ಸೇಡು ತೀರಿಸಿಕೊಂಡ ಕವಿತಾ: ಕ್ಯಾಪ್ಟನ್ ಆಗದ ಆಂಡಿ.!

Recommended Video

Bigg Boss Kannada 6: ಸೇಡು ತೀರಿಸಿಕೊಂಡ ಕವಿತಾ: ಕ್ಯಾಪ್ಟನ್ ಆಗದ ಆಂಡಿ.! | FILMIBEAT KANNADA

'ಬಿಗ್ ಬಾಸ್ ಕನ್ನಡ-6'ನಲ್ಲಿ ಕವಿತಾ ಮತ್ತು ಆಂಡಿ ಒಂಥರಾ ಹಾವು-ಮುಂಗುಸಿ ಇದ್ದ ಹಾಗೆ. ಅದ್ಯಾವಾಗ ನಾಮಿನೇಷನ್ 'ಡೀಲ್' ಮುರಿದು, ಆಂಡಿ ಮೇಲೆ ಕವಿತಾ ಆರೋಪ ಮಾಡಿದ್ರೋ.. ಅಂದಿನಿಂದ ಕವಿತಾ ಮತ್ತು ಆಂಡಿ ನಡುವೆ ಎಲ್ಲವೂ ಸರಿ ಇಲ್ಲ.

ಕವಿತಾ ಮತ್ತು ಆಂಡಿ ನಡುವೆ ಆಗಾಗ ಜಟಾಪಟಿ ನಡೆಯುತ್ತಲೇ ಇದೆ. ಅದರಲ್ಲೂ ''ಕವಿತಾ ಡರ್ಟಿಯೆಸ್ಟ್ ಸೆಲೆಬ್ರಿಟಿ'' ಅಂತ ಆಂಡಿ ಹೇಳಿದ್ಮೇಲೆ, ಕವಿತಾಗೆ ಪಿತ್ತ ನೆತ್ತಿಗೇರಿದೆ.

ಆಂಡಿ ಮೇಲಿನ ಈ ಸಿಟ್ಟನ್ನ ಕವಿತಾ ಕ್ಯಾಪ್ಟನ್ ಟಾಸ್ಕ್ ನಲ್ಲಿ ತೀರಿಸಿಕೊಂಡಿದ್ದಾರೆ. ಹಾಗ್ನೋಡಿದ್ರೆ, ಕ್ಯಾಪ್ಟನ್ ಚಟುವಟಿಕೆಯಲ್ಲಿ ಆಂಡಿ ಗೆಲ್ಲಬೇಕಿತ್ತು. ಆದ್ರೆ, ಕೊನೆಯ ಕ್ಷಣದಲ್ಲಿ ಆದ ಒಂದು ಎಡವಟ್ಟನ್ನು ಇಟ್ಟುಕೊಂಡು ಕವಿತಾ 'ಕ್ಯಾಪ್ಟನ್' ಪಟ್ಟವನ್ನು ಮುರಳಿಗೆ ನೀಡಿದರು. ಮುಂದೆ ಓದಿರಿ...

ವಿಶೇಷ ಚಟುವಟಿಕೆ

ವಿಶೇಷ ಚಟುವಟಿಕೆ

ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಗಾಗಿ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಇದರ ಅನುಸಾರ, ಮಣ್ಣಿನ ಹೊಂಡದಲ್ಲಿ ಕ್ಯಾಪ್ಟನ್ ಪ್ರತಿಸ್ಪರ್ಧಿಗಳಾದ ಆಂಡಿ, ಅಕ್ಷತಾ, ಧನರಾಜ್ ಮತ್ತು ಮುರಳಿ ನೀಡಲಾದ ಬಣ್ಣದ ಬಾವುಟಗಳನ್ನು ನೆಟ್ಟು ಜಾಗವನ್ನು ಆಕ್ರಮಿಸಿಕೊಳ್ಳಬೇಕಿತ್ತು. ಚಟುವಟಿಕೆಯ ಅಂತ್ಯದಲ್ಲಿ ಯಾರ ಬಣ್ಣದ ಬಾವುಟ ಹೆಚ್ಚು ಜಾಗ ಆಕ್ರಮಿಸಿಕೊಂಡಿರುತ್ತದೋ, ಅವರು ಗೆದ್ದ ಹಾಗೆ.

ಲೀಡಿಂಗ್ ನಲ್ಲಿದ್ದ ಆಂಡಿ

ಲೀಡಿಂಗ್ ನಲ್ಲಿದ್ದ ಆಂಡಿ

ಚಟುವಟಿಕೆಯ ಕೊನೆಯಲ್ಲಿ ಆಂಡಿ ಬಾವುಟಗಳನ್ನು ಹೆಚ್ಚು ಜಾಗವನ್ನು ಆಕ್ರಮಿಸಿಕೊಂಡಿತ್ತು. ಇನ್ನೇನು ಆಂಡಿ ವಿನ್ನರ್ ಆಗಬಹುದಿತ್ತು. ಅಷ್ಟರಲ್ಲಿ ಬಝರ್ ಆಯ್ತು. ಬಝರ್ ಆಗುತ್ತಿದ್ದ ಹಾಗೆ, ಮುರಳಿ ಬಾವುಟಗಳ ಮೇಲೆ ಆಂಡಿ ಬಿದ್ದರು.

ಕೌಂಟ್ ಕಮ್ಮಿ ಆಯಿತು

ಕೌಂಟ್ ಕಮ್ಮಿ ಆಯಿತು

ಬಝರ್ ಆದಾಗ ಆಂಡಿ ಬಿದ್ದ ಪರಿಣಾಮ, ಆಂಡಿ ಬೀಳಿಸಿದ ಬಾವುಟಗಳನ್ನು ಚಟುವಟಿಕೆಯ ಸಂಚಾಲಕಿ ಆಗಿದ್ದ ಕವಿತಾ ಕೌಂಟ್ ಮಾಡಲಿಲ್ಲ. ಆದ್ರೆ, ಹೊಂಡದಲ್ಲಿ ಇದ್ದ ಮುರಳಿ ಅವರ ಬಾವುಟಗಳನ್ನೆಲ್ಲಾ ಆಕೆ ಪರಿಗಣಿಸಿದರು. ಹೀಗಾಗಿ, ಚಟುವಟಿಕೆಯ ಕೊನೆಗೆ ಹೊಂಡದಲ್ಲಿ 152 ಬಾವುಟಗಳನ್ನು ಹೊಂದಿದ್ದ ಮುರಳಿಯನ್ನ ಕ್ಯಾಪ್ಟನ್ ಆಗಿ ಕವಿತಾ ಘೋಷಿಸಿದರು.

ಕವಿತಾಗೆ ಕಾರಣ ಸಿಕ್ತು

ಕವಿತಾಗೆ ಕಾರಣ ಸಿಕ್ತು

ಆಂಡಿ ಕ್ಯಾಪ್ಟನ್ ಆಗಬಾರದು ಎಂಬುದು ಕವಿತಾ ಬಯಕೆ ಆಗಿತ್ತು. ಅದಕ್ಕಾಗಿ ಒಂದು ಕಾರಣವನ್ನ ಕವಿತಾ ಹುಡುಕುತ್ತಿದ್ದರು, ಕಡೆ ಕ್ಷಣದಲ್ಲಿ ಆಂಡಿ ಬಿದ್ದಿದ್ರಿಂದ ಕವಿತಾಗೆ ದೊಡ್ಡ ಅಸ್ತ್ರವೇ ಸಿಕ್ಕ ಹಾಗಾಯ್ತು.

ಯಾರ ಮಾತನ್ನೂ ಕೇಳದ ಕವಿತಾ

ಯಾರ ಮಾತನ್ನೂ ಕೇಳದ ಕವಿತಾ

ಬಾವುಟಗಳು ಮಾತ್ರ ಅಲ್ಲ.. ಜಾಗವನ್ನೂ ಪರಿಗಣಿಸಬೇಕು. ಆಂಡಿ ನೆಟ್ಟಿದ್ದ ಬಾವುಟಗಳ ಜಾಗ ಜಾಸ್ತಿ ಇತ್ತು ಅಂತ ರಾಕೇಶ್ ಮತ್ತು ರಶ್ಮಿ ವಾದ ಮಾಡಿದರು. ಆದ್ರೆ, ಅದನ್ನ ಕೇಳಲು ಕವಿತಾ ರೆಡಿ ಇರಲಿಲ್ಲ.

ಪಕ್ಷಪಾತ ಮಾಡಿದ ಕವಿತಾ

ಪಕ್ಷಪಾತ ಮಾಡಿದ ಕವಿತಾ

''ಅವನು (ಆಂಡಿ) ಗೆದ್ದು ಬಿಡುತ್ತಾನೆ ಅಂತ ನೋಡುತ್ತಿದೆ. ಕೊನೆಗೆ ಅವನೇ ಬಿದ್ದ. ನನಗೆ ಕಾರಣ ಸಿಕ್ತು'' ಅಂತ ನಗುತ್ತಲೇ ಹೇಳುತ್ತಿದ್ದರು ಕವಿತಾ.

ಆಂಡಿಗೆ ಸಿಟ್ಟು

ಆಂಡಿಗೆ ಸಿಟ್ಟು

''ಇದು ಪರ್ಸನಲ್ ಅಟ್ಯಾಕ್. ಕ್ಯಾಪ್ಟನ್ ಆಗುವುದನ್ನು ಕವಿತಾ ತಪ್ಪಿಸಿದಳು. ಹೊಟ್ಟೆ ಉರಿಯುತ್ತಿದೆ ನನಗೆ'' ಅಂತ ಬೇಸರ ಮಾಡಿಕೊಂಡಿದ್ದರು ಆಂಡಿ. ಒಟ್ನಲ್ಲಿ ಕವಿತಾ-ಆಂಡಿ ನಡುವಿನ ಕೋಪ ಸದ್ಯಕ್ಕೆ ತಣ್ಣಗಾಗುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.

More from Filmibeat

English summary
Bigg Boss Kannada 6: Day 47: Its because of Kavitha, Andrew lost captaincy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X