ಕ್ಯಾಪ್ಟನ್ ಆದರೂ ಕವಿತಾಗೆ ಜೈಲು ವಾಸ ಮಾತ್ರ ತಪ್ಪಲಿಲ್ಲ.!
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ ಏಳನೇ ವಾರದ ಕ್ಯಾಪ್ಟನ್ ಆಗಿರುವವರು ನಟಿ ಕವಿತಾ ಗೌಡ. ಕ್ಯಾಪ್ಟನ್ ಆದ್ಮೇಲೆ, ಮನೆಯ ಎಲ್ಲಾ ಚಟುವಟಿಕೆಗಳ ಮೇಲೆ ಗಮನ ಹರಿಸಬೇಕಾದ ಕವಿತಾ ಗೌಡ ಲುಕ್ಷರಿ ಬಜೆಟ್ ಟಾಸ್ಕ್ ನಲ್ಲಿ ಕಳಪೆ ಪ್ರದರ್ಶನ ನೀಡಿ ಜೈಲು ಸೇರಿದ್ದಾರೆ.
'ಬಿಗ್ ಬಾಸ್ ನಗರ' ಟಾಸ್ಕ್ ಚಾಲ್ತಿಯಲ್ಲಿ ಇರುವಾಗಲೇ, ನಿದ್ದೆಗೆ ಜಾರಿದ ಕ್ಯಾಪ್ಟನ್ ಕವಿತಾ ಗೌಡ 'ಎದ್ದೇಳು ಮಂಜುನಾಥ..' ಹಾಡು ಹಾಕಿಸಿಕೊಂಡಿದ್ದರು.
ಇನ್ನೂ ಅಧಿಕಾರಿಗಳ ನಿಯಮಗಳನ್ನು ಪಾಲಿಸದೇ, ಎರಡ್ಮೂರು ಬಾರಿ ಜೈಲು ಪಾಲಾಗಿದ್ದ ಕವಿತಾಗೆ ಬಹುಮತದ ಮೇರೆಗೆ ಕಳಪೆ ಪ್ರದರ್ಶನದ ಹಣೆಪಟ್ಟಿ ನೀಡಲಾಗಿದೆ. ಕ್ಯಾಪ್ಟನ್ ಪಟ್ಟಕ್ಕೆ ಏರಿದವರು 'ಬಿಗ್ ಬಾಸ್' ಮನೆಯ ಎಲ್ಲಾ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಆದ್ರೆ, ಕೆಲ ನಿಯಮಗಳನ್ನು ಉಲ್ಲಂಘಿಸಿ ಕವಿತಾ 'ಕಳಪೆ' ಬೋರ್ಡ್ ಪಡೆದು ಜೈಲಿನ ಕಡೆ ಮುಖ ಮಾಡಿದ್ದಾರೆ. ಮುಂದೆ ಓದಿರಿ...

ಜೈಲಿನಲ್ಲಿ ಕವಿತಾ ಮತ್ತು ನಯನ
'ಬಿಗ್ ಬಾಸ್ ನಗರ' ಚಟುವಟಿಕೆಯಲ್ಲಿ ಕೆಲ ನಿಯಮಗಳನ್ನು ರೂಪಿಸಿ ಅಧಿಕಾರಿ ಆಂಡಿ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದ್ರೆ, ಟಾಸ್ಕ್ ಕೊನೆಗೆ ಅಧಿಕಾರಿಗಳ ಪೈಕಿ ಹೆಚ್ಚು ಹಣ ಹೊಂದಿದ್ದ ಆಂಡಿ 'ಕ್ಯಾಪ್ಟನ್ ಪ್ರತಿಸ್ಪರ್ಧಿ' ಆದರು. ಹೀಗಾಗಿ, ಆಂಡಿ ಮೇಲಿನ ಕೋಪ ಅಧಿಕಾರಿ ನಯನ ಕಡೆಗೆ ಶಿಫ್ಟ್ ಆಯ್ತು. ಅಲ್ಲಿಗೆ, ನಯನ ಮತ್ತು ಕವಿತಾ 'ಕಳಪೆ' ಹಣೆಪಟ್ಟಿ ಹೊತ್ತು ಜೈಲಿಗೆ ತೆರಳಿದರು.

ಕ್ಯಾಪ್ಟನ್ ಆಗಲು ಅರ್ಹತೆ ಪಡೆದ ಅಕ್ಷತಾ
'ಬಿಗ್ ಬಾಸ್ ನಗರ' ಚಟುವಟಿಕೆಯಲ್ಲಿ ಆಟೋ ಚಾಲಕಿಯ ಪಾತ್ರ ನಿರ್ವಹಿಸಿದ್ದ ಅಕ್ಷತಾ ಪಾಂಡವಪುರ ಅತಿ ಹೆಚ್ಚು ಹಣ ಗಳಿಸಿದ್ದರು. ಹೀಗಾಗಿ, ಆಕೆ ಕ್ಯಾಪ್ಟನ್ ಪ್ರತಿಸ್ಪರ್ಧಿ ಆದರು.

ಉತ್ತಮ ಪ್ರದರ್ಶನ ನೀಡಿದವರು..
'ಬಿಗ್ ಬಾಸ್ ನಗರ' ಚಟುವಟಿಕೆಯಲ್ಲಿ ಧನರಾಜ್ ಮತ್ತು ಮುರಳಿ ಉತ್ತಮ ಪ್ರದರ್ಶನ ನೀಡಿದ್ದಾರೆಂದು ಬಹುತೇಕರು ಅಭಿಪ್ರಾಯ ಪಟ್ಟಿದ್ದಾರೆ. ಹೀಗಾಗಿ, ಇವರಿಬ್ಬರೂ ಕೂಡ ಕ್ಯಾಪ್ಟನ್ ರೇಸ್ ನಲ್ಲಿದ್ದಾರೆ.

ಯಾರಾಗಬಹುದು ಮುಂದಿನ ಕ್ಯಾಪ್ಟನ್.?
ಅಕ್ಷತಾ, ಧನರಾಜ್, ಮುರಳಿ ಮತ್ತು ಆಂಡ್ರ್ಯೂ ಪೈಕಿ ಮುಂದಿನ ಕ್ಯಾಪ್ಟನ್ ಯಾರಾಗಬಹುದು.? ಕ್ಯಾಪ್ಟನ್ ಆಯ್ಕೆಗಾಗಿ 'ಬಿಗ್ ಬಾಸ್' ಯಾವ ಟಾಸ್ಕ್ ಕೊಡ್ತಾರೆ ಅಂತ ಇಂದಿನ ಸಂಚಿಕೆಯಲ್ಲಿ ನೋಡಬೇಕು.


Click it and Unblock the Notifications











