ಸುದೀಪ್ ಮುಂದೆ ರಾಕೇಶ್ ವಾದ ಮಾಡುವ ಹಾಗಿಲ್ಲ: ಇದು ಅಕ್ಷತಾ ಆಜ್ಞೆ.!

Recommended Video

bigg boss kannada 6 : ವಾದ ಮಾಡುವ ಹಾಗಿಲ್ಲ.. ಇದು ಅಕ್ಷತಾ ಆಜ್ಞೆ.! | FILMIBEAT KANNADA

''ಅಕ್ಷತಾ ಜೊತೆಗಿನ ಗೆಳೆತನ ಬಿಟ್ಟರೆ, ರಾಕೇಶ್ ಗ್ಯಾರೆಂಟಿ ಫೈನಲ್ ತಲುಪುತ್ತಾರೆ'' ಎಂಬ ಮಾತು ಅಕ್ಷತಾ ತಲೆಯಲ್ಲೂ ಕೊರೆಯುತ್ತಿರುವ ಕಾರಣ ಒಂದು ವಾರ ರಾಕೇಶ್ ಜೊತೆಗೆ ಮಾತನಾಡಬೇಡಿ ಎಂದು ಅಕ್ಷತಾಗೆ ಸುದೀಪ್ ಹೇಳಿದ್ದರು.

ಒಲ್ಲದ ಮನಸ್ಸಿನಿಂದಲೇ ಇದನ್ನ ಚಾಲೆಂಜ್ ಆಗಿ ಸ್ವೀಕರಿಸಿದ ಅಕ್ಷತಾ, ರಾಕೇಶ್ ರಿಂದ ದೂರ ಸರಿದಿದ್ದರು. ಅನೇಕ ಬಾರಿ ಮನವೊಲಿಸಲು ರಾಕೇಶ್ ಪ್ರಯತ್ನ ಪಟ್ಟಾಗಲೂ, ಅಕ್ಷತಾ ಪಟ್ಟು ಬಿಟ್ಟಿರಲಿಲ್ಲ.

ಆದ್ರೆ, 'ಬಿಗ್ ಬಾಸ್' ಪ್ರಾಂಕ್ ಚಟುವಟಿಕೆ ಕೊಟ್ಟ ಮೇಲೆ ಅಕ್ಷತಾ ಮತ್ತು ರಾಕೇಶ್ ಮರಳಿ ಮಾತಿಗಿಳಿದರು. ಅಕ್ಷತಾ ಪರವಾಗಿ ರಾಕೇಶ್ ಪ್ಲಾನಿಂಗ್ ಮಾಡಿದರು. ಅಕ್ಷತಾ ಮನೆಯಿಂದ ಹೊರ ಹೋಗುವಾಗ, ರಾಕೇಶ್ ಕಣ್ಣೀರು ಸುರಿಸಿದ್ದರು.

ಕೊನೆಗೆ ಇದೆಲ್ಲ ಪ್ರಾಂಕ್ ಅಂತ ಗೊತ್ತಾದ್ಮೇಲೆ, ರಾಕೇಶ್-ಅಕ್ಷತಾ ಮತ್ತೆ ಮೊದಲಿನಂತಾದರು. ''ಈ ಬಗ್ಗೆ ಸುದೀಪ್ ಏನಾದರೂ ಕೇಳಿದ್ರೆ, ಅವರೊಂದಿಗೆ ವಾದ ಮಾಡುವುದು ಬೇಡ'' ಎಂದು ರಾಕೇಶ್ ಗೆ ಅಕ್ಷತಾ ಆಜ್ಞೆ ಮಾಡಿದ್ದಾರೆ. ಮುಂದೆ ಓದಿರಿ...

ಅಕ್ಷತಾನ ಹೊಗಳಿದ ರಾಕೇಶ್

ಅಕ್ಷತಾನ ಹೊಗಳಿದ ರಾಕೇಶ್

ಪ್ರಾಂಕ್ ಚಟುವಟಿಕೆ ಮುಗಿದ್ಮೇಲೆ ರಾಕೇಶ್ ಮತ್ತು ಅಕ್ಷತಾ ಖುಷಿಯಾಗಿದ್ದರು. ಈ ವೇಳೆ ''ಅಪರೂಪದ ಹುಡುಗಿ'' ಎಂದು ಅಕ್ಷತಾಗೆ ರಾಕೇಶ್ ಹೊಗಳುತ್ತಿದ್ದರು. ''ಇದೇ ಮೊದಲ ಬಾರಿಗೆ ನನ್ನನ್ನ ನೀನು ಹೊಗಳಿದ್ದು'' ಎನ್ನುತ್ತಿದ್ದರು ಅಕ್ಷತಾ.

ಖುಷಿಯಲ್ಲಿ ಡ್ಯಾನ್ಸ್ ಮಾಡಿದ ಜೋಡಿ

ಖುಷಿಯಲ್ಲಿ ಡ್ಯಾನ್ಸ್ ಮಾಡಿದ ಜೋಡಿ

ಮತ್ತೆ ಒಂದಾದ ಖುಷಿಯಲ್ಲಿ ಅಕ್ಷತಾ ಮತ್ತು ರಾಕೇಶ್ ಕೈಕೈ ಹಿಡಿದುಕೊಂಡು ಡ್ಯಾನ್ಸ್ ಕೂಡ ಮಾಡಿದರು. ಅಷ್ಟಕ್ಕೂ, ಇದು ಮೂಲ ಸಂಚಿಕೆಯಲ್ಲಿ ಪ್ರಸಾರ ಆಗಿಲ್ಲ. ಬದಲಾಗಿ ವೂಟ್ ನಲ್ಲಿನ 'ಅನ್ ಸೀನ್ ಕಥೆಗಳು' ಹೆಸರಲ್ಲಿ ವಿಡಿಯೋ ಕ್ಲಿಪ್ ಹಾಕಲಾಗಿದೆ.

ಸುದೀಪ್ ಕೇಳಿದ್ರೆ...

ಸುದೀಪ್ ಕೇಳಿದ್ರೆ...

''ಏನಾಯ್ತು.. ಮಾತಾಡಲ್ಲ ಅಂತ ಪ್ರಾಮಿಸ್ ಮಾಡಿದ್ರಿ. ಒಂದು ಗಂಟೆಯಲ್ಲಿ ಒಂದು ವಾರಕ್ಕೆ ಆಗುವಷ್ಟು ಮಾತನಾಡಿದ್ರಲ್ಲ ಎಂದು ಸುದೀಪ್ ಕೇಳಿದ್ರೆ, ನಾನು ಹೇಳುವೆ.. ಡ್ರಿಂಕಿಂಗ್ ಅಂಡ್ ಡ್ರೈವಿಂಗ್ ನಿಷೇಧ ಅಂತ ನೀವು ಹೇಳಿದ್ರಿ. ಆದ್ರೆ, ನೀವೇ ಒಂದು ಬಾಟಲ್ ಬಿಯರ್ ಕಳುಹಿಸಿದ್ರಿ. ಏನು ಮಾಡೋದು.?'' ಎನ್ನುತ್ತಾ ಈಗಲೇ ಉತ್ತರ ರೆಡಿ ಮಾಡಿಕೊಳ್ಳುತ್ತಿದ್ದರು ರಾಕೇಶ್.

ವಾದ ಮಾಡಬೇಡ

ವಾದ ಮಾಡಬೇಡ

''ಹಾಗೆಲ್ಲ ಮಾತನಾಡಬೇಡ. ಕೆಲವೊಂದನ್ನ ಅವರ ಬಳಿ ವಾದ ಮಾಡಬೇಡ'' ಎಂದು ರಾಕೇಶ್ ಗೆ ಅಕ್ಷತಾ ಹೇಳಿದರು. ಆಗ ''ಪಾಯಿಂಟ್ ಇದ್ದರೆ ಮಾತ್ರ ಮಾತನಾಡುವೆ'' ಎಂದರು ರಾಕೇಶ್.

ಪತಿ ಬಗ್ಗೆ ಅಕ್ಷತಾ ಕಾಮೆಂಟ್

ಪತಿ ಬಗ್ಗೆ ಅಕ್ಷತಾ ಕಾಮೆಂಟ್

ಈ ಮಾತುಕತೆ ನಡುವೆ, ''ನನ್ನ ಗಂಡ ಇದನ್ನೆಲ್ಲ ನೋಡಿದ್ರೆ, ಪುಕ.. ಪುಕ.. ಪುಕ ಅಂತಿರುತ್ತೆ.. ಎಲ್ಲಿ ಬಿಟ್ಟು ಹೋಗಿಬಿಡ್ತಾಳೋ ಅಂತ..'' ಎಂದು ಅಕ್ಷತಾ ಕಾಮೆಂಟ್ ಮಾಡಿದ್ದಾರೆ.

More from Filmibeat

English summary
Bigg Boss Kannada 6: Day 47: Do not argue with Sudeep advices Akshata to Rakesh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X