ಅಕ್ಷತಾಗೆ ರಾಕೇಶ್ ಕಡೆಯಿಂದ ಟಾರ್ಚರ್: ರಾಕಿ ಕಾಲಿಗೆ ಬಿದ್ದ ಅಕ್ಷ್.!

Recommended Video

Bigg Boss Kannada Season 6: ಅಕ್ಷತಾಗೆ ರಾಕೇಶ್ ಕಡೆಯಿಂದ ಟಾರ್ಚರ್: ರಾಕಿ ಕಾಲಿಗೆ ಬಿದ್ದ ಅಕ್ಷ್.!

''ಒಂದು ವಾರ ರಾಕೇಶ್ ಜೊತೆಗೆ ಮಾತನಾಡಲ್ಲ'' ಎಂದು ಒಲ್ಲದ ಮನಸ್ಸಿನಿಂದ ಚಾಲೆಂಜ್ ಮಾಡಿ, ಸೈಲೆಂಟ್ ಆಗಿ ಸೈಡಿನಲ್ಲಿ ಇದ್ದರೂ ಅಕ್ಷತಾ ಹಿಂದೆ ಹೋಗುವುದನ್ನು ರಾಕೇಶ್ ನಿಲ್ಲಿಸುತ್ತಿಲ್ಲ.

''ಒಂದು ವೇಳೆ ರಾಕೇಶ್ ಮಾತನಾಡಿಸಿದರೆ, ಅದು ಅವರ ವೀಕ್ನೆಸ್ ಎಂದು ಇಡೀ ಕರ್ನಾಟಕಕ್ಕೆ ಗೊತ್ತಾಗುತ್ತದೆ'' ಎಂದು ಹೋಸ್ಟ್ ಸುದೀಪ್ ಹೇಳಿದ್ದರೂ, ಅದನ್ನ ಗಂಭೀರವಾಗಿ ಪರಿಗಣಿಸದ ರಾಕೇಶ್, ಎರಡು ದಿನ ಅಕ್ಷತಾ ಬ್ರೇನ್ ವಾಶ್ ಮಾಡಲು ಯತ್ನಿಸಿದರು. ಆದ್ರೆ, ಅಕ್ಷತಾ ಗಟ್ಟಿ ಮನಸ್ಸು ಮಾಡಿದ್ರಿಂದ.. ರಾಕೇಶ್ ಮಾತುಗಳು ಯಾವುದೇ ಮೋಡಿ ಮಾಡಲಿಲ್ಲ.

ಹೀಗಾಗಿ ಸಿಟ್ಟು ಮಾಡಿಕೊಂಡಂತೆ ಕಾಣುವ ರಾಕೇಶ್, ಆಗಾಗ ಕಾಲು ಕೆರೆದುಕೊಂಡು ಅಕ್ಷತಾ ಜೊತೆ ಜಗಳಕ್ಕೆ ನಿಲ್ಲುತ್ತಿದ್ದಾರೆ. 'ಬಿಗ್ ಬಾಸ್ ಸಿಟಿ' ಟಾಸ್ಕ್ ಚಾಲ್ತಿಯಲ್ಲಿದ್ದಾಗ, ಆಟೋ ಚಾಲಕಿ ಆಗಿದ್ದ ಅಕ್ಷತಾ ಜೊತೆ ರಾಕೇಶ್ ಕಿತ್ತಾಡಿದ್ದರು. ಚಟುವಟಿಕೆ ಮುಗಿದ ಮೇಲೂ ಇಬ್ಬರ ನಡುವೆ ಬೇರೆ ಬೇರೆ ವಿಷಯಕ್ಕೆ ಜಗಳ ಆಗುತ್ತಲೇ ಇತ್ತು.

ಪದೇ ಪದೇ ಕಾಲು ಕೆರೆದುಕೊಂಡು ಜಗಳ ಮಾಡುತ್ತಿದ್ದ ರಾಕೇಶ್ ಗೆ, ''ನೀವು ಟಾರ್ಚರ್ ಕೊಡುತ್ತಿದ್ದೀರಾ'' ಅಂತ ಅಕ್ಷತಾ ಮುಖಕ್ಕೆ ಹೊಡೆದ ಹಾಗೆ ಹೇಳಿದರು. ಮುಂದೆ ಓದಿರಿ...

ಜಗಳ ಮಾಡುವ ಮ್ಯಾಟರ್ರಾ ಇದು.?

ಜಗಳ ಮಾಡುವ ಮ್ಯಾಟರ್ರಾ ಇದು.?

ಅಡುಗೆ ಮನೆಯಲ್ಲಿ ಅಕ್ಷತಾ ಅಡುಗೆ ಮಾಡುತ್ತಿದ್ದಾಗ, ''ಜೀವನವೇ ಒಂಥರಾ ಖಾರ'' ಅಂತ ಹೇಳಿದರು. ಆಗ ಪಕ್ಕದಲ್ಲೇ ಇದ್ದ ರಾಕೇಶ್ ಸುಮ್ಮನೆ ಇರಲಿಲ್ಲ. ''ತುಂಬಾ ಖಾರ ಹಾಕಿದರೆ, ತಿನ್ನಲು ಆಗಲ್ಲ'' ಅಂತ ಏನೇನೋ ಹೇಳಿ, ಸಿಟ್ಟಿನಲ್ಲಿ ಪಾತ್ರೆಗಳನ್ನು ಕುಕ್ಕಲು ಶುರು ಮಾಡಿದರು. ಮಾತಿಗೆ ಮಾತು ಬೆಳೆದು ಜಗಳ ಆಯ್ತು. ಅಷ್ಟಕ್ಕೂ, ಇದರಲ್ಲಿ ಜಗಳ ಆಡುವುದು ಏನಿತ್ತು.?

ಹೀಗೆ ಯಾಕೆ ಮಾಡ್ತಾರೆ ರಾಕೇಶ್.?

ಹೀಗೆ ಯಾಕೆ ಮಾಡ್ತಾರೆ ರಾಕೇಶ್.?

ರಾಕೇಶ್ ಪಕ್ಕ ಅಕ್ಷತಾ ಹೋದರೆ.. ಮಧುರ.. ಅಂತ ಹಾಡು ಹಾಡುತ್ತಾರಂತೆ. ಅಕ್ಷತಾ ಎಲ್ಲೇ ಹೋದರೂ, ಅಲ್ಲಿ ರಾಕೇಶ್ ಬಂದು ಕಿರಿಕಿರಿ ಮಾಡ್ತಾರಂತೆ. ಹೀಗಂತ ಸ್ವತಃ ಅಕ್ಷತಾ, ರಾಕೇಶ್ ಮುಂದೆಯೇ ಹೇಳಿಕೆ ಕೊಟ್ಟಿದ್ದಾರೆ. ರಾಕೇಶ್ ರವರ ಈ ವರ್ತನೆ ಸರಿಯೇ.?

ಇದು ರಾಕೇಶ್ ಸ್ಟ್ರಾಟೆಜಿ.?

ಇದು ರಾಕೇಶ್ ಸ್ಟ್ರಾಟೆಜಿ.?

ಯಾವುದೋ ಜ್ಞಾನದಲ್ಲಿ ಅಕ್ಷತಾ ಹೇಳಿದ ಮಾತುಗಳನ್ನೇ ಇಟ್ಟುಕೊಂಡು ರಾಕೇಶ್ ಹೈಲೈಟ್ ಮಾಡುತ್ತಾರಂತೆ. ಇಡೀ ದಿನ ಹೇಳಿದ್ದನ್ನೇ ಹೇಳುತ್ತಿರುತ್ತಾರಂತೆ. ಇದು ಅಕ್ಷತಾಗೆ ಸಿಟ್ಟು ತರಿಸಿದೆ. ಹಾಗಾದ್ರೆ, ಇದು ರಾಕೇಶ್ ಸ್ಟ್ರಾಟೆಜಿಯೇ.?

ಮಾತನಾಡಬೇಡಿ ಅಂದರೂ ಕೇಳಲ್ವೇ.?

ಮಾತನಾಡಬೇಡಿ ಅಂದರೂ ಕೇಳಲ್ವೇ.?

''ನನ್ನ ಜೊತೆ ಮಾತನಾಡಬೇಡಿ, ಬಿಟ್ಟುಬಿಡಿ..'' ಅಂತ ಅಕ್ಷತಾ ಹೇಳಿದರೂ, ಅದನ್ನ ಕೇಳಿಸಿಕೊಳ್ಳದ ರಾಕೇಶ್, ''ಕಿಚನ್ ನಲ್ಲಿ ನನ್ನ ಕರ್ತವ್ಯ ಮಾಡುತ್ತಿರುವೆ. ನೀವು ಹೇಳಿದ್ದಕ್ಕೆ ನಾನು ಪ್ರತಿಕ್ರಿಯೆ ಕೊಡುವುದು ಬೇಡ್ವಾ.?'' ಅಂತ ಕೇಳ್ತಾರೆ. ಇದಕ್ಕೆ ಏನು ಹೇಳಬೇಕು.?

ಲಕ್ಷುರಿ ಬಜೆಟ್ ಟಾಸ್ಕ್ ನಲ್ಲೂ ಕ್ಯಾತೆ ತೆಗೆದ ರಾಕೇಶ್

ಲಕ್ಷುರಿ ಬಜೆಟ್ ಟಾಸ್ಕ್ ನಲ್ಲೂ ಕ್ಯಾತೆ ತೆಗೆದ ರಾಕೇಶ್

ಲಕ್ಷುರಿ ಬಜೆಟ್ ಪದಾರ್ಥಗಳನ್ನು ಪಡೆಯಲು 'ಮಡಿಕೆ ಹೊಡಿ, ಲಕ್ಷುರಿ ಪಡಿ' ಎಂಬ ಚಟುವಟಿಕೆಯನ್ನು 'ಬಿಗ್ ಬಾಸ್' ನೀಡಿದ್ದರು. ಮಡಿಕೆ ಹೊಡೆಯುವ ಜವಾಬ್ದಾರಿ ರಶ್ಮಿ ಮೇಲಿದ್ದರೆ, ಮಡಿಕೆಯಲ್ಲಿ ಇರುವ ಚೀಟಿಗಳನ್ನು ಓದಿ ಹೇಳುವ ಜವಾಬ್ದಾರಿ ಅಕ್ಷತಾ ಮೇಲಿತ್ತು. ಇಲ್ಲೂ ಅಕ್ಷತಾ ವಿರುದ್ಧ ರಾಕೇಶ್ ಕ್ಯಾತೆ ತೆಗೆದರು.

ಎಲ್ಲರೂ ಕೂಗಾಡುತ್ತಿದ್ದರೆ, ಅಕ್ಷತಾ ಏನು ಮಾಡ್ತಾರೆ.?

ಎಲ್ಲರೂ ಕೂಗಾಡುತ್ತಿದ್ದರೆ, ಅಕ್ಷತಾ ಏನು ಮಾಡ್ತಾರೆ.?

ರಶ್ಮಿ ಕಣ್ಣಿಗೆ ಬಟ್ಟೆ ಕಟ್ಟಲಾಗಿದ್ರಿಂದ, ಅವರನ್ನ ಗೈಡ್ ಮಾಡಲು ಎಲ್ಲರೂ ಕೂಗಾಡುತ್ತಿದ್ದರು. ಈ ಮಧ್ಯೆ, ಲಕ್ಷುರಿ ಬಜೆಟ್ ಪದಾರ್ಥಗಳನ್ನು ಓದಿ ಹೇಳುತ್ತಿದ್ದ ಅಕ್ಷತಾ ಧ್ವನಿ ಆಂಡಿಗೆ ಕೇಳಿಸುತ್ತಿರಲಿಲ್ಲ. ಕೆಲವೊಮ್ಮೆ ಆಂಡಿ ಹತ್ತಿರ ಬಂದು ಅಕ್ಷತಾ ಹೇಳುತ್ತಿದ್ದರು. ಬಝರ್ ಆದಾಗ, ಪಾಯಿಂಟ್ಸ್ ಇನ್ನೂ ಉಳಿದಿತ್ತು. ಹೀಗಾಗಿ, ತಮ್ಮ ಸಿಟ್ಟನ್ನ ಅಕ್ಷತಾ ವಿರುದ್ಧ ರಾಕೇಶ್ ತೀರಿಸಿಕೊಂಡರು.

ರಾಕೇಶ್ ಕಾಲಿಗೆ ಬಿದ್ದ ಅಕ್ಷತಾ.!

ರಾಕೇಶ್ ಕಾಲಿಗೆ ಬಿದ್ದ ಅಕ್ಷತಾ.!

''ಎಲ್ಲರೂ ಕೂಗಾಡುತ್ತಿದ್ದರೆ, ನನ್ನ ಧ್ವನಿ ಹೇಗೆ ಕೇಳಿಸುತ್ತೆ.?'' ಅಂತ ಅಕ್ಷತಾ ಪ್ರಶ್ನೆ ಮಾಡಿದರೆ, ''ಇನ್ನೂ ಹತ್ತಿರ ಬಂದು ಹೇಳಬೇಕಿತ್ತು'' ಅಂತ ಮತ್ತೆ ಮತ್ತೆ ರಾಕೇಶ್ ಹೇಳುತ್ತಿದ್ದರು. ಇದರಿಂದ ಬೇಸರಗೊಂಡ ಅಕ್ಷತಾ, ರಾಕೇಶ್ ಕಾಲಿಗೆ ಬಿದ್ದರು.

ನೀವ್ಯಾರು.?

ನೀವ್ಯಾರು.?

ಇದನ್ನೇ ಹಿಡಿದುಕೊಂಡು, ಟಾಸ್ಕ್ ನ ಹೀಗೇ ಮಾಡಬೇಕಿತ್ತು ಅಂತ ರಾಕೇಶ್ ಪದೇ ಪದೇ ಹೇಳುತ್ತಿದ್ದರಿಂದ, ಕಿರಿಕಿರಿಗೊಂಡ ಅಕ್ಷತಾ, ''ಏನೂ ಹೇಳಬೇಡಿ.. ನೀವ್ಯಾರು ನನಗೆ ಇಷ್ಟೊಂದು ಕನ್ವಿನ್ಸ್ ಮಾಡೋಕೆ.?'' ಅಂತ ಪ್ರಶ್ನಿಸಿದರು.

ಉಸಿರಾಡಲು ಬಿಡಿ...

ಉಸಿರಾಡಲು ಬಿಡಿ...

ಅಕ್ಷತಾ ಆಡಿದ ಮಾತುಗಳನ್ನು ಕೇಳಿ, ''ಮಾತನಾಡುವುದನ್ನೇ ನಿಲ್ಲಿಸಲಾ.?'' ಅಂತ ರಾಕೇಶ್ ಕೇಳಿದರು. ಆಗ, ''ದಯವಿಟ್ಟು ಅದನ್ನ ಮೊದಲು ಮಾಡಿ.. ಉಸಿರಾಡಲು ಬಿಡಿ. ನೀವು ಟಾರ್ಚರ್ ಅನಿಸುತ್ತಿದ್ದೀರಾ'' ಎಂದರು ಅಕ್ಷತಾ. ಅದಕ್ಕೆ, ''ನೀವು ಎಷ್ಟು ಟಾರ್ಚರ್ ಕೊಡ್ತಿದ್ದೀರಾ ಅಂತ ನನಗೂ ಗೊತ್ತು'' ಎಂದರು ರಾಕೇಶ್. ಒಟ್ನಲ್ಲಿ, ಸುದೀಪ್ ರವರೇ ಹೇಳಿದ ಹಾಗೆ, 'ಬಿಗ್ ಬಾಸ್' ಮನೆಯಲ್ಲಿ ಜಗಳ ಮತ್ತು ಪ್ರೀತಿಗೆ ಘನತೆ ಇಲ್ಲ.!

More from Filmibeat

English summary
Bigg Boss Kannada 6: Day 46: Clash between Akshata and Rakesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X