ಹೋಗಿ ಹೋಗಿ ರಶ್ಮಿ ಕೈಯಲ್ಲಿ ತಗಲಾಕೊಂಡ್ಬಿಟ್ರಲ್ಲ ಧನರಾಜ್.!
ಹೇಳಿ ಕೇಳಿ ಆಕೆ ರಾಪಿಡ್ ರಶ್ಮಿ.. ಮಾತಲ್ಲೇ ಮಾಂಜಾ ಕೊಡುವ ರಾಪಿಡ್ ರಶ್ಮಿ ಬಾಯಿಗೆ ಸಿಕ್ಕಿಬಿಟ್ಟರೆ, ಮುಗೀತು ಕಥೆ.! ಒಂದು ಟಾಪಿಕ್ ಕೊಟ್ಟರೆ, ಗಂಟೆಗಟ್ಟಲೆ ಮಾತನಾಡುವ ರಾಪಿಡ್ ರಶ್ಮಿ ತಂಟೆಗೆ ಹೋದ್ರೆ ಸುಮ್ಮನೆ ಬಿಡ್ತಾರಾ.? ಮಾತಲ್ಲೇ ಮಾನ ಹರಾಜು ಹಾಕಿಬಿಡ್ತಾರೆ.! ಸದ್ಯ 'ಬಿಗ್ ಬಾಸ್' ಸ್ಪರ್ಧಿ ಧನರಾಜ್ ಗೆ ಆಗಿರೋದು ಇದೇ.!
ಇಲ್ಲಿಯವರೆಗೂ ಯಾವುದೇ ಚಟುವಟಿಕೆಯಲ್ಲಿ ಧನರಾಜ್ ವಾಮ ಮಾರ್ಗ ಹಿಡಿದಿಲ್ಲ. ಕಳ್ಳತನ ಕೂಡ ಮಾಡಿರಲಿಲ್ಲ. ಆದ್ರೆ, 'ಬಿಗ್ ಬಾಸ್ ನಗರ' ಟಾಸ್ಕ್ ನಲ್ಲಿ ಅದ್ಯಾಕೋ, ಏನೋ... ರಶ್ಮಿ ಹಣದ ಮೇಲೆ ಧನರಾಜ್ ಕಣ್ಣು ಹಾಕಿದರು.
ಧನರಾಜ್ ಪಿಕ್ ಪಾಕೆಟ್ ಮಾಡಿದ ವಿಡಿಯೋನ ಸ್ವತಃ 'ಬಿಗ್ ಬಾಸ್' ಎಲ್ಲರಿಗೂ ತೋರಿಸಿದರು. ಇದನ್ನ ನೋಡಿದ ರಶ್ಮಿ ಸುಮ್ಮನೆ ಇರ್ತಾರಾ.. ಆ ಕ್ಷಣದಿಂದಲೇ ಕಳ್ಳ..ಕಳ್ಳ..ಕಳ್ಳ..ಕಳ್ಳ ಹಾಡನ್ನು ಹಾಡುತ್ತಾ... ಅಡಿಕೆಯಲ್ಲಿ ಹೋದ ಮಾನ ಆನೆ ಕೊಟ್ಟರೂ ಬರಲಿಲ್ಲ ಎಂದೆಲ್ಲ ಹೇಳುತ್ತಾ ಧನರಾಜ್ ರನ್ನ ಹಂಗಿಸುತ್ತಿದ್ದರು.

ಇನ್ನೂ ಚಾಲಾಕಿತನದಿಂದ ಪಿಕ್ ಪಾಕೆಟ್ ಮಾಡಿದ ಧನರಾಜ್, ರಶ್ಮಿ ಕೊಡುತ್ತಿರುವ ಕಾಟ ತಡೆಯಲಾರದೆ, ''ಹೊರಗಡೆ ಜೀವನ ಬೇರೆ.. ಇಲ್ಲಿಯ ಜೀವನ ಬೇರೆ.. ಟಾಸ್ಕ್ ನಲ್ಲಿ ದುಡ್ಡು ಕದ್ದರೆ ಸಮಾಜದ ಚೌಕಟ್ಟಿನಲ್ಲಿ ನಾನು ತುಂಬಾ ಕೆಟ್ಟವನಾಗುತ್ತೇನೆ, ದೊಡ್ಡ ಕಳ್ಳ ಆಗುತ್ತೇನೆ ಎಂದು ಅಂದುಕೊಂಡರೆ ಅದು ದಡ್ಡತನ. ಇದು ಮಜಾ ಕೊಡುವಂಥದ್ದು.. ಇಲ್ಲಿ ಟಾಸ್ಕ್ ನಲ್ಲಿ ಏನು ಬೇಕಾದರೂ ಮಾಡಬಹುದು. ಅದು ನಮ್ಮ ವಿವೇಚನೆಗೆ ಬಿಟ್ಟಿದ್ದು'' ಅಂತ ಸ್ಪಷ್ಟ ಪಡಿಸಿದರು.
ಆದರೂ, ಧನರಾಜ್ ಗೆ ಅವಮಾನ ಮಾಡುವುದನ್ನು ರಶ್ಮಿ ನಿಲ್ಲಿಸಲಿಲ್ಲ. ''ನಿನ್ನ ಮಾನ-ಮರ್ಯಾದೆ ಹೋಯ್ತು'' ಅಂತಲೇ ರಿಪೀಟ್ ರಿಪೀಟ್ ಮಾಡಿ ಹೇಳುತ್ತಿದ್ದರು.
ಒಟ್ನಲ್ಲಿ.. ಹೋಗಿ ಹೋಗಿ ರಶ್ಮಿ ಕೈಯಲ್ಲಿ ತಗಲಾಕೊಂಡ ಧನರಾಜ್ ತಲೆ ಕೆಟ್ಟು ಹೋಗಿದೆ. ರಶ್ಮಿ ಬಾಯಲ್ಲಿ ಸಿಕ್ಕ ಬಿದ್ದವರ ಕಥೆ ಹೀಗೆ ಎಂಬ ಅರಿವು ವೀಕ್ಷಕರಿಗೆ ಆಗಿದೆ.


Click it and Unblock the Notifications











