ಪಕ್ಷಪಾತ ಮಾಡಿದ ಕವಿತಾ, ಸುದೀಪ್ ಮುಂದೆ ಕೊಟ್ಟ ಸಬೂಬು ಏನು.?

Recommended Video

Bigg Boss Kannada Season 6:ಪಕ್ಷಪಾತ ಮಾಡಿದ ಕವಿತಾ, ಸುದೀಪ್ ಮುಂದೆ ಕೊಟ್ಟ ಸಬೂಬು ಏನು.?

ಆಂಡ್ರ್ಯೂ ಹಾಗೂ ಕವಿತಾ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದು ನಿಮಗೆಲ್ಲ ಗೊತ್ತೇ ಇದೆ. ಪ್ರತಿ ಟಾಸ್ಕ್ ನಲ್ಲೂ ಆಂಡ್ರ್ಯೂ ಗೆಲ್ಲದೇ ಇರುವ ಹಾಗೆ ಕವಿತಾ ಅಡ್ಡಗಾಲು ಹಾಕುತ್ತಲೇ ಇದ್ದಾರೆ.

ಹಾಗ್ನೋಡಿದ್ರೆ, ಕಳೆದ ವಾರ ಕ್ಯಾಪ್ಟನ್ ಆಯ್ಕೆ ಚಟುವಟಿಕೆಯಲ್ಲಿ ಆಂಡಿ ವಿಜೇತರಾಗಬೇಕಿತ್ತು. ಆದ್ರೆ, ಕವಿತಾ ತೆಗೆದುಕೊಂಡ ನಿರ್ಧಾರದಿಂದ ಆಂಡಿ ಪರಾಭವಗೊಂಡರು. ಮುರಳಿ ಕ್ಯಾಪ್ಟನ್ ಆದರು.

ಕ್ಯಾಪ್ಟನ್ ಆಯ್ಕೆ ವೇಳೆ ಕವಿತಾ ಮಾಡಿದ ಪಕ್ಷಪಾತದ ಕುರಿತು ಸುದೀಪ್, 'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ ಚರ್ಚೆ ಮಾಡಿದರು. ಈ ವೇಳೆ ಮಾಡಿದ ತಪ್ಪನ್ನು ಮನಗಂಡ ಕವಿತಾ ಸುದೀಪ್ ಮುಂದೆ ಸಬೂಬು ನೀಡಿದರು. ಮುಂದೆ ಓದಿರಿ...

ಸುದೀಪ್ ಕೇಳಿದ್ದೇನು.?

ಸುದೀಪ್ ಕೇಳಿದ್ದೇನು.?

'ವಾರದ ಕಥೆ ಕಿಚ್ಚನ ಜೊತೆ' ಸಂಚಿಕೆಯಲ್ಲಿ, ''ಕ್ಯಾಪ್ಟನ್ ಟಾಸ್ಕ್ ನಲ್ಲಿ ಬಾವುಟಗಳನ್ನು ಕವಿತಾ ಕೌಂಟ್ ಮಾಡಿದ ರೀತಿ ತಪ್ಪು ಅಂತ ಚರ್ಚೆಗೆ ಬರುತ್ತದೆ. ಇದಕ್ಕೆ ನಿಮ್ಮ ಅಭಿಪ್ರಾಯ ಏನು.?'' ಎಂದು ಆಂಡಿಗೆ ಸುದೀಪ್ ಕೇಳಿದರು.

ಆಂಡಿ ಹೇಳಿದ್ದೇನು.?

ಆಂಡಿ ಹೇಳಿದ್ದೇನು.?

''ಆನ್ ಬಝರ್ ಆದಾಗ ನಾನು ಬಾವುಟಗಳ ಮೇಲೆ ಬಿದ್ದೆ. ಅದು ನನ್ನ ಸ್ಟ್ರಾಟೆಜಿ ಆಗಿತ್ತು. ಕೌಂಟ್ ಮಾಡುವಾಗ ಅವರು ಯೋಚಿಸಲಿಲ್ಲ. ಯಾರ ಬಾವುಟ ಎಲ್ಲಿದೆ ಅಂತ ನೋಡಲೇ ಇಲ್ಲ. ನಾನು ಕ್ಯಾಪ್ಟನ್ ಆಗಬಾರದು ಅಂತ ಅವರು ಡಿಸೈಡ್ ಮಾಡಿಕೊಂಡೇ ಬಂದಿದ್ದರು. ಕವಿತಾ ಫೇರ್ ಆಗಿ ಆಡಲಿಲ್ಲ. ತುಂಬಾ ಪರ್ಸನಲ್ ಆಗಿ ತೆಗೆದುಕೊಂಡರು'' ಎಂದರು ಆಂಡಿ.

ಕವಿತಾ ಕೊಟ್ಟ ಸಬೂಬು ಏನು.?

ಕವಿತಾ ಕೊಟ್ಟ ಸಬೂಬು ಏನು.?

''ನಾನು ಅದನ್ನ ಪರ್ಸನಲ್ ಆಗಿ ತೆಗೆದುಕೊಳ್ಳಲಿಲ್ಲ. ನಾನು ಅಲ್ಲಿ ಹೇಳಿದ ರೀತಿ ತಪ್ಪು ಇರಬಹುದು. ಅದನ್ನ ನಾನು ಕರೆಕ್ಟ್ ಮಾಡಿಕೊಳ್ಳುವೆ. ಬಝರ್ ಆಗುವ ಟೈಮ್ ನಲ್ಲಿ ಆಂಡಿ ಬಾವುಟಗಳನ್ನು ಬೀಳಿಸಿದ್ದು, ನನಗೆ ಸರಿ ಅನಿಸಲಿಲ್ಲ'' ಎಂದರು ಕವಿತಾ.

ಸರಿ ಮಾಡಿಕೊಳ್ಳುವೆ ಎಂದ ಕವಿತಾ

ಸರಿ ಮಾಡಿಕೊಳ್ಳುವೆ ಎಂದ ಕವಿತಾ

''ಬಝರ್ ಆದ್ಮೇಲೆ ಎಲ್ಲವೂ ಸಮವಾಗಿ ಇರಬೇಕು. ಮುರಳಿ ಅವರ ಬಾವುಟಗಳನ್ನು ಮಾತ್ರ ಕೌಂಟ್ ಮಾಡಿ, ಆಂಡಿ ಬಾವುಟಗಳನ್ನು ನೀವು ಕೌಂಟ್ ಮಾಡಲಿಲ್ಲ. ಇದು ಪಕ್ಷಪಾತ ಎಂಬ ಭಾವನೆ ಬರುತ್ತದೆ'' ಎಂದು ಸುದೀಪ್ ಹೇಳಿದಾಗ, ''ನನಗೆ ಗೊತ್ತಾಯಿತು. ನಾನು ಹೇಳಿದ ರೀತಿ, ಮಾಡಿದ ರೀತಿ ತಪ್ಪಾಗಿರಬಹುದು. ಅದನ್ನ ನಾನು ಸರಿ ಮಾಡಿಕೊಳ್ಳುವೆ'' ಅಂತ ಕವಿತಾ ಹೇಳಿದರು.

More from Filmibeat

English summary
Bigg Boss Kannada 6: Day 48: Kavitha admits her mistake in front of Sudeep.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X