ರಾಕೇಶ್ ಗೆ ಮಾನ, ಮರ್ಯಾದೆ ಇಲ್ಲ ಎಂದ ಆಂಡಿ: ಕಣ್ಣೀರಿಟ್ಟ ಅಕ್ಷತಾ.!
Recommended Video

ನಿಜ ಹೇಳ್ಬೇಕಂದ್ರೆ, 'ಬಿಗ್ ಬಾಸ್' ಮನೆಯಲ್ಲಿ ಅಕ್ಷತಾ ಬಿಟ್ಟರೆ ರಾಕೇಶ್ ಹೆಚ್ಚು ಕ್ಲೋಸ್ ಆಗಿರುವುದು ಆಂಡ್ರ್ಯೂ ಜೊತೆಗೆ. ರಾಕೇಶ್ ಗೇಮ್ ಪ್ಲಾನ್, ಸ್ಟ್ರಾಟೆಜಿ ಆಂಡ್ರ್ಯೂಗೆ ಚೆನ್ನಾಗಿ ಗೊತ್ತು. ಹೀಗಿದ್ದರೂ, ರಾಕೇಶ್ ಗೆ ಪದೇ ಪದೇ ವಿಲನ್ ಆಗಿ ಕಾಡುತ್ತಿರುವವರು ಆಂಡ್ರ್ಯೂ.!
ರಾಕೇಶ್ ಮತ್ತು ಅಕ್ಷತಾಗೆ 'ಗಂಡ-ಹೆಂಡತಿ' ಅಂತ ಕರೆದಿದ್ದು ಇದೇ ಆಂಡ್ರ್ಯೂ. ಇದೀಗ ಮತ್ತದೇ ರಾಕೇಶ್ ಮಾನ ಮರ್ಯಾದೆಯನ್ನ ಆಂಡ್ರ್ಯೂ ಮೂರು ಕಾಸಿಗೆ ಹರಾಜು ಹಾಕಿದ್ದಾರೆ.
ಆಂಡಿ ಹೇಳಿದ ಮಾತಿಗೆ ತಿರುಗೇಟು ಕೊಡಲು ಹೋದ ರಾಕೇಶ್ ಬಂಡವಾಳ ಬಟಾ ಬಯಲಾಗಿದೆ. ಅಷ್ಟಕ್ಕೂ ಇಬ್ಬರ ನಡುವೆ ನಡೆದಿದ್ದೇನು ಅಂತೀರಾ.? ಸಂಪೂರ್ಣ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಈ ವಾರದ ಚಟುವಟಿಕೆ
'ಗೋಡೆ ಕಟ್ಟಿ ನೋಡು, ಮದುವೆ ಮಾಡಿ ನೋಡು' ಎಂಬ ಲಕ್ಷುರಿ ಬಜೆಟ್ ಟಾಸ್ಕ್ ನ ಈ ವಾರ 'ಬಿಗ್ ಬಾಸ್' ನೀಡಿದ್ದಾರೆ. ಇದರ ಅನುಸಾರ, ಊರಿನ ಶ್ರೀಮಂತನ ಮಗಳು 'ಸುಂದರಿ'ಯನ್ನು ಮನವೊಲಿಸುವ ಜವಾಬ್ದಾರಿ ಎರಡು ಬಡ ಕುಟುಂಬಗಳ ಮೇಲಿದೆ. ಕಾಲ ಕಾಲಕ್ಕೆ ಕೊಡಲಾಗುವ ಚಟುವಟಿಕೆಯಲ್ಲಿ ಯಾವ ಕುಟುಂಬ ಗೆಲ್ಲುತ್ತದೋ, ಆ ಕುಟುಂಬಕ್ಕೆ ಹೆಚ್ಚು ಇಟ್ಟಿಗೆಗಳನ್ನು ಸುಂದರಿ ಕವಿತಾ ನೀಡಬೇಕು. ಟಾಸ್ಕ್ ಅಂತ್ಯದಲ್ಲಿ ಯಾವ ಕುಟುಂಬದ ಗೋಡೆ ಹೆಚ್ಚು ಕಟ್ಟಲ್ಪಟ್ಟಿರುತ್ತದೋ, ಅವರು ಗೆದ್ದ ಹಾಗೆ.

ನಿರೀಕ್ಷೆ ಹುಸಿಗೊಳಿಸಿದ ಕವಿತಾ
ವೈಯುಕ್ತಿಕ ವಸ್ತುಗಳನ್ನು ತ್ಯಾಗ ಮಾಡುವ ಚಟುವಟಿಕೆಯಲ್ಲಿ ಶಶಿ ಮತ್ತು ತಂಡ 21 ಕೆ.ಜಿ ತೂಕದ ವಸ್ತುಗಳನ್ನು ಕೊಟ್ಟಿದ್ದರೆ, ರಾಕೇಶ್ ಮತ್ತು ತಂಡ ಕೇವಲ 9 ಕೆ.ಜಿ ತೂಕದ ವಸ್ತುಗಳನ್ನು ನೀಡಿದರು. ತೂಕದಲ್ಲಿ ಅಜಗಜಾಂತರ ವ್ಯತ್ಯಾಸ ಇದ್ದರೂ, ಶಶಿ ಮತ್ತು ತಂಡಕ್ಕೆ ಕೇವಲ ಹತ್ತು ಇಟ್ಟಿಗೆಗಳನ್ನು ಕವಿತಾ ಹೆಚ್ಚುವರಿಯಾಗಿ ನೀಡಿದರು. ಇದು ಶಶಿ ತಂಡದ ಆಂಡಿಗೆ ಸಿಟ್ಟು ತರಿಸಿತು. ನಿರೀಕ್ಷೆ ಹುಸಿಗೊಳಿಸಿದ ಕವಿತಾ ವಿರುದ್ಧ ಆಂಡ್ರ್ಯೂ ಗುಡುಗಿದರು.

ಬರೀ ಸ್ಕಿನ್, ಕಲರ್ ಅಲ್ಲ.!
''ಇಂತಹ ಸುಂದರಿ ಕಟ್ಟಿಕೊಂಡು ಏನೋ ಮಾಡ್ತೀಯಾ. ಬರೀ ಸ್ಕಿನ್, ಕಲರ್ ಅಲ್ಲ ಹುಡುಗಿಗೆ, ಬುದ್ಧಿ ಇರಬೇಕು'' ಅಂತ ಆಂಡಿ ಕೋಪದಲ್ಲಿ ಹೇಳಿದರು.

ತಿರುಗೇಟು ಕೊಟ್ಟ ರಾಕೇಶ್
''ಸ್ಕಿನ್, ಕಲರ್ ಮೇಲೆ ಹೋಗಬೇಡ. ತಪ್ಪು ಮಾತದು. ರೇಸಿಸ್ಟ್ ಮಾತು. ಪರ್ಸನಲ್ ಕಾಮೆಂಟ್ ಮಾಡಬೇಡ. ಧೈರ್ಯ ಇದ್ದರೆ, ಅವರ ಮುಂದೆ ಹೇಳು. ಮೀಟರ್ ಇದ್ದರೆ ಮುಂದೆ ಹೇಳು..'' ಅಂತ ಆಂಡಿಗೆ ರಾಕೇಶ್ ಹೇಳಿದರು.

ರಾಕೇಶ್ ವಿರುದ್ಧ ತಿರುಗಿ ಬಿದ್ದ ಆಂಡಿ
''ಎದುರಿಗೆ ಹೇಳುವೆ.. ನಿನ್ನ ತರಹ ಇನ್ನೂರು ಮಾಡಿಕೊಂಡು, ಇಲ್ಲೊಂದು ಮಾಡಿಕೊಂಡು, ಇನ್ನೊಬ್ಬರ ಕುಟುಂಬ ಕೆಡಿಸುವುದಿಲ್ಲ. ನಿನಗೆ ಮಾತನಾಡುವ ಅರ್ಹತೆಯೇ ಇಲ್ಲ. ನೀನು ಇನ್ನೊಬ್ಬರ ಹೆಂಡತಿ ಜೊತೆಗೆ ಇಲ್ಲಿ ಮಾಡುವುದೆಲ್ಲಾ ಕರೆಕ್ಟಾ.? ನಿನಗೆ ಮಾನ-ಮರ್ಯಾದೆ ಇಲ್ಲ'' ಎಂದು ರಾಕೇಶ್ ಗೆ ಎದಿರೇಟು ನೀಡಿದರು ಆಂಡಿ.

ರೇಸಿಸ್ಟ್ ಕಾಮೆಂಟ್
''ಟಾಸ್ಕ್ ಇರಲಿ, ಯಾವುದೇ ಇರಲಿ. ಅದು ರೇಸಿಸ್ಟ್ ಕಾಮೆಂಟ್. ನಾನು ಅದನ್ನ ಆಬ್ಜೆಕ್ಟ್ ಮಾಡುವೆ'' ಅಂತ ರಾಕೇಶ್ ಹೇಳಿದರು. ಆಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.

ಕಣ್ಣೀರು ಹಾಕಿದ ಅಕ್ಷತಾ
ರಾಕೇಶ್ ಮತ್ತು ಆಂಡಿ ಆಡಿದ ಮಾತುಗಳನ್ನು ಕೇಳಿ ಅಕ್ಷತಾ ಬೇಸರ ಮಾಡಿಕೊಂಡರು. ಪದೇ ಪದೇ ಈ ವಿಚಾರ ಚರ್ಚೆ ಆಗುತ್ತಿರುವುದರಿಂದ ಅಕ್ಷತಾ ಕಣ್ಣೀರು ಹಾಕಿದರು.


Click it and Unblock the Notifications











