ಆಂಡಿ ದಡ್ಡತನ: 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆದ ಮುರಳಿ.!

'ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ' ಎನ್ನುವ ಹಾಗೆ ಕಷ್ಟ ಪಟ್ಟು ಚಟುವಟಿಕೆ ಪೂರ್ಣಗೊಳಿಸಿದ್ದ ಆಂಡ್ರ್ಯೂ, ಕೊನೆಯ ಕ್ಷಣದಲ್ಲಿ ಮಾಡಿದ ಒಂದು ಎಡವಟ್ಟಿನಿಂದ ಮುರಳಿ ಕ್ಯಾಪ್ಟನ್ ಆಗುವ ಹಾಗೆ ಆಯ್ತು.

ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಗಾಗಿ ನೀಡಲಾದ ಚಟುವಟಿಕೆಯಲ್ಲಿ ಆಂಡಿ ಕ್ಲಿಯರ್ ವಿನ್ನರ್ ಆಗಿದ್ದರು. ಆದ್ರೆ, ಕಡೆ ಕ್ಷಣದಲ್ಲಿ... ಬಝರ್ ಆದ ಸಂದರ್ಭದಲ್ಲಿ ಆಂಡಿ ತೆಗೆದುಕೊಂಡ ಒಂದು ತಪ್ಪು ನಿರ್ಧಾರ ಅವರಿಗೇ ಏಟು ಬಿತ್ತು.

ಆಂಡಿ ಕ್ಯಾಪ್ಟನ್ ಆಗಬಾರದು ಅನ್ನೋದು ಕವಿತಾ ಬಯಕೆ ಆಗಿತ್ತು. ಅದಕ್ಕಾಗಿ ಕಾರಣಗಳನ್ನು ಹುಡುಕುತ್ತಿದ್ದ ಕವಿತಾಗೆ ಆಂಡಿಯೇ ದೊಡ್ಡ ಅಸ್ತ್ರ ನೀಡಿದಂತಾಯಿತು. ಒಟ್ನಲ್ಲಿ.. ಆಂಡಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಯಿತು. ಮುಂದೆ ಓದಿರಿ...

ವಿಶೇಷ ಚಟುವಟಿಕೆ

ವಿಶೇಷ ಚಟುವಟಿಕೆ

ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಗಾಗಿ 'ಬಿಗ್ ಬಾಸ್' ಒಂದು ವಿಶೇಷ ಚಟುವಟಿಕೆ ನೀಡಿದ್ದರು. ಇದರ ಅನುಸಾರ, ಮಣ್ಣಿನ ಹೊಂಡದಲ್ಲಿ ಕ್ಯಾಪ್ಟನ್ ಪ್ರತಿಸ್ಪರ್ಧಿಗಳಾದ ಆಂಡಿ, ಅಕ್ಷತಾ, ಧನರಾಜ್ ಮತ್ತು ಮುರಳಿ ನೀಡಲಾದ ಬಣ್ಣದ ಬಾವುಟಗಳನ್ನು ನೆಟ್ಟು ಜಾಗವನ್ನು ಆಕ್ರಮಿಸಿಕೊಳ್ಳಬೇಕಿತ್ತು. ಚಟುವಟಿಕೆಯ ಅಂತ್ಯದಲ್ಲಿ ಯಾರ ಬಣ್ಣದ ಬಾವುಟ ಹೆಚ್ಚು ಜಾಗ ಆಕ್ರಮಿಸಿಕೊಂಡಿರುತ್ತದೋ, ಅವರು ಗೆದ್ದ ಹಾಗೆ.

ಧನರಾಜ್ ವರ್ಸಸ್ ಅಕ್ಷತಾ

ಧನರಾಜ್ ವರ್ಸಸ್ ಅಕ್ಷತಾ

ಬಾವುಟಗಳನ್ನೆಲ್ಲಾ ನೆಟ್ಟ ಮೇಲೆ ಧನರಾಜ್ ರವರ ಬಾವುಟಗಳನ್ನು ಕಿತ್ತು ಹಾಕಲು ಅಕ್ಷತಾ ಮುಂದಾದರು. ಬೇರೆ ದಾರಿ ಇಲ್ಲದೆ, ಅಕ್ಷತಾ ರವರ ಬಾವುಟಗಳ ಮೇಲೆ ಧನರಾಜ್ ಕಣ್ಣಿಟ್ಟರು. ಇವರಿಬ್ಬರ ಜಗಳದಲ್ಲಿ ಆಂಡಿ ಮತ್ತು ಮುರಳಿಗೆ ಲಾಭ ಆಯಿತು.

ಯಾರ ಬಾವುಟಗಳಿಗೂ ಕೈ ಹಾಕದ ಮುರಳಿ

ಯಾರ ಬಾವುಟಗಳಿಗೂ ಕೈ ಹಾಕದ ಮುರಳಿ

ಬಾವುಟಗಳನ್ನೆಲ್ಲಾ ನೆಟ್ಟ ಮೇಲೆ ಮುರಳಿ ಹಿಂದೆ ಸರಿದರು. ಬೇರೆಯವರ ಬಾವುಟಗಳನ್ನ ಕೀಳಲು ಮುರಳಿ ಮುಂದಾಗಲಿಲ್ಲ.

ಎಡವಟ್ಟು ಮಾಡಿಕೊಂಡ ಆಂಡಿ

ಎಡವಟ್ಟು ಮಾಡಿಕೊಂಡ ಆಂಡಿ

ಹಾಗ್ನೋಡಿದ್ರೆ, ಆಂಡಿ ಬಾವುಟ ಹೆಚ್ಚು ಜಾಗವನ್ನು ಆಕ್ರಮಿಸಿಕೊಂಡಿತ್ತು. ಆಂಡಿ ಇನ್ನೇನು ಗೆದ್ದೇ ಬಿಟ್ಟರು ಎನ್ನುವಷ್ಟರಲ್ಲಿ.. ಬಝರ್ ಹೊಡೆಯಿತು. ಬಝರ್ ಆಗುತ್ತಿದ್ದಂತೆಯೇ, ಮುರಳಿ ಬಾವುಟಗಳ ಮೇಲೆ ಆಂಡಿ ಬಿದ್ದರು.

ಕೌಂಟ್ ಕಮ್ಮಿ ಆಯಿತು

ಕೌಂಟ್ ಕಮ್ಮಿ ಆಯಿತು

ಬಝರ್ ಆದಾಗ ಆಂಡಿ ಬಿದ್ದ ಪರಿಣಾಮ, ಆಂಡಿ ಬೀಳಿಸಿದ ಬಾವುಟಗಳನ್ನು ಚಟುವಟಿಕೆಯ ಸಂಚಾಲಕಿ ಆಗಿದ್ದ ಕವಿತಾ ಕೌಂಟ್ ಮಾಡಲಿಲ್ಲ. ಆದ್ರೆ, ಹೊಂಡದಲ್ಲಿ ಇದ್ದ ಮುರಳಿ ಅವರ ಬಾವುಟಗಳನ್ನೆಲ್ಲಾ ಆಕೆ ಪರಿಗಣಿಸಿದರು. ಹೀಗಾಗಿ, ಚಟುವಟಿಕೆಯ ಕೊನೆಗೆ ಹೊಂಡದಲ್ಲಿ 152 ಬಾವುಟಗಳನ್ನು ಹೊಂದಿದ್ದ ಮುರಳಿಯನ್ನ ಕ್ಯಾಪ್ಟನ್ ಆಗಿ ಕವಿತಾ ಘೋಷಿಸಿದರು.

ಆಂಡಿ ಬೀಳದೇ ಇದ್ದಿದ್ದರೆ...

ಆಂಡಿ ಬೀಳದೇ ಇದ್ದಿದ್ದರೆ...

ಏನೋ ಮಾಡಲು ಹೋಗಿ, ಇನ್ನೇನೋ ಮಾಡಿಕೊಂಡರು ಎಂಬಂತೆ.. ತಲೆಯಲ್ಲಿ ಏನ್ನನ್ನೋ ಇಟ್ಟುಕೊಂಡಿದ್ದ ಆಂಡಿ ಕ್ಯಾಪ್ಟನ್ ಟಾಸ್ಕ್ ನಲ್ಲಿ ಸೋತರು. ಒಂದು ವೇಳೆ ಆಂಡಿ ಬೀಳದೇ ಹೋಗಿದ್ದರೆ, ಗೇಮ್ ಚೇಂಜ್ ಆಗುತ್ತಿತ್ತು.

More from Filmibeat

English summary
Bigg Boss Kannada 6: Day 47: Murali becomes captain.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X