'ಬಿಗ್ ಬಾಸ್' ಮನೆಯಲ್ಲಿ ಹೈಡ್ರಾಮಾ: ಬಕ್ರಾ ಆದ ರಾಕೇಶ್-ಅಕ್ಷತಾ.!

Recommended Video

'ಬಿಗ್ ಬಾಸ್' ಮನೆಯಲ್ಲಿ ಹೈಡ್ರಾಮಾ: ಬಕ್ರಾ ಆದ ರಾಕೇಶ್..! | FILMIBEAT KANNADA

ಅಪ್ಪಿ-ತಪ್ಪಿ ಅಕ್ಷತಾ ಔಟ್ ಆದರೆ.. ರಾಕೇಶ್ ಪರಿಸ್ಥಿತಿ ಹೇಗಾಗಬಹುದು ಎಂಬುದರ ಝಲಕ್ ನಿನ್ನೆ ಸಿಕ್ತು. 'ಬಿಗ್ ಬಾಸ್' ಮನೆಯ ಸ್ಪರ್ಧಿಗಳೇ ಅಕ್ಷತಾ ರನ್ನ ವೋಟ್ ಔಟ್ ಮಾಡುವ ಸನ್ನಿವೇಶ ಬಂದರೆ, ರಾಕೇಶ್ ಹೇಗೆಲ್ಲಾ ಪ್ಲಾನಿಂಗ್ ಮಾಡಬಹುದು ಎಂಬುದರ ದರ್ಶನವೂ ನಿನ್ನೆ ವೀಕ್ಷಕರಿಗೆ ಲಭಿಸಿತು.

ಒಟ್ನಲ್ಲಿ, 'ಬಿಗ್ ಬಾಸ್' ಮಾಡಿದ ಪ್ಲಾನ್ ನಲ್ಲಿ ಅಕ್ಷತಾ-ರಾಕೇಶ್ ಬಕ್ರಾ ಆದರು. ಎಲ್ಲರೂ ತಮಾಷೆ ನೋಡುತ್ತಿದ್ದರೆ, ಅಕ್ಷತಾ ಮತ್ತು ರಾಕೇಶ್ ಮಾತ್ರ ಕಣ್ಣೀರಲ್ಲಿ ಕೈತೊಳೆಯುತ್ತಿದ್ದರು.

''ನಾನೇ ಪ್ಲೇಯರ್, ಮಾಸ್ಟರ್ ಮೈಂಡ್'' ಅಂತೆಲ್ಲಾ ಬೀಗುವ ರಾಕೇಶ್ ಗೆ 'ಬಿಗ್ ಬಾಸ್' ಕೊಟ್ಟಿದ್ದ ಪ್ರಾಂಕ್ ಚಟುವಟಿಕೆ ಬಗ್ಗೆ ಎಳ್ಳಷ್ಟು ಅನುಮಾನ ಬರಲೇ ಇಲ್ಲ. ಅಕ್ಷತಾ ರನ್ನ ಸೇಫ್ ಮಾಡಲು ಆಗದೆ ಗೋಳೋ ಅಂತ ರಾಕೇಶ್ ಕಣ್ಣೀರಿಡುತ್ತಲೇ ಇದ್ದರು. ಮುಂದೆ ಓದಿರಿ...

'ಬಿಗ್ ಬಾಸ್' ನೀಡಿದ್ದ ಚಟುವಟಿಕೆ ಏನು.?

'ಬಿಗ್ ಬಾಸ್' ನೀಡಿದ್ದ ಚಟುವಟಿಕೆ ಏನು.?

'ಮಿಡ್ ವೀಕ್ ಎಲಿಮಿನೇಷನ್' ಹೆಸರಿನಲ್ಲಿ ಅಕ್ಷತಾ ಮತ್ತು ರಾಕೇಶ್ ರನ್ನ ಪ್ರಾಂಕ್ ಮಾಡುವಂತೆ ಧನರಾಜ್ ಗೆ 'ಬಿಗ್ ಬಾಸ್' ವಿಶೇಷ ಚಟುವಟಿಕೆ ನೀಡಿದ್ದರು. ಇದಕ್ಕಾಗಿ ಮನೆಯ ಎಲ್ಲಾ ಸದಸ್ಯರ ಸಹಾಯವನ್ನು ಧನರಾಜ್ ಪಡೆದರು.

ಅಕ್ಷತಾಗೆ ಹೆಚ್ಚು ಮತ ಬರಬೇಕಿತ್ತು.!

ಅಕ್ಷತಾಗೆ ಹೆಚ್ಚು ಮತ ಬರಬೇಕಿತ್ತು.!

ನಾಮಿನೇಟ್ ಆಗಿರುವ ಸದಸ್ಯರ ಪೈಕಿ ಒಬ್ಬರನ್ನು ಒಮ್ಮತದಿಂದ ಔಟ್ ಮಾಡಬೇಕಾಗಿತ್ತು. ಇದರಲ್ಲಿ ಅಕ್ಷತಾಗೆ ಹೆಚ್ಚು ಮತಗಳು ಬರುವ ಹಾಗೆ ನೋಡಿಕೊಳ್ಳುವ ಜವಾಬ್ದಾರಿ ಧನರಾಜ್ ಮೇಲಿತ್ತು.

ಎಲ್ಲರ ಬಳಿ ಚರ್ಚೆ ಮಾಡಿದ ಧನರಾಜ್

ಎಲ್ಲರ ಬಳಿ ಚರ್ಚೆ ಮಾಡಿದ ಧನರಾಜ್

ರಾಕೇಶ್-ಅಕ್ಷತಾ ರನ್ನ ಹೊರತು ಪಡಿಸಿ, ಎಲ್ಲರಿಗೂ 'ಇದು ಪ್ರಾಂಕ್ ಚಟುವಟಿಕೆ' ಅಂತ ಧನರಾಜ್ ಹೇಳಿದರು. ಎಲ್ಲರೂ ಚೆನ್ನಾಗಿಯೇ ಡ್ರಾಮಾ ಮಾಡಿದರು.

ಪ್ಲಾನಿಂಗ್ ಶುರು ಮಾಡಿದ ರಾಕೇಶ್

ಪ್ಲಾನಿಂಗ್ ಶುರು ಮಾಡಿದ ರಾಕೇಶ್

ಇದು ನಿಜವಾದ ಎಲಿಮಿನೇಷನ್ ಎಂದುಕೊಂಡು ''ನಮ್ಮ ಗ್ರೂಪ್ ನಲ್ಲಿ ಒಂದು ಹೆಸರು ಡಿಸೈಡ್ ಮಾಡಿದರೆ, ನಾವು ಸ್ಟ್ರಾಂಗ್ ಆಗಿ ಇರುತ್ತೇವೆ'' ಅಂತ ಸೋನು ಪಾಟೀಲ್ ವಿರುದ್ಧ ರಾಕೇಶ್ ಪ್ಲಾನ್ ಮಾಡಿದರು. ಹೀಗಿರುವಾಗಲೇ, ಅಕ್ಷತಾ ಕಣ್ಣೀರು ಹಾಕಲು ಆರಂಭಿಸಿದರು. ಆಗ, ''ನೀನು ಹೋಗ್ತಾಯಿಲ್ಲ. ಸ್ಟ್ರಾಂಗ್ ಆಗಿ ತಗೋ.. ಗ್ರೂಪ್ ಮಾಡಿದ್ದೇನೆ, ಜೊತೆಯಲ್ಲಿ ನಿಂತ್ಕೋ..'' ಅಂತ ಅಕ್ಷತಾಗೆ ರಾಕೇಶ್ ಧೈರ್ಯ ಹೇಳುತ್ತಿದ್ದರು.

ಅಕ್ಷತಾ ತಲೆಯಲ್ಲಿ ಇದ್ದದ್ದು ಏನು.?

ಅಕ್ಷತಾ ತಲೆಯಲ್ಲಿ ಇದ್ದದ್ದು ಏನು.?

ಜಯಶ್ರೀ ಮತ್ತು ರಶ್ಮಿ ಪೈಕಿ ಒಬ್ಬರು ಔಟ್ ಆಗಲಿ ಅನ್ನೋದು ಅಕ್ಷತಾ ತಲೆಯಲ್ಲಿ ಇತ್ತು. ಆದ್ರೆ, ಸೋನು ಪಾಟೀಲ್ ರನ್ನ ರಾಕೇಶ್ ಟಾರ್ಗೆಟ್ ಮಾಡಿದ್ದರು. ಯಾವಾಗ, ಬೇರೆಯೆವರೆಲ್ಲಾ ಅಕ್ಷತಾ ವಿರುದ್ಧ ವೋಟ್ ಮಾಡಿದರೋ... ಧನರಾಜ್ ರನ್ನ ರಾಕೇಶ್ ಟಾರ್ಗೆಟ್ ಮಾಡಿದರು.

ಅಕ್ಷತಾ ವಿರುದ್ಧ ಅತಿ ಹೆಚ್ಚು ಮತ

ಅಕ್ಷತಾ ವಿರುದ್ಧ ಅತಿ ಹೆಚ್ಚು ಮತ

ಮುರಳಿ, ಕವಿತಾ, ಶಶಿ, ನವೀನ್, ಜಯಶ್ರೀ, ಸೋನು ಸೇರಿದಂತೆ ಬಹುತೇಕರು ಅಕ್ಷತಾ ವಿರುದ್ಧ ಮತ ಚಲಾಯಿಸಿದರು. ಇದನ್ನ ನೋಡಿ ''ಅಧಿಕಾರ ಮಿಸ್ ಯೂಸ್ ಆಗುತ್ತಿದೆ'' ಎನ್ನುತ್ತಾ ಧನರಾಜ್ ವಿರುದ್ಧ ರಾಕೇಶ್ ಮತ್ತು ಅಕ್ಷತಾ ಮತ ಹಾಕಿದರು.

ಗುಡ್ನೆಸ್ ವರ್ಕ್ ಆಗಲಿಲ್ಲ.!

ಗುಡ್ನೆಸ್ ವರ್ಕ್ ಆಗಲಿಲ್ಲ.!

''ಪ್ಲೀಸ್ ಕಾಪಾಡು ಸೋನು'' ಅಂತ ಅಕ್ಷತಾ ಪರವಾಗಿ ರಾಕೇಶ್ ಬೇಡಿಕೊಂಡಿದ್ದರು. ಆದ್ರೆ, ಗುಡ್ನೆಸ್ ಹೆಸರಿನಲ್ಲಿ ಅದೇ ಸೋನು ವಿರುದ್ಧ ರಾಕೇಶ್ ವೋಟ್ ಚೇಂಜ್ ಮಾಡಿದರು. ರಾಕೇಶ್ ಪ್ಲಾನ್ ತಲೆಕೆಳಗಾಯಿತು. ಕೊನೆಗೆ ಅಕ್ಷತಾ ಬ್ಯಾಗ್ ಪ್ಯಾಕ್ ಮಾಡಬೇಕಾಯಿತು.

ಕಣ್ಣೀರಿಟ್ಟ ಅಕ್ಷತಾ

ಕಣ್ಣೀರಿಟ್ಟ ಅಕ್ಷತಾ

''ಈ ವಾರ ಹೇಗಾದರೂ ಉಳಿಸಿಕೊಳ್ಳಲಿ, ನನ್ನ ನಡತೆ ಮೇಲೆ ಕೆಟ್ಟ ಹೆಸರು ಬರುತ್ತದೆ'' ಅಂತ ಅಕ್ಷತಾ ಕಣ್ಣೀರು ಹಾಕಿದ್ದರು. ಆದರೂ ಮತಗಳಲ್ಲಿ ಬದಲಾವಣೆ ಆಗಲಿಲ್ಲ. ಹೀಗಾಗಿ, ಅಕ್ಷತಾ ಹೊರಟು ನಿಂತರು. ರಾಕೇಶ್ ಕಣ್ಣೀರು ಸುರಿಸಿದರು.

ಕಣ್ಣೀರು..

ಕಣ್ಣೀರು..

''ನಾನೆಷ್ಟು ಟ್ರೈ ಮಾಡಿದೆ ಪುಟ್ಟ..'' ಅಂತ ರಾಕೇಶ್ ಅಳುತ್ತಿದ್ದರೆ, ''ಈ ವಾರ ನಿನಗೆ ತುಂಬಾ ಹೊಟ್ಟೆ ಉರಿಸಿದ್ದೇನೆ. ಮಾತನಾಡುವುದು ಬೇಡ ಅಂತ ಹೇಳಿದ್ದರೂ, ನೀನು ನನ್ನನ್ನ ಕನ್ವಿನ್ಸ್ ಮಾಡುತ್ತಿದ್ದೆ'' ಅಂತ ಅಕ್ಷತಾ ಭಾವುಕರಾಗಿದ್ದರು.

ಓಡಿ ಬಂದು ತಬ್ಬಿಕೊಂಡ ಅಕ್ಷತಾ

ಓಡಿ ಬಂದು ತಬ್ಬಿಕೊಂಡ ಅಕ್ಷತಾ

ಕಡೆಗೆ 'ಇದು ಪ್ರಾಂಕ್' ಅಂತ ಗೊತ್ತಾದ್ಮೇಲೆ ಓಡಿ ಬಂದು ರಾಕೇಶ್ ನ ಅಕ್ಷತಾ ತಬ್ಬಿಕೊಂಡು ಕಣ್ಣೀರಿಟ್ಟರು. ಇಷ್ಟು ದಿನ ಒಂಥರಾ ಡ್ರಾಮಾ ನೋಡಿದ್ದ ವೀಕ್ಷಕರಿಗೆ, ನಿನ್ನೆ ಹೈಡ್ರಾಮಾ ದರ್ಶನ ಆಯ್ತು.

More from Filmibeat

English summary
Bigg Boss Kannada 6: Day 46: Bigg Boss plays prank on Akshata and Rakesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X