆ
ಹುಡುಗಿ ಜೊತೆ ಲಿಂಕಪ್ ಮಾಡಿಕೊಂಡರೆ 'ಬಿಗ್ ಬಾಸ್' ಮನೆಯಲ್ಲಿ ಹೆಚ್ಚು ದಿನ ಇರಬಹುದು ಎಂಬುದು ಆಂಡಿ ಸ್ಟ್ರಾಟೆಜಿ ಆಗಿರಬಹುದು ಎಂದು ಧನರಾಜ್, ನವೀನ್ ಚರ್ಚೆ ಮಾಡಿರುವುದೂ ಕೂಡ ಆಂಡಿ ಗಮನಕ್ಕೆ ಬಂತು.

ಬಲೂನ್ ಒಡೆದು ಹಾಕಿದ ಜಯಶ್ರೀ
ಜಯಶ್ರೀ ತಲೆ ಮೇಲೆ ಮೊಟ್ಟೆ ಒಡೆದ ಮೇಲೆ ಅಕೆಗೆ ಒಂದು ಬಲೂನಿನ ಜೊತೆಗೆ 'ಸಾರಿ' ಎಂದು ಪೇಪರ್ ನಲ್ಲಿ ಆಂಡಿ ಬರೆದುಕೊಟ್ಟಿದ್ದರು. ಆದ್ರೆ, ಜಯಶ್ರೀ ಆ ಬಲೂನ್ ನ ಒಡೆದು ಹಾಕಿ, ಬಳಿಕ 'ಸಾರಿ' ಪತ್ರವನ್ನ ಕಸದ ಬುಟ್ಟಿಗೆ ಹಾಕಿದ್ದನ್ನ ನೋಡಿ ಆಂಡಿಗೆ ಶಾಕ್ ಆಯ್ತು.

ನವೀನ್ ಮೇಲೆ ಸಿಟ್ಟು
ಕವಿತಾಗೆ ತಮಗಿಂತ ನವೀನ್ ಮೇಲೆ ಹೆಚ್ಚು ಸಿಟ್ಟಿದದ್ದು ಆಂಡ್ರ್ಯೂಗೆ ಖಾತರಿ ಆಯ್ತು. ಇದನ್ನೆಲ್ಲಾ ಕಣ್ತುಂಬಿಕೊಂಡ ಮೇಲೆ ''ಇನ್ನೂರು ಅಲ್ಲ.. ಇಪ್ಪತ್ತು ಲಕ್ಷ ರೂಪಾಯಿ ಬೆಲೆ ಬಾಳುವ ಸಿನಿಮಾ ಇದು'' ಎಂದು ಹೇಳುತ್ತಿದ್ದರು.

ಬೇರೆ ಪ್ರಪಂಚ ಇದೆ
''ಇನ್ನೊಬ್ಬರು ಎಷ್ಟು ಕಚಡಾ ಅಂತ ಗೊತ್ತಾಯಿತು. ಈ ಮನೆಯಲ್ಲಿ ಯಾರು ಯಾರಿಗೂ ಫ್ರೆಂಡ್ಸ್ ಅಲ್ಲ. ಒಳಗೆ ಹೋಗಿ ನೋಡಿ ಬೇರೆ ಪ್ರಪಂಚ ಇದೆ. ನಾವಿಲ್ಲಿ ನೋಡುವುದೇನೂ ನಿಜ ಅಲ್ಲ'' ಅಂತ ಹೇಳುತ್ತಿದ್ದ ಆಂಡಿ, ಬೇಕು ಬೇಕು ಅಂತ ''ಶಶಿ-ಕವಿತಾ ಅಣ್ಣ ತಂಗಿ'' ಎಂದು ಹೇಳಲು ಎಲ್ಲರಿಗೂ ಒತ್ತಾಯಿಸಿದರು.


Click it and Unblock the Notifications











