ಶಶಿ ಮೇಲೆ ಕವಿತಾಗೆ ಸಿಟ್ಟು: 'ಬಿಗ್ ಬಾಸ್' ಮನೆಯಲ್ಲಿ ಹೀಗೂ ಉಂಟು.!
Recommended Video

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ತುಂಬಾ ಕ್ಲೋಸ್ ಆಗಿ ಕಾಣಿಸಿಕೊಂಡಿರುವವರು ಶಶಿ ಮತ್ತು ಕವಿತಾ. ಹಾಗ್ನೋಡಿದ್ರೆ, 'ತ್ರಿಮೂರ್ತಿ'ಗಳಾದ ಶಶಿ, ಕವಿತಾ ಮತ್ತು ಜಯಶ್ರೀ ಗ್ರೂಪ್ ಮಾಡಿಕೊಂಡು ಆಟ ಆಡುತ್ತಿದ್ದಾರೆ.
ಶಶಿ ಮತ್ತು ಕವಿತಾ ನಡುವೆ ಇಲ್ಲಿಯವರೆಗೂ ಯಾವುದೇ ಭಿನ್ನಾಭಿಪ್ರಾಯ ಬಂದಿರಲಿಲ್ಲ. ಅಸಲಿಗೆ, ಕವಿತಾ ಪರ ದನಿ ಎತ್ತಲು ಮುಂದಾದ ಶಶಿ ಕೈ ಮೂಳೆ ಮುರಿದುಕೊಂಡಿದ್ದು ನಿಮಗೆಲ್ಲಾ ಗೊತ್ತೇ ಇದೆ.
ಹೀಗಿರುವ ಶಶಿ ಮತ್ತು ಕವಿತಾ ನಡುವೆ ನಿನ್ನೆ 'ಬಿಗ್ ಬಾಸ್' ಮನೆಯಲ್ಲಿ ಜಟಾಪಟಿ ನಡೆದಿದೆ. 'ಬಿಗ್ ಬಾಸ್ ನಗರ' ಟಾಸ್ಕ್ ನಲ್ಲಿ ನಿಯಮಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದ ಶಶಿ ವಿರುದ್ಧ ಕವಿತಾ ಗೌಡ ಗರಂ ಆಗಿದ್ದಾರೆ. ಮುಂದೆ ಓದಿರಿ...

'ಬಿಗ್ ಬಾಸ್ ನಗರ'
ಈ ವಾರ ಸ್ಪರ್ಧಿಗಳಿಗೆ 'ಬಿಗ್ ಬಾಸ್ ನಗರ' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನೀಡಲಾಗಿತ್ತು. ಚಟುವಟಿಕೆ ಅನುಸಾರ, ಅಧಿಕಾರಿಗಳ ಪಾತ್ರ ನಿರ್ವಹಿಸಿದವರು ಆಂಡ್ರ್ಯೂ ಮತ್ತು ನಯನ. ಅಧಿಕಾರಿಗಳಿಗೆ 'ಬಿಗ್ ಬಾಸ್ ನಗರ'ದ ನಿಯಮ ರೂಪಿಸುವ ಅಧಿಕಾರ ನೀಡಲಾಗಿತ್ತು.

ಅಡುಗೆ ಮಾಡುವ ವಿಚಾರಕ್ಕೆ ಗಲಾಟೆ
ಅಡುಗೆ ಮಾಡುವ ವಿಚಾರದ ಬಗ್ಗೆ 'ಬಿಗ್ ಬಾಸ್ ನಗರದ'ದ ನಾಗರೀಕರು ಮತ್ತು ಅಧಿಕಾರಿಗಳ ನಡುವೆ ಜಟಾಪಟಿ ಆಗಿತ್ತು. ಈ ವೇಳೆ ಅಧಿಕಾರಿಗಳು ರೂಪಿಸಿದ ನಿಯಮಗಳ ಬಗ್ಗೆ ಶಶಿ ಚಕಾರ ಎತ್ತಲಿಲ್ಲ. ಆಂಡ್ರ್ಯೂ ಮಾಡಿದ ನಿಯಮಗಳಿಗೆಲ್ಲಾ ಶಶಿ ತಲೆದೂಗಿದರು ಎಂಬುದರ ಬಗ್ಗೆ ಕವಿತಾಗೆ ಬೇಸರ ಇದೆ.

ಆಂಡ್ರ್ಯೂ ವಿರುದ್ಧ ಕವಿತಾ ಗರಂ
ಆಗಾಗ ನಿಯಮಗಳನ್ನು ಬದಲಿಸುತ್ತಿದ್ದ ಆಂಡ್ರ್ಯೂ ವಿರುದ್ಧ ಕವಿತಾ ಗರಂ ಆಗಿದ್ದರು. ''ನಿಯಮಗಳ ಬಗ್ಗೆ ಶಶಿ ಕ್ಲಿಯರ್ ಆಗಿ ಮಾತನಾಡಲಿಲ್ಲ. ಮಾತನಾಡಿದ್ದರೆ, ನಾನು ರಾತ್ರಿ ಜೈಲಿನಲ್ಲಿ ಕಳೆಯುವ ಅವಶ್ಯಕತೆ ಇರಲಿಲ್ಲ'' ಎಂಬುದು ಕವಿತಾ ವಾದ.

ಕವಿತಾಗೆ ಕೋಪ ಕಮ್ಮಿ ಆಗಲಿಲ್ಲ
''ನಿಯಮಗಳನ್ನು ಅಧಿಕಾರಿಗಳು ಬದಲಾಯಿಸುತ್ತಿದ್ದಾರೆ. ಅವರಿಗೆ ಅಧಿಕಾರ ಇದೆ. ನಾನು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಅಡುಗೆ ಮಾಡುವ ವಿಚಾರದಲ್ಲಿ ಇಡೀ ತಂಡ ತೆಗೆದುಕೊಂಡ ನಿರ್ಧಾರದ ಪರ ನಾನು ನಿಂತಿರುವೆ'' ಎಂದು ಶಶಿ ಸ್ಪಷ್ಟನೆ ಕೊಟ್ಟರು. ಆದರೂ, ಶಶಿ ಮೇಲೆ ಕವಿತಾಗೆ ಸಿಟ್ಟು ಕಮ್ಮಿ ಆಗಲಿಲ್ಲ. ಇಬ್ಬರ ನಡುವಿನ ಸಿಟ್ಟು ಸದ್ಯ ಬೂದಿ ಮುಚ್ಚಿದ ಕೆಂಡದಂತಿದೆ.


Click it and Unblock the Notifications











