ಕವಿತಾ ಗೌಡಗೆ 'ಡರ್ಟಿಯೆಸ್ಟ್ ಸೆಲೆಬ್ರಿಟಿ' ಎಂದ ಆಂಡ್ರ್ಯೂ

Recommended Video

Bigg Boss Kannada Season 6 : ಕವಿತಾ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿದ ಆಂಡ್ರ್ಯೂ.. | Oneindia Kannada

'ಬಿಗ್ ಬಾಸ್' ಮನೆಯಲ್ಲಿ ಕವಿತಾ ಗೌಡ ಮತ್ತು ಆಂಡ್ರ್ಯೂ ಒಂಥರಾ ಎಣ್ಣೆ-ಸೀಗೇಕಾಯಿ, ಹಾವು-ಮುಂಗುಸಿ ಇದ್ದ ಹಾಗೆ. ನಾಮಿನೇಷನ್ ವೇಳೆ ಡೀಲ್ ಮಾಡಿಕೊಂಡು ಕೊನೆಗೆ ಕಿತ್ತಾಡಿಕೊಂಡ ಮೇಲೆ ಆಂಡ್ರ್ಯೂ ಕಂಡ್ರೆ ಕವಿತಾಗೆ ಆಗ್ಬರ್ತಿಲ್ಲ.

ಇನ್ನೂ 'ಬಿಗ್ ಬಾಸ್ ನಗರ' ಟಾಸ್ಕ್ ನಲ್ಲಿ ಕವಿತಾ ವರ್ತಿಸಿದ ರೀತಿ ನೋಡಿ ಆಂಡ್ರ್ಯೂಗೆ ಸಿಕ್ಕಾಪಟ್ಟೆ ಕಿರಿಕಿರಿ ತಂದಿತ್ತು. ಹೀಗಾಗಿ, ಕವಿತಾ ಮನೆಯ ಕ್ಯಾಪ್ಟನ್ ಅನ್ನೋದನ್ನೂ ಲೆಕ್ಕಿಸದೆ, ಕಳಪೆ ಪ್ರದರ್ಶನಕ್ಕೆ ಆಕೆಯ ಹೆಸರನ್ನು ಆಂಡ್ರ್ಯೂ ತೆಗೆದುಕೊಂಡರು.

''ಟಾಸ್ಕ್ ನಲ್ಲಿ ಕವಿತಾಗೆ ಇಂಟ್ರೆಸ್ಟ್ ಇರಲಿಲ್ಲ. ಇಡೀ ಮನೆಯಲ್ಲಿ ಕವಿತಾ ಸೋಮಾರಿ. ಯಾವತ್ತಾದರೂ ಎದ್ದು ನನ್ನ ಸ್ಪೀಡ್ ನಲ್ಲಿ ಓಡೆ.. ಒಪ್ಪಿಕೊಳ್ಳುವೆ'' ಎಂದು ಆಂಡ್ರ್ಯೂ ಎಲ್ಲರ ಮುಂದೆ ಕವಿತಾಗೆ ಹೇಳಿಬಿಟ್ಟರು.

Bigg Boss Kannada 6: Day 45: Kavitha Gowda is the dirtiest celebrity says Andrew

ಆಂಡ್ರ್ಯೂ ಏಕವಚನ ಪ್ರಯೋಗ ಮಾಡಿದ್ದಕ್ಕೆ, ''ಮರ್ಯಾದೆ ಕೊಟ್ಟು ಮರ್ಯಾದೆ ತಗೋ.. ಹೋಗೇ, ಬಾರೆ ಅನ್ನೋಕೆ ನೀನು ಯಾರು.?'' ಎಂದು ಕವಿತಾ ಗೌಡ ಗರಂ ಆದರು.

''ನಿನ್ನೆ ರಾತ್ರಿ ನೀನು ಏನೇನು ಮಾತನಾಡಿದೆ ಅಂತ ಗೊತ್ತು. ಮಿಸ್ ಕವಿತಾ.. ಡರ್ಟಿಯಸ್ಟ್ ಸೆಲೆಬ್ರಿಟಿ ನೀನು. ಮನೆಯಲ್ಲಿ ಇಷ್ಟು ಗಲೀಜನ್ನು ನಾನು ನೋಡಿಲ್ಲ'' ಅಂತ ಆಂಡ್ರ್ಯೂ ಹೇಳಿದ್ದಕ್ಕೆ, ''ನಿನ್ನಂಥ ಚೀಪ್, ಗಲೀಜು ನಾನು ಇಡೀ ಜಗತ್ತಿನಲ್ಲಿ ನೋಡಿಲ್ಲ'' ಎನ್ನುತ್ತ ಕವಿತಾ ತಿರುಗೇಟು ಕೊಟ್ಟರು.

ಒಟ್ನಲ್ಲಿ, ಕವಿತಾ-ಆಂಡ್ರ್ಯೂ ನಡುವೆ ಎಲ್ಲವೂ ಸರಿಯಿಲ್ಲ. ಸದ್ಯಕ್ಕೆ ಬೂದಿ ಮುಚ್ಚಿದ ಕೆಂಡದ ಹಾಗೆ ಇರುವ ಅವರಿಬ್ಬರ ಜಗಳ ಮತ್ತೆ ಯಾವಾಗ ಭುಗಿಲೆಳುತ್ತೋ, ಗೊತ್ತಿಲ್ಲ.

More from Filmibeat

English summary
Bigg Boss Kannada 6: Day 45: Kavitha Gowda is the dirtiest celebrity says Andrew.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X