ತಾಳಿ ಕಟ್ಟಿದ ಪತಿ ಬಗ್ಗೆ 'ಬಿಗ್ ಬಾಸ್' ಮನೆಯಲ್ಲಿ ಅಕ್ಷತಾ ಹೀಗೇ ಹೇಳೋದಾ.?
Recommended Video

ಪಾಸಿಟೀವ್ ಆಗೋ.. ನೆಗೆಟಿವ್ ಆಗೋ.. ಒಟ್ನಲ್ಲಿ 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಲ್ಲಿ ಸದ್ಯ ಸಿಕ್ಕಾಪಟ್ಟೆ ಸದ್ದು-ಸುದ್ದಿ ಮಾಡುತ್ತಿರುವವರು ಅಕ್ಷತಾ ಮತ್ತು ರಾಕೇಶ್.
''ನಮ್ಮಿಬ್ಬರ ನಡುವೆ Intense ಫ್ರೆಂಡ್ ಶಿಪ್ ಇದೆ'' ಅಂತ ಸುದೀಪ್ ಮುಂದೆಯೇ ಸ್ವತಃ ರಾಕೇಶ್ ಹೇಳಿದ್ದರು. ಆದ್ರೆ, ಇಬ್ಬರ ನಡುವಿನ ಈ ಆತ್ಮೀಯ ಅನುಬಂಧದಿಂದ 'ಬಿಗ್ ಬಾಸ್' ಮನೆಯಲ್ಲಿ ಇರುವ ಸ್ಪರ್ಧಿಗಳಿಗೆ ಮಾತ್ರ ಅಲ್ಲ.. ಕಾರ್ಯಕ್ರಮ ನೋಡುತ್ತಿರುವ ವೀಕ್ಷಕರಿಗೂ ಕಿರಿಕಿರಿ ತರಿಸಿದೆ.
ಅಕ್ಷತಾ-ರಾಕೇಶ್ ಬಗ್ಗೆ ಈಗಾಗಲೇ 'ಬಿಗ್ ಬಾಸ್' ಸ್ಪರ್ಧಿಗಳು ತಲೆಗೊಂದು ಕಾಮೆಂಟ್ ಮಾಡಿದ್ದಾರೆ. ಇವರಿಬ್ಬರನ್ನು ಮೊದಲು ಹೊರ ಹಾಕಿ ಅಂತ ಸೋಷಿಯಲ್ ಮೀಡಿಯಾದಲ್ಲಿ ವೀಕ್ಷಕರು ಪಟ್ಟು ಹಿಡಿದಿದ್ದಾರೆ. ಇನ್ನೂ ಅಕ್ಷತಾ-ರಾಕೇಶ್ ನ ಕೂಡಲೆ ಔಟ್ ಮಾಡಿ ಎಂದು ಮೈಸೂರಿನಲ್ಲಿ ಪ್ರತಿಭಟನೆ ಕೂಡ ನಡೆದಿದೆ ಅಂದ್ರೆ ನೀವೇ ಊಹಿಸಿ....
ಇಷ್ಟೆಲ್ಲ ನಡೆಯುತ್ತಿರುವಾಗಲೇ, ತಾಳಿ ಕಟ್ಟಿದ ಪತಿ ಬಗ್ಗೆ ಅಕ್ಷತಾ ಒಂದು ಕಾಮೆಂಟ್ ಮಾಡಿದ್ದಾರೆ. ಮದುವೆ ಆಗಿರುವ ಅಕ್ಷತಾ ಆಡಿರುವ ಮಾತನ್ನ ಕೇಳಿದ್ರೆ, ನೀವೇ ಶಾಕ್ ಆಗ್ತೀರಾ. ಮುಂದೆ ಓದಿರಿ...

ಇವರೇ ನೋಡಿ ಅಕ್ಷತಾ ಪತಿ
ಮಂಡ್ಯ ಜಿಲ್ಲೆಯ ಪಾಂಡವಪುರದ ಹುಡುಗಿ ಅಕ್ಷತಾ, ಸಾಗರ ಮೂಲದ ರಂಗ ನಿರ್ದೇಶಕ ಪ್ರಸನ್ನ ಸಾಗರ್ ಅವರನ್ನ ಪ್ರೀತಿಸಿ ಆರು ವರ್ಷಗಳ ಹಿಂದೆ ವಿವಾಹವಾಗಿದ್ದರು.

ಪತಿ ಬಗ್ಗೆ ಅಕ್ಷತಾ ಮಾಡಿರುವ ಕಾಮೆಂಟ್ ಏನು.?
''ನನ್ನ ಗಂಡ ಇದನ್ನೆಲ್ಲ ನೋಡಿದ್ರೆ, ಪುಕ.. ಪುಕ.. ಪುಕ ಅಂತಿರುತ್ತೆ.. ಎಲ್ಲಿ ಬಿಟ್ಟು ಹೋಗಿಬಿಡ್ತಾಳೋ ಅಂತ..'' ಎಂದು ರಾಕೇಶ್ ಜೊತೆ ಮಾತನಾಡುವಾಗ ಅಕ್ಷತಾ ಹೇಳಿದ್ದಾರೆ.

ಸಂಚಿಕೆಯಲ್ಲಿ ಇದು ಪ್ರಸಾರ ಆಗಿಲ್ಲ.!
''ನನ್ನ ಗಂಡ ಇದನ್ನೆಲ್ಲ ನೋಡಿದ್ರೆ, ಪುಕ.. ಪುಕ.. ಪುಕ ಅಂತಿರುತ್ತೆ.. ಎಲ್ಲಿ ಬಿಟ್ಟು ಹೋಗಿಬಿಡ್ತಾಳೋ ಅಂತ..'' ಎಂದು ಅಕ್ಷತಾ ಮಾಡಿರುವ ಕಾಮೆಂಟ್ ಮೂಲ ಸಂಚಿಕೆಯಲ್ಲಿ ಪ್ರಸಾರ ಆಗಿಲ್ಲ. ಬದಲಾಗಿ ವೂಟ್ ನಲ್ಲಿನ 'ಅನ್ ಸೀನ್ ಕಥೆಗಳು' ಹೆಸರಲ್ಲಿ ವಿಡಿಯೋ ಕ್ಲಿಪ್ ಹಾಕಲಾಗಿದೆ.

ಪದೇ ಪದೇ ಇಂತಹ ಮಾತು ಆಡುವ ಅಕ್ಷತಾ.!
''ನನ್ನ ಹೆಸರಿನ ಜೊತೆಗೆ ಗಂಡನ ಹೆಸರು ಹಾಕಿಕೊಂಡಿಲ್ಲ. ನನ್ನ ಬಗ್ಗೆ ಬರುವ ಆರ್ಟಿಕಲ್ ಗಳಲ್ಲಿ ಗಂಡನ ಹೆಸರು ಇರುವುದಿಲ್ಲ'' ಎಂದು ರಾಕೇಶ್ ಮುಂದೆಯೇ ಒಮ್ಮೆ ಅಕ್ಷತಾ ಹೇಳಿದ್ದರು. ಸಾಲದಕ್ಕೆ, Individual ಆಗಿ ಲೈಫ್ ಲೀಡ್ ಮಾಡ್ತಿದ್ದೀನಿ ಅಂತ ಆಗಾಗ ಹೇಳುವ ಅಕ್ಷತಾ ಮನದಲ್ಲಿ ಏನಿದೆ.? ವೀಕ್ಷಕರು ಏನೆಂದು ಅರ್ಥೈಸಬೇಕು.?

ಕ್ಯಾಮರಾ ಇದೆ ಎನ್ನುವ ಪರಿಜ್ಞಾನ ಬೇಡವೇ.?
''ಒಂದು ವಾರ ರಾಕೇಶ್ ಜೊತೆಗೆ ಮಾತನಾಡಲ್ಲ'' ಅಂತ ಚಾಲೆಂಜ್ ಮಾಡಿದ್ದ ಅಕ್ಷತಾ ಮತ್ತು ರಾಕೇಶ್ ನಡುವೆ ಈ ವಾರ ಏನೇನೆಲ್ಲಾ ಹೈಡ್ರಾಮಾ ಆಯ್ತು ಅನ್ನೋದನ್ನ ವೀಕ್ಷಕರು ನೋಡಿದ್ದಾರೆ. ''ಕೆಟ್ಟ ಹೆಸರು ಬರುತ್ತಿದೆ'' ಎಂಬ ಮಾತು ಅಕ್ಷತಾ ಬಾಯಿಂದಲೇ ಬಂದಿತ್ತು. ಹೀಗಿದ್ದರೂ, ಎಲ್ಲೆಲ್ಲೂ ಕ್ಯಾಮರಾ ಇದೆ ಎಂಬ ಪರಿವೆ ಇಲ್ಲದೆ ಪತಿ ಬಗ್ಗೆ ಅಕ್ಷತಾ ಹೀಗೆ ಹೇಳುವುದು ಸರಿಯೇ.?

ಇದು ರಿಯಾಲಿಟಿ ಶೋ
ಅಕ್ಷತಾ-ರಾಕೇಶ್ ನಡುವೆ ಏನು ನಡೆತಿದ್ಯೋ, ಅಕ್ಷತಾ ಮತ್ತು ಪತಿ ನಡುವೆ ಏನಾಗಿದ್ಯೋ... ಅದು ಅವರ ವೈಯುಕ್ತಿಕ ವಿಚಾರ ನಿಜ. ಆದ್ರೆ, ಅಕ್ಷತಾ ಮತ್ತು ರಾಕೇಶ್ ರಿಯಾಲಿಟಿ ಶೋನಲ್ಲಿ ಇದ್ದಾರೆ ಅನ್ನೋದನ್ನ ಯಾರೂ ಮರೆಯುವ ಹಾಗಿಲ್ಲ. ಕೋಟ್ಯಾಂತರ ಜನ ವೀಕ್ಷಿಸುವ ಈ ರಿಯಾಲಿಟಿ ಶೋನಲ್ಲಿ ಸ್ಪರ್ಧಿಗಳ ವ್ಯಕ್ತಿತ್ವವೇ ಮಾನದಂಡ. ಇದೆಲ್ಲ ಗೊತ್ತಿದ್ದರೂ, ಅಕ್ಷತಾ ಹೀಗೆ ಮಾತನಾಡುತ್ತಿದ್ದಾರಾ.?


Click it and Unblock the Notifications











