ಯಾರು ಎಷ್ಟೇ ಹೇಳಿದರೂ, ಅಕ್ಷತಾ-ರಾಕೇಶ್ ಮಾತ್ರ ಬದಲಾಗಲ್ಲ.!
Recommended Video

''ಯಾರು ಏನೇ ಹೇಳಿದರೂ, ಎಷ್ಟೇ ಹೇಳಿದರೂ.. ಅಕ್ಷತಾ-ರಾಕೇಶ್ ಮಾತ್ರ ದೂರ ಆಗಲ್ಲ.!'' - ಹೀಗಂತ ನಾವು ಹೇಳ್ತಿಲ್ಲ. ಬದಲಾಗಿ, ಅಕ್ಷತಾ-ರಾಕೇಶ್ ಜೊತೆಗೆ 'ಬಿಗ್ ಬಾಸ್' ಮನೆಯಲ್ಲಿ ಇರುವ ಸ್ಪರ್ಧಿಗಳು ಮಾತನಾಡಿಕೊಳ್ತಿದ್ದಾರೆ.
'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮ ಶುರುವಾದ ಮೊದಲ ವಾರವೇ ಅಕ್ಷತಾ-ರಾಕೇಶ್ ಬಗ್ಗೆ ಗಾಸಿಪ್ ಸೃಷ್ಟಿಯಾಯ್ತು. ಗುಸುಗುಸು ಪಿಸುಪಿಸು ಮಾತುಗಳು ಕಿವಿಗೆ ಬಿದ್ದರೂ, ಕ್ಯಾರೆ ಎನ್ನದೇ ''ಯಾರು ಏನೇ ಮಾತನಾಡಿಕೊಂಡರೂ, ತಲೆ ಕೆಡಿಸಿಕೊಳ್ಳಲ್ಲ. ನಾವಿಬ್ಬರು ಒಳ್ಳೆ ಫ್ರೆಂಡ್ಸ್'' ಅಂತ ಎಲ್ಲರ ಮುಂದೆ ರಾಕೇಶ್ ಹಾಗೂ ಅಕ್ಷತಾ ಹೇಳಿದ್ದರು.
ಸದಾ ಅಂಟಿಕೊಂಡೇ ಇರುವ ರಾಕೇಶ್ ಮತ್ತು ಅಕ್ಷತಾಗೆ 'ಗಂಡ-ಹೆಂಡತಿ'ಯ ಪಟ್ಟ ಕಟ್ಟಿದರು ಆಂಡ್ರ್ಯೂ. ಅದಾದ್ಮೇಲೆ 'ಕಾಲ್ ಸೆಂಟರ್' ಚಟುವಟಿಕೆಯಲ್ಲಿ ರಾಕೇಶ್-ಅಕ್ಷತಾ ನಡುವಿನ ಸಂಬಂಧವೇ ಹೈಲೈಟ್ ಆಗಿತ್ತು. ಇಷ್ಟೆಲ್ಲಾ ಆದರೂ, ರಾಕೇಶ್ ಮತ್ತು ಅಕ್ಷತಾ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ.
ಇನ್ನೂ ರಾಕೇಶ್ ರಿಂದ ದೂರ ಇರುವಂತೆ ಅಕ್ಷತಾಗೆ ಸಹೋದರಿ, ತಾಯಿ ಹಾಗೂ ಸುದೀಪ್ ಕಡೆಯಿಂದ ಸಂದೇಶ ರವಾನೆ ಆಗಿದೆ. ಹೀಗಿದ್ದರೂ, ಇಬ್ಬರೂ ಮಾತುಕತೆ ನಿಲ್ಲಿಸಿಲ್ಲ ಅನ್ನೋದು 'ಬಿಗ್ ಬಾಸ್' ಮನೆಯ ಸ್ಪರ್ಧಿಗಳ ಅಭಿಪ್ರಾಯ. ಮುಂದೆ ಓದಿರಿ...

ಅಕ್ಷತಾ ತಾಯಿಯಿಂದ ಬಂದ ಸಂದೇಶ
''ಹಾಯ್ ಮಗಳೇ.. ಚೆನ್ನಾಗಿ ಆಟ ಆಡುತ್ತಿದ್ದೀಯಾ. ಆದ್ರೆ, ಕೆಲವೊಂದು ಸಲ ನಿನ್ನೆ ನೋಡೋಕೆ ಕಷ್ಟ ಆಗುತ್ತೆ. ರಾಕೇಶ್ ಇಂದ ದೂರ ಇರು. ಇಲ್ಲಿ ನಿನ್ನ ನಂಬಿರುವ ಎಷ್ಟೊಂದು ಜೀವಗಳಿವೆ. ಎಲ್ಲರನ್ನೂ ಚೆನ್ನಾಗಿ ನೋಡಿಕೋ. ನಿನ್ನ ಆಟವನ್ನ ಯಾರಿಗೂ ಬಿಟ್ಟುಕೊಡಬೇಡ. ನಿನ್ನ ಊರಿಗೆ ಒಳ್ಳೆಯ ಹೆಸರು ತೆಗೆದುಕೊಂಡು ಬಾ. ಆಡೋರ ಬಾಯಿಗೆ ಆಹಾರ ಆಗಬೇಡ. ಅತಿಯಾದರೆ ಅಮೃತವೂ ವಿಷವೇ.! ನಿನ್ನ ತಮಾಷೆ ಗುಣ ಇಲ್ಲಿ ಎದ್ದು ಕಾಣುತ್ತಿಲ್ಲ. ಚೆನ್ನಾಗಿ ಆಟ ಆಡಿ ಗೆದ್ದು ಬಾ... ನಮ್ಮೆಲ್ಲರ ಆಶೀರ್ವಾದ ನಿಮ್ಮ ಮೇಲಿದೆ'' ಎಂದು ಅಕ್ಷತಾ ತಾಯಿ ಕಳೆದ ವಾರಾಂತ್ಯದಲ್ಲಿ ಸಂದೇಶ ಕಳುಹಿಸಿದ್ದರು.

ಅಕ್ಷತಾ ನಿರ್ಧಾರ
''ನಿಮ್ಮ ಫ್ಯಾಮಿಲಿ ಕಡೆಯಿಂದ ಒಂದು ಮೆಸೇಜ್ ಬಂದಿದೆ. ರಾಕೇಶ್ ಇಂದ ದೂರ ಇರು ಅಂತ. ಅದನ್ನ ನಾನು ನಿಮಗೆ ಬಿಡುವೆ. ನೀವು ನಿರ್ಧಾರ ಮಾಡಿ. ಅದಕ್ಕೆ ನಾನು ಗೌರವ ಕೊಡುವೆ'' ಎಂದು ಅಕ್ಷತಾಗೆ ರಾಕೇಶ್ ತಿಳಿಸಿದ್ದರು.

ಮತ್ತೆ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಳ್ತಿರುವ ಅಕ್ಷತಾ-ರಾಕೇಶ್
ತಾಯಿ ಕಡೆಯಿಂದ ಕಟ್ಟುನಿಟ್ಟಿನ ಸಂದೇಶ ರವಾನೆ ಆಗಿದ್ದರೂ, ಇಬ್ಬರ ಮಧ್ಯೆ ಇರುವ ಗೆಳೆತನ ಮುರಿದು ಬಿದ್ದಿಲ್ಲ. ಅಕ್ಷತಾ ಮತ್ತು ರಾಕೇಶ್ ಒಂದೇ ಫ್ರೇಮ್ ನಲ್ಲಿ ಕಾಣಿಸಿಕೊಳ್ತಿದ್ದಾರೆ. ಅಕ್ಷತಾ-ರಾಕೇಶ್ ಜೊತೆಗೆ ಆಂಡಿ, ನವೀನ್, ನಯನ ಮತ್ತು ರಶ್ಮಿ ಗ್ರೂಪ್ ಮಾಡಿಕೊಂಡಿರುವ ಹಾಗಿದೆ.

ಸ್ಪರ್ಧಿಗಳ ಮಾತು
''ಇಬ್ಬರೂ ಎದುರೆದುರಿಗೆ ಕೂತಿದ್ದಾರೆ. ವಾಯ್ಸ್ ಮೆಸೇಜ್ ಅಲ್ಲ.. ಒಳಗೆ ಬಂದು ಹೇಳಿ ಹೋದರೂ ಆಗಲ್ಲ'' ಅಂತ ಧನರಾಜ್ ಹೇಳಿದರೆ, ''ಇಬ್ಬರು ಮಾತನಾಡಲ್ಲ ಅಂದುಕೊಂಡಿದ್ದೆ. ಆದ್ರೆ, ಬದಲಾಗಿಲ್ಲ'' ಅಂತಾರೆ ಜಯಶ್ರೀ ಮತ್ತು ಮುರಳಿ.


Click it and Unblock the Notifications











